ಆಗಸ್ಟ್ ತಿಂಗಳಿನಲ್ಲಿ ಗೃಹಜ್ಯೋತಿ ಯೋಜನೆಯ ಕೆಲವು ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ಬಂದಿಲ್ಲ.! ಯಾಕೆ ಗೊತ್ತ.? ಎಲ್ಲರಿಗೂ ಫ್ರೀ ಕರೆಂಟ್ ಯಾಕೆ ಸಿಗುತ್ತಿಲ್ಲ ನೋಡಿ.!

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾದ ಗೃಹಜ್ಯೋತಿ (Gruhajyothi) ಯೋಜನೆಗೆ ಜೂನ್ ತಿಂಗಳಿನಿಂದ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳೆಲ್ಲರೂ ಈ ಯೋಜನೆಗೆ ಸರ್ಕಾರ ವಿಧಿಸಿರುವ ಕಂಡೀಶನ್ ಒಳಗೆ ವಿದ್ಯುತ್ ಬಳಕೆ ಮಾಡಿದ್ದರೆ ಆ ಕುಟುಂಬಗಳು ಜುಲೈ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಬಿಲ್ (Zero current bill) ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿದ್ದರು.

ಆ ಪ್ರಕಾರವಾಗಿ ಈಗ ರಾಜ್ಯದ ಬಹುತೇಕ ಎಲ್ಲಾ ಕಡೆ ಕೂಡ ಆಗಸ್ಟ್ ತಿಂಗಳಲ್ಲಿ ಕುಟುಂಬಗಳಿಗೆ ಜುಲೈ ತಿಂಗಳ ಬಳಕೆಯ ಕರೆಂಟ್ ಬಿಲ್ ತಲುಪಿದೆ. ಇದರಲ್ಲಿ ಹಲವರು ಶೂನ್ಯ ವಿದ್ಯುತ್ ಬಿಲ್ ಪಡೆದು ಸಂತೋಷದಲ್ಲಿದ್ದರೆ ಇನ್ನೂ ಕೆಲವರು 200 ಯೂನಿಟ್ ಒಳಗೆ ಬಳಸಿದ್ದರು ಕೂಡ ವಿದ್ಯುತ್ ಬಿಲ್ ಬಂದಿದೆ ಎಂದು ಬೇಸರಗೊಂಡಿದ್ದಾರೆ. ಅದರ ವಿವರಣೆಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಮನೆಯಲ್ಲಿ ಕಾರ್ ಮತ್ತು ಬೈಕ್ ಇದ್ದವರಿಗೆ ಹೊಸ ರೂಲ್ಸ್ ಜಾರಿ.! ಹೊಸ ವಾಹನ ಖರೀದಿ ಮಾಡುವವರಿಗೂ ನೋಂದಣಿ ನಿಯಮದಲ್ಲಿ ಬದಲಾವಣೆ.!

ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಜುಲೈ 25ರ ಒಳಗೆ ಸಲ್ಲಿಸಿರುವ ಫಲಾನುಭವಿಗಳು ಜುಲೈ ತಿಂಗಳಿನ ವಿದ್ಯುತ್ ಬಳಕೆಗೆ ಈ ಅನುದಾನವನ್ನು ಪಡೆದಿದ್ದಾರೆ. ಇದರೊಂದಿಗೆ ಬಹಳ ಮುಖ್ಯವಾದ ವಿಷಯ ಏನೆಂದರೆ ಸರ್ಕಾರವು ಗೃಹಜ್ಯೋತಿ ಯೋಜನೆಗೆ ಒಂದು ಕಂಡಿಷನ್ ಹಾಕಿತ್ತು. ಕುಟುಂಬಗಳು ಈ ಹಿಂದಿನ 12 ತಿಂಗಳ ಸರಾಸರಿ ಬಳಕೆ (Overage) ಮೇಲೆ ಹೆಚ್ಚುವರಿಯಾಗಿ 10 ಯೂನಿಟ್ ಮಾತ್ರ ಉಚಿತವಾಗಿ ಬಳಕೆ ಮಾಡಲು ಅರ್ಹರಿರುತ್ತಾರೆ ಎಂದು ತಿಳಿಸಿತ್ತು.

ಆ ಪ್ರಕಾರವಾಗಿ 2022 ಏಪ್ರಿಲ್ ನಿಂದ ಮಾರ್ಚ್ 2023ರ 12 ತಿಂಗಳ ವಿದ್ಯುತ್ ಬಳಕೆ ಸರಾಸರಿ ಲೆಕ್ಕಾಚಾರವನ್ನು ತೆಗೆದುಕೊಂಡು ಅದರ ಮೇಲೆ 10% ಹೆಚ್ಚು ಯೂನಿಟ್ ಅನ್ನು ಉಚಿತವಾಗಿ ನೀಡುತ್ತಿದೆ. ಈ ಮಿತಿಯೊಳಗೆ ಬಳಸಿರುವವರಿಗೆ ಮಾತ್ರ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ ವಿತರಣೆ ಆಗಿದೆ.

ಕುರಿ & ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿಗೆ 10 ಲಕ್ಷ ಸಾಲ, ಜೊತೆಗೆ ಸಬ್ಸಿಡಿ ಕೂಡ ದೊರೆಯುತ್ತದೆ ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!

ಆ 12 ತಿಂಗಳಲ್ಲಿ ಯಾವುದಾದರೂ ಒಂದು ತಿಂಗಳ ಕೂಡ 200 ಯೂನಿಟ್ ದಾಟಿ ವಿದ್ಯುತ್ ಬಳಕೆ ಮಾಡಿ ಈಗ ಅದನ್ನು ಕಡಿಮೆಗೊಳಿಸಿದರೆ ಅವರ ಸರಾಸರಿ 200 ಯೂನಿಟ್ ಒಳಗೆ ಬಂದಿದ್ದರು ಕೂಡ ಅವರಿಗೆ ಶೂನ್ಯ ವಿದ್ಯುತ್ ಬಿಲ್ ಸಿಕ್ಕಿಲ್ಲ. ಅವರು ಈಗ ಈ ವಿದ್ಯುತ್ ಬಳಕೆಯನ್ನು ನಿಯಂತ್ರಣ ಮಾಡಿಕೊಂಡು ಬಂದರೆ ಮುಂದಿನ ದಿನಗಳಲ್ಲಿ ಈ ವರ್ಷದ ಲೆಕ್ಕಾಚಾರವನ್ನು ಪರಿಗಣನೆಗೆ ತೆಗೆದುಕೊಂಡಾಗ ಅವರು ಗೃಹಜ್ಯೋತಿ ಯೋಜನೆಗೆ ಅರ್ಹರಾಗಬಹುದು.

ಅದೇ ರೀತಿ ಉದಾಹರಣೆಗೆ ಒಂದು ಕುಟುಂಬಕ್ಕೆ ಸರಾಸರಿ ಬಳಕೆ 70 ಯೂನಿಟ್ ಇದೆ ಅದಕ್ಕೆ 10% ಎಕ್ಸ್ಟ್ರಾ ಒಟ್ಟು 77% ಸರ್ಕಾರ ಉಚಿತವಾಗಿ ಬಳಕೆಗೆ ಅನುಮತಿ ನೀಡಿದೆ ಎಂದರೆ ಅವರು 77 ಯೂನಿಟ್ ಗಿಂತಲೂ ಹೆಚ್ಚು ಯೂನಿಟ್ ಬಳಸಿದ್ದರೆ ಆ ಹೆಚ್ಚುವರಿ ಬಳಕೆಗೆ ಎಷ್ಟು ಚಾರ್ಜ್ ಆಗುತ್ತದೆ ಆ ಬಿಲ್ ಪಡೆದಿದ್ದಾರೆ. ಅವರ ಕರೆಂಟ್ ಬಿಲ್ ನಲ್ಲಿ ಅರ್ಹ 77 ಯೂನಿಟ್ ಗೆ ಸಹಾಯಧನವನ್ನು ಮೈನಸ್ ಮಾಡಿ ಉಳಿದ ವಿದ್ಯುತ್ ಬಿಲ್ ಅನ್ನು ಪಾವತಿ ಮಾಡಬೇಕು ಎಂದು ತಿಳಿಸಿಕೊಡಲಾಗಿದೆ.

ಕೃಷಿ ಯಂತ್ರ ಖರೀದಿ ಮಾಡುವ ರೈತರಿಗೆ ಸಿಗಲಿದೆ ಬರೊಬ್ಬರಿ 2 ಲಕ್ಷ ಸಹಾಯಧನ ಸಿಗಲಿದೆ ಕೂಡಲೇ ಈ ಕಛೇರಿಗೆ ಭೇಟಿ ನೀಡಿ.!

ಆಗಸ್ಟ್ ತಿಂಗಳಲ್ಲಿ ನಿಮ್ಮ ಮನೆಗೆ ಬಂದಿರುವ ವಿದ್ಯುತ್ ರಶೀದಿಯನ್ನು ಗಮನಿಸಿದರೆ ಗೃಹಜ್ಯೋತಿ ಯೋಜನೆಗೆ ಕುರಿತು ಅದರಲ್ಲಿ ದಾಖಲಿಸಿರುವ ವಿಶೇಷ ಕಾಲಂಗಳನ್ನು ನೋಡಬಹುದು. ಅದರಲ್ಲಿ ಎಷ್ಟು ಯೂನಿಟ್ ಸರಾಸರಿ ಬಳಕೆ, ಎಷ್ಟು ಯೂನಿಟ್ ವರೆಗೆ ನೀವು ಉಚಿತವಾಗಿ ಬಳಸಬಹುದು, ಯಾವ ದಿನಾಂಕದಂದು ನೀವು ಅರ್ಜಿ ಸಲ್ಲಿಸಿದ್ದೀರಾ, ಯಾವ ದಿನಾಂಕದಿಂದ ಯಾವ ದಿನದವರೆಗೆ ವಿದ್ಯುತ್ ಮಾಪನ ಮಾಡಲಾಗಿದೆ, ಎಷ್ಟು ಯೂನಿಟ್ ಬಳಸಿದ್ದೀರಾ ಯಾವೆಲ್ಲಾ ಶುಲ್ಕಗಳು ಸೇರ್ಪಡೆ ಆಗಿದೆ ಎನ್ನುವುದರ ಸಂಪೂರ್ಣ ವಿವರ ತಿಳಿಸಲಾಗಿದೆ. ಈ ತಿಂಗಳ ವಿದ್ಯುತ್ ಬಿಲ್ ನೋಡಿದರೆ ಸ್ಪಷ್ಟವಾಗಿ ನಿಮಗೆ ಇದೆಲ್ಲ ಅರ್ಥ ಆಗಲಿದೆ.

Leave a Comment

%d bloggers like this: