ರೇಷನ್ ಕಾರ್ಡ್ ಇದ್ದವರಿಗೆ ಇಂದು ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಿದೆ ನಿಮ್ಮ ಅಕೌಂಟ್ ಗೆ ಹಣ ಜಮೆ ಆಗಿದಿಯೋ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!

 

ಕಾಂಗ್ರೆಸ್ ಪಕ್ಷದ ಪಂಚಖಾತ್ರಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ಅನ್ನಭಾಗ್ಯ ಯೋಜನೆಯ ಪಡಿತರವನ್ನು 10 ಕೆಜಿಗೆ ಏರಿಸಲಾಗುವುದು ಎನ್ನುವ ಕಾರ್ಯಕ್ಕೆ ಈ ತಿಂಗಳಿನಿಂದ ಚಾಲನೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದ್ದರೂ ದಾಸ್ತಾನು ಸಂಗ್ರಹವಾಗದ ಕಾರಣ ಸಚಿವ ಸಂಪುಟ ಜೊತೆ ಚರ್ಚಿಸಿ ಫಲಾನುಭವಿಗಳಿಗೆ ಕೆಲವು ಕಂಡೀಶನ್ಗಳ ಜೊತೆಗೆ ಹೆಚ್ಚುವರಿ ಅಕ್ಕಿಯ ಬದಲು ಹಣ ನೀಡುವ ಪರ್ಯಾಯ ಕ್ರಮವನ್ನು ಕಂಡುಕೊಂಡಿದೆ.

ಇಂದು ಅಂದಾಜು ರಾಜ್ಯದ 4.42 ಕೋಟಿ ಜನರ ಅನ್ನ ಭಾಗ್ಯ ಯೋಜನೆಯ ಹಣವು ಜಮೆ ಆಗುತ್ತಿದೆ. ದಿನಾಂಕ 10.07.2023ರ ಸಂಜೆ ಐದು ಗಂಟೆಗೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವರಾದ ಶ್ರೀ ಎಚ್.ಕೆ ಮುನಿಯಪ್ಪ ರವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಹಸಿವು ಮುಕ್ತ ಕರ್ನಾಟಕ ಮಾಡುವ ಧ್ಯೇಯ ಹೊಂದಿರುವ ಅನ್ನಭಾಗ್ಯ ಯೋಜನೆಯಡಿ ಇಂದು 1.2 ಕೋಟಿ ಪಡಿತರ ಕುಟುಂಬಗಳಿಗೆ ನೇರನಗದು ವರ್ಗಾವಣೆ ಆಗಲಿದೆ. ಜುಲೈ ತಿಂಗಳ ನಗದು ಮೊತ್ತ ಇದೇ ಮಾಸದೊಳಗೆ ಜಮೆ ಆಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ. ದಾಸ್ತಾನು ಲಭ್ಯ ಆಗುವವರೆಗೂ ಪ್ರತಿಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಹಾಗೂ 170 ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಇದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಒಂದು ಪಡಿತರ ಚೀಟಿಯಲ್ಲಿ ಇರುವ ಎಲ್ಲಾ ಸದಸ್ಯರ ಹೆಚ್ಚುವರಿ ಅಕ್ಕಿಯ ಹಣವನ್ನು ಆ ಕುಟುಂಬದ ಯಜಮಾನನ ಖಾತೆಗೆ DBT ಮೂಲಕ ನೇರ ವರ್ಗಾವಣೆ ಮಾಡುತ್ತೇವೆ, ಈಗಾಗಲೇ ಅವರ ಆಧಾರ್ ಕಾರ್ಡ್ ರೇಷನ್ ಕಾರ್ಡಿಗೆ ಲಿಂಕ್ ಆಗಿರುತ್ತದೆ ಆ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟ್ ಗೆ ಸೀಡಿಂಗ್ ಆಗಿ NPCI ಮ್ಯಾಚಿಂಗ್ ಆಗಿರುತ್ತದೆ ಆ ಖಾತೆಗೆ ಹಣ ಹೋಗುತ್ತದೆ.

ಒಂದು ವೇಳೆ ಯಜಮಾನ ಖಾತೆ KYC ಅಪ್ಡೇಟ್ ಆಗದೆ ಇದ್ದಲ್ಲಿ ಕುಟುಂಬದ ಇತರ ಸದಸ್ಯನ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು, ಸರ್ಕಾರದ ಬಳಿ ಎಲ್ಲರ ಮಾಹಿತಿ ಇದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಮಾಸಿಕವಾಗಿ 800 ಕೋಟಿ ಬಜೆಟ್ ಆಗಬಹುದು, ಸರ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಆಹಾರ ಸಚಿವರು ಈ ಹಿಂದೆ ಹೆಚ್ಚುವರಿ ಅಕ್ಕಿಗೆ ಹಣ ನೀಡುವುದಾಗಿ ನಿರ್ಧಾರ ಮಾಡಿದಾಗ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.

ಸದ್ಯಕ್ಕೆ ಅಕ್ಕಿ ಸಿಗುವವರೆಗೂ ಕೂಡ ಇದನ್ನೇ ಮುಂದುವರಿಸಲಾಗುವುದು ಎಂದು ನಿರ್ಧಾರವಾಗಿರುವುದರಿಂದ ಯೋಜನೆ ಅನುಷ್ಠಾನಕ್ಕಾಗಿ ಪ್ರಸಕ್ತ ಬಜೆಟ್ ನಲ್ಲಿ 10,000 ಕೋಟಿಯನ್ನು ಮಾನ್ಯ ಮುಖ್ಯಮಂತ್ರಿಗಳು ಈ ಯೋಜನೆಗಾಗಿ ನಿಗದಿಪಡಿಸಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಅಕ್ಕಿ ಖರೀದಿ ಸಾಧ್ಯವಾದರೆ ಇದೇ ಹಣವು ವಿನಿಯೋಗ ಆಗಲಿದೆ.

ನಿಮಗೂ ಕೂಡ ಈ ದಿನ ಸಂಜೆ ಅನ್ನ ಭಾಗ್ಯ ಯೋಜನೆ ಹಣ ಖಾತೆಗೆ ಜಮೆ ಆಗಿದೆಯೇ ಎಂದು ತಿಳಿದುಕೊಳ್ಳಬೇಕಾದರೆ DBT ಕರ್ನಾಟಕ ಎನ್ನುವ ಆಪ್ ಡೌನ್ಲೋಡ್ ಮಾಡಿಕೊಂಡು ಪಡಿತರ ಚೀಟಿಯ ಯಜಮಾನನ ಆಧಾರ್ ಸಂಖ್ಯೆ ಮೂಲಕ ಲಾಗಿನ್ ಆಗಿ ಟ್ರಾನ್ಸಾಕ್ಷನ್ ಮಾಹಿತಿಯನ್ನು ಪಡೆಯಬಹುದು.

Leave a Comment

%d bloggers like this: