ಕಡಿಮೆ ಖರ್ಚಿನಲ್ಲಿ 3 ಬೆಡ್ರೂಮ್ ಮನೆ ನಿರ್ಮಾಣ, ಮನೆ ಕಟ್ಟುವ ಕನಸಿರುವವರು ತಪ್ಪದೆ ಈ ಮಾಹಿತಿಯನ್ನೊಮ್ಮೆ ನೋಡಿ.!

 

ತಮಗಾಗಿ ಸ್ವಂತ ಸೂರಿಲ್ಲದವರ ಬದುಕನ್ನು ನೆನೆಸಿಕೊಂಡರೆ ಬಹಳ ಬೇಸರವಾಗುತ್ತದೆ. ಕೆಲವರು ಸಾವಿರಾರು ರೂಪಾಯಿ ತೆತ್ತು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರೆ ಇನ್ನು ಕೆಲವರು ಆ ಬಾಡಿಗೆ ಹಣ ಕಟ್ಟಲು ಕೂಡ ಆದಾಯ ಇಲ್ಲದೆ ರಸ್ತೆ ಬದಿಗಳಲ್ಲಿ ಜೋಪಡಿ ಹಾಕಿಕೊಂಡು ಬದುಕು ದೂಡುತ್ತಿರುವಂತಹ ಪರಿಸ್ಥಿತಿಯೂ ನಮ್ಮ ದೇಶದಲ್ಲಿ ಇನ್ನೂ ಅನೇಕರಿಗಿದೆ.

ಕೆಲವರಿಗೆ ಮನೆ ಕಟ್ಟುವುದು ಪ್ರತಿಷ್ಠೆಯ ವಿಚಾರ, ಕೋಟ್ಯಾನು ಕೋಟಿ ಹಣ ವ್ಯಯಿಸಿ ಎಲ್ಲಾ ಫೆಸಿಲಿಟಿಯುಳ್ಳ ಐಶಾರಾಮಿ ಬಂಗಲೆಗಳನ್ನು ಕಟ್ಟಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಮಧ್ಯಮ ವರ್ಗದವರಿಗೆ ತಮ್ಮ ಬಜೆಟ್ಗೆ ತಕ್ಕಹಾಗೆ ಮೂಲಭೂತ ಸೌಕರ್ಯ ಇರುವ ಮನೆ ಕಟ್ಟಿಸಿಕೊಳ್ಳುವುದೇ ಜೀವಮಾನದ ಸಾಧನೆಯ ಪರಿಸ್ಥಿತಿಯಾಗಿದೆ.

ಈಗಿನ ಕಾಲದಲ್ಲಿ ಬರುವ ಸಂಬಳದಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕೂಡ ಸರಿದೂಗಿಸಿ ಹಣ ಉಳಿಸಿ ಜಾಗ ಖರೀದಿಸಿ ಮನೆ ನಿರ್ಮಿಸುವಷ್ಟರಲ್ಲಿ ಅರ್ಧ ಆಯುಷ್ಯ ಕಳೆದು ಹೋಗಿರುತ್ತದೆ. ಇನ್ನೂ ಕೆಲವರು ದುಡಿಯಲು ಶುರುಮಾಡಿದಾಗಲಿಂದಲೇ ಈ ಯೋಜನೆಗೆ ಹಣ ಕೂಡಿಡುತ್ತಿರುತ್ತಾರೆ. ಇನ್ನು ಕೆಲವರು ಆಪ್ತರ ಬಳಿ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಈ ಕೆಲಸಕ್ಕೆ ಕೈ ಹಾಕಿಬಿಡುತ್ತಾರೆ.

ಆದರೆ ಮನೆ ಕಟ್ಟಿ ನೋಡು ಮದ್ವೆ ಮಾಡಿ ನೋಡು ಎನ್ನುವ ಗಾದೆ ಇರುವಂತೆ, ಮದುವೆ ಬೇಕಾದರೂ ಈ ಕಾಲದಲ್ಲಿ ಮಾಡಿ ಮುಗಿಸಿಬಿಡಬಹುದು ಆದರೆ ಮನೆ ಕಟ್ಟುವುದು ಮಾತ್ರ ಅಷ್ಟೇ ದೀರ್ಘವಾದ ಸಮಯ ಹಿಡಿಯುವ ಅಷ್ಟೇ ಖರ್ಚು ವೆಚ್ಚಗಳನ್ನು ಕೂಡ ಹೊಂದಿರುವ ಪ್ರತಿ ವಿಷಯದಲ್ಲೂ ಕೂಡ ಸೂಕ್ಷ್ಮವಾಗಿ ಅಳೆದು ತೂಗಿ ಖರ್ಚು ಮಾಡಿ ಮಾಡುವಂತ ಕೆಲಸವಾಗಿದೆ.

ನೀವೇನಾದರೂ ಕಡಿಮೆ ಬಜೆಟ್ ಅಲ್ಲಿ ನಿಮ್ಮ ಕುಟುಂಬದವರೆಲ್ಲರೂ ನೆಮ್ಮದಿಯಾಗಿ ವಾಸವಿರುವಂತೆ ಎಲ್ಲ ಸುಸ್ತಜ್ಜಿತ ವ್ಯವಸ್ಥೆಯುಳ್ಳ ಮೂರು ಬೆಡ್ರೂಮ್ ಗಳ ಮನೆ ನಿರ್ಮಿಸಬೇಕು ಎಂದರೆ ಅಂದಾಜು ಎಷ್ಟು ಖರ್ಚಾಗಬಹುದು ಕಡಿಮೆ ಎಂದರೂ ಇದಕ್ಕೆ 15-20 ಲಕ್ಷ ಹಣವಾದರೂ ಬೇಕು. ಆದರೆ ಒಂದು ಮನೆ ನಿರ್ಮಾಣ ಮಾಡುವ ಸಂಸ್ಥೆ ನಿಮಗೆ 12ರಿಂದ 13 ಲಕ್ಷ ರೂಪಾಯಿಗಳಲ್ಲಿ ವಿಶಾಲವಾಗಿ 1200sq.ft ಮೂರು ಬೆಡ್ರೂಮ್ ಗಳ ಮನೆಯನ್ನು ನಿರ್ಮಿಸಿ ಕೊಡುತ್ತಾರೆ.

ಈಗಾಗಲೇ ಈ ಕಂಪನಿಗೆ ಪ್ರಾಜೆಕ್ಟ್ ಕೊಟ್ಟವರು ಆ ಮನೆಗಳಲ್ಲಿ ನೆಮ್ಮದಿಯಾಗಿ ವಾಸ ಮಾಡುತ್ತಿದ್ದಾರೆ. ಎಲ್ಇಡಿ ಲೈಟಿಂಗ್ ವ್ಯವಸ್ಥೆ, 2 ಮಾಸ್ಟರ್ ಬೆಡ್ರೂಮ್ + ಬೆಡ್ರೂಮ್, ಡೈನಿಂಗ್ ಹಾಲ್ ಹಾಗೂ ಒಂದು ವಿಶಾಲವಾದ ಕಿಚನ್, ದೇವರಕೋಣೆ ಮತ್ತು ಮನೆ ಹೊರಗಡೆ ಸಿಟ್ಟಿಂಗ್ ವ್ಯವಸ್ಥೆ ಕೂಡ ಇರುವಂತಹ ಆಕರ್ಷಣೀಯ ಮನೆಯನ್ನು ಕಡಿಮೆ ಖರ್ಚಿನಲ್ಲಿ ಇವರು ಕಟ್ಟಿಕೊಡುತ್ತಾರೆ.

RCC ಛಾವಣಿಯುಳ್ಳ ಒಳ್ಳೆ ಗುಣಮಟ್ಟದ ಟೈಲ್ಸ್ ಗಳನ್ನು ಉಪಯೋಗಿಸಿ ಇವರು ಮನೆ ನಿರ್ಮಿಸುತ್ತಾರೆ. ಮನೆಯ ಮುಖ್ಯ ದ್ವಾರದ ಬಾಗಿಲಿನಿಂದ ಹಿಡಿದು ಕಿಟಕಿ ಬಾಗಿಲು ವರೆಗೆ ಎಲ್ಲವೂ ಕೂಡ ಒಳ್ಳೇ ಕ್ವಾಲಿಟಿಯದ್ದೇ ಆಗಿರುತ್ತದೆ. ಗುಣಮಟ್ಟದಲ್ಲಿ ಯಾವುದೇ ಕಾಂಪ್ರಮೈಸ್ ಇರುವುದಿಲ್ಲ. ಆದರೆ ಚೀಪ್ ಅಂಡ್ ಬೆಸ್ಟ್ ಎನ್ನುವಂತೆ ಕಡಿಮೆ ಖರ್ಚಿನಲ್ಲಿ ಬಾಳಿಕೆ ಬರುವ ಸರಕುಗಳನ್ನು ಖರೀದಿಸಿ ಇವರು ನಿಮಗೆ ಮನೆ ನಿರ್ಮಿಸಿ ಕೊಡುತ್ತಾರೆ.

ಈ ಮಾಹಿತಿ ನೋಡಿದ ಮೇಲೆ ನಿಮಗೂ ಕೂಡ ಇಷ್ಟೇ ಖರ್ಚಿನಲ್ಲಿ ಮನೆ ನಿರ್ಮಿಸಿಕೊಳ್ಳಬೇಕು ಎನ್ನುವ ಮನಸ್ಸಾಗಿದ್ದರೆ 9606131387 ಈ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

Leave a Comment

%d bloggers like this: