ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರ ಕೈಗೆ ಹಸ್ತಾಂತರಿಸಿದೆ. ಇದಕ್ಕೆ ದೇಶದಾದ್ಯಂತ ಹಲವಾರು ಜನರು ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಸರ್ಕಾರದ ಈ ನಿರ್ಧಾರಕ್ಕೆ ತಲೆಬಾಗಲೇ ಬೇಕಾಯಿತು. ಈಗ ಸರ್ಕಾರದ ಬಲಿಷ್ಠ ಆರ್ಥಿಕ ಸಂಸ್ಥೆ ಆಗಿರುವ LIC ಕೂಡ ದೇಶದ ಬಲಿಷ್ಠ ಕುಲಗಳ ಪಾಲಾಗುತ್ತಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.
ಜೊತೆಗೆ ಸುದ್ದಿಯ ಬಗ್ಗೆ ವಾಸ್ತವ ಬಯಲಾಗುತ್ತಿದ್ದಂತೆ ದೇಶದಾದ್ಯಂತ LIC ಏಜೆಂಟ್ ಗಳು ವಿರೋಧ ವ್ಯಕ್ತಪಡಿಸಿ ಇದರ ವಿರುದ್ಧ ಹೋರಾಟ ಕೂಡ ಮಾಡುವುದಾಗಿ ಹೇಳುತ್ತಿದ್ದಾರೆ. ಇನ್ನು ಪಾಲಿಸಿ ಖರೀದಿ ಮಾಡಿರುವ ಗ್ರಾಹಕರು ಸಹಾ ಗೊಂದಲಕ್ಕೆ ಒಳಗಾಗಿದ್ದಾರೆ. ಇದರ ಬಗ್ಗೆ ಕೆಲ ಪ್ರಮುಖ ಸತ್ಯಾನುಸತ್ಯತೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
LIC ಭಾರತೀಯ ಜೀವ ವಿಮಾ ನಿಗಮ ಹಲವು ವರ್ಷಗಳಿಂದ ದೇಶದಾದ್ಯಂತ ನಾಗರೀಕರ ನಂಬಿಕೆ ಗಿಟ್ಟಿಸಿರುವ ಹಣಕಾಸು ಸಂಸ್ಥೆ ಎನಿಸಿಕೊಂಡಿದೆ. LIC ನೀಡುತ್ತಿರುವ ಹೊಸ ಹೊಸ ಯೋಜನೆಗಳ ಪ್ರಯೋಜನವನ್ನು ದೇಶದ ಜನತೆ ಪಡೆದುಕೊಂಡಿದ್ದಾರೆ ಮತ್ತು ಈಗಲೂ ಸಹ ಈ ಯೋಜನೆಗಳ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ.
ಆದರೆ LIC ಕೂಡ ಈಗ ಖಾಸಗಿ ತೆಕ್ಕೆಗೆ ಬೀಳುತ್ತಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಜನ ಇಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಹಿಂದೂ ಮುಂದು ನೋಡುವಂತಾಗಿದೆ. ಅಂತಿಮವಾಗಿ ಎಲ್ಲಾ ಊಹಾಪೋಹಗಳ ಬಗ್ಗೆ LIC ಸಂಸ್ಥೆಯ ಏಜೆಂಟ್ ಗಳ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಪಿಎಲ್ ನರಸಿಂಹರಾವ್ ಅವರು ಸಹ ಮಾತನಾಡಿದ್ದಾರೆ.
ಆರನೇ ಅಖಿಲ ಭಾರತೀಯ LIC ಏಜೆಂಟ್ ಗಳ ಸಂಘದ ಸಮಾವೇಶದ ಬಗ್ಗೆ ಮಾಹಿತಿ ನೋಡಲು ನೀಡಲು ಸುದ್ದಿಗೋಷ್ಠಿ ಕರೆಸಿದ್ದ ಅವರು ಕೇಂದ್ರ ಸರ್ಕಾರ ವಿರುದ್ಧ ಈ ನಿರ್ಧಾರದ ವಿರುದ್ಧ LIC ಖಾಸಗಿಕರಣ ಮಾಡುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಗಂಭೀರ ಆರೋಪವನ್ನು ಸಹ ಮಾಡಿದ್ದಾರೆ.
LIC ಯು IPO ಹೊರ ತಂದಿರುವುದರಿಂದ ಹಂತ ಹಂತವಾಗಿ ಇದನ್ನು ಖಾಸಗಿಕರಣ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಇದರ ಭಾಗವಾಗಿಯೇ IRDAI ವಿಮಾ ನಿಗಮ ಕರಡು ಸೇರಿದಂತೆ ಇನ್ನು ಹಲವಾರು ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಒಂದು ವೇಳೆ LIC ಖಾಸಗಿಕರಣಗೊಂಡರೆ ಅದು LIC ಸಂಸ್ಥೆಗೆ ಮಾತ್ರವಲ್ಲದೆ ಏಜೆಂಟ್ ಗಳ ಅಸ್ತಿತ್ವಕ್ಕೂ ಕೂಡ ಅಪಾಯವಾಗಲಿದೆ.
ಆದ್ದರಿಂದ ಇದನ್ನು ಭಾರತದಾದ್ಯಂತ ಇರುವ ಎಲ್ಲಾ ಏಜೆಂಟ್ ಗಳು ಕೂಡ ವಿರೋಧಿಸುತ್ತೇವೆ, ಇದರ ಸಂಬಂಧಿತವಾಗಿ ಒಂದು ಸಭೆ ನಡೆಸಿ ಮೆರವಣಿಗೆ ಹೊರಡುವ ಮೂಲಕ ಕೇಂದ್ರ ಸರ್ಕಾರಕ್ಕೆ ನಮ್ಮ ನಿಲುವನ್ನು ಮುಟ್ಟಿಸಲಿದ್ದೇವೆ. ಇದಕ್ಕಾಗಿಯೇ ಮೇ 22, 23 ರಂದು ಈ ಸಭೆಯನ್ನು ದಾಬಗಾರ್ಡನ್ಸ್ ಅಲ್ಲೂರಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದೇವೆ. ಮೇ 22ರಂದು ನೂರಾರು LIC ಏಜೆಂಟ್ ಗಳು ಉದ್ಯೋಗಿಗಳು ಮತ್ತು ಪಾಲಿಸಿದಾರರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
LIC ಖಾಸಗಿಕರಣವನ್ನು ವಿರೋಧಿಸುವ ಈ ಮೆರವಣಿಗೆಗೆ ಕೇರಳದ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಚಾಲನೆ ನೀಡಲಿದ್ದಾರೆ ಮತ್ತು ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಮತ್ತು LICAOI ರಾಷ್ಟ್ರೀಯ ಅಧ್ಯಕ್ಷ ಬಸುದೇವ ಆಚಾರ್ಯ ಮತ್ತು ಮಾಜಿ ಸಂಸದ ಎ. ಸಂಪತ್ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. LIC ಖಾಸಗಿಕರಣ ಆಗುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.