ಗ್ಯಾಸ್ ಸಿಲಿಂಡರ್ ಬೆಲೆ (Gas Cylinder price) ವಿಪರೀತವಾಗಿ ಏರಿಕೆಯಾಗಿದೆ. ಗ್ಯಾಸ್ ಬೆಲೆ ಮಾತ್ರವಲ್ಲದೆ ದೇಶದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ಕೂಡ ಏರಿಕೆಯಾಗಿದೆ. ಆದರೆ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಜನರು ಸ್ವಲ್ಪ ಸಮಾಧಾನಗೊಂಡಿದ್ದರು ಯಾಕೆಂದರೆ, ಸರ್ಕಾರವು ಇದಕ್ಕೆ ನೆರವು ನೀಡುತ್ತದೆ ಅಥವಾ ಬೆಲೆ ಇಳಿಕೆಯ ಕಡೆ ಮನಸು ಮಾಡುತ್ತದೆ ಎಂದು.
ಈ ಹಿಂದೆ ಕೇಂದ್ರ ಸರ್ಕಾರವು (Central government) ಗ್ಯಾಸ್ ಸಿಲಿಂಡರ್ ಖರೀದಿಸುವ ಗ್ರಾಹಕನಿಗೆ ಸಬ್ಸಿಡಿ ಹಣವನ್ನು ನೀಡುತ್ತಿತ್ತು. ನೇರವಾಗಿ ಆ ಹಣವು DBT ಮೂಲಕ ಬಳಕೆದಾರರ ಖಾತೆಗೆ ವರ್ಗಾವಣೆ ಆಗುತ್ತಿತ್ತು. ಲಾಕ್ಡೌನ್ ಸಮಯದಲ್ಲಿ ಆದ ಆರ್ಥಿಕ ತಲ್ಲಣದಿಂದಾಗಿ ಸರ್ಕಾರ ಹಲವು ಯೋಜನೆಗಳನ್ನು ಕೈ ಬಿಡಬೇಕಾಗಿ ಬಂತು ಅದರ ಜೊತೆಗೆ ಈ ಸಬ್ಸಿಡಿ ಯೋಚನೆಯು ಕೂಡ ನಿಂತುಹೋಯಿತು.
ಈಗ ಮತ್ತೆ ಕೇಂದ್ರ ಸರ್ಕಾರವು ಹಳೆಯ ಮಾದರಿಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆದಾರಣೆಗೆ ಸಬ್ಸಿಡಿ (Subsidy) ಹಣ ಕೊಟ್ಟು ನೆರವಾಗಲು ಚಿಂತನೆ ನಡೆಸುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ. ಬಡ ಜನರು ಹಾಗೂ ಸಾಮಾನ್ಯ ವರ್ಗದ ಜನರು ಗಗನಕ್ಕೆ ಏರಿಕೆ ಆಗಿರುವ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ.
ಅಡುಗೆ ಮಾಡುವ ಧಾನ್ಯಗಳಿಂದ ಹಿಡಿದು ತರಕಾರಿ ಪಲ್ಲೆ ಬೆಲೆ, ಅಡುಗೆ ಎಣ್ಣೆ ಬೆಲೆ ಎಲ್ಲವೂ ಕೂಡ ದುಬಾರಿಯಾಗಿ ಹೋಗಿದೆ. ದುಡಿಮೆ ಕಡಿಮೆ ಖರ್ಚು ಹಿಚ್ಚ ಎನ್ನುವಂತಾಗಿ ಬದುಕು ದುಸ್ತರವಾಗುತ್ತಿದೆ. ಇನ್ನು ಗೃಹಿಣಿಯರಂತೂ ಪ್ರತಿ ಹೊತ್ತಿನ ಅಡುಗೆ ಮಾಡುವಾಗಲೂ ಕೂಡ ಈ ಬಗ್ಗೆ ಹೆಚ್ಚು ಚಿಂತೆ ಮಾಡುವಂತೆ ಆಗಿದೆ ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬೆಲೆ ನಿಯಂತ್ರಣ ಮಾಡುವಂತೆ ಕೋರಿಕೆ ಸಲ್ಲಿಸಲಾಗುತ್ತಿದೆ.
ಈ ಬಾರಿ ಇದನ್ನು ಬಹಳ ಗಂಭೀರವಾಗಿ ಪರಿಗಣಿಸುವ ಸರ್ಕಾರವು ಈಗ ನಿಧಾನವಾಗಿ ದೇಶದ ಆರ್ಥಿಕತೆಯು ಸುಧಾರಿಸುತ್ತಿದೆ. ಇದೇ ಸಮಯದಲ್ಲಿ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿ ಯೋಜನೆಯನ್ನು ಮುಂದುವರಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಲು ಯೋಚನೆ ಮಾಡುತ್ತಿದೆ ಎನ್ನುವ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೇಂದ್ರ ಸರ್ಕಾರವು ಇದರತ್ತ ಮನಸ್ಸು ಮಾಡಿದರೆ ದೇಶದ ಎಲ್ಲ ರಾಜ್ಯಗಳಲ್ಲೂ ಕೂಡ ಕನಿಷ್ಠ 300 ರೂಪಾಯಿಯಾದರೂ ಗ್ಯಾಸ್ ಸಿಲೆಂಡರ್ ಗೆ ಬೆಲೆ ಇಳಿಕೆ ಆಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಈಗ ಅಡಿಗೆ ಅನಿಲದ ಬೆಲೆಯು 1150 ಇದ್ದು ಉಳಿದ ರಾಜ್ಯಗಳಲ್ಲೂ ಕೂಡ ಹೆಚ್ಚು ಕಡಿಮೆ ಎಲ್ಲ ರಾಜ್ಯದಲ್ಲೂ 950ರ ಮೇಲೆ ಇದೆ. ಕೇಂದ್ರ ಸರ್ಕಾರ ಇದರ ಅರ್ಥ ಗಮನ ಹರಿಸಿದರೆ ಗ್ರಾಹಕರು ಈ ಬಗ್ಗೆ ನಿಟ್ಟುಸಿರು ಬಿಡಬಹುದು. ಜೊತೆಗೆ ಲೋಹದ ಗ್ಯಾಸ್ ಬದಲು ಮಿಶ್ರ ಲೋಹಗಳನ್ನು ಬಳಕೆ ಮಾಡಿ ಗ್ಯಾಸ್ ಸಿಲಿಂಡರ್ನಲ್ಲಿ ಅನಿಲ ತುಂಬಿಸುವ ವ್ಯವಸ್ಥೆ ಕಡೆ ಕೂಡ ಕೇಂದ್ರ ಸರ್ಕಾರ ಆಸಕ್ತಿ ತೋರಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿಗೆ ಅರ್ಜಿ ಆಹ್ವಾನ, ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವೇತನ 83,900
ಇದರಿಂದ ತೂಕ ಕಡಿಮೆಯಾಗಿ ಸಾಗಣೆ ಸುಲಭವಾಗುತ್ತದೆ ಮತ್ತು ಗುಣಮಟ್ಟ ಉತ್ತಮವಾಗಿರುತ್ತದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಇದೇ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಕೂಡ ಜನಸಾಮಾನ್ಯರು ಕೋರಿಕೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಏನೂ ನಿರ್ಧಾರ ತೆಗೆದುಕೊಳ್ಳಲಿದೆ ನಾವು ಸಹ ಕಾದು ನೋಡೋಣ.