ಕರ್ನಾಟಕದಲ್ಲಿ ಕಾಂಗ್ರೆಸ್ (Congress) ನೇತೃತ್ವದ ಸರ್ಕಾರ (Government) ಸ್ಥಾಪನೆ ಆದಮೇಲೆ ಚುನಾವಣೆಗಳು ಮುನ್ನ ನೀಡಿದ್ದ ಭರವಸೆಗಳಾದ 5 ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಪ್ರಯತ್ನಿಸಿದೆ. ಈಗಾಗಲೇ ಜಾರಿಯಾಗಿರುವ ನಾಲ್ಕು ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯಡಿಯಲ್ಲಿ (Annabhagya amount) ಹೆಚ್ಚುವರಿ ಅಕ್ಕಿ ಹಣವನ್ನು ಹಾಗೂ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi amount) ಮಹಿಳೆಯರು 2000ರೂ. ಸಹಾಯಧನವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ (head of the family women bank account ) DBT ಮೂಲಕ ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು, ಅನ್ನಭಾಗ್ಯ ಯೋಜನೆಗೆ ಹಣ ಪಡೆಯಲು ಅರ್ಹರಾಗಿದ್ದರು ಕೂಡ ಲಕ್ಷಾಂತರ ಫಲಾನುಭವಿಗಳು ಈ ಯೋಜನೆಗಳ ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ. ಯಾರೆಲ್ಲ ಈ ಯೋಜನೆಗಳ ಹಣ ಪಡೆಯಲಾಗಿಲ್ಲ, ಯಾವ ಕಾರಣದಿಂದಾಗಿ ಈ ಸಮಸ್ಯೆಯಾಗಿದೆ ಮತ್ತು ಅದಕ್ಕೆ ಪರಿಹಾರ ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.
ವಿಷ್ಣು, ಲಲಿತ ಸಹಸ್ರ ನಾಮಗಳ ಬಗ್ಗೆ ವೈದ್ಯರು ಹೇಳಿದ ಸತ್ಯಾಂಶ, ಮಂತ್ರ ಪಠಿಸಿದ್ರೆ ಮಕ್ಕಳಾಗುತ್ತ.? ನೀವೆ ನೋಡಿ.!
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ (NFSA) ಪ್ರಕಾರ ಕುಟುಂಬದ ಪಡಿತರ ಚೀಟಿಯಲ್ಲಿ ಮುಖ್ಯಸ್ಥರ ಸ್ಥಾನದಲ್ಲಿ ಆ ಕುಟುಂಬದ ಹಿರಿಯ ಮಹಿಳೆ ಹೆಸರು ಇರಬೇಕು. ಆಗಿದ್ದಾಗ ಮಾತ್ರ ಆ ಕಾರ್ಡ್ ಸರ್ಕಾರಿ ಯೋಜನೆಗಳ ಪ್ರಯೋಜನಗಳಲ್ಲೂ ಪಡೆಯಲು ಅರ್ಹವಾಗಿರುತ್ತವೆ. ಆದರೆ ಕುಟುಂಬದಲ್ಲಿ ಮಹಿಳಾ ಸದಸ್ಯರು ಇರದೇ ಇದ್ದಾಗ ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಪಡಿತರ ಚೀಟಿಯಲ್ಲಿದ್ದಾಗ ಮಾತ್ರ ಪುರುಷ ಸದಸ್ಯರು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಇರಬಹುದು.
ಇನ್ನುಳಿದಂತೆ ಯಾವುದೇ ರೇಷನ್ ಕಾರ್ಡಲ್ಲಿ ಪುರುಷರ ಮುಖ್ಯಸ್ಥರ ಸ್ಥಾನದಲ್ಲಿದ್ದರೆ ಅವರಿಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಹಣ ಬರುವುದಿಲ್ಲ ಇದೇ ಕಾರಣಕ್ಕಾಗಿ ನೀವು ಸಹ ಈ ಯೋಜನೆಗಳ ಹಣದಿಂದ ವಂಚಿತರಾಗಿರಬಹುದು. ಆದರೆ ಇದಕ್ಕೆ ಪರಿಹಾರ ಏನು ಎಂದರೆ ಆಹಾರ ಇಲಾಖೆಯು (food department) ಈಗ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 10ರವರೆಗೆ ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಿಕೊಳ್ಳಲು ಅವಕಾಶ ನೀಡಿದೆ.
ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭ ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳೇನು ನೋಡಿ.!
ಇದರ ಸದುಪಯೋಗವನ್ನು ಪಡೆದುಕೊಂಡು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ನಿಮ್ಮ ಕುಟುಂಬದ ಹಿರಿಯ ಮಹಿಳೆಯ ಹೆಸರು ಬರುವಂತೆ ತಿದ್ದುಪಡಿ ಮಾಡಿಕೊಂಡು ನಿಮ್ಮ ರೇಷನ್ ಕಾರ್ಡ್ ನಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸಿಕೊಂಡರೆ ನಂತರ ಅನ್ನಭಾಗ್ಯ ಯೋಜನೆ ಹಣವನ್ನು ಪಡೆಯಬಹುದು. ನಿಮ್ಮ ಕುಟುಂಬದ ಯಜಮಾನಿ ಮಹಿಳೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ 2000ರೂ. ಸಹಾಯಧನವನ್ನು ಪಡೆಯಬಹುದು.
ಹತ್ತಿರದಲ್ಲಿರುವ ಯಾವುದೇ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ದಾಖಲೆಯನ್ನು ಕೊಟ್ಟು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ. ಹಾಗೆಯೇ ಈ ಕೆಳಗೆ ತಿಳಿಸಿದ ರೀತಿ ಸಮಸ್ಯೆಗಳು ಇದ್ದರೂ ನಿಮಗೆ ಈ ಯೋಜನೆಗಳ ಹಣ ಬರುವುದಿಲ್ಲ. ಈ ಕೆಳಗಿನ ಪಟ್ಟಿಯಲ್ಲಿ ಯಾವ ರೀತಿ ಸಮಸ್ಯೆಯಾಗಿದೆ ಅದನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳಿ.
ಕೀ ಪ್ಯಾಡ್ ಮೊಬೈಲ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್.!
● ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ NPCI ಮ್ಯಾಪಿಂಗ್ ಆಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.
● ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲವಾದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿ.
● ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ನಲ್ಲಿರುವ ಮಾಹಿತಿ ಹೊಂದಾಣಿಕೆ ಆಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಿ, ಇಲ್ಲವಾದಲ್ಲಿ ಇವುಗಳ ತಿದ್ದುಪಡಿ ಕೂಡ ಮಾಡಿಸಬೇಕು.
● ನೀವು ಕಳೆದ ಮೂರು ತಿಂಗಳಿನಿಂದ ಪಡಿತರವನ್ನು ಪಡೆಯದೆ ಇದ್ದಲ್ಲಿ ನೀವು ಅನ್ನ ಭಾಗ್ಯ ಯೋಜನೆ ಹಣವನ್ನು ಪಡೆಯಲು ಅರ್ಹರಾಗಿರುವುದಿಲ್ಲ.