ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ತಮ್ಮ ಸರ್ಕಾರ ಜಾರಿಗೆ ಬಂದರೆ ಖಡಾಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ಯೋಜನೆಗೂ ಕೂಡ ಸಾಕಷ್ಟು ನಿಯಮಗಳನ್ನು ಹಾಕುತ್ತಿದ್ದಾರೆ. ಸದ್ಯಕ್ಕೀಕ ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಬೇಕಾಗಿತ್ತು.
ಆದರೆ ಅಕ್ಕಿ ದಾಸ್ತಾನು ಲಭ್ಯವಾಗದ ಹಿನ್ನೆಲೆ ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 170 ರೂಪಾಯಿಗಳನ್ನು ನೀಡಲು ಮುಂದಾಗಿದೆ. ದಿನದಿಂದ ದಿನಕ್ಕೆ ಇದರಲ್ಲೂ ಕೂಡ ಇನ್ನಷ್ಟು ನಿಯಮಗಳು ಸೇರ್ಪಡೆಯಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಸರ್ಕಾರ ಹಾಕಿರುವ ಹೊಸ ಎರಡು ಕಂಡೀಶನ್ ಅಲ್ಲಿ ಏನಿದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಅನ್ನಭಾಗ್ಯ ಯೋಜನೆ ಅಡಿ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 35 ಅಕ್ಕಿ ನೀಡಲಾಗುತ್ತದೆ. ಹಾಗಾಗಿ ಮೂರು ಸದಸ್ಯರಿಗಿಂತ ಕಡಿಮೆ ಸದಸ್ಯರಿರುವ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ ಅಕ್ಕಿಯ ಹಣ ಸಿಗುವುದಿಲ್ಲ, ಮೂರು ಜನ ಸದಸ್ಯರಿಗೆ ತಿಂಗಳಿಗೆ 35 ಅಜ್ಜಿ ಅಕ್ಕಿ ಸಾಕು ಎನ್ನುವುದು ಸರ್ಕಾರದ ನಿರ್ಧಾರವಾಗಿದೆ.
ಅಂತ್ಯೋದಯ ಕಾರ್ಡ್ ಹೊಂದಿರುವವರು ನಾಲ್ಕು ಜನ ಸದಸ್ಯರಿಗಿಂತ ಹೆಚ್ಚು ಜನರಿದ್ದಾಗ ಮಾತ್ರ 35 ಅಕ್ಕಿ ಜೊತೆಗೆ ಒಬ್ಬ ಸದಸ್ಯರಿಗೆ 170 ರೂ.ಯಂತೆ ಹಣ ನೀಡಲಾಗುವುದು. ಐದು ಜನ ಸದಸ್ಯರಿದ್ದರೆ ಮೂವತ್ತೈದು ಕೆಜಿ ಅಕ್ಕಿ ಮತ್ತು 850ರೂ. ಹಣವನ್ನು ಮನೆ ಯಜಮಾನನ ಖಾತೆಗೆ ಜಮೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
BPL ಕಾರ್ಡ್ ಹೊಂದಿರುವವರಿಗೆ ಈ ರೀತಿ ಯಾವುದೇ ನಿಯಮವನ್ನು ಹೇರಿಕೆ ಮಾಡಿಲ್ಲ. ಎಂದಿನಂತೆ ಅವರಿಗೆ ಒಬ್ಬ ಸದಸ್ಯರಿಗೆ 5 ಕೆಜಿ ಹಾಗೂ 170ರೂ. ನೀಡಲಾಗುವುದು ಹೆಚ್ಚುವರಿ ಅಕ್ಕಿ ಹಣವನ್ನು ಕುಟುಂಬದ ಯಜಮಾನಿಯ ಖಾತೆಗೆ ಜಮೆ ಮಾಡಲಾಗುವುದು. ಯಜಮಾನಿಯು ಯಾವ ಬ್ಯಾಂಕ್ ಅಕೌಂಟ್ ಗೆ ಆದರ್ ಸೀಡಿಂಗ್ ಆಗಿ NPCI ಮ್ಯಾಚಿಂಗ್ ಆಗಿರುತ್ತದೆ ಆ ಖಾತೆಗೆ ಹಣ ಜಮೆ ಆಗುತ್ತದೆ.
ಇದಕ್ಕಾಗಿ ಯಾವುದೇ ಸಲ್ಲಿಸುವ ಅವಶ್ಯಕತೆ ಇಲ್ಲ ಎನ್ನುವುದನ್ನು ಸರ್ಕಾರ ತಿಳಿಸಿದೆ. ಆದರೆ BPL ಕಾರ್ಡ್ ಹೊಂದಿರುವವರಿಗೆ ಸರ್ಕಾರ ಬೇರೊಂದು ಕಂಡೀಶನ್ ಹೇರಿದೆ. ಏನೆಂದರೆ, ಕಳೆದ ಮೂರು ತಿಂಗಳಿನಿಂದ ಯಾರು ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಪಡೆದಿಲ್ಲ ಅವರಿಗೆ ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿಯ ಹಣವನ್ನು ನೀಡಲಾಗುವುದಿಲ್ಲ ಎಂದು ಸರ್ಕಾರ ಶಾ’ಕ್ ನೀಡಿದೆ.
ಸದ್ಯಕ್ಕೆ ಸರ್ಕಾರ ಘೋಷಿಸಿರುವ ಹೇಳಿಕೆಯಂತೆ ಜುಲೈ 10ರಂದು ಸಂಜೆ 5:00 ಘಂಟೆಗೆ ರಾಜ್ಯದ 4.41 ಕೋಟಿ ಫಲಾನುಭವಿಗಳಿಗೆ ಅನ್ನ ಭಾಗ್ಯ ಯೋಜನೆ ಈ ಹೆಚ್ಚುವರಿ ಸಿಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಸರ್ಕಾರಕ್ಕೆ ಮಾಸಿಕವಾಗಿ 800 ಕೋಟಿ ಆರ್ಥಿಕ ಹೊರೆ ಇದರಿಂದ ಹೆಚ್ಚಾಗಲಿದೆ ಆದರೂ ಸರ್ಕಾರವು ಇದಕ್ಕೆ ಆದಾಯದ ಮೂಲ ಇದೆ ಎಂದು ಸಮರ್ಥಿಸಿಕೊಂಡು ಅಕ್ಕಿ ಬದಲು ಹಣ ನೀಡುವ ನಿರ್ಧಾರಕ್ಕೆ ಮುಂದಾಗಿದೆ.
ಸರ್ಕಾರದ ಈ ನಿರ್ಧಾರದ ಬಗ್ಗೆ ಹೊಸ ಕಂಡೀಶನ್ಗಳ ಬಗ್ಗೆ ಸಾರ್ವಜನಿಕರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಆದರೆ ಅಕ್ಕಿ ದಾಸ್ತಾನು ಲಭ್ಯವಾಗುವವರೆಗೂ ಕೂಡ ಸರ್ಕಾರ ಇದೇ ಮಾರ್ಗದಲ್ಲಿ ಮುಂದುವರಿಸುವುದಾಗಿ ತಿಳಿಸಿದೆ.