ರೈತರಿಗಾಗಿ (Farmers) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು (government) ಹಲವಾರು ಯೋಜನೆಗಳನ್ನು ರೂಪಿಸುತ್ತವೆ. ಈ ಎಲ್ಲಾ ಯೋಜನೆಗಳಿಗೂ ಕೂಡ ರೈತನು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸುವುದಕ್ಕಾಗಿ FRUITS (Farmers Registration and Unified Beneficiary information System) ಎನ್ನುವ ಹೊಸ ಕ್ರಮವನ್ನು ಜಾರಿಗೆ ತಂದಿದೆ.
ರೈತನು ಒಮ್ಮೆ ಈ ಫ್ರೂಟ್ಸ್ ವೆಬ್ಸೈಟ್ ನಲ್ಲಿ ವಿವರ ನೋಂದಾಯಿಸಿದರೆ ಸರ್ಕಾರಗಳಿಂದ ಸಿಗುವ ಎಲ್ಲ ಸಬ್ಸಿಡಿ ಯೋಜನೆಗಳ ಪ್ರಯೋಜನವನ್ನು ಮತ್ತು ರೈತರಿಗಾಗಿ ಸಿಗುವ ಇನ್ನಿತರೆ ಸಹಾಯವನ್ನು ಪಡೆಯಲು ಪ್ರತಿ ಇಲಾಖೆಗೂ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಅನುಕೂಲವಾಗುವಂತೆ FRUITS ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿಗೆ ಅರ್ಜಿ ಆಹ್ವಾನ, ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವೇತನ 83,900
ಸರ್ಕಾರ ಈ ವ್ಯವಸ್ಥೆ ಜಾರಿಗೆ ತಂದು ಹಲವು ಸಮಯವಾಗಿದ್ದರೂ ಕೂಡ ಇನ್ನು ಅನೇಕ ರೈತರಿಗೆ ಇದರ ಪ್ರಯೋಜನ ತಿಳಿದಿಲ್ಲ ಹಾಗಾಗಿ ಇದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
FRUITS ಪ್ರಯೋಜನಗಳು:-
● FRUITS ದತ್ತಾಂಶದಲ್ಲಿ ನೋಂದಾಯಿಸಿಕೊಂಡ ರೈತರು FID ಸಂಖ್ಯೆಯನ್ನು ಪಡೆಯಬೇಕು.
● ಸುಲಭವಾಗಿ ಕೃಷಿ ಸಾಲ ಪಡೆಯಲು, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಕನಿಷ್ಠ ಬೆಂಬಲ ಬೆಲೆ ಮುಂತಾದ ಸವಲತ್ತುಗಳನ್ನು ಪಡೆಯಲು ಈಗ ರೈತರು FRUITS ನಲ್ಲಿ ನೋಂದಣಿಯಾಗಿ ಗುರುತಿನ ಚೀಟಿ ಸಂಖ್ಯೆ FID ಪಡೆಯುವುದು ಕಡ್ಡಾಯವಾಗಿದೆ.
● ರೈತನು FID ಸಂಖ್ಯೆ ಹೊಂದಿದ್ದರೆ ಅದರ ಮೂಲಕ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ರೈತನ ವೈಯಕ್ತಿಕ ವಿವರಗಳು ಹಾಗೂ ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಸಾಲ ಮಂಜೂರು ಮಾಡಲು ಅನುಕೂಲವಾಗುತ್ತದೆ.
● FRUITS ನಲ್ಲಿ ನೋಂದಣಿ ಹಾಗೂ FID ನ್ನು ರಾಜ್ಯದ ಪ್ರತಿ ರೈತನ ಕೂಡ ಮಾಡಿಸಬೇಕು. ರೈತನು ಕಾರಣಾಂತರಗಳಿಂದ ವಲಸೆ ಹೋಗಿದ್ದರು ಅಥವಾ ಕೃಷಿ ಭೂಮಿ ಹೊಂದಿದ್ದು ನಗರದಲ್ಲಿ ವಾಸಿಯಾಗಿದ್ದರು ಕೂಡ ಮಾಡಿಸತಕ್ಕದ್ದು ಎಂದು ಸರ್ಕಾರ ಸೂಚಿಸಿದೆ.
ಬೇಕಾಗುವ ದಾಖಲೆಗಳು:-
ರೈತನ ಆಧಾರ್ ಕಾರ್ಡ್
ರೈತನ ಬ್ಯಾಂಕ್ ಖಾತೆ ವಿವರ
ಜಮೀನಿನ ಪಹಣಿ ಪತ್ರ
ಬೆಳೆ ದೃಢೀಕರಣ ಪತ್ರ
ರೈತನ ಮೊಬೈಲ್ ಸಂಖ್ಯೆ ಹಾಗೂ ಇನ್ನಿತ್ಯಾದಿ ದಾಖಲೆಗಳು
ಗೃಹಲಕ್ಷ್ಮೀ ಯೋಜನೆಯ ಹೊಸ ರೂಲ್ಸ್, ಆಗಸ್ಟ್ 30 ಕ್ಕೆ ಹಣ ಬರಬೇಕು ಎಂದರೆ ಈ ಕೆಲಸ ಕಡ್ಡಾಯ.!
ನೋಂದಣಿ ಮಾಡಿಸುವುದು ಹೇಗೆ.?
ಆನ್ಲೈನಲ್ಲಿ ಹಾಗೂ ಆಫ್ಲೈನ್ನಲ್ಲಿ ಕೂಡ ರೈತರು FRUITS ವೆಬ್ಸೈಟ್ಗೆ ನೋಂದಣಿಯಾಗಿ FID ಸಂಖ್ಯೆ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಕೃಷಿ ಇಲಾಖೆ ಕಛೇರಿಗೆ ತಲುಪಿಸಿದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ FID ಸಂಖ್ಯೆ ಕಳುಹಿಸಲಾಗುತ್ತದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ
ಗ್ರಾಮ ಒನ್ ನಂತಹ ಸೇವಾ ಕೇಂದ್ರಗಳು
CSC ಕೇಂದ್ರಗಳು
ಮೊಬೈಲ್ ಆಪ್ ಮೂಲಕವೂ ನೋಂದಣಿಯಾಗಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-
● https://fruits.karnataka.gov.in ವೆಬ್ ಸೈಟ್ ಗೆ ಭೇಟಿ ಕೊಡಿ.
● Citizen login ಲಿಂಕ್ ಕ್ಲಿಕ್ ಮಾಡಿ ನೀವು ಈಗಾಗಲೇ ರಿಜಿಸ್ಟರ್ ಆಗಿದ್ದರೆ Mobile num. ಹಾಗೂ Password ಹಾಕಿ ಲಾಗಿನ್ ಆಗಿ.
● ಹೊಸದಾಗಿ ರಿಜಿಸ್ಟ್ರೇಷನ್ ಆಗಲು Citizen Registration ಲಿಂಕ್ ಕ್ಲಿಕ್ ಮಾಡಿ Aadhar num. ಮತ್ತು ಆಧಾರ್ ನಲ್ಲಿರುವಂತೆ Name ಹಾಕಿ Submit ಕೊಡಿ.
● ಫ್ರೂಟ್ಸ್ ಪೋರ್ಟಲ್ ನ ಪೇಜ್ ಓಪನ್ ಆಗುತ್ತದೆ. Create account ಪೇಜ್ ಅಲ್ಲಿ ಎಲ್ಲ ವಿವರವೂ ಭರ್ತಿಯಾಗಿರುತ್ತದೆ. Mobile num. ಅಥವಾ e-mail ಹಾಕಿ Proceed ಕ್ಲಿಕ್ ಮಾಡಿ.
● ನೀವು ಕೊಟ್ಟ ಮೊಬೈಲ್ ಸಂಖ್ಯೆಗೆ OTP ಬಂದಿರುತ್ತದೆ. ಅದನ್ನು ಎಂಟರ್ ಮಾಡಿ Password create ಮಾಡಿ.
● ಆ password ಮೂಲಕ Take me to the Login ಪೇಜ್ ಗೆ ಹೋಗಿ.
● ಆ ಪೇಜ್ ನಲ್ಲಿ ಈ ಮೇಲೆ ತಿಳಿಸಿದ ರೈತನೇ ಎಲ್ಲ ದಾಖಲೆ ಮಾಹಿತಿಗಳನ್ನು ಕೇಳಲಾಗಿರುತ್ತದೆ ಅವುಗಳನ್ನು ನಮೂದಿಸಿ, EPIC ನಿಂದ ಫೋಟೋ ನಕಲು ಮಾಡಿ Save draft ಮೇಲೆ ಕ್ಲಿಕ್ ಮಾಡಿ.