ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಆಸ್ತಿ ವಿವರವನ್ನು ನಿಗದಿತ ದಿನಾಂಕದ ಒಳಗಡೆ ಸಲ್ಲಿಸಬೇಕು ಇಲ್ಲವಾದಲ್ಲಿ ಆ ಹುದ್ದೆಯಿಂದ ಅನರ್ಹ ಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದೆ .ಇತ್ತೀಚೆಗೆ ಹೈಕೋರ್ಟ್ ಹಲವಾರು ರೀತಿಯ ಕಾನೂನುಗಳನ್ನು ಜಾರಿಗೆ ತರುತ್ತದೆ ಅದರಲ್ಲೂ ಕೂಡ ಆಸ್ತಿ ವಿಚಾರವಾಗಿ ಪದೇಪದೇ ಹೊಸರೂಪದ ಕಾನೂನುಗಳನ್ನು ಜಾರಿಗೆ ತರುತ್ತಲೆ ಇದೆ.
ಇದೀಗ ಗ್ರಾಮ ಪಂಚಾಯಿತಿ ವರೆಗೂ ಕೂಡ ನಿಯಮವನ್ನು ವಿಸ್ತರಿಸಿದ್ದು ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿ ಸದಸ್ಯ ಆಗಿರುವವರ ಆಸ್ತಿ ವಿವರ ಇನ್ನೂ ಸಲ್ಲಿಕೆಯಾಗದ ಕಾರಣ ಅವರಿಗೆ ಆದೇಶ ಹೊರಡಿಸಿ ಶೀಘ್ರವಾಗಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು ಎಂದು ಸೂಚನೆ ನೀಡಿದೆ.
ಈ ರೀತಿಯ ಕಾನೂನು ಹಿಂದಿನಿಂದಲೂ ಇತ್ತು ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾವಣೆಯಲ್ಲಿ ಆಯ್ಕೆಯಾಗಿ ಅವರು ಪ್ರಮಾಣ ವಚನವನ್ನು ಸ್ವೀಕರಿಸಿದ ಮೂರು ತಿಂಗಳ ಒಳಗೆ ಅವರ ಆಸ್ತಿ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಆದರೆ ಅನೇಕರು ಇನ್ನು ಸಹ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸ ಕಾರಣ ಕೋರ್ಟ್ ಹೊಸ ಆದೇಶವನ್ನು ಹೊರಡಿಸಿ ಅವರಿಗೆ ಎಚ್ಚರಿಕೆಯನ್ನು ನೀಡಿದೆ.
ಯಾರು ಹೊಸದಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ ಅವರು ಇನ್ನು ಸಹ ತಮ್ಮ ಆಸ್ತಿ ವಿವರವನ್ನು ಕಾನೂನಿನ ನಿಯಮದಂತೆ ಸಲ್ಲಿಸದೆ ಇದ್ದಲ್ಲಿ ಇನ್ನು ಮೂರು ತಿಂಗಳ ಒಳಗೆ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು. ಇದು ಕಡೆ ಅವಕಾಶ ಆಗಿದ್ದು ಒಂದು ವೇಳೆ ಈಗಲೂ ಸಹ ಇದನ್ನು ಪೂರ್ತಿ ಮಾಡದೇ ಇದ್ದರೆ ಶೋಕಾಸ್ ನೋಟಿಸ್ ಕೂಡ ಇರದೇ ಅವರನ್ನು ಗ್ರಾಮ ಪಂಚಾಯತಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಗ್ರಾಮ ಪಂಚಾಯಿತಿ ಸದಸ್ಯರ ಆಸ್ತಿ ವಿವರ ಸಲ್ಲಿಕೆ ಕುರಿತದಂತೆ ಕಾನೂನಿನಲ್ಲಿ ಯಾವ ನಿಯಮಗಳು ಇದೆ ಎಂದು ನೋಡುವುದಾದರೆ ಪ್ರತಿ ವರ್ಷ ಏಪ್ರಿಲ್ ತಿಂಗಳ ಒಳಗಡೆ ಗ್ರಾಮ ಪಂಚಾಯಿತಿಯ ಎಲ್ಲಾ ಚುನಾಯಿತ ಸದಸ್ಯರು ಕೂಡ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಸಲ್ಲಿಸಬೇಕು ಎನ್ನುವುದು ಕಾನೂನು ನಿಯಮಗಳಡಿ ಕಡ್ಡಾಯ.
ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರಿಂದ ನಮೂನೆ-1 ಸ್ವೀಕರಿಸಿ, ಎಲ್ಲ ಕಾಲಂಗಳನ್ನು ಸರಿಯಾಗಿ ಭರ್ತಿ ಮಾಡಲಾಗಿದೆ ಎಂದು ಪರಿಶೀಲಿಸಿ, ಸದಸ್ಯರು ಘೋಷಣೆಯನ್ನು ಓದಿ ಸಹಿ ಮಾಡಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಂಡು ಅಧಿಕಾರಿಗಳು ಧೃಡಪಡಿಸಿಕೊಳ್ಳುತ್ತಾರೆ. ಅಧಿಕಾರಿಗಳು ನಮೂನೆ-1 ರ ಮೇಲೆ ನಮೂನೆಯನ್ನು ಸ್ವೀಕರಿಸಿದ ದಿನಾಂಕ ಮತ್ತು ಕಚೇರಿ ಅಧಿಕೃತ ಮುದ್ರೆ ಹಾಗೂ ಅಧಿಕಾರಿಗಳ ಸಹಿಯನ್ನು ಕೂಡ ಹಾಕುತ್ತಾರೆ.
ಕಚೇರಿ ಸ್ವೀಕೃತಿ ವಹಿಯಲ್ಲಿ ಅದನ್ನು ಕಡ್ಡಾಯವಾಗಿ ದಾಖಲಿಸುತ್ತಾರೆ. 2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದಲ್ಲಿ ಪ್ರಮಾಣ ಪತ್ರವನ್ನು ಪಡೆಯುತ್ತಾರೆ. ಹೀಗೆ ಸ್ವೀಕರಿಸಿದ ನಮೂನೆ ಫಾರಂ ಮತ್ತು ಪ್ರಮಾಣ ಪತ್ರವನ್ನು ಲಕೋಟಿಯಲ್ಲಿರಿಸಿ ಏಪ್ರಿಲ್ ತಿಂಗಳ ಅಂತ್ಯದೊಳಗೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡುತ್ತಾರೆ.
ಒಂದು ವೇಳೆ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಆಸ್ತಿ ವಿವರವನ್ನು ನಮೂನ-1 ರಲ್ಲಿ ಭರ್ತಿ ಮಾಡಿ ಸಲ್ಲಿಸದೆ ಇದ್ದಲ್ಲಿ ಜುಲೈ ತಿಂಗಳ ಮೊದಲನೇ ವಾರದಲ್ಲಿ ವಿವರ ಸಲ್ಲಿಸಿರುವ ಹಾಗೂ ಸಲ್ಲಿಸದೆ ಇರುವ ಸದಸ್ಯರ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಈಗ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯರಿಗೆ ಮತ್ತೊಮ್ಮೆ ಆದೇಶ ನೀಡಲಾಗಿದೆ.