ಮೀನು ಸಾಗಾಣಿಕೆಗೆ ಸರ್ಕಾರದಿಂದ ಸಿಗಲಿದೆ 60% ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ.!

 

WhatsApp Group Join Now
Telegram Group Join Now

ಮೀನುಗಾರಿಕೆ (Fisheries) ಕೂಡ ದೇಶಕ್ಕೆ ಆದಾಯದ ತರುವ ಒಂದು ಮೂಲವಾಗಿದೆ. ಇತರ ಕೃಷಿ ಚಟುವಟಿಕೆಗಳಂತೆ ಮೀನುಗಾರಿಕೆಯಿಂದ ಕೂಡ ಹಲವರ ಬದುಕು ಸಾಗುತ್ತಿದೆ. ಹಾಗಾಗಿ ನದಿ ಪಾತ್ರ ದೇಶವಾದ ಭಾರತದಲ್ಲಿ ಮೀನುಗಾರಿಕೆಯನ್ನು ಅಭಿವೃದ್ದಿಪಡಿಸಿ ಆ ಮೂಲಕ ದೇಶದ ಆದಾಯವನ್ನು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರವು (Central Government) ಯೋಜನೆ ಹಾಕಿಕೊಂಡಿದೆ.

ಇದಕ್ಕಾಗಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (PM Mathsya Sampada Scheme) ಎನ್ನುವ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. 2020ರ ಸೆಪ್ಟೆಂಬರ್ 10ರಂದು ಬಿಹಾರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಯೋಜನೆಯನ್ನು ಜಾರಿಗೆ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಈ ಯೋಜನೆ ಪೈಕಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.

ಬ್ಯಾಂಕಿನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟಿರುವವರಿಗೆ ಹೊಸ ರೂಲ್ಸ್ ಜಾರಿಗೆ ತಂದ RBI…! ತಪ್ಪದೆ ಈ ವಿಚಾರ ತಿಳಿದುಕೊಳ್ಳಿ

ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ನಂತರದ ವರ್ಷಗಳಲ್ಲಿ ದೇಶವು ವಾರ್ಷಿಕವಾಗಿ ದೇಶದಲ್ಲಿ 70 ಟನ್ ಗಳಷ್ಟು ಮೀನು ರಫ್ತು ಮಾಡಿ ಒಂದು ಲಕ್ಷ ಕೋಟಿ ಆದಾಯ ಗಳಿಸಬೇಕು ಎನ್ನುವ ಮುಂದಾಲೋಚನೆಯನ್ನು ಹೊಂದಿದ್ದಾರೆ.

ಇದರ ಸಂಬಂಧಿತವಾಗಿ ಈಗ ಮೀನುಗಾರಿಕೆ ಇಲಾಖೆಯಿಂದ ( Department of Fisheries) 2023-24ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆ ವಿವಿಧ ಘಟಕಗಳ ನಿರ್ಮಾಣಕ್ಕೆ ಸಹಾಯಧನ ನೀಡವಾಗುತ್ತಿದೆ. ಈ ಯೋಜನೆಯ ಮೂಲ ಉದ್ದೇಶ ಏನೆಂದರೆ ಮೀನುಗಾರಿಕೆಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿಕೊಡುವುದು.

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆ ಕಳೆದು ಹೋದರೆ ಹೊಸ ನಂಬರ್ ಸೇರಿಸುವುದು ಹೇಗೆ.? ನಿಮ್ಮ ಮೊಬೈಲ್ ಮೂಲಕವೇ ನಂಬರ್ ಬದಲಾವಣೆ ಮಾಡುವ ವಿಧಾನ.!

ಜೊತೆಗೆ ಮೀನಿನ ನಷ್ಟ ಪ್ರಮಾಣವನ್ನು ಕೂಡ 20% – 25% ಯಿಂದ 10% ಗೆ ಇಳಿಸುವುದು ಆಹಾರದ ಮೂಲವು ಆಗಿರುವ ಈ ಮೀನುಗಾರಿಕೆಯಿಂದ ಆಹಾರ ಕೊರತೆ ನೀಗಿಸುವುದರೊಂದಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಮಾಡುವುದು ಕೂಡ ಯೋಜನೆಯ ಭಾಗವಾಗಿದೆ.

ಇದರ ಸಲುವಾಗಿ ದೇಶದಲ್ಲಿ ಮೀನುಗಾರಿಕೆ ಪ್ರಮುಖವಾಗಿರುವ ಕೆಲ ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಫಲಾನುಭವಿಗಳಿಂದ ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆಯುವಂತೆ ರಾಜ್ಯದ ಮೀನುಗಾರಿಕೆ ಇಲಾಖೆ ಕೂಡ ಸೂಚಿಸಿದೆ.

ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಉಚಿತವಾಗಿ ಸಿಗಲಿದೆ ಹೊಸ ಸೈಕಲ್, ಇದೊಂದು ದಾಖಲೆ ಜೊತೆ ಅರ್ಜಿ ಸಲ್ಲಿಸಿ ಸಾಕು.!

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಒಟ್ಟು 29 ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮೀನು ಕೃಷಿ ಕೊಳಗಳ ನಿರ್ಮಾಣ, ಬಯೋ ಬ್ಲಾಕ್ ಘಟಕ ಸ್ಥಾಪನೆ, ಮಂಜುಗೆಡ್ಡೆ ಸ್ಥಾವರ ನಿರ್ಮಾಣ, ಮಂಜುಗೆಡ್ಡೆ ಸ್ಥಾವರ ನವೀಕರಣಕ್ಕೆ ಸಹಾಯಧನ, ಕಡಲ ಚಿಪ್ಪೆ ಕೃಷಿಗೆ ಸಹಾಯಧನ, ಸಾಂಪ್ರದಾಯಿಕ ಮತ್ತು ಯಾಂತ್ರಿಕ ಮೀನುಗಾರಿಕಾ ಹಡಗುಗಳ ಖರೀದಿ.

ಅಥವಾ ದುರಸ್ತಿಗೆ ಸಹಾಯಧನ ಮೀನುಗಾರರ ಸುರಕ್ಷಿತ ಕಿಟ್ ಗಳು ಮೀನುಗಾರ ದೋಣಿಗಳ ಬದಲಿ ವ್ಯವಸ್ಥೆ ಬಲೆಗಳ ನಿರ್ಮಾಣ ಅಥವಾ ಖರೀದಿಗೆ ಸಹಾಯಧನ ಸೇರಿದಂತೆ ಒಟ್ಟಾರೆಯಾಗಿ ಮೀನುಗಾರಿಕೆ ಘಟಕ ವೆಚ್ಚಕ್ಕೆ ಈ ಸಹಾಯಧನವನ್ನು ನೀಡಲಾಗುತ್ತಿದೆ. ಇದರಲ್ಲಿ SC, ST ಮತ್ತು ಮಹಿಳೆಯರಿಗೆ ಘಟಕ ವೆಚ್ಚದ ಶೇಕಡ 60% ಸಹಾಯಧನ, ಇನ್ನುಳಿದ ವರ್ಗಗಳಿಗೆ ಶೇಕಡ 40% ಸಹಾಯಧನ ಸಿಗುತ್ತಿದೆ.

ಕರ್ನಾಟಕ ಬ್ಯಾಂಕ್ ನೇಮಕಾತಿ, ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

ಆಸಕ್ತ ಫಲಾನುಭವಿಗಳು ಸೂಕ್ತ ದಾಖಲೆ ಜೊತೆ ಆಯಾ ಜಿಲ್ಲೆ ಅಥವಾ ತಾಲೂಕುಗಳಲ್ಲಿ ಇರುವ ಮೀನುಗಾರಿಕೆ ಇಲಾಖೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಈ ಸಹಾಯಧನವನ್ನು ಪಡೆಯಬಹುದು. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ತಾಲೂಕಿನಲ್ಲಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 22 ಕಡೆಯ ದಿನಾಂಕವಾಗಿದೆ. ಫಲಾನುಭವಿಗಳಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಕೆಲ ತಾಲೂಕು ಕೇಂದ್ರಗಳ ಸಹಾಯವಾಣಿ ಸಂಖ್ಯೆಯನ್ನು ಕೊಡುತ್ತಿದ್ದೇವೆ.

● ಹಾಸನ – 8296125312
● ಸಕಲೇಶಪುರ – 9986398624
● ಹೊಳೆನರಸೀಪುರ – 8792747119
● ಬೇಲೂರು – 7411278429
● ಅರಸಿಕೆರೆ – 8549933411
● ಚನ್ನರಾಯಪಟ್ಟಣ – 8147806919
● ಆಲೂರು – 9008419748
● ಅರಕಲಗೂಡು – 9741520760
● ಮೈಸೂರು – 9448425462

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now