ಒಂದು ಆರ್ಥಿಕ ವರ್ಷದಲ್ಲಿ ನಾವು ನಮ್ಮ ಬ್ಯಾಂಕ್ ಖಾತೆಗೆ ಹಾಕಬಹುದಾದ ಹಣಕ್ಕೆ ಲಿಮಿಟ್ ಇದೆ. ನಮ್ಮ ಭಾರತ ದೇಶದಲ್ಲಿರುವ ಪ್ರಸ್ತುತ ಹಣಕಾಸು ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಅಕೌಂಟ್ ಗೆ ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಳನ್ನು ಮಾತ್ರ ಹಾಕಬಹುದು.
ಆತ ಎಷ್ಟೇ ಬ್ಯಾಂಕ್ ಅಕೌಂಟ್ ಹೊಂದಿದ್ದರು ಅಥವಾ ಆತ ಅದನ್ನು ಎಷ್ಟು ಕಂತುಗಳಾಗಿ ಹಾಕಿದರು ಕೂಡ ಒಂದು ಆರ್ಥಿಕ ವರ್ಷದ ಒಟ್ಟಾರೆ ಲೆಕ್ಕದಲ್ಲಿ ಅದನ್ನು ಪರಿಗಣಿಸಿ ಈ ಲಿಮಿಟ್ ವಿಧಿಸಲಾಗಿದೆ. ಒಂದು ವೇಳೆ ಇದಕ್ಕಿಂತಲೂ ಕೂಡ ಹೆಚ್ಚಿನ ಹಣಕಾಸಿನ ವ್ಯವಹಾರ ನಡೆಸಿದಾಗ ಅದಕ್ಕೆ ದಾಖಲೆಗಳು ಇದ್ದರೆ ಮತ್ತು ನೀವು ಅದಕ್ಕೆ ಟ್ಯಾಕ್ಸ್ ಪೇ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ.
ಈಗ ಭಾರತದಲ್ಲಿ ಕ್ಯಾನ್ ಲೆಸ್ ವ್ಯವಹಾರ ಹೆಚ್ಚಾಗುತ್ತಿದೆ. 10 ವರ್ಷಗಳ ಹಿಂದೆ ನಗದು ವ್ಯವಹಾರ 95% ಇತ್ತು 5 ವರ್ಷಗಳಲ್ಲಿ ಅದು 70% ಗೆ ಇಳಿಯಿತು. ಮುಂದಿನ ವರ್ಷಗಳಲ್ಲಿ ಅದನ್ನು 30% ಗಿಂತ ಕಡಿಮೆ ಮಾಡಲು ಭಾರತ ಶ್ರಮಿಸುತ್ತಿದೆ. ಜೊತೆಗೆ ದೇಶದ ಯುವಜನತೆ ಕೂಡ ಈಗ ಡಿಜಿಟಲ್ ಟ್ರಾನ್ಸಾಕ್ಷನ್ ಕಡೆ ಹೆಚ್ಚು ವಾಲಿದ್ದು ಬಹುತೇಕ ಎಲ್ಲಾ ಕಡೆಯೂ ಕೂಡ UPI ಆಧಾರಿತ ಆನ್ಲೈನ್ ಪೇಮೆಂಟ್ ವ್ಯವಹಾರವೇ ನಡೆಯುತ್ತಿದೆ.
ಹೀಗಾಗಿ ಬ್ಯಾಂಕ್ ಗಳಿಗೂ ಕೂಡ ಹಣದ ಟ್ರಾನ್ಸಾಕ್ಷನ್ ಮಾಹಿತಿಯನ್ನು ಕಲೆ ಹಾಕುವುದು ಸುಲಭ ಆಗುತ್ತಿದೆ. ಈ ಕಾರಣದಿಂದಾಗಿ ನೀವೇನಾದರೂ ಒಂದು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ವಹಿವಾಟು ಮಾಡಿದ್ದೇ ಆದರೆ ಬ್ಯಾಂಕ್ ಗಳು ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಅಕೌಂಟ್ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸುತ್ತವೆ.
ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಒಂದು ನೋಟಿಸ್ ಬರುತ್ತದೆ. ಆ ನೋಟಿಸ್ ಬಂದ ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ IT ಅಧಿಕಾರಿಗಳು ಕೂಡ ಬಂದು ದಾಳಿ ನಡೆಸುತ್ತಾರೆ. ಆ ವೇಳೆ ನೀವು ಇನ್ಕಮ್ ಟ್ಯಾಕ್ಸ್ ಪೇ ಮಾಡಿದ್ದರೂ, ಟ್ಯಾಕ್ಸ್ ಪೇ ಮಾಡದೇ ಇದ್ದರೂ ನಿಮಗೆ ಹಣ ಯಾವ ಮೂಲದಿಂದ ಬಂತು ಎಂದು ಹೆಚ್ಚು ಹಣದ ಮೂಲದ ಬಗ್ಗೆ ಮಾಹಿತಿ ಕೊಡಬೇಕು.
ನೀವು ವ್ಯಾಪಾರದಿಂದ ಸಂಪಾದನೆ ಮಾಡಿದ್ದರೆ ಅಥವಾ ಯಾರಿಂದಲಾದರೂ ಅದನ್ನು ಪಡೆದಿದ್ದರೆ ಈ ರೀತಿ ಯಾವುದೇ ಮೂಲ ಇದ್ದರೂ ಅದರ ದಾಖಲೆಗಳನ್ನು ತೋರಿಸಬೇಕು. ಈ ರೀತಿ ಹಣದ ವಹಿವಾಟು ನಡೆದ ತಕ್ಷಣವೇ ನೋಟಿಸ್ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಈ ರೀತಿ ನಿಮ್ಮ ಅಕೌಂಟ್ ಅಲ್ಲಿ ಲಿಮಿಟ್ ಗಿಂತ ಹೆಚ್ಚು ಟ್ರಾನ್ಸಾಕ್ಷನ್ ಆದ 2-3 ತಿಂಗಳಿಂದ 8 ವರ್ಷಗಳ ಒಳಗೆ ಯಾವಾಗ ಬೇಕಾದರೂ ನೋಟಿಸ್ ಬರಬಹುದು, ಯಾವಾಗ ಬೇಕಾದರೂ ಅಧಿಕಾರಿಗಳು ದಾಳಿ ಮಾಡಬಹುದು.
ಈ ರೀತಿ IT ದಾಳಿ ಆದಾಗ ಅದರ ಮಾಹಿತಿ ಸರಿಯಿದ್ದು ನೀವು ಟ್ಯಾಕ್ಸ್ ಕಟ್ಟಿಲ್ಲ ಎಂದರೆ ಫೈನ್ ಬೀಳುತ್ತದೆ. ಒಂದು ವೇಳೆ ಅದರ ದಾಖಲೆ ನೀಡಲು ನೀವು ವಿಫಲವಾದರೆ ಅದು ಬ್ಲಾಕ್ ಮನಿ ಆಗಿದ್ದರೆ ದೊಡ್ಡ ಮೊತ್ತದ ದಂಡವನ್ನು ಕಟ್ಟಬೇಕಾಗುತ್ತದೆ. ಅದು ಹೇಗೆ ಅಪ್ಲೈ ಆಗುತ್ತದೆ ಎಂದರೆ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಟ್ಟು 15 ಲಕ್ಷ ವ್ಯವಹಾರ ನಡೆಸಿ ಅದರಲ್ಲಿ 10ಲಕ್ಷಕ್ಕೆ ದಾಖಲೆಯಿದ್ದು ಉಳಿದ 5 ಲಕ್ಷಕ್ಕೆ ದಾಖಲೆ ಇಲ್ಲ ಎಂದರೆ 5 ಲಕ್ಷಕ್ಕೆ 60% – 400% ದಂಡ ಬೀಳುತ್ತದೆ.
8 ವರ್ಷದವರೆಗೂ ಕೂಡ ಸಮಯವಿರುವುದರಿಂದ ಕೊನೆ ದಿನಗಳಲ್ಲಿ ನಿಮ್ಮ ಮೇಲೆ IT ಎನ್ಕ್ವೈರಿ ಆದರೆ 400% ಫೈನ್ ನೀವು ಕಟ್ಟ ಬೇಕಾಗಬಹುದು. ಅಂದರೆ 5 ಲಕ್ಷ ಕಪ್ಪು ಹಣಕ್ಕೆ ನೀವು 20 ಲಕ್ಷ ಹಣ ದಂಡ ಕಟ್ಟಬೇಕಾಗುತ್ತದೆ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಇನ್ನು ವಿವರವಾಗಿ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.