ಆಗಸ್ಟ್ 30 ರಂದು ಕರ್ನಾಟಕ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಲಾಂಚ್ ಆಗಿದೆ. ಜುಲೈ 19 ರಿಂದ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಲಕ್ಷಾಂತರ ಫಲಾನುಭವಿಗಳು ಆಗಸ್ಟ್ 30ನೇ ತಾರೀಕು ಸರ್ಕಾರ ವತಿಯಿಂದ ಕಾರ್ಯಕ್ರಮ ಉದ್ಘಾಟನೆ ಆಗುತ್ತಿದ್ದಂತೆ ತಮ್ಮ ಸಂಖ್ಯೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ (amout transfer SMS) ಆಗುವ ಬಗ್ಗೆ SMS ಸಂದೇಶ ಪಡೆದಿದ್ದಾರೆ.
ಇದರಲ್ಲಿ ಅನೇಕರ ಖಾತೆಗೆ ಹಣ ಕೂಡ ವರ್ಗಾವಣೆ ಆಗಿದೆ ಆದರೆ ಕೆಲವರಿಗೆ SMS ಬಂದಿದ್ದರು ಹಣ ವರ್ಗಾವಣೆಯಾಗಲು ಎರಡು ಮೂರು ದಿನಗಳ ವಿಳಂಬವಾಗುತ್ತಿದೆ. ಇನ್ನು ಕೆಲವರು SMS ಸಂದೇಶ ಪಡೆಯದೆ ಇದ್ದರೂ ಕೂಡ ಅವರ ಖಾತೆಗಳಿಗೆ ರೂ.2000 ಜಮೆಯಾಗಿದೆ. ಇನ್ನು ಕೆಲವರಿಗೆ SMS ಕೂಡ ಬಂದಿಲ್ಲ, ಖಾತೆಗೆ ಹಣ ಕೂಡ ವರ್ಗಾವಣೆ ಆಗಿಲ್ಲ ಹೀಗಾಗಿ ಗೃಹಲಕ್ಷ್ಮಿ ಸಹಾಯಧನದ ಬಗ್ಗೆ ಯೋಜನೆಗೆ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳು ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ.
ಇದರ ಜೊತೆಗೆ ಮತ್ತೊಂದು ವಿಚಾರ ಏನೆಂದರೆ ಕೆಲ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಸಹಾಯಧನದ SMS ಬದಲು ಸೇವಾ ಸಿಂಧು (Sevasindhu) ವತಿಯಿಂದ ಮತ್ತೊಂದು SMS ಬಂದಿದೆ. ಆ SMS ನಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಬಾಕಿ ಇದೆ. ದಯವಿಟ್ಟು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ಕೊಡಿ ಕರ್ನಾಟಕ ಸರ್ಕಾರ ಎಂದು ತಿಳಿಸಲಾಗಿದೆ.
ಈ ರೀತಿ SMS ಬಂದಿರುವವರು ಈಗಾಗಲೇ ನಾವು ಯೋಚನೆಗೆ ನೋಂದಾಯಿಸಿಕೊಂಡಿದ್ದೆವು ಆದರೂ ಕೂಡ ಈ ರೀತಿ ಬಂದಿದೆಯಲ್ಲ ಎಂದು ಚಿಂತೆಗೀಡಾಗಿದ್ದಾರೆ. ಆದರೆ ಸರ್ವರ್ ಸಮಸ್ಯೆ ಅಥವಾ ಇನ್ನಿತರ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಅರ್ಜಿ ಸಲ್ಲಿಕೆಯಾಗದೆ ಉಳಿದಿರಬಹುದು. ಈಗಾಗಲೇ ಯೋಜನೆಗೆ ನೋಂದಾಯಿಸಿ ಕೊಂಡಿರುವವರು ಮತ್ತೊಮ್ಮೆ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಲು ಪ್ರಯತ್ನ ಪಟ್ಟರೆ ನಿಮ್ಮ ಅರ್ಜಿ ಈಗಾಗಲೇ ಸಲ್ಲಿಕೆಯಾಗಿದೆ ಎನ್ನುವ ಅಪ್ಡೇಟ್ ಸಿಗುತ್ತದೆ.
ಆದರೆ ಈ ಮೇಲೆ ತಿಳಿಸಿದ ಮಾದರಿಯಲ್ಲಿ SMS ಪಡೆದವರು ಮತ್ತೊಮ್ಮೆ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿದರೆ ಆಗ ಅವರ ಅರ್ಜಿ ಸಲ್ಲಿಕೆಯಾಗಿ ಗೃಹಲಕ್ಷ್ಮಿ ಯೋಜನೆ ಮಂಜೂರಾತಿ ಪತ್ರ ಬರುತ್ತಿದೆ. ಆದರೆ ನಮಗೆ ಇನ್ನೂ ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನ ಬಂದಿಲ್ಲ, SMS ಕೂಡ ಬಂದಿಲ್ಲ ಹಾಗಾದರೆ ನಮ್ಮ ಅರ್ಜಿ ಕೂಡ ಸಲ್ಲಿಕೆ ಆಗಿಲ್ಲ ಎಂದು ಕನ್ಫ್ಯೂಸ್ ಆಗಬೇಡಿ.
ಸರ್ಕಾರದ ವತಿಯಿಂದ ಈ ರೀತಿ SMS ಪಡೆದವರು ಮಾತ್ರ ಮತ್ತೆ ಹೋಗಿ ಅರ್ಜಿ ಸಲ್ಲಿಸಬೇಕು. ಇನ್ನೂ ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರೆ ಸರ್ಕಾರ ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆ ಮಾಡುತ್ತಿದೆ ಹಾಗಾಗಿ ನೀವು ಸೆಪ್ಟೆಂಬರ್ 5ರವರೆಗೂ ಕೂಡ ಕಾದು ನೋಡಿ.
ಆಸ್ತಿ ಖರೀದಿ ಮಾಡುವ ಮುನ್ನ ಅದು ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!
ನೀವು ಈಗಾಗಲೇ ಅನ್ನ ಭಾಗ್ಯ ಯೋಜನೆ (Annabhagya Amount) ಹಣವನ್ನು ಪಡೆದಿದ್ದರೆ ನಿಮ್ಮ ಅದೇ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ವರ್ಗಾವಣೆ ಆಗಲಿದೆ. ಆಧಾರ್ ಸೀಡಿಂಗ್, NPCI ಮ್ಯಾಪಿಂಗ್ ವಿಫಲವಾಗಿ ಅಥವಾ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ ಮತ್ತು ಬ್ಯಾಂಕ್ ಮಾಹಿತಿಯ ಮಿಸ್ ಮ್ಯಾಚ್ ಆಗಿ.
ಅನ್ನಭಾಗ್ಯ ಯೋಜನೆಯ ಹಣ ಪಡೆಯಲು ಸಾಧ್ಯವಾಗದೆ ಇದ್ದವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಈ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಿಕೊಂಡರೆ ಮುಂದಿನ ತಿಂಗಳಿಂದ ನೀವು ಫಲಾನುಭವಿಗಳಾಗುವ ಅವಕಾಶ ಇರುತ್ತದೆ.