ಪ್ರತಿಯೊಂದು ಮನೆಗೆ ಕೂಡ ಬಂದು ವಾಹನದ (Own vehicle) ಅವಶ್ಯಕತೆ ಇರುತ್ತದೆ. ಎಲ್ಲಾ ಸಮಯದಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ಆಟೋ, ಕ್ಯಾಬ್ ಗಳಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಮನೆಯಲ್ಲೇ ಒಂದು ವಾಹನ ಇದ್ದರೆ ಹೆಚ್ಚು ಅನುಕೂಲವಾಗುತ್ತದೆ ಅನ್ನೋದು ಮಾತ್ರವಲ್ಲದೆ ಅನೇಕರಿಗೆ ಇದು ತಮ್ಮ ಪ್ರಯಾಣದ ವೆಚ್ಚವನ್ನು ಕೂಡ ಕಡಿಮೆ ಮಾಡುವುದರಿಂದ ತಮ್ಮ ಬಜೆಟ್ ಗೆ ತಕ್ಕ ಹಾಗೆ ಒಂದು ದ್ವಿಚಕ್ರ ವಾಹನವನ್ನಾದರೂ ಹೊಂದಲು ಪ್ರಯತ್ನಿಸುತ್ತಾರೆ.
ಸದ್ಯ ಭಾರತದ ಮಾರುಕಟ್ಟೆಯಲ್ಲಿ ಒಳ್ಳೆಯ ಗುಣಮಟ್ಟದ ಕಾರ್ಯಕ್ಷಮತೆಯಲ್ಲಿ ಕಾಂಪ್ರಮೈಸ್ ಇಲ್ಲದ ಅಟ್ಟ್ರಾಕ್ಟಿವ್ ಲುಕ್ ಹೊಂದಿರುವ ಒಂದು ದ್ವಿಚಕ್ರ ವಾಹನ ಖರೀದಿಸಬೇಕು ಎಂದರೆ ಅದಕ್ಕೆ ಕನಿಷ್ಠ ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ಕೊಡಲೇಬೇಕು. ಇದೇ ಹಣಕ್ಕೆ ಕಾರು ಬರುವ ರೀತಿ ಇದ್ದರೆ ಯಾರಿಗೆ ತಾನೇ ಮನಸಾಗುವುದಿಲ್ಲ, ದ್ವಿಚಕ್ರ ವಾಹನಕ್ಕಿಂತ ನಾಲ್ಕು ಚಕ್ರದ ವಾಹನ ಹೆಚ್ಚು ಕಂಫರ್ಟಬಲ್ ಇರುವುದರಿಂದ ಖಂಡಿತವಾಗಿಯೂ ಅದರ ಮೊರೆ ಹೋಗುತ್ತಾರೆ.
ಬಾಡಿಗೆ ಮನೆಯಲ್ಲಿ ಇರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ.!
ಈ ನಿಟ್ಟಿನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಕೆಲ ವರ್ಷಗಳ ಹಿಂದೆ ಟಾಟಾ ನ್ಯಾನೋ (TATA NANO Car) ಕಾರು ಹೆಚ್ಚು ಫೇಮಸ್ ಆಗಿತ್ತು. ಅತಿ ಕಡಿಮೆ ಬೆಲೆಗೆ ಚಿಕ್ಕದಾದ ಚೊಕ್ಕದಾದ ಈ ಕಾರ್ ಸಿಗುತ್ತಿದ್ದ ಕಾರಣ ಆ ಸಮಯದಲ್ಲಿ ಲಕ್ಷಾಂತರ ಮಂದಿ ಈ ಕಾರುಗಳನ್ನು ಕೊಂಡುಕೊಂಡರು. ಈಗ ಇದೇ ಮಾದರಿಯ ಆದರೆ ಇದಕ್ಕಿಂತಲೂ ಕಡಿಮೆ ಬೆಲೆಯ ಕಾರು ಒಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಕಾರು ಇದಕ್ಕಿಂತಲೂ ಹೆಚ್ಚು ವೈಶಿಷ್ಟ ಹೊಂದಿದೆ ಅದರಲ್ಲೂ ಬೆಲೆ ವಿಷಯದಲ್ಲಿ ಗ್ರಾಹಕರ ಸ್ನೇಹಿಯಾಗಿದೆ. ಈ ಕಾರ್ ನಿಮಗೆ ಒಂದು ದ್ವಿಚಕ್ರ ವಾಹನಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದರೆ ಆಶ್ಚರ್ಯ ಆಗಬಹುದು ಆದರೆ ಇದು ಖಂಡಿತ ನಿಜ.
ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರು ಮಾರಾಟಕ್ಕಿಲ್ಲ. ನೆರೆಯ ದೇಶವಾದ ಚೀನಾದಲ್ಲಿ (China) ಅತಿ ಹೆಚ್ಚು ಬೇಡಿಕೆ ಇರುವ ಕಾರ್ ಇದಾಗಿದೆ. ಬೆಲೆ ಕಾರಣಕ್ಕೆ ಮಾತ್ರವಲ್ಲದೇ ಕಾರಿನ ಗಾತ್ರ ಕೂಡ ಚಿಕ್ಕದಿರುವುದರಿಂದ ಸುಲಭವಾಗಿ ಪಾರ್ಕ್ ಮಾಡಬಹುದು ಎನ್ನುವುದು ಮತ್ತೊಂದು ಕಾರಣ.ಚೀನಾದ ಪ್ರಮುಖ ಈ ಕಾಮರ್ಸ್ ಪ್ಲಾಟ್ ಫಾರ್ಮ್, ಆಲಿಬಾಬಾ (Alibaba) ಎಲೆಕ್ಟ್ರಿಕ್ ವೆಹಿಕಲ್ ಆಫ್ ದಿ ವೀಕ್ (electric vehicle of the week) ಎನ್ನುವ ಬೃಹತ್ ಮಾರಾಟ ಮೇಳ ಒಂದನ್ನು ಆಯೋಜನೆ ಮಾಡಿದ್ದು ಅತ್ಯಂತ ಕಡಿಮೆ ಬೆಲೆಯ ಕಾರುಗಳನ್ನು ಇಲ್ಲಿ ಮಾರಾಟ ಮಾಡುತ್ತಿದೆ.
ಕಾರಿನ ಮುಂಭಾಗದಲ್ಲಿ ಹೆಡ್ ಲೈಟ್ಸ್ ನ್ನು ಕಾಣಬಹುದು. ಇದು ಎಲೆಕ್ಟ್ರಿಕಲ್ ಕಾರ್ ಆಗಿದ್ದು 35 kw ಮೋಟಾರ್ ಬಳಸಲಾಗಿದೆ. 47 HP ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಹೀಗಾಗಿ ಪದೇಪದೇ ಇದನ್ನು ಚಾರ್ಜ್ ಮಾಡಬೇಕು. ಅಲಿಬಾಬಾ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಇದು 152 Km ಮೈಲೇಜ್ ಹೊಂದಿದೆ. ಅಲ್ಲದೆ ಟಾಪ್ ಸ್ಪೀಡ್ ನಲ್ಲಿ 120 Km/hಸ್ಪೀಡ್ ನೀಡಬಹುದು. ಈ ಕಾರಿನ ಬೆಲೆಯು 1199 ಡಾಲರ್ ಅಂದರೆ ಭಾರತೀಯ ಮೌಲ್ಯದಲ್ಲಿ 99,000 ರೂ. ಆಗಿದೆ.
ಭಾರತ ದೇಶದಲ್ಲಿ ಈ ಕಾರುಗಳ ಮಾರಾಟ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಕಡಿಮೆ ಬೆಲೆ ಕಾರ್ ಆಗಿರುವುದರಿಂದ ಅಟ್ರಾಕ್ಟಿವ್ ಲುಕ್ ಹೊಂದಿಲ್ಲ, ಫೆಸಿಲಿಟಿ ಕೂಡ ಅಷ್ಟು ಯೋಗ್ಯವಾಗಿಲ್ಲ, ಅದಲ್ಲದೆ ಸೇಫ್ಟಿ ಬಗ್ಗೆ ಕೂಡ ಅಷ್ಟೊಂದು ಗ್ಯಾರಂಟಿ ಇಲ್ಲ ಹಾಗಾಗಿ ಇಲ್ಲಿನ ಗ್ರಾಹಕರು ಇದರ ಬಗ್ಗೆ ಆಸಕ್ತಿ ತೋರುವುದು ಕಡಿಮೆ ಎಂದು ಅಭಿಪ್ರಾಯ ಪಟ್ಟು ಸದ್ಯಕ್ಕೆ ಆಮದು ಮಾಡಿಕೊಂಡಿಲ್ಲ. ಇದರೆ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆಯೋ ಅಥವಾ ಇದೇ ಮಾದರಿಯ ಇದಕ್ಕಿಂತಲೂ ಬೆಟರ್ ಕ್ವಾಲಿಟಿಯ ಕಾರುಗಳು ಸಿಗಲಿದೆಯೋ ಕಾದು ನೋಡೋಣ.