ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಸಕಲ ಜೀವರಾಶಿಗಳಲ್ಲಿ ಕೂಡ ದೇವರನ್ನು ಕಾಣುತ್ತೇವೆ. ಪಶು, ಪಕ್ಷಿ, ಮರ, ವೃಕ್ಷ, ನದಿ, ಸೂರ್ಯ, ಆಕಾಶ ಎಲ್ಲವನ್ನು ಕೂಡ ದೈವ ಸ್ವರೂಪವಾಗಿ ಕಾಣುವ ನಾವು ಅವುಗಳ ಆರಾಧನೆಯನ್ನು ಕೂಡ ಮಾಡುತ್ತೇವೆ. ವೃಕ್ಷಗಳ ವಿಚಾರವಾಗಿ ಹೇಳುವುದಾದರೆ ನಮ್ಮಲ್ಲಿ ಹಲವು ವೃಕ್ಷಗಳಿಗೆ ವಿಶೇಷ ಶಕ್ತಿ ಇರುತ್ತದೆ.
ಕೆಲವು ವೃಕ್ಷಗಳಲ್ಲಿ ದೇವತೆಗಳು ಹಾಗೂ ಕೆಲವು ವೃಕ್ಷಗಳಲ್ಲಿ ಸಾಕ್ಷಾತ್ ದೇವರೇ ವಾಸ ಮಾಡುತ್ತಾರೆ ಎಂದು ನಂಬಿ ಪೂಜೆ ಮಾಡುತ್ತೇವೆ. ಇಂತಹ ವೃಕ್ಷಗಳ ಪೈಕಿ ಅರಳಿ ವೃಕ್ಷಕ್ಕೆ ಹೆಚ್ಚಿನ ಮಹತ್ವ. ಅರಳಿ ವೃಕ್ಷದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುತ್ತಾರೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
ಹಿಂದೂ ಮಹಿಳೆಯರು ಅರಳಿ ವೃಕ್ಷವನ್ನು ಪ್ರದಕ್ಷಿಣೆ ಹಾಕುತ್ತ ತಮ್ಮ ಕಷ್ಟಗಳು ಕರಗಲಿ ಎಂದು ಬೇಡಿ ಕೊಳ್ಳುತ್ತಾರೆ. ಅರಳಿ ಮರಕ್ಕೆ ದಾರಗಳನ್ನು ಸುತ್ತುವ ಮೂಲಕ ತಮ್ಮ ಸಂಕಲ್ಪ ನೆರವೇರಲಿ ಎಂದು ಕೋರಿಕೆ ಇಡುತ್ತಾರೆ. ಸಂತಾನ ಭಾಗ್ಯಕ್ಕಾಗಿ ಅರಳಿ ವೃಕ್ಷಕ್ಕೆ ತೊಟ್ಟಿಲು ಕಟ್ಟಿ ಹರಕೆ ಹೊತ್ತಾರೆ. ಅರಳಿ ವೃಕ್ಷವನ್ನು ಪ್ರದಕ್ಷಿಣೆ ಮಾಡುವುದರಿಂದ ಒಂದು ಪಾಸಿಟಿವ್ ವೈಬ್ರೇಶನ್ ಬರುತ್ತದೆ.
ಅದು ನಮ್ಮಲ್ಲಿರುವ ನಕರಾತ್ಮಕ ಶಕ್ತಿಯನ್ನು ದೂರ ಮಾಡಿ ಯಾವುದೇ ಸಮಸ್ಯೆ ಬಂದರೂ ಅದನ್ನು ಪರಿಹಾರ ಮಾಡಿಕೊಳ್ಳುವಂತಹ ಮನಸ್ಥೈರ್ಯ ತರುತ್ತದೆ. ಜೊತೆಗೆ ದೇವರು ನಮ್ಮ ಜೊತೆ ಇದ್ದಾನೆ ಎನ್ನುವ ನಂಬಿಕೆ ಬರುವ ರೀತಿ ಮಾಡುತ್ತದೆ. ಹಾಗಾಗಿ ನಮ್ಮ ಪುರಾಣಗಳಲ್ಲಿ ಬ್ರಾಹ್ಮಿ ಕಾಲದಲ್ಲಿ ಅರಳಿ ವೃಕ್ಷವನ್ನು ಸುತ್ತುವುದು ಸೂಕ್ತ ಎಂದು ಸೂಚಿಸಿದ್ದಾರೆ.
ವೈಜ್ಞಾನಿಕವಾಗಿ ಕೂಡ ಇದನ್ನು ಒಪ್ಪಿಕೊಳ್ಳಲಾಗಿದ್ದು, ಅರಳಿ ವೃಕ್ಷದ ಸಮೀಪ ಬ್ರಾಹ್ಮಿ ಸಮಯದಲ್ಲಿ ಸಂಚರಿಸುವುದರಿಂದ ಶುದ್ಧ ವಾಯು ಸಿಗುತ್ತದೆ ಈ ಮೂಲಕ ದೇಹ ಅನೇಕ ಕಾಯಿಲೆಗೆ ಅದು ಔಷಧಿ ಆಗುತ್ತದೆ ಎಂದು ತಿಳಿಸಿದ್ದಾರೆ. ಇವುಗಳ ಜೊತೆ ತಂತ್ರಶಕ್ತಿಗೂ ಕೂಡ ಅರಳಿ ವೃಕ್ಷವನ್ನು ಬಳಸುತ್ತಾರೆ. ಯಾವುದೇ ಅಡ್ಡ ಪ್ರಯೋಗ ಇಲ್ಲದೆ ಭಕ್ತಿಯಿಂದ ಮಾಡಬಹುದಾದಂತಹ ತಂತ್ರ ಪ್ರಯೋಗಗಳಿಗೆ ಫಲ ಕೊಡುವ ಶಕ್ತಿ ಅರಳಿ ಮರಕ್ಕೆ ಇದೆ.
ನಮ್ಮ ಕುಟುಂಬದಲ್ಲಿ ಯಾವುದೇ ಸದಸ್ಯರಿಗೆ ಯಾವ ರೀತಿಯ ಸಮಸ್ಯೆ ಇದ್ದರೂ ಕೂಡ ಈಗ ನಾವು ಹೇಳುವ ಈ ರೀತಿ ತಂತ್ರ ಮಾಡುವುದರಿಂದ ಅದಕ್ಕೆ ಪರಿಹಾರ ಸಿಗುತ್ತದೆ. ನೀವು ಮಾಡಬೇಕಾಗಿರೋದು ಇಷ್ಟೇ. ಮೊದಲಿಗೆ ಶನಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುದ್ಧವಾಗಿ ಸ್ನಾನ ಮಾಡಿ ಮಡಿಯುಟ್ಟು ಹೋಗಿ ಅರಳಿ ವೃಕ್ಷದ ಒಂದು ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಸ್ಕೆಚ್ ಪೆನ್ ಸಹಾಯದಿಂದ ನಿಮ್ಮ ಯಾವ ಸಮಸ್ಯೆ ಪರಿಹಾರ ಆಗಬೇಕು ಅಥವಾ ಯಾವ ಸಂಕಲ್ಪ ಸಿದ್ಧಿ ಆಗಬೇಕು ಎನ್ನುವುದನ್ನು ಬರೆಯಿರಿ.
ಬಳಿಕ ಅದನ್ನು ದಾರದಿಂದ ಸುತ್ತಿ, ಇದು ಪ್ರೀತಿ ಹಾಗೂ ಹಣಕ್ಕೆ ಸಂಬಂಧಪಟ್ಟ ವಿಷಯ ಆಗಿದ್ದರೆ ಕೆಂಪು ದಾರದಿಂದ ಸುತ್ತಿ ಈ ರೀತಿ ಸುತ್ತುವಾಗ ಓಂ ರೀಂ ಫಟ್ ಸ್ವಾಹ ಎನ್ನುವ ಮಂತ್ರವನ್ನು ಹೇಳುತ್ತಿರಬೇಕು. ಇದು ಪೂರ್ತಿ ಆದ ಬಳಿಕ ನಿಮ್ಮ ಕೋರಿಕೆಯನ್ನು ಅರಳಿ ವೃಕ್ಷಕ್ಕೆ ಹೇಳಿಕೊಂಡು ಕೆಳಗೆ ಇರುವ ಮಣ್ಣನ್ನು ಸ್ವಲ್ಪ ತೆಗೆದುಕೊಂಡು ಮನೆಗೆ ಬನ್ನಿ. ನಿಮ್ಮ ಮನೆಯ ಬಳಿ ಈ ದಾರ ಸುತ್ತಿದ ಎಲೆಯನ್ನು ಹಾಕಿ ಅದರ ಮೇಲೆ ಅರಳಿ ಮರದ ಬುಡದಿಂದ ತಂದ ಮಣ್ಣನ್ನು ಹಾಕಿ ಮುಚ್ಚಿ. ಈ ರೀತಿ ಭಕ್ತಿಯಿಂದ ನಂಬಿಕೆಯಿಂದ ಮಾಡಿದರೆ ಒಂದೇ ವಾರದಲ್ಲಿ ನಿಮ್ಮ ಕೋರಿಕೆ ಈಡೇರುತ್ತದೆ.