ದುಡಿಯುತ್ತಿರುವ ಜನರು ತಮ್ಮ ಆದಾಯದಲ್ಲಿ ಸ್ವಲ್ಪಮೊತ್ತದ ಹಣವನ್ನು ಭವಿಷ್ಯದ ಬಳಕೆಗಾಗಿ ಎಂದು ಉಳಿತಾಯ ಮಾಡಿ ಇಡುತ್ತಾರೆ. ಈ ರೀತಿ ಉಳಿತಾಯ ಮಾಡಲು ಬ್ಯಾಂಕ್ ಖಾತೆಗಳು ಸೇಫ್ (Saving account) ಎಂದು ಅನೇಕರ ಭಾವನೆ. ಹೀಗಾಗಿ ಭವಿಷ್ಯದಲ್ಲಿ ಮನೆ ಅಥವಾ ಸೈಟ್ ಖರೀದಿಸಲು ಅಥವಾ ಮಕ್ಕಳ ವಿದ್ಯಾಭ್ಯಾಸ ವಿದೇಶ ಪ್ರಯಾಣ.
ಅಥವಾ ನಿವೃತ್ತಿ ಹೊಂದಿದಾಗ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ತಮ್ಮ ಕೈಲಾದಷ್ಟು ಸ್ವಲ್ಪಮೊತ್ತದ ಹಣವನ್ನು ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ತೆರೆದು ಅದರಲ್ಲಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಉಳಿತಾಯ ಖಾತೆಯಲ್ಲಿ ಇಡುವ ಹಣ ಹೆಚ್ಚು ಲಾಭ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಕೆಲವರು ಅದೇ ಬ್ಯಾಂಕ್ ಗಳಲ್ಲಿ ಇದನ್ನು ಡೆಪಾಸಿಟ್ ಇಡುತ್ತಾರೆ (deposit) ಈ ರೀತಿ ಡೆಪಾಸಿಟ್ ಮಾಡುವವರೆಲ್ಲಾ RBI ಹೊಸ ನಿಯಮದ ಬಗ್ಗೆ ತಿಳಿದುಕೊಂಡಿರಲೇಬೇಕು.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳು ದಿವಾಳಿ (Bankruptcy) ಆಗುತ್ತಿರುವುದರ ಬಗ್ಗೆ ನಾವು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ನೋಡುತ್ತಿದ್ದೇವೆ. ಹಾಗಾಗಿ ನಾವು ಯಾವ ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ನಮಗೆ ಹೆಚ್ಚು ಕಾಳಜಿ ಇರಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಕೊಡುತ್ತದೆ ಎನ್ನುವ ಕಾರಣಕ್ಕಾಗಿ ಅಸುರಕ್ಷಿತ ವಲಯದಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣವನ್ನು ಕೂಡ ನೀವು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.
ಒಂದು ವೇಳೆ ನೀವು ದೇಶದ ಹೆಸರಾಂತ ಬ್ಯಾಂಕ್ ಎಂದು ಕರೆಸಿಕೊಂಡಿರುವ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುವ, ಅತಿ ಹೆಚ್ಚು ಜನರು ನಂಬಿಕೆಯಿಂದ ಹೂಡಿಕೆ ಮಾಡುವ ಬ್ಯಾಂಕ್ ಗಳಲ್ಲಿ ನಿಮ್ಮ ಹಣ ಹೂಡಿಕೆ ಮಾಡಿದಾಗಲೂ ಕೂಡ ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಏನಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಂಡಿರಬೇಕು.
ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಉಚಿತವಾಗಿ ಸಿಗಲಿದೆ ಹೊಸ ಸೈಕಲ್, ಇದೊಂದು ದಾಖಲೆ ಜೊತೆ ಅರ್ಜಿ ಸಲ್ಲಿಸಿ ಸಾಕು.!
RBI ಬ್ಯಾಂಕ್ ಗಳಿಗೆ ಹೇರುವ ನೀತಿ ನಿಯಮಗಳು ರಾಷ್ಟ್ರೀಕೃತ ಬ್ಯಾಂಕ್ ಗಳು, ಸರ್ಕಾರಿ ಬ್ಯಾಂಕ್ ಗಳು ಹಾಗೂ ಖಾಸಗಿ ಬ್ಯಾಂಕ್ ಗಳಿಗೂ ಕೂಡ ಅನ್ವಯವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ RBI ಈಗ ಬ್ಯಾಂಕ್ ಗಳಲ್ಲಿ ಇಡುವ ಡೆಪಾಸಿಟ್ ಹಣದ ಸುರಕ್ಷತೆ ಬಗ್ಗೆ ಕೂಡ DICGC ನಿಯಮವನ್ನು ಎಲ್ಲಾ ಹಣಕಾಸಿನ ಸಂಸ್ಥೆಗೆ ಅನ್ವಯವಾಗುವಂತೆ ಜಾರಿಗೆ ತಂದಿದೆ.
2020 ಅಲ್ಲಿ ಈ ನಿಯಮ ಬದಲಾಗಿದ್ದು ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Finance Minister Nirmala Sitharaman) ಅವರೇ ಇದನ್ನು ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಪ್ರಸ್ತಾಪಿಸಿದ್ದರು. ಆ ಪ್ರಕಾರವಾಗಿ ಈ ಹಿಂದೆ ಬ್ಯಾಂಕ್ ಗಳು ಒಂದು ವೇಳೆ ದಿವಾಳಿಯಾದರೆ ಜನಸಾಮಾನ್ಯರು ಇಟ್ಟಿರುವ ಹಣಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಒಂದು ಲಕ್ಷದವರೆಗೆ ಹಣ ಇಟ್ಟಿದ್ದವರಿಗೆ ಸರ್ಕಾರ ಹಣವನ್ನು ನೀಡುತ್ತಿತ್ತು.
ಕರ್ನಾಟಕ ಬ್ಯಾಂಕ್ ನೇಮಕಾತಿ, ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
90 ದಿನಗಳ ಒಳಗೆ ಆ ಹಣವನ್ನು ಪಡೆದುಕೊಳ್ಳಲು ಉಳಿತಾಯದಾರರು ಅರ್ಹರಾಗಿರುತ್ತಿದ್ದರು ಆದರೆ 2020 ರ ನಂತರ DICGC ಯ ಈ ನಿಯಮದಲ್ಲಿ ಸ್ವಲ್ಪ ಮಾರ್ಪಾಡು ಮಾಡಲಾಗಿದೆ. ಈಗ 5 ಲಕ್ಷದವರೆಗೆ ಈ ಮಿತಿಯನ್ನು ಹೆಚ್ಚಿಸಲಾಗಿದೆ. ನೀವು ಯಾವುದಾದರೂ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಅಥವಾ ಠೇವಣಿ ಇಡುವ ಮೂಲಕ 5 ಲಕ್ಷ ಹಣ ಉಳಿತಾಯ ಮಾಡಿದರೆ.
ಆ ಬ್ಯಾಂಕ್ ದಿವಾಳಿಯಾದರೆ ನೀವು 5 ಲಕ್ಷದವರೆಗೆ ಹಣವನ್ನು ಹಿಂಪಡೆಯಲು ಅರ್ಹರಾಗಿರುತ್ತೀರಿ ಮತ್ತು 9 ದಿನದ ಒಳಗೆ ಆ ಇನ್ಶೂರೆನ್ಸ್ ಹಣವನ್ನು ನೀವು ಪಡೆದುಕೊಳ್ಳಲು ಸಾಧ್ಯವಿದೆ. ಆದರೆ ಇಲ್ಲಿ ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ನೀವು 5 ಲಕ್ಷಕ್ಕಿಂತ ಹೆಚ್ಚಿಗೆ ಹಣ ಇಟ್ಟಿದ್ದರೂ ಕೂಡ ನೀವು 5 ಲಕ್ಷ ಹಣವನ್ನು ಮಾತ್ರ ಪಡೆಯಲು ಅರ್ಹರಿರುತ್ತೀರಿ ಎನ್ನುವುದನ್ನು ತಿಳಿದುಕೊಂಡಿರಬೇಕು.