17ನೇ ಭಾರತೀಯ ಸಹಕಾರಿ ಕಾಂಗ್ರೆಸ್ ಉದ್ಘಾಟನೆ ಸಮಾರಂಭದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ಈ ಸಮಯದಲ್ಲಿ ಪ್ರಧಾನ ಮಂತ್ರಿಗಳು ತಾವು ಅಧಿಕಾರಕ್ಕೆ ಬಂದು 9 ವರ್ಷವಾಯಿತು ಇಷ್ಟು ವರ್ಷದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆಗಳಾಗಿದೆ ಎನ್ನುವುದನ್ನು ಮಾತನಾಡಿ ಮತ್ತೊಮ್ಮೆ ನೆನಪಿಸಿಕೊಂಡರು.
ದೇಶದ ಎಲ್ಲ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಅಧಿಕಾರಕ್ಕೆ ಬಂದು 9 ವರ್ಷಗಳಾಯಿತು, ಈ 9 ವರ್ಷಗಳಲ್ಲಿ ಏನೇನು ಆಗಿದೆ ಎಂದು ನೀವು ಸಹ ನೋಡಿದ್ದೀರಿ. ಅದನ್ನೆಲ್ಲ ಮತ್ತೊಮ್ಮೆ ಬಿಡಿಸಿ ಹೇಳುವ ಅವಶ್ಯಕತೆಯೇ ಇಲ್ಲ, 9 ವರ್ಷಗಳ ಹಿಂದೆ ದೇಶದ ವ್ಯವಸ್ಥೆ ಹೇಗಿತ್ತು ಈಗ ಅದು ಎಷ್ಟು ಸರಳವಾಗಿದೆ ಎನ್ನುವುದನ್ನು ನೀವು ಈಗ ಅನುಭವಿಸುತ್ತಿದ್ದೀರಿ.
ಕೃಷಿ ಕ್ಷೇತ್ರದ ವಿಷಯವನ್ನು ಹೇಳುವುದಾದರೆ ಈ ಹಿಂದೆ ರೈತನಿಗೆ ಯಾವುದೇ ಯೋಜನೆಯ ಫಲ ನೇರವಾಗಿ ಸಿಗುತ್ತಿರಲಿಲ್ಲ. ಎಲ್ಲವೂ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಆದರೆ ಈಗ ನಮ್ಮ ದೇಶದಲ್ಲಿ ಒಂದು ಎಕರೆ ಜಮೀನು ಹೊಂದಿರುವ ರೈತ ಕೂಡ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಅವನಿಗೆ ತಲುಪಬೇಕಾದ ಸಹಾಯವನ್ನು ನೇರ ವರ್ಗಾವಣೆ ಮೂಲಕ ಪಡೆಯುತ್ತಾನೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಮೋದಿ ಅವರನ್ನು ಶ್ಲಾಘಿಸಲೇಬೇಕು. ದೇಶದಲ್ಲಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ತಂದ ಅನೇಕ ಸುಧಾರಣೆಗಳಲ್ಲಿ DBT ಕೂಡ ಒಂದು. ಈಗ ಯಾವುದೇ ಸಹಾಯಧನವಾದರೂ ಕೂಡ ಮಧ್ಯವರ್ತಿಗಳ ಕಾಟ ಇಲ್ಲದೆ ಫಲಾನುಭವಿಗಳು ಡೈರೆಕ್ಟ್ ಬ್ಯಾಂಕ್ ಅಕೌಂಟ್ ಮೂಲಕ ಎಲ್ಲೂ ಹಣ ಸೋರಿಕೆ ಆಗದಂತೆ ಪಡೆಯುತ್ತಾರೆ ಎಂದು ಈ ಬದಲಾವಣೆ ಬಗ್ಗೆ ಮೋದಿ ಮಾತನಾಡಿದರು.
2014 ಮೊದಲು ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿಗೆ ಸಂಬಂಧಿಸಿದ ಹಾಗೆ ಸರ್ಕಾರ ನೀಡುವ ಎಲ್ಲಾ ಸವಲತ್ತುಗಳಿಂದ ವಂಚಿತರಾಗಿದ್ದರು. ಆ ಸಂಕಷ್ಟದ ದಿನಗಳಿಂದ ಇಂದಿನ ಪರಿಸ್ಥಿತಿ ಎಷ್ಟೋ ಬದಲಾಗಿದೆ.ಕೃಷಿ ಕ್ಷೇತ್ರ ಹಾಗೂ ರೈತರಿಗಾಗಿ ನಮ್ಮ ಸರ್ಕಾರವು ಒಂದು ವರ್ಷಕ್ಕೆ 6.5 ಲಕ್ಷ ಕೋಟಿ ಹಣವನ್ನು ಮೀಸಲಿಡುತ್ತದೆ. ದೇಶದ ಪ್ರತಿಯೊಬ್ಬ ರೈತನಿಗೂ ಕೂಡ ಅದರ ಪ್ರಯೋಜನ ಸಿಗಲಿ ಎಂದು ಪ್ರಾಮಾಣಿಕವಾಗಿ ತಲುಪಿಸುತ್ತದೆ.
ಒಂದು ವರ್ಷಕ್ಕೆ ರೈತನಿಗೆ ಕೇಂದ್ರ ಸರ್ಕಾರದಿಂದ ಕನಿಷ್ಠ 50,000 ರೂ. ಗಳಷ್ಟು ಲಾಭ ಸಿಗುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಹಣವನ್ನು ದೇಶದ 14 ಕೋಟಿ ರೈತರು ಪಡೆಯುತ್ತಿದ್ದಾರೆ. ಇದೇ BJP ಸರ್ಕಾರ, BJP ಸರ್ಕಾರವು ಹೇಳಿದ ಮಾತನ್ನು ಗ್ಯಾರೆಂಟಿಯಾಗಿ ನಡೆಸಿದೆ. ಈಗ ನಖಲಿ ಫಲಾನುಭವಿಗಳನ್ನು ಕೂಡ ಪತ್ತೆ ಹಚ್ಚುವುದು ಬಹಳ ಸುಲಭ ಆಗಿದೆ.
ಇದರಿಂದ ಸರ್ಕಾರಕ್ಕೂ ಕೂಡ ಹೆಚ್ಚು ಅನುಕೂಲವಾಗುತ್ತಿದೆ. ಇದೇ ರೀತಿ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮಾದರಿಯಾಗಿ ಕೆಲಸ ಮಾಡಲು ಸಹಕಾರಿ ಸಂಸ್ಥೆಗಳಿಗೆ ಕರೆ ನೀಡಿದರು ಮತ್ತು ಈ ಕಾರ್ಯಕ್ರಮದಲ್ಲಿ ಭಾರತದಲ್ಲಿ ಅಡುಗೆ ಎಣ್ಣೆ ವಿಚಾರದಲ್ಲಿ ಸ್ವಾಬಲಂಬನೆ ಸಾಧಿಸಿರುವ ವಿಷಯದ ಬಗ್ಗೆ ಕೂಡ ಮಾತನಾಡಿದರು. ರಸಾಯನಿಕ ಮುಕ್ತ ಕೃಷಿಯನ್ನು ಪ್ರಚಾರ ಮಾಡುವ ಹಾಗೂ ಪರ್ಯಾಯ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ PM ಪ್ರಣಮ್ ಯೋಜನೆ ಬಗ್ಗೆ ಸಹ ಪ್ರಧಾನಿಗಳಾದ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.