ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ಚೆಕ್ ಮಾಡುವ ವಿಧಾನ.!

 

WhatsApp Group Join Now
Telegram Group Join Now

ಈಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ಸಹಾಯಧನವನ್ನು ನೀಡುತ್ತಿವೆ. ರೈತರಿಗೆ ನೀಡುವ ಕೃಷಿ ಸಂಬಂಧಿ ಯೋಜನೆ ಯಿಂದ ಹಿಡಿದು ಕಾರ್ಮಿಕ ವಲಯ, ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಎಲ್ಲವೂ ಕೂಡ ನೇರವಾಗಿ DBTಮೂಲಕ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿದೆ. ಈ ರೀತಿ DBT ಮೂಲಕ ಪೇಮೆಂಟ್ ಪಡೆಯಬೇಕು ಎಂದರೆ ಅದು ಅವರ ಆಧಾರ್ ಕಾರ್ಡ್ ಮೂಲಕ ನಡೆಯುತ್ತದೆ.

ಆದ್ದರಿಂದ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಆಗಿರಬೇಕು ಮತ್ತು NPCI ಮ್ಯಾಪಿಂಗ್ ಆಗಿರಬೇಕು. ಕರ್ನಾಟಕ ರಾಜ್ಯದಲ್ಲಿ ಈಗ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗುತ್ತದೆ. ಇದನ್ನು ಪಡೆಯಲು ಕೂಡ ಈ ರೀತಿ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗಿರಬೇಕು ಇದರ ಕುರಿತು ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ಚೆಕ್ ಮಾಡುವ ವಿಧಾನ:-
● ಗೂಗಲ್ ಅಲ್ಲಿ my aadhar ಎಂದು ಟೈಪ್ ಮಾಡಿ ಸರ್ಚ್ ಕೊಡಿ, UIDAI ನ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● UIDAI ನ ಅಧಿಕೃತ ವೆಬ್ ಸೈಟ್ ಓಪನ್ ಆಗುತ್ತದೆ ಅದರಲ್ಲಿ ಮೆನು ಬಾರ್ ಅಲ್ಲಿ ಕಾಣುವ my aadhar ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ Aadhar Services ಎನ್ನುವ ವಿಭಾಗದ ಕೊನೆಯ ಸಾಲಿನಲ್ಲಿ Check Aadhar bank linking status ಎನ್ನುವುದನ್ನು ಕ್ಲಿಕ್ ಮಾಡಿ.

● ಒಂದು ಹೊಸ ಪೇಜ್ ಕಾಣುತ್ತದೆ ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಕೆಳಗೆ ಕ್ಯಾಪ್ಚಾ ಕೋಡ್ ಇರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿ. ಸೆಂಡ್ OTP ಕೊಡಿ. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, OTP ನಮೂದಿಸಿ ಸಬ್ಮಿಟ್ ಕೊಡಿ.

● ಸಬ್ಮಿಟ್ ಕೊಟ್ಟ ತಕ್ಷಣ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಯಾವ ದಿನಾಂಕದಲ್ಲಿ ಆಗಿದೆ ಅದರ ಸ್ಥಿತಿ ಏನಿದೆ ಸಂಪೂರ್ಣ ಮಾಹಿತಿಯೂ ಕೂಡ ಬರುತ್ತದೆ. ಒಂದು ವೇಳೆ ಲಿಂಕ್ ಆಗಿಲ್ಲ ಎಂದರೆ ನಿಮ್ಮ ಆಧಾರ್ ಸಂಖ್ಯೆ ಯಾವ ಬ್ಯಾಂಕ್ ಅಕೌಂಟ್ ಕೂಡ ಲಿಂಕ್ ಆಗಿಲ್ಲ ಎನ್ನುವ ಘೋಷಣೆ ಬರುತ್ತದೆ.

ಯಾವುದೇ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ ತಕ್ಷಣವೇ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ಪಾಸ್ ಬುಕ್ ನ ಮೊದಲ ಪೇಜ್ ಜೆರಾಕ್ಸ್ ಹಾಗೂ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಜೊತೆಗೆ ಆಧಾರ್ ಸೀಡಿಂಗ್ ಅಂಡ್ NPCI ಮ್ಯಾಪಿಂಗ್ ರಿಕ್ವೆಸ್ಟ್ ಅಪ್ಲಿಕೇಶನ್ ಸಿಗುತ್ತದೆ ಅದನ್ನು ಫಿಲ್ ಮಾಡಿ ಸಹಿ ಮತ್ತು ಥಂಬ್ ಇಂಪ್ರೆಶನ್ ಹಾಕಿ ಸಲ್ಲಿಸುವ ಮೂಲಕ ಕೋರಿಕೆ ಸಲ್ಲಿಸಬಹುದು. ಇದನ್ನು ಸಿಬ್ಬಂದಿ ಪರಿಶೀಲಿಸಿ ಅನುಮೋದನೆ ಮಾಡಿದರೆ ಮೂರರಿಂದ ನಾಲ್ಕು ದಿನಗಳಲ್ಲಿ ನಿಮ್ಮ ಅಕೌಂಟ್ ಗೆ ಆಧಾರ್ ಸೀಡಿಂಗ್ ಆಗಿರುತ್ತದೆ. ನೀವು ಮತ್ತೆ ಈ ಮೇಲೆ ತಿಳಿಸಿದ ವಿಧಾನಗಳನ್ನು ಅನುಸರಿಸಿ ಅದನ್ನು ಚೆಕ್ ಮಾಡಿಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now