ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ, ಇಸ್ತ್ರಿ ಪೆಟ್ಟಿಗೆ, ದೋಬಿ, ಸಲೂನ್ ಕಿಟ್ ವಿತರಣೆಗೆ ಸರ್ಕಾರದಿಂದ ಅರ್ಜಿ ಆಹ್ವಾನ.! ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

 

ರಾಜ್ಯದ ವೃತ್ತಿಪರ ಕುಶಲಕರ್ಮಿಗಳಿಗೆ ಸರ್ಕಾರದ ವತಿಯಿಂದ ಎರಡು ಸಿಹಿಸುದ್ದಿ ಇದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (Industry and commerce department) ವತಿಯಿಂದ ಸ್ವಂತ ಉದ್ಯೋಗ ಆರಂಭಿಸಲು ಇಚ್ಛಿಸುವ ವೃತ್ತಿಪರ ಕುಶಲಕರ್ಮಿಗಳಿಗೆ ಗ್ರಾಮೀಣ ಪ್ರದೇಶ ಕುಶಲಕರ್ಮಿ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಸಬ್ಸಿಡಿ (Subsidy loan) ರೂಪದ ಸಾಲ ಹಾಗೂ 2023-24ನೇ ಸಾಲಿನಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣಗಳ ಸರಬರಾಜು ಯೋಜನೆಯಡಿ ವೃತ್ತಿಯಾಧಾರಿತ ಸಲಕರಣೆಗಳನ್ನು ನೀಡಿ ಸಹಾಯ ಮಾಡಲು ಇಲಾಖೆ (toolkit Scheme) ನಿರ್ಧರಿಸಿದೆ.

ಈ ಅನುಕೂಲತೆಗಳನ್ನು ಪಡೆದುಕೊಳ್ಳಲು ಆಸಕ್ತರಾದ ಅರ್ಹ ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆ ಹಾಗೂ ಕುಶಲಕರ್ಮಿ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಫಲಾನುಭವಿಗಳು ಸೂಕ್ತ ದಾಖಲೆಗಳ ಜೊತೆ ಸಂಬಂಧ ಪಟ್ಟ ಜಿಲ್ಲಾಪಂಚಾಯತಿ ಕಚೇರಿಗಳಲ್ಲಿ (jilla panchayath) ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಯೋಜನೆಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಆಸ್ತಿ ಖರೀದಿ ಮಾಡುವ ಮುನ್ನ ಅದು ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!

ಯಾರೆಲ್ಲ ಅರ್ಹರು:-

● ವಿದ್ಯುತ್ ಚಾಲಿತ ಮರಗೆಲಸ ಮಾಡುವವರು.
● ಧೋಬಿ
● ಗಾರೆಕೆಲಸ
● ಕಮ್ಮಾರಿಕೆ
● ಕ್ಷೌರಿಕ
● ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳಲ್ಲಿ ಕೆಲಸ ಮಾಡುವ ಟೈಲರ್ಗಳು
● ಈಗ ಕೊಪ್ಪಳ ಚಿಕ್ಕಮಗಳೂರು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಫಲಾನುವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಂತರದಲ್ಲಿ ಹಂತಹಂತವಾಗಿ ಎಲ್ಲಾ ಜಿಲ್ಲೆಗೂ ವಿಸ್ತರಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

1. ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಯೋಜನೆ
● ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
● ಜಾತಿ ಪ್ರಮಾಣ ಪತ್ರ
● ಆದಾಯ ದೃಢೀಕರಣ ಪತ್ರ
● ಮರಗೆಲಸ, ದೋಬಿ, ಗಾರೆಕೆಲಸ, ಕಮ್ಮಾರಿಕೆ, ಕ್ಷೌರಿಕ ಮತ್ತು ಹೊಲಿಗೆ ಯಂತ್ರ ಕಸುಬಿನ ಕುಶಲಕರ್ಮಿಗಳು ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ ಅಥವಾ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ.

ಚೆಕ್ ಬಳಕೆ ಮಾಡುವವರು & ಚೆಕ್ ಬುಕ್ ಇರುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! RBI ನಿಂದ ಅಧಿಕೃತ ಘೋಷಣೆ.!

2. ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಸಹಾಯಧನ ಪಡೆಯಲು:-

● ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
● ಜಾತಿ ಪ್ರಮಾಣ ಪತ್ರ
● ಆದಾಯ ದೃಢೀಕರಣ ಪತ್ರ
● ಬ್ಯಾಂಕ್ ಪಾಸ್ ಬುಕ್ ವಿವರ
● ಮರಗೆಲಸ, ದೋಬಿ, ಗಾರೆಕೆಲಸ, ಕಮ್ಮಾರಿಕೆ, ಕ್ಷೌರಿಕ ಮತ್ತು ಹೊಲಿಗೆ ಯಂತ್ರ ಕಸುಬಿನ ಕುಶಲಕರ್ಮಿಗಳು ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ ಅಥವಾ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ.

ಅರ್ಜಿ ಸಲ್ಲಿಸುವ ವಿಧಾನ:-

● ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
● ಈ ಮೇಲೆ ತಿಳಿಸಿದ ಯೋಜನೆಗಳಿಗೆ ಅರ್ಹರಿರುವ ಫಲಾನುಭವಿಗಳು ಇದಕ್ಕೆ ಸೂಚಿಸಿರುವ ದಾಖಲೆಗಳನ್ನು ತೆಗೆದುಕೊಂಡು ಆಯಾ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
● ಆಯಾ ಜಿಲ್ಲಾ ಪಂಚಾಯಿತಿ ಅಧಿಕೃತ ವೆಬ್ಸೈಟ್ ಗಳಿಗೆ ತೆರಳಿ ಯೋಜನೆಯ ಅರ್ಜಿ ಫಾರಂ ಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬಹುದು.

ಮಕ್ಕಳಾಗದೇ ಇರುವುದು ಮಾಫಿಯಾನಾ.? ಯಾಕೆ ಮಕ್ಕಳಾಗ್ತಿಲ್ಲ, ಎಲ್ಲಿ ತಪ್ಪಾಗುತ್ತಿದೆ.? ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ ಇದು ನಿಜಕ್ಕೂ ನೀವು ಶಾ-ಕ್ ಆಗ್ತೀರಾ.!

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:-

ಆಗಸ್ಟ್ 24, 2023 ರಿಂದ ಅಕ್ಟೋಬರ್ 10, 2023ರ ವರೆಗೆ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದರೆ ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಅನುಸಾರವಾಗಿ ಕಡೆ ದಿನಾಂಕವನ್ನು ಇದರಲ್ಲಿ ನಿರ್ಧಾರ ಮಾಡಲಾಗಿದೆ. ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ತಿಳಿಸುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು, ಅಥವಾ ಜಿಲ್ಲಾ ಪಂಚಾಯಿತಿ ಅಧಿಕೃತ ವೆಬ್ ಸೈಟ್ ಬಗೆ ಭೇಟಿ ಕೊಡುವ ಮೂಲಕ ತಿಳಿದುಕೊಳ್ಳಬಹುದು.

ಸಹಾಯವಾಣಿ ಸಂಖ್ಯೆ:-
08539-230980.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:-👇 https://industries.karnataka.gov.in/page/CONTACT+US/DETAILS+IF+DISTRICT+INDUSTRIES+CENTRES/kn

Leave a Comment

%d bloggers like this: