ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಉದ್ಯೋಗದ ಕಾರಣಕ್ಕಾಗಿ ಅಥವಾ ವಿದ್ಯಾಭ್ಯಾಸ ಕಾರಣಕ್ಕಾಗಿ ವಲಸೆ ಬರುವ ಎಲ್ಲರಿಗೂ ಕೂಡ ಬಾಡಿಗೆ ಮನೆಗಳೇ (Rent house) ಆಧಾರ. ಇತ್ತೀಚೆಗೆ PG ವ್ಯವಸ್ಥೆ ಇದ್ದರೂ ಕೂಡ ತಮ್ಮದೇ ಗುಂಪಿನ ಜೊತೆ ಬದುಕಲು ಇಚ್ಛಿಸುವವರು ಅಥವಾ ಹೆಚ್ಚು ಜನ ಒಟ್ಟಾಗಿ ಇರಲು ಇಚ್ಛಿಸುವವರು ಅಥವಾ ಸಂಸಾರ ಸಮೇತವಾಗಿ ವಲಸೆ ಬಂದಾಗ ಬಾಡಿಗೆಗೆ ಮನೆಗಳನ್ನು ಪಡೆದು ವಾಸಿಸಲು ಶುರು ಮಾಡುತ್ತಾರೆ.
ನಮ್ಮ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಬಾಡಿಗೆ ಮನೆ ಕೊಡುವ ಮಾಲೀಕರು ಯಾರೆಂದರೆ ಅವರಿಗೆ ಮನೆ ಕೊಡುವಂತಿಲ್ಲ ಎನ್ನುವ ನಿಯಮ ಇದೆ ಎನ್ನುವುದನ್ನು ಎಲ್ಲಾ ಮಾಲೀಕರು (Owners) ಕೂಡ ತಪ್ಪದೆ ತಿಳಿದುಕೊಂಡಿರಬೇಕು ಇಲ್ಲವಾದಲ್ಲಿ ಮುಂದೊಂದು ದಿನ ಪಶ್ಚಾತಾಪಡುವ ಪರಿಸ್ಥಿತಿ ಬರುತ್ತದೆ.
ಸಾಮಾನ್ಯವಾಗಿ ಮನೆ ಬಾಡಿಗೆ ಕೇಳಿಕೊಂಡು ಬಂದಾಗ ಮನೆ ಖಾಲಿ ಇದ್ದರೆ ಆ ಮಾಲೀಕರು ಅಡ್ವಾನ್ಸ್ ಎಷ್ಟು ಬಾಡಿಗೆ ಎಷ್ಟು ಎಂದು ಹೇಳುತ್ತಾರೆ ಮತ್ತು ಅಷ್ಟು ಅಡ್ವಾನ್ಸ್ ಕೊಟ್ಟು, ಪ್ರತಿ ತಿಂಗಳು ಬಾಡಿಗೆ ಕೊಡುತ್ತಾ ಆ ಮನೆಯಲ್ಲಿ ಬಳಸಿದ ನೀರು ಹಾಗೂ ವಿದ್ಯುತ್ ಬಿಲ್ ಪಾವತಿ ಮಾಡಿಕೊಂಡು ಬಂದರೆ ನಮಗೂ ಹಾಗೂ ಮಾಲೀಕರಿಗೆ ಯಾವುದೇ ಸಮಸ್ಯೆ ಇಲ್ಲ.
ನೆಮ್ಮದಿಯಾಗಿ ಎಷ್ಟು ವರ್ಷ ಬೇಕಾದರೂ ಬಾಡಿಗೆ ಮನೆಯಲ್ಲಿ ಕಿ’ರಿ’ಕಿ’ರಿ ಇಲ್ಲದೆ ವಾಸ ಮಾಡಬಹುದು ಎಂದುಕೊಂಡು ನಿಟ್ಟುಸಿರು ಬಿಡುವಂತಿಲ್ಲ. ತಪ್ಪದೇ ಬಾಡಿಗೆ ಕರಾರು ಪತ್ರವನ್ನು ಕೂಡ (Rent agreement) ಬಾಡಿಗೆದಾರರು (tenant) ಮಾಡಿಸಲೇಬೇಕು. ಈ ವಿಷಯದಲ್ಲಿ ಬಾಡಿಗೆದಾರರಿಗಿಂತ ಮಾಲೀಕರಿಗೆ ಹೆಚ್ಚು ಜವಾಬ್ದಾರಿ ಅಂತಲೂ ಹೇಳಬಹುದು.
ಹಸುಗಳ ರಬ್ಬರ್ ಮ್ಯಾಟ್ ಸಹಾಯಧನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ ಮ್ಯಾಟ್ ಪಡೆಯಿರಿ.!
ಯಾಕೆಂದರೆ ತಾವು ಯಾವ ಯಾವ ನಿಯಮಗಳಿಗೆ ಒಳಪಟ್ಟು ಮನೆಯನ್ನು ಕೊಡುತ್ತಿದ್ದೀರಿ, ನಿಮ್ಮ ಮನೆಗೆ ಎಷ್ಟು ಬಾಡಿಗೆ ತೆಗೆದುಕೊಳ್ಳಲು ನೀವು ಒಪ್ಪಿಕೊಂಡಿದ್ದೀರಿ, ಅಡ್ವಾನ್ಸ್ ಎಷ್ಟು ಪಡೆದಿದ್ದೀರಿ ಒಂದು ವೇಳೆ ಅವರು ಮನೆ ಖಾಲಿ ಮಾಡಿಕೊಂಡು ಹೋಗುವಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬೆಲ್ಲಾ ವಿವರವನ್ನು ಸ್ಟಾಂಪ್ ಪೇಪರ್ (Stamp paper) ಮೇಲೆ ಬರೆಯಿಸಿ ಬಾಡಿಗೆದಾರರ ಹಾಗೂ ಮಾಲೀಕನ ಹೆಸರು ವಿಳಾಸ ಸಮೇತ ದಾಖಲಿಸಿ ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಕೂಡ ಮಾಡಿ ನೋಟರಿ ಮಾಡಿಸಬೇಕು.
ಆಗ ಅದೊಂದು ಸರ್ಕಾರಿ ದಾಖಲೆ ಎನಿಸಿಕೊಳ್ಳುತ್ತದೆ. ಇದರಲ್ಲಿ ನಿಖರವಾಗಿ ಈ ಅಗ್ರಿಮೆಂಟ್ ಎಷ್ಟು ತಿಂಗಳಿಗೆ ಇರುತ್ತದೆ ಎನ್ನುವುದನ್ನು ಸಹ ಬರೆಯಲಾಗುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ 11 ತಿಂಗಳಿಗೆ ಈ ರೀತಿ ರೆಂಟ್ ಅಗ್ರಿಮೆಂಟ್ ಮಾಡಲಾಗುತ್ತದೆ. ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ತ’ಕ’ರಾ’ರು ಬಂದರೆ ಇದು ಸಾಕ್ಷಿಯಾಗಿ ಮಾನ್ಯವಾಗುತ್ತದೆ.
ಇದಿಷ್ಟೇ ಅಲ್ಲ ಇದರ ಜೊತೆಗೆ ಮಾಲೀಕರು ತಪ್ಪದೆ ಮಾಡಬೇಕಾದ ಮತ್ತೊಂದು ಕೆಲಸವಿದೆ. ಅದೇನೆಂದರೆ, ಪೊಲೀಸ್ ವೆರಿಫಿಕೇಶನ್ (Police Verification). ಯಾಕೆಂದರೆ ಗುರುತು ಪರಿಚಯ ಇಲ್ಲದವರಿಗೆ ಮನೆ ಬಾಡಿಗೆ ಕೊಡುವಾಗ ಎಚ್ಚರಿಕೆಯಿಂದ ಇರಬೇಕು ಒಂದು ವೇಳೆ ನಿಮ್ಮ ಮನೆಯನ್ನು ಬಾಡಿಗೆ ಪಡೆದವರು ಅಕ್ರಮ ಕೆಲಸಗಳಿಗೆ ಕಾನೂನುಬಾಹಿರ ಚಟುವಟಿಕೆಗಳಿಗೆ (illegal activities) ಆ ಮನೆಯನ್ನು ಉಪಯೋಗಿಸಿಕೊಂಡು.
ಮುಂದೆ ಒಂದು ದಿನ ಸಮಸ್ಯೆ ಎದುರಾದಾಗ ಮನೆ ಬಾಡಿಗೆ ಕೊಟ್ಟ ತಪ್ಪಿಗಾಗಿ ನೀವು ಕೂಡ ಶಿಕ್ಷೆಗೇ ಒಳಗಾಗಬೇಕಾಗುತ್ತದೆ. ಆದ ಕಾರಣಕ್ಕಾಗಿ ಮನೆ ಬಾಡಿಗೆಗೆ ಕೊಡುವ ಮುಂಚೆಯೇ ಪೊಲೀಸ್ ವೆರಿಫಿಕೇಶನ್ ಮಾಡಿಸಿ ಬಾಡಿಗೆ ಬರುವವರು ಎಂತವರು ಎಂದು ತಿಳಿದುಕೊಂಡರೆ ಸಮಸ್ಯೆ ತಪ್ಪುತ್ತದೆ. ಅದರಿಂದ ಇನ್ನು ಮುಂದೆ ಬಾಡಿಗೆಗೆ ಮನೆ ಕೊಡುವಾಗ ಮಾಲೀಕರು ತಪ್ಪದೆ ಈ ಕ್ರಮ ಕೈಗೊಳ್ಳಿ.