ಆಸ್ತಿ ಖರೀದಿ (Property purchase) ಎನ್ನುವುದು ಒಂದು ಪ್ರತಿಷ್ಠೆಯ ವಿಷಯವಾಗಿದೆ. ಜೊತೆಗೆ ಇದೊಂದು ಹೂಡಿಕೆಯ (Investment) ವಿಧಾನವಾಗಿದ್ದು ಒಂದು ಲಾಭ ತರುವ ಉದ್ಯಮವಾಗಿ ಬದಲಾಗಿದೆ. ಪ್ರತಿಯೊಬ್ಬರೂ ಕೂಡ ತಾವು ಗಳಿಸಿದ ಹಣವನ್ನು ಉಳಿತಾಯ ಮಾಡಿ ಒಂದಷ್ಟು ಆಸ್ತಿ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ.
ಚಿನ್ನದ ಮೇಲೆ, ವಾಹನದ ಮೇಲೆ ಹಣವನ್ನು ಹಾಕುವವರು ಇದ್ದಾರೆ, ಆದರೆ ಆಸ್ತಿಗಳ ಮೇಲೆ ಹಣ ಹಾಕುವುದರಿಂದ ಶೀಘ್ರವಾಗಿ ಅದು ದ್ವಿಗುಣವಾಗುತ್ತದೆ ಎನ್ನುವ ನಂಬಿಕೆ ಎಲ್ಲರದ್ದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಮಣ್ಣಿನ ಮೇಲೆ ಅಂದರೆ ಭೂಮಿ ಮೇಲೆ ವಿಪರೀತವಾದ ವ್ಯಾಮೋಹ ಹೊಂದಿರುತ್ತಾರೆ. ನೀವು ಕೂಡ ಈ ರೀತಿ ಇತ್ತು ಆಸ್ತಿ ಖರೀದಿಸಬೇಕು ಎನ್ನುವ ಮಹತ್ವಕಾಂಕ್ಷೆಯನ್ನು ಹೊಂದಿದ್ದರೆ ಮೊದಲು ವಿಷಯಗಳನ್ನು ತಿಳಿದುಕೊಂಡಿರಲೇಬೇಕು.
ಚೆಕ್ ಬಳಕೆ ಮಾಡುವವರು & ಚೆಕ್ ಬುಕ್ ಇರುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! RBI ನಿಂದ ಅಧಿಕೃತ ಘೋಷಣೆ.!
ಇತ್ತೀಚಿಗೆ ಜನರಿಗೆ ನಕಲಿ ಡಾಕ್ಯೂಮೆಂಟ್ (fake documents) ಗಳನ್ನು ತೋರಿಸಿ ಮತ್ತೊಬ್ಬರ ಹೆಸರಿನಲ್ಲಿರುವ ಜಮೀನನ್ನು ತಮ್ಮದು ಎಂದು ಹೇಳಿ ಮೋ’ಸ (fraud) ಮಾಡಿ ಮಾರುತ್ತಿರುವ(Sale) ಉದಾಹರಣೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಗಳಲ್ಲಿ ದಾಖಲಾಗುತ್ತಿರುವ ಕೇಸ್ (court cases) ಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
ಸರ್ಕಾರವು ಕೂಡ ಇದಕ್ಕೆ ಕಟ್ಟುನಿಟ್ಟದ ನಿಯಮಗಳನ್ನು ಜಾರಿಗೆ ತಂದು ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ. ಕಳೆದ ತಿಂಗಳಷ್ಟೇ ಕಂದಾಯ ಸಚಿವರಾದ ಕೃಷ್ಣಬೈರೇಗೌಡ (Revenue Minister) ಅವರು ಇದರ ಬಗ್ಗೆ ಮಾತನಾಡಿ ರಿಜಿಸ್ಟರ್ ಸಮಯದಲ್ಲಿ ಯಾವುದೇ ರೀತಿಯ ಅ’ವ್ಯ’ವ’ಹಾ’ರಗಳು ಆಗಿರುವುದು ಕಂಡುಬಂದಲ್ಲಿ ಕೂಡಲೇ ಅದನ್ನು ರ’ದ್ದು ಪಡಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಆದರೂ ಕೂಡ ಮೋಸ ಹೋಗುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಹಾಗಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ನಾವು ಖರೀದಿಗೂ ಮುನ್ನ ಆ ಆಸ್ತಿ ದಾಖಲೆ ಪತ್ರಗಳನ್ನು ಸರಿಯಾಗಿ ಚೆಕ್ ಮಾಡಿದರೆ ಅದು ನಕಲಿ ಡಾಕ್ಯೂಮೆಂಟ್ ಅಥವಾ ಅಸಲಿ ಡಾಕ್ಯುಮೆಂಟ್ ಎನ್ನುವುದು ನಮಗೆ ಗೊತ್ತಾಗುತ್ತದೆ. ಸರ್ಕಾರಿ ಸ್ವಾಮ್ಯದ ಭೂಮಿಗಳನ್ನು, ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಭೂಮಿಗಳ ದಾಖಲೆಗಳನ್ನು ತಿರುಚಿ ಮಾರಾಟ ಮಾಡಿರುವ ಉದಾಹರಣೆಗಳು ಇವೆ.
ಹಾಗೆ PCTL ಕಾಯ್ದೆ ಬಗ್ಗೆ ಕೂಡ ನಿಮಗೆ ಗೊತ್ತೇ ಇರುತ್ತದೆ. ದಲಿತರಿಂದ ಅಕ್ರಮವಾಗಿ ವಶಪಡಿಸಿಕೊಂಡು ಅದನ್ನು ಮತ್ತೊಬ್ಬರಿಗೆ ಮಾರಿ ಮೋ’ಸ ಮಾಡುವ ವಂಚಕರು ಕೂಡ ಇರುತ್ತಾರೆ. ಈಗ ಆಸ್ತಿಗಳನ್ನು ಖರೀದಿಸಿದರೆ ಮುಂದೆ ಕಾನೂನಿನ ತೊಡಕುಗಳು ಉಂಟಾಗಬಹುದು. ಹಾಗಾಗಿ ಮೊದಲಿಗೆ ಈ ಭೂಮಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ಮಾಡಬೇಕು, ನಿಮಗೆ ಭೂಮಿಯನ್ನು ಮಾರಾಟ ಮಾಡುತ್ತಿರುವ ವ್ಯಕ್ತಿಯ ರಿಜಿಸ್ಟ್ರೇಷನ್ ಪತ್ರವು (property Registration letters) ಮಾತ್ರವಲ್ಲದೆ, ಅದರ ಹಿಂದಿನ ರಿಜಿಸ್ಟ್ರೇಷನ್ ಪತ್ರವನ್ನು ಕೂಡ ನೀವು ಕೇಳಬೇಕು.
ಆ ಭೂಮಿಯ ಮಾಲೀಕತ್ವ ವ್ಯಕ್ತಿಗೆ ಹೇಗೆ ಬಂತು ಎನ್ನುವುದನ್ನು ಕೂಡ ನೀವು ಕೇಳಬೇಕು ಈ ಕುರಿತು ಪರಿಶೀಲನೆ ಮಾಡಬೇಕು. ಆ ಆಸ್ತಿಯ ದಾಖಲೆ ಸಂಖ್ಯೆ ಪಡೆದು ಆನ್ಲೈನ್ (revenue department website) ಮೂಲಕವೇ ನೀವು ಸಂಬಂಧ ಪಟ್ಟ ಇಲಾಖೆ ವೆಬ್ಸೈಟ್ ಗಳಿಗೆ ಭೇಟಿ ಕೊಟ್ಟು ಭೂಮಿಗೆ ಸಂಬಂಧಪಟ್ಟ ಅನೇಕ ದಾಖಲೆಗಳನ್ನು ಪರಿಶೀಲನೆ ಮಾಡಲು ಅವಕಾಶವಿದೆ.
ನೀವು ಅದರ ಸಹಾಯವನ್ನು ಪಡೆದುಕೊಳ್ಳಬಹುದು. ಅದೇ ರೀತಿ ಈ ಭೂಮಿಯ ಕುರಿತು ಕೋರ್ಟುಗಳಲ್ಲಿ ಯಾವುದಾದರು ತಕರಾರು ಇದೆಯೇ ಎಂದು ವಿಚಾರಿಸಬೇಕು. ಭೂಮಿಗೆ ಸಂಬಂಧಪಟ್ಟ ಹಾಗೆ 41 ಮತ್ತು 45 ಏಕೀಕರಣ ಡಾಕುಮೆಂಟ್ ಚೆಕ್ ಮಾಡಿ ಭೂಮಿಯ ವಾಸ್ತವಿಕತೆಯನ್ನು ತಿಳಿದುಕೊಳ್ಳಬಹುದು. ಈ ರೀತಿ ಮೊದಲಿಗೆ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನಂತರ ಮುಂದುವರೆಯಿರಿ.