ಈಗ ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಜನರು UPI ಆಧಾರಿತ ಆಪ್ ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಭಾರತ ಡಿಜಟಲೀಕರಣದತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಈಗ ತಮ್ಮ ದೈನಂದಿಕ ವ್ಯವಹಾರಗಳಿಗೆ ಜನರು ಕಡಿಮೆ ನಗದು ರೂಪದ ಹಣವನ್ನು ಉಪಯೋಗಿಸುತ್ತಿದ್ದಾರೆ, ಉಳಿದಂತೆ ಫೋನ್ ಪೇ, ಗೂಗಲ್ ಪೇ, Paytm ಮುಂತಾದ ಆಪ್ ಗಳ ಮೊರೆ ಹೋಗಿದ್ದಾರೆ.
ಹೀಗಿದರೂ ಕೂಡ ಬ್ಯಾಂಕ್ ಗಳಿಗೆ ಹೋಗಿ ಚೆಕ್ ಬುಕ್ (Check book) ಪಡೆಯುವವರ ಸಂಖ್ಯೆಗೇನು ಕಡಿಮೆ ಇಲ್ಲ ಯಾಕೆಂದರೆ ಚೆಕ್ ಬುಕ್ ಒಂದು ದಾಖಲೆಯಾಗಿ ಕೆಲಸಕ್ಕೆ ಬರುತ್ತದೆ. ಈಗಲೂ ಕೂಡ ಲಕ್ಷಗಟ್ಟಲೆ ಹಣದ ವ್ಯವಹಾರ ಮಾಡುವವರು ಅಥವಾ ಯಾವುದಾದರೂ ಸಂದರ್ಭದಲ್ಲಿ ಬ್ಯಾಂಕ್ ಮಾಹಿತಿ ಕೊಡಬೇಕಾದ ಸಂದರ್ಭದಲ್ಲಿ ಈ ರೀತಿ ಚೆಕ್ ಗಳನ್ನು ಕೇಳುವುದು ಸರ್ವೇಸಾಮಾನ್ಯ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಅಕೌಂಟ್ ಮಾಡಿಸಿದಾಗ ತಮ್ಮ ಖಾತೆಯ ಚೆಕ್ ಬುಕ್ ಪಡೆದುಕೊಳ್ಳುತ್ತಾರೆ. ಇದರ ಕುರಿತು ಸರ್ಕಾರ ಹೊಸ ನಿಯಮವನ್ನು ಬದಲಾಯಿಸಿದೆ ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಚೆಕ್ ಬುಕ್ ಸರಿಯಾಗಿ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅದರ ದುರುಪಯೋಗ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ. ಪ್ರತಿದಿನವೂ ಕೂಡ ಚೆಕ್ ಬೌನ್ಸ್ ಪ್ರಕರಣಗಳ (Checkbounce cases) ಸಂಖ್ಯೆ ದಿನೇ ದಿನ ಹೆಚ್ಚಾಗುತ್ತಿದೆ.
ತಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಚೆಕ್ ಬುಕ್ ಗಳನ್ನು ಕೊಟ್ಟು ಯಾಮಾರಿಸುವ ಖದೀಮರ ಸಂಖ್ಯೆ ಮಿತಿಮೀರಿ ಬೆಳೆದಿದೆ. ಇದಕ್ಕೆ ಕಡಿವಾಣ ಹಾಕಲು ತಜ್ಞರ ಜೊತೆ ಚರ್ಚಿಸಿ ಭಾರತದ ವಿತ್ತ ಸಚಿವಾಲಯ (Ministry of finance) ಪ್ರಮುಖ ನಿರ್ಧಾರಕ್ಕೆ ಬಂದಿದೆ. ಇದರ ಕುರಿತು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಇನ್ನು ಮುಂದೆ ಈ ರೀತಿ ಚೆಕ್ ಬೌನ್ಸ್ ಮಾಡುವವರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಗಂಭೀರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ.
ಗೊತ್ತಿದ್ದು ಉದ್ದೇಶ ಪೂರ್ವಕವಾಗಿ ಮಾಡುವವರು ಹಾಗೂ ಗೊತ್ತಿಲ್ಲದೇ ಕೂಡ ಚೆಕ್ ಬೌನ್ಸ್ ಆದರೂ ಪ್ರತಿಯೊಬ್ಬರು ಬದಲಾಗಿರುವ ಈ ಹೊಸ ನಿಯಮದ ಬಗ್ಗೆ ತಿಳಿದುಕೊಂಡಿರಲೇಬೇಕು. ಅದೇನೆಂದರೆ ಇನ್ನು ಮುಂದೆ ಒಬ್ಬ ವ್ಯಕ್ತಿಯು ಚೆಕ್ ಬೌನ್ಸ್ ಆದರೆ ಆ ವ್ಯಕ್ತಿ ಮತ್ತೊಂದು ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿದ್ದರೆ ಆ ಬ್ಯಾಂಕ್ ಖಾತೆಯಿಂದ ಆತನ ಹಣವನ್ನು ಕಡಿತಗೊಳಿಸಬಹುದು ಎನ್ನುವ ಮಹತ್ವದ ನಿರ್ಧಾರವನ್ನು ವಿತ್ತ ಸಚಿವಾಲಯ ಜಾರಿಗೆ ತಂದಿದೆ.
ಇದರಿಂದ ಚೆಕ್ ಪೋನ್ಸ್ ನಿಂದ ವಂಚಿತರಾಗುವವರಿಗೆ ಬಹಳಷ್ಟು ಅನುಕೂಲ ಆಗಲಿದೆ. ಇದೆ ರೀತಿಯ ಮತ್ತೊಂದು ನಿರ್ಧಾರವೇನೆಂದರೆ ಒಮ್ಮೆ ಒಂದು ಬಾರಿ ಆ ವ್ಯಕ್ತಿ ಮೇಲೆ ಚೆಕ್ ಬೌನ್ಸ್ ಆರೋಪ ಬಂದರೆ ಮತ್ತೆಲ್ಲೂ ಆತನಿಗೆ ಹೋಸದಾಗಿ ಅಕೌಂಟ್ ತೆರೆಯಲು ಅವಕಾಶ ನೀಡಲಾಗುವುದಿಲ್ಲ ಎನ್ನುವ ನಿರ್ಧಾರವನ್ನು ಆರ್ಥಿಕ ಸಚಿವಾಲಯ ತೆಗೆದುಕೊಳ್ಳುತ್ತಿದೆ.
ಇದುವರೆಗೂ ದಂಡ ತೆತ್ತು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅವಕಾಶ ಇತ್ತು. ಆದರೆ ಇನ್ನು ಮುಂದೆ ಶಿ’ಕ್ಷೆಯನ್ನು ಕೂಡ ಪಡಬೇಕಾಗುತ್ತದೆ ಪದೇ ಪದೇ ಚೆಕ್ ಬೌನ್ಸ್ ಆಗುವುದರಿಂದ ನಿಮ್ಮ CIBIL ಸ್ಕೋರ್ ಕೂಡ ಕಡಿಮೆ ಆಗುತ್ತದೆ, ನೀವು ಮುಂದಿನ ದಿನಗಳಲ್ಲಿ ಸಾಲ ಸೌಲಭ್ಯವನ್ನು ಪಡೆಯಬೇಕು ಎಂದರೆ ಆಗ ನಿಮಗೆ ಈ ಚೆಕ್ ಬೌನ್ಸ್ ಪ್ರಕರಣದ ಕಾರಣದಿಂದಾಗಿ ಸಾಲ ಪಡೆಯುವ ಸಾಧ್ಯತೆ ಕೈ ತಪ್ಪಬಹುದು. ಹಾಗಾಗಿ ಇನ್ನು ಮುಂದೆ ಈ ವಿಚಾರವಾಗಿ ಬಹಳಷ್ಟು ಎಚ್ಚರವಾಗಿರಿ, ಚೆಕ್ ಬೌನ್ಸ್ ಆಗದಂತೆ ನೋಡಿಕೊಳ್ಳಿ.