ಕುರಿ ಮೇಕೆ ಸಾಕಾಣಿಕೆ ರೈತನಿಗೆ ಕೃಷಿ ಚಟುವಟಿಕೆ ಜೊತೆಗೆ ನೆರವಾಗುವ ಉಪ ಕಸುಬಾಗಿದೆ. ಹಳ್ಳಿಗಾಡಿನಲ್ಲಿರುವ ರೈತನು ವರ್ಷಪೂರ್ತಿ ಜಮೀನಿನಲ್ಲಿ ಬೆಳೆಯುವ ಬೆಳೆಯನ್ನು ನಂಬಿಕೊಂಡು ಬದುಕುವುದು ಬಹಳ ಕಷ್ಟ. ಹೀಗಾಗಿ ಆತ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ, ಮೀನುಗಾರಿಕೆ ಇತ್ಯಾದಿಗಳನ್ನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುತ್ತಾನೆ.
ಇದನ್ನು ಮನಗಂಡ ಸರ್ಕಾರ ರೈತನಿಗೆ ಈ ವಿಷಯವಾಗಿ ಪ್ರೋತ್ಸಾಹ ನೀಡುವುದಕ್ಕಾಗಿಯೇ ಹಲವು ವಿಶೇಷವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರೈತರುಗಳಿಗೆ ಈ ರೀತಿ ಉಪಕಸುಬುಗಳಿಗೆ ಸಹಾಯಧನ ಅಥವಾ ಸಬ್ಸಿಡಿ ರೂಪದ ಸಾಲ ನೀಡುವ ಅಥವಾ ಇದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಡಲು ಯೋಜನೆಗಳನ್ನು ನಿರ್ಮಿಸಿದೆ.
ಕೃಷಿ ಯಂತ್ರ ಖರೀದಿ ಮಾಡುವ ರೈತರಿಗೆ ಸಿಗಲಿದೆ ಬರೊಬ್ಬರಿ 2 ಲಕ್ಷ ಸಹಾಯಧನ ಸಿಗಲಿದೆ ಕೂಡಲೇ ಈ ಕಛೇರಿಗೆ ಭೇಟಿ ನೀಡಿ.!
ಅದೇ ರೀತಿ ಈಗ ಕುರಿ ಮೇಕೆ ಸಾಕಾಣಿಕೆ ಮಾಡುವ ರೈತನಿಗೆ PKCC ಮತ್ತು NLM ಯೋಜನೆಯಡಿ ಕನಿಷ್ಠ 10 ಲಕ್ಷದ ವರೆಗೂ ಕೂಡ ಕಡಿಮೆ ಬಡ್ಡಿ ದರದ ಮತ್ತು ಸಬ್ಸಿಡಿ ರೂಪದ ಸಾಲ ಸೌಲಭ್ಯ ನೀಡಲು ನಿರ್ಧರಿಸಿದೆ. ಈ ಅವಕಾಶವನ್ನು ರೈತನು ಸದುಪಯೋಗಪಡಿಸಿಕೊಂಡು ತನ್ನ ಕಸುಬನ್ನು ವೃದ್ಧಿಪಡಿಸಿಕೊಂಡರೆ ಆತನ ಆದಾಯ ಶೀಘ್ರವಾಗಿ ಹೆಚ್ಚಾಗುತ್ತದೆ.
ಹಾಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ ಹಾಗೆ ಈ ಯೋಜನೆಗಳ ವಿಶೇಷತೆ, ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿಚಾರವನ್ನು ಕೂಡ ತಿಳಿಸಿ ಕೊಡುತ್ತಿದ್ದೇವೆ.
● ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ವತಿಯಿಂದ ಕುರಿ ಮೇಕೆ ಸಾಕಾಣಿಕೆಗೆ ಶೆಡ್ ನಿರ್ಮಿಸಿಕೊಳ್ಳಲು ಸಹಾಯಧನ ನೀಡುತ್ತಾರೆ.
● ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ (PKCC) ರೈತನು ವಾರ್ಷಿಕ 4% ಬಡ್ಡಿ ದರದಲ್ಲಿ ಕುರಿ ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ ಪಡೆಯಬಹುದು, ಈ ಯೋಜನೆಯಲ್ಲಿ ರೈತನಿಗೆ ಪ್ರತಿ ಕುರಿಯ ಮೇಲೆ 4063ರೂ. ಸಾಲ ಸಿಗುತ್ತದೆ. ಎಲ್ಲಾ ಖಾಸಗಿ ಮತ್ತು ಸರ್ಕಾರಿ ವಲಯದ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಯಾವುದು ಶ್ಯೂರಿಟಿ ಇಲ್ಲದೆ 1.6 ಲಕ್ಷದವರೆಗೂ ಕೂಡ ಸಾಲ ಸೌಲಭ್ಯ ನೀಡುತ್ತವೆ.
● ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ (NLM) ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ ಕುರಿ ಮೇಕೆ ಸಾಕಾಣಿಕೆಗೆ ಘಟಕ ಸ್ಥಾಪನೆ ಮಾಡಿಕೊಳ್ಳಲು ಸಾಲ ಸೌಲಭ್ಯ ದೊರೆಯುತ್ತದೆ. ಈ ಯೋಜನೆ ಅಡಿ 100 ಕುರಿ, 5 ಟಗರು ಖರೀದಿಗೆ 10 ಲಕ್ಷದ ವರೆಗೂ ಕೂಡ ಆರ್ಥಿಕ ನೆರವು ಸಿಗುತ್ತದೆ. ಇದರಲ್ಲಿ 50% ಸಹಾಯಧನವಾಗಿದೆ, ಗರಿಷ್ಠ 500 ಕುರಿ ಮತ್ತು 25 ಟಗರು ಖರೀದಿಗೆ ವರೆಗೆ ಕೂಡ ಈ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ವಿಧಾನ:-
● ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಒದಗಿಸಿ ಹತ್ತಿರದಲ್ಲಿರುವ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದರೆ ಒಂದು ತಿಂಗಳ ನಂತರ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಿಗುತ್ತದೆ, ಆದರೆ PKCC ಯೋಜನೆಯಡಿ ಪಡೆಯುವ ಸಾಲಗಳಿಗೆ ಸಬ್ಸಿಡಿ ಇರುವುದಿಲ್ಲ.
● NLM ಯೋಜನೆಡಿ ಸಹಾಯ ಬಯಸುವ ರೈತರು ಪೂರಕ ದಾಖಲೆಗಳ ಜೊತೆ ಪಶುಪಾಲನ ಇಲಾಖೆಗೆ ಹೋಗಿ ಅರ್ಜಿ ಸಲ್ಲಿಸಬಹುದು.
● ಇವುಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಪಶು ಪಾಲನೆ ಇಲಾಖೆ ಅಥವಾ ಬ್ಯಾಂಕ್ ಗಳಿಗೆ ಭೇಟಿಕೊಟ್ಟು ಹೆಚ್ಚಿನ ವಿವರ ಪಡೆದುಕೊಳ್ಳಬಹುದು.