ಕರ್ನಾಟಕದ ಎಲ್ಲಾ ಮಹಿಳೆಯರು ಕೂಡ ಹಲವು ತಿಂಗಳುಗಳಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme launch) ಆಗಸ್ಟ್30ರಂದು ಚಾಲನೆ ಸಿಕ್ಕಿದೆ. ಮೈಸೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದ ಮೂಲಕ ಸರ್ಕಾರವು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅಂದಿನಿಂದಲೇ ಎಲ್ಲಾ ಫಲಾನುಭವಿಗಳ ಖಾತೆಗೂ 2,000ರೂ. ಸಹಾಯಧನವನ್ನು ಬಿಡುಗಡೆ ಮಾಡುತ್ತಿದೆ.
ಕುಟುಂಬದ ಯಜಮಾನಿಯಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲ ಮಹಿಳೆಯರು ಕೂಡ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಈಗಾಗಲೇ ಆಗಸ್ಟ್ 30ನೇ ತಾರೀಕಿನಿಂದ ಅನೇಕರ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಕುರಿತು ಇನ್ನು ಕೆಲವರಿಗೆ ಸರ್ಕಾರದ ವತಿಯಿಂದ ಹಣ ವರ್ಗಾವಣೆ ಆಗುತ್ತದೆ ಎನ್ನುವುದರ ಕುರಿತು SMS ಸಂದೇಶ ಕೂಡ ರವಾನೆಯಾಗಿದೆ.
ಆದರೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ಫಲಾನುಭವಿಗಳು ಸಹಾಯಧನವನ್ನು ಪಡೆಯಲಾಗದೆ ವಂಚಿತರಾಗಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ.
ಅವರು ಹೇಳಿದ ಪ್ರಕಾರ ನಾವು ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ವರ್ಗಾವಣೆ ಮಾಡುತ್ತಿದ್ದೇವೆ, ಆಗಸ್ಟ್ 30ರಂದು ಕಾರ್ಯಕ್ರಮ ಲಾಂಚ್ ಮಾಡಿದಾಗಲೇ ನಮ್ಮ ಇಲಾಖೆಯ ಅಧಿಕಾರಿಗಳ ಖಾತೆಗೆ ಹಣ ಹೋಗಿದೆ. ಸರ್ಕಾರದಿಂದ ಟ್ರಜರಿಗಳಿಗೆ ಹಣ ಹೋಗಿದೆ, ಈಗ ಆಯಾ ಜಿಲ್ಲೆಯ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡಲು ಬ್ಯಾಂಕ್ಗಳಿಗೆ ಹಣ ವರ್ಗಾವಣೆ ಮಾಡಿದ್ದೇವೆ.
ಸೆಪ್ಟೆಂಬರ್ 5ರ ಬೆಳಿಗ್ಗೆ ತನಕ ಬಂದ ಮಾಹಿತಿಯ ಪ್ರಕಾರ ಒಂದು ಕೋಟಿಗಿಂತ ಹೆಚ್ಚು ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 2000ರೂ. ಸಹಾಯಧನವನ್ನು ಪಡೆದಿದ್ದಾರೆ ಆದರೆ ಇಲಾಖೆ ಅಧಿಕಾರಿಗಳು ತಿಳಿಸಿರುವ ಮಾಹಿತಿಯ ಪ್ರಕಾರ 7-8 ಲಕ್ಷ ಮಹಿಳೆಯರು ಈ ಸಹಾಯಧನದಿಂದ ವಂಚಿತರಾಗಿರುತ್ತಾರೆ.
ಇದಕ್ಕೆ ಕಾರಣ ಇಲಾಖೆಯಲ್ಲ (department) ಇ-ಗವರ್ನೆನ್ಸ್ (e-governence) ಕೂಡ ಅಲ್ಲ ಹಣ ವರ್ಗಾವಣೆ ಮಾಡುವಾಗ ಅವರ ಖಾತೆಗಳು ಎರರ್ (Bank account details error) ಬರುತ್ತಿವೆ. ಅವರ ಖಾತೆಗಳನ್ನು ಬಳಕೆ ಮಾಡದ ಕಾರಣ ಅವುಗಳು ಕ್ಲೋಸ್ ಆಗಿರುವುದು ಕಂಡು ಬಂದಿದೆ, ಅಕೌಂಟ್ ರದ್ದಾಗಿರುವ ಕಾರಣದಿಂದ ಅಂತಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ.
ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿರುವುದರಿಂದ ನೇಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮತ್ತು NPCI ಮ್ಯಾಪಿಂಗ್ (Aadhar linking NPCI Mapping) ಮಾಡಿಸದೆ ಇರುವುದು ಗೊತ್ತಾಗಿದೆ ಇವರೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ. ಇದಕ್ಕೂ ಕೂಡ ಕ್ರಮ ಕೈಗೊಂಡಿದ್ದೇವೆ.
ಈ ತಿಂಗಳಿನಲ್ಲಿ ಯಾವೆಲ್ಲ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದ ಲಿಸ್ಟ್ ಅನ್ನು CDPOಗಳಿಗೆ ತಯಾರಿಸಲು ಹೇಳಿದ್ದೇವೆ. CDPO ಗಳಿಂದ ಪ್ರತಿ ಗ್ರಾಮ ಪಂಚಾಯಿತಿಯ ಪ್ರತ್ಯೇಕ ಲಿಸ್ಟ್ ಬರುತ್ತದೆ. ಬಳಿಕ ಪ್ರತಿ ಅಂಗನವಾಡಿಗೂ ಆ ಲಿಸ್ಟ್ ಹೋಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಅಕೌಂಟ್ ಎರರ್ ಕಾಣದಿಂದ ಹಣ ಪಡೆಯಲಾಗದ ಫಲಾನುಭವಿಗಳ ಮನೆಗೆ ಭೇಟಿ ಕೊಟ್ಟು ಇದರ ಕುರಿತು ಮಾಹಿತಿ ತಿಳಿಸುತ್ತಾರೆ.
ನಂತರ ಬ್ಯಾಂಕ್ ಗಳಿಗೆ ಹೋಗಿ ಅವರು ಖಾತೆ ಸಕ್ರಿಯವಾಗುವಂತೆ ಮಾಡಿದ ಮೇಲೆ ಮುಂದಿನ ತಿಂಗಳಿನಿಂದ ಅವರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಸಹಾಯಧನವು ವರ್ಗಾವಣೆ ಆಗಲಿದೆ. ಈ ಯೋಜನೆಗೆ ನೋಂದಾಯಿಸಿಕೊಂಡಿರುವ ಅರ್ಹ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಹಣ ವರ್ಗಾವಣೆ ಮಾಡಬೇಕು ಎನ್ನುವುದೇ ಸರ್ಕಾರದ ಉದ್ದೇಶ ಎನ್ನುವ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
https://youtu.be/t-2bnisnN_g?si=bAbuGH3lLIE8LYqU