ಸಾವಯವ ಕೃಷಿ ಪದ್ಧತಿಯನ್ನು ರೈತರು ಅನುಸರಿಸಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥವನ್ನು ಬೆಳೆಯುವುದರ ಜೊತೆಗೆ ಅಧಿಕ ಇಳುವರಿಯನ್ನು ಪಡೆದು ರೈತ ಕೃಷಿ ಕ್ಷೇತ್ರದಲ್ಲಿ ಲಾಭದಲ್ಲಿ ಮುನ್ನಡೆಯಬೇಕು ಎನ್ನುವುದು ಸರ್ಕಾರಗಳ ಆಶಯ. ಹಾಗಾಗಿ ಕೃಷಿ ಕ್ಷೇತ್ರಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದೆ.
ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಸಾಮಾನ್ ನಿಧಿ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ರೈತರಿಗಾಗಿ ಲಭ್ಯವಿದೆ. ರಾಜ್ಯದಿಂದಲೂ ಕೂಡ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಕೀಟನಾಶಕಗಳನ್ನು ನೀಡುವುದು, ಕಡಿಮೆ ಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತವಾಗಿ ಕೃಷಿ ಚಟುವಟಿಕೆಗಾಗಿ ಮತ್ತು ಕೃಷಿ ಉಪಕರಣಗಳನ್ನು ಖರೀದಿಸಲು ಸಾಲ ನೀಡುವುದು.
ಇನ್ನೂ ಮುಂತಾದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಇವುಗಳ ಜೊತೆಗೆ ಮತ್ತೊಂದು ಹೊಸ ಯೋಜನೆ ಸೇರ್ಪಡೆ ಆಗಿದ್ದು ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಕೇಂದ್ರದ ಕೃಷಿ ಸಂಬಂಧಿ ಯೋಜನೆಯ ಸಹಾಯಧನವನ್ನು ಪಡೆಯುತ್ತಿದ್ದ ಎಲ್ಲ ರೈತರು ಕೂಡ ಈ ಹಿಂದೆ BJP ಸರ್ಕಾರ ಇದ್ದಾಗ ರಾಜ್ಯದ ಕಡೆಯಿಂದಲೂ ಕೂಡ 2 ಕಂತುಗಳ ಹೆಚ್ಚುವರಿ ಹಣವನ್ನು ಸಿಎಂ ಕಿಸಾನ್ ಸಮಾನ್ ನಿಧಿ ಯೋಜನೆ ಮೂಲಕ ಪಡೆಯುತ್ತಿದ್ದರು.
ಈಗ ಅಂತಹ ರೈತರಿಗೆ ಕೇಂದ್ರದ ಕಿಸಾನ್ ಸಮ್ಮಾನ್ ನಿಧಿ ಹಣದ ಜೊತೆಗೆ ಜೊತೆಗೆ ವಾರ್ಷಿಕವಾಗಿ ಎಕರೆಗೆ 6,500 ಹೆಚ್ಚುವರಿ ಹಣ ಸಿಗುತ್ತಿದೆ. ಈ ಸಹಾಯಧನವನ್ನು ನೀಡುತ್ತಿರುವ ಉದ್ದೇಶ ಸಾವಯವ ಕೃಷಿಯನ್ನು ಉತ್ತರಿಸುವುದಾಗಿದೆ. ರಾಜ್ಯದ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲಿ ಎನ್ನುವ ಕಾರಣಕ್ಕಾಗಿ ಅದಕ್ಕೆ ಬೇಕಾದ ಸವಲತ್ತುಗಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಸಹಾಯಧನವನ್ನು ನೀಡಿ ರಾಜ್ಯ ಸರ್ಕಾರವು ನೆರವಾಗಲು ನಿರ್ಧರಿಸಿ.
ಈ ಸಾವಯವ ಕೃಷಿ ಯೋಜನೆಗೆ ಸಾವಯವ ಕಾರಿಡಾರ್ ಯೋಜನೆ ಎಂದು ಹೆಸರಿಡಲಾಗಿದೆ. ರಾಜ್ಯದಲ್ಲಿ ಸಾವಯವ ಕೃಷಿಯನ್ನು ಹೆಚ್ಚಿಸಲು ಗುರಿಯನ್ನು ಇಟ್ಟುಕೊಂಡು ರೂಪಿಸಿರುವ ಹೊಸ ಯೋಜನೆಯ ಪ್ಲಾನಿಂಗ್ ಪ್ರಕಾರ 20,000 ಎಕರೆಯಲ್ಲಿ ಸಾವಯವ ಕೃಷಿ ಮಾಡಲಾಗುವುದು. ಇದಕ್ಕಾಗಿ ಸರ್ಕಾರ ರೈತರನ್ನು ಪ್ರೋತ್ಸಾಹಿಸಿ ಮುನ್ನಡೆಸಲು ಎಕರೆಗೆ 6500ರೂ. ನೀಡಿ ಆಯ್ದ ರೈತರುಗಳಿಗೆ ತರಬೇತಿ ಕೂಡ ಕೊಡಿಸಬೇಕು ಎಂದು ನಿರ್ಧಾರ ಮಾಡಿದೆ.
ರಾಜ್ಯಮಟ್ಟದಲ್ಲಿ ರೈತರ ತರಬೇತಿ ನಡೆಯಲಿದ್ದು ರಾಜ್ಯದ ಎಲ್ಲಾ ಭಾಗಗಳಿಂದರಲೂ ಈ ತರಬೇತಿಗೆ ಯುವ ರೈತರನ್ನು ಹಾಗೂ ಪ್ರಗತಿಪರ ಚಿಂತನೆಯುಳ್ಳ ರೈತರನ್ನು ಆರಿಸಲು ನಿರ್ಧರಿಸಲಾಗಿದೆ. ಈ ತರಬೇತಿಗಳನ್ನು ಪಡೆದು ಇದನ್ನು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಏಳಿಗೆ ಕಂಡ ರೈತರಿಗೆ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ದೊರಕಿಸಿಕೊಡಬೇಕು ಎಂದು ಮತ್ತೊಮ್ಮೆ ದೇಶದಲ್ಲಿ ಸಾವಯವ ಕೃಷಿಯಲ್ಲಿ ಈಗಾಗಲೇ ಲಾಭ ಕಂಡಿರುವ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಕೂಡ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದೆ.
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಕಡ್ಡಾಯವಾಗಿ ಆತ ತನ್ನ ಹೆಸರಿನಲ್ಲಿ ಜಮೀನನ್ನು ಹೊಂದಿರುವ ಮತ್ತು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನುಭವಿ ರೈತ ಆಗಿರಬೇಕಾಗುತ್ತದೆ. ರಾಜ್ಯದ ಎಲ್ಲಾ ರೈತರು ಕೂಡ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ರೈತರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಹೆಚ್ಚಿನ ರೈತರಿಗೆ ಮಾಹಿತಿ ತಲುಪುವಂತೆ ಮಾಡಿ.