ಕರ್ನಾಟಕ ಬ್ಯಾಂಕ್ ನೇಮಕಾತಿ, ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

 

ಎಲ್ಲಾ ನಿರುದ್ಯೋಗಿಗಳಿಗೆ ಅಥವಾ ಉದ್ಯೋಗ ಬದಲಾಯಿಸಬೇಕು ಎಂದು ಯೋಚಿಸುತ್ತಿರುವವರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಕನಸು ಹೊಂದಿರುವ ಎಲ್ಲಾ ಆಕಾಂಕ್ಷೆಗಳಿಗೂ ಕೂಡ ಕರ್ನಾಟಕ ಬ್ಯಾಂಕ್ (Karnatakabank recruitment) ವತಿಯಿಂದ ಸಿಹಿ ಸುದ್ದಿ ಇದೆ.

ಯಾಕೆಂದರೆ ಕರ್ನಾಟಕ ಬ್ಯಾಂಕ್ ತನ್ನಲ್ಲಿ ಖಾಲಿ ಇರುವ ಆಫೀಸರ್ (officers) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಧಿಕೃತವಾಗಿ ಅಧಿಸೂಚನೆಯನ್ನು (notification) ಕೂಡ ಹೊರಡಿಸಿದೆ. ಈ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದು.

ನಿಮ್ಮ ಜಮೀನಿನ ಪಹಣಿ ಪತ್ರ ತಿದ್ದುಪಡಿ ಮಾಡುವುದು ಹೇಗೆ.? ಎಲ್ಲಾ ರೈತರು ತಿಳಿದುಕೊಳ್ಳ ಬೇಕಾದ ಪ್ರಮುಖ ಮಾಹಿತಿ ಇದು.!

ಈ ನೇಮಕಾತಿಗೆ ಸಂಬಂಧ ಪಟ್ಟ ಹಾಗೆ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಹೆಚ್ಚಿನ ವಿವರಕ್ಕಾಗಿ ಕರ್ನಾಟಕ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು.

ನೇಮಕಾತಿ:- ಕರ್ನಾಟಕ ಬ್ಯಾಂಕ್ ನೇಮಕಾತಿ
ಉದ್ಯೋಗ ಸಂಸ್ಥೆ:- ಕರ್ನಾಟಕ ಬ್ಯಾಂಕ್
ಹುದ್ದೆ:- ಆಫೀಸರ್ (ಸ್ಕೇಲ್ – 1)
ಉದ್ಯೋಗ ಸ್ಥಳ:- ಭಾರತದಾತ್ಯಂತ…
ವೇತನ ಶ್ರೇಣಿ:- ಮಾಸಿಕವಾಗಿ 1,00,000 ವರೆಗೆ

ಆಗಸ್ಟ್ ತಿಂಗಳಿನಲ್ಲಿ ಗೃಹಜ್ಯೋತಿ ಯೋಜನೆಯ ಕೆಲವು ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ಬಂದಿಲ್ಲ.! ಯಾಕೆ ಗೊತ್ತ.? ಎಲ್ಲರಿಗೂ ಫ್ರೀ ಕರೆಂಟ್ ಯಾಕೆ ಸಿಗುತ್ತಿಲ್ಲ ನೋಡಿ.!

ಶೈಕ್ಷಣಿಕ ವಿದ್ಯಾರ್ಹತೆ:-

● ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
● ಪೋಸ್ಟ್ ಗ್ರಾಜುಯೇಟೆಡ್ ಡಿಪ್ಲೋಮಾ ಅಥವಾ ಒಂದು ವರ್ಷದ ಎಕ್ಸಿಕ್ಯೂಟಿವ್ MBA ಪದವಿ ಪಡೆದವರಿಗೆ ಅವಕಾಶವಿಲ್ಲ.
● ಅಗ್ರಿಕಲ್ಚರ್ ಸೈನ್ಸ್ ಮತ್ತು ಕಾನೂನು ಪದವಿ ಪಡೆದವರು ಕೂಡ ಅರ್ಜಿ ಸಲ್ಲಿಸಬಹುದು.
● ಮಾರ್ಕೆಟಿಂಗ್ ಅಥವಾ ಫೈನಾನ್ಸ್ ವಿಭಾಗದಲ್ಲಿ MBA ಪಡೆದವರಿಗೆ ಮೊದಲ ಆದ್ಯತೆ.

ವಯೋಮಿತಿ:-

● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು.
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳು.

ಮನೆಯಲ್ಲಿ ಕಾರ್ ಮತ್ತು ಬೈಕ್ ಇದ್ದವರಿಗೆ ಹೊಸ ರೂಲ್ಸ್ ಜಾರಿ.! ಹೊಸ ವಾಹನ ಖರೀದಿ ಮಾಡುವವರಿಗೂ ನೋಂದಣಿ ನಿಯಮದಲ್ಲಿ ಬದಲಾವಣೆ.!

ವಯೋಮಿತಿ ಸಡಿಲಿಕೆ:-
SC / ST ಅಭ್ಯರ್ಥಿಗಳಿಗೆ 5 ವರ್ಷಗಳು.
OBC ಅಭ್ಯರ್ಥಿಗಳಿಗೆ 3 ವರ್ಷಗಳು.

ಅರ್ಜಿ ಶುಲ್ಕ:-

● SC / ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 700ರೂ.
● ಉಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 800ರೂ.
● ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.
● ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕ್ ಮೂಲಕ ಪಾವತಿಸಿ ಇ-ಶುಲ್ಕ ರಶೀದಿ ಪಡೆದು ಇಟ್ಟುಕೊಳ್ಳಬೇಕು.

ಅರ್ಜಿ ಸಲ್ಲಿಸುವ ವಿಧಾನ:-

● ಈ ಮೇಲೆ ತಿಳಿಸಿದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿದ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ ಅಧಿಕೃತ ವೆಬ್ಸೈಟ್ ಆದ https://karnatakabank.com ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ ಕೇಳಿರುವ ವೈಯುಕ್ತಿಕ ವಿವರಗಳನ್ನು ಸಲ್ಲಿಸಬೇಕು.
● ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಪಾವತಿ ಇವುಗಳಿಗೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ಸ್ವೀಕೃತಿ ಪತ್ರವನ್ನು ಮತ್ತು ರೆಫರೆನ್ಸ್ ನಂಬರನ್ನು ಪಡೆದುಕೊಳ್ಳಬೇಕು.

ಕುರಿ & ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿಗೆ 10 ಲಕ್ಷ ಸಾಲ, ಜೊತೆಗೆ ಸಬ್ಸಿಡಿ ಕೂಡ ದೊರೆಯುತ್ತದೆ ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!

ಆಯ್ಕೆ ವಿಧಾನ:-

● ಕಂಪ್ಯೂಟರ್ ಬೇಸ್ಡ್ ಪರೀಕ್ಷೆ.
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಬೇಕಾಗುವ ದಾಖಲೆಗಳು:-

● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ನಿವಾಸ ದೃಢೀಕರಣ ಪತ್ರ
● ಆಧಾರ್ ಕಾರ್ಡ್

ಪ್ರಮುಖ ದಿನಾಂಕಗಳು:-

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 12 ಆಗಸ್ಟ್, 2023.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26 ಆಗಸ್ಟ್, 2023.

Leave a Comment

%d bloggers like this: