SBI (State bank of Mysore ) ತನ್ನ ಗ್ರಾಹಕರಿಗಾಗಿ ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದೇ ಕಾರಣದಿಂದಾಗಿ ಇಂದು ರಾಷ್ಟ್ರದ ಪ್ರತಿಷ್ಠಿತ ಬ್ಯಾಂಕ್ ಗಳ ಷಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಎಲ್ಲ ಬ್ಯಾಂಕುಗಳ ರೀತಿಯಲ್ಲಿ SBI ನಲ್ಲೂ ಕೂಡ ಪದೇ ಪದೇ ತನ್ನ ನಿಯಮಗಳಲ್ಲಿ ಬದಲಾವಣೆ ಆಗುತ್ತಿರುತ್ತದೆ. ಹಾಗೆಯೇ ಈ ಬಾರಿ RBI ಗೈಡ್ ಲೈನ್ಸ್ (Reserve bank of India guidelines) ಅನುಸಾರ SBI ತನ್ನ ಲಾಕರ್ ನಿಯಮವನ್ನು ತಿದ್ದುಪಡಿ ( New locker rules) ಮಾಡಿದೆ.
RBI ಇದರ ಬಗ್ಗೆ ಕಳೆದ ಆರ್ಥಿಕ ವರ್ಷದಲ್ಲಿಯೇ ಆದೇಶ ಹೊರಡಿಸಿತ್ತು ಆ ಪ್ರಕಾರ ಈ ವರ್ಷದ ಜೂನ್ ಒಳಗೆ ಬದಲಾದ ತಿದ್ದುಪಡಿ ಅಗ್ರಿಮೆಂಟ್ ಗಳಿಗೆ (New Locker agriments) 50% ಗ್ರಾಹಕರಿಂದ, ಸೆಪ್ಟೆಂಬರ್ ಒಳಗೆ 75% ಗ್ರಾಹಕರಿಂದ ಹಾಗೂ ಡಿಸೆಂಬರ್ ಒಳಗೆ ಪೂರ್ತಿಯಾಗಿ ಎಲ್ಲಾ ಲಾಕರ್ ಹೊಂದಿರುವ ಗ್ರಾಹಕರಿಂದ ಬ್ಯಾಂಕ್ ಈ ಲಾಕರ್ ತಿದ್ದುಪಡಿ ಅಗ್ರಿಮೆಂಟ್ ಸಹಿ ಪಡೆಯಬೇಕು ಎಂದು ಸೂಚನೆ ನೀಡಿತ್ತು.
SBI ಬ್ಯಾಂಕ್ ನಲ್ಲಿ ನೇಮಕಾತಿ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ಅದರಂತೆ ಈಗ SBI ಬದಲಾದ ತನ್ನ ನಿಯಮಗಳ ಬಗ್ಗೆ ತನ್ನ ಗ್ರಾಹಕರಗಳಿಗೆ SMS ಸಂದೇಶ ಕಳುಹಿಸುವ ಮೂಲಕ ಹಾಗೂ ಫೋನ್ ಕರೆಗಳನ್ನು ಮಾಡುವ ಮೂಲಕ ಮಾಹಿತಿ ತಿಳಿಸಿ ಸಹಿ ಮಾಡುವಂತೆ ಕೋರುತ್ತಿದೆ. ಈ ಲಾಕರ್ ತಿದ್ದುಪಡಿ ನಿಯಮವು ಈಗಾಗಲೇ ಬ್ಯಾಂಕ್ ನಲ್ಲಿ ಲಾಕರ್ ಹೊಂದಿರುವ ಗ್ರಾಹಕರಿಗೆ ಮಾತ್ರವಲ್ಲದೆ ಹೊಸದಾಗಿ ಲಾಕರ್ ಹೊಂದಲು ಬಯಸುವವರಿಗೂ ಕೂಡ ಅನ್ವಯಿಸುತ್ತದೆ.
ಹಾಗಾಗಿ ನೀವೇನಾದರೂ SBI ನಲ್ಲಿ ಲಾಕರ್ ಸೇವೆ ಹೊಂದಿದ್ದರೆ ಅಥವಾ ಮುಂದೆ ಪಡೆಯಬೇಕು ಎಂದು ಬಯಸಿದ್ದರೆ ತಪ್ಪದೆ ಸೆಪ್ಟೆಂಬರ್ 30ರ ಒಳಗೆ ಹೋಗಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ. ಈ ತಿದ್ದುಪಡಿಯಲ್ಲಿ ಮುಖ್ಯವಾಗಿ ಲಾಕರ್ ಶುಲ್ಕ (Locker fees Increase) ಬದಲಾವಣೆ ಮಾಡಲಾಗಿದೆ. SBI ನಲ್ಲಿ ಹೊಸದಾಗಿ ಬದಲಾಗಿರುವ ಶುಲ್ಕದರ ಎಷ್ಟಿದೆ ಎನ್ನುವುದರ ವಿವರವನ್ನು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ನಗರ ಅಥವಾ ಮೆಟ್ರೋ ನಗರದ (Metro City) ನಿವಾಸಿಗಳು ಬ್ಯಾಂಕ್ ಲಾಕರ್ ಗಾಗಿ 2000 ಹಾಗೂ GST ಯನ್ನು ಕಟ್ಟುವಂತೆ SBI ಹೇಳಿದೆ. ಚಿಕ್ಕನಗರ ಹಾಗೂ ಗ್ರಾಮೀಣ (rural branches) ಭಾಗದಲ್ಲಿ ಈ ಚಿಕ್ಕ ಗಾತ್ರದ ಲಾಕರ್ ಗಳಿಗೆ 1,500 ಹಾಗೂ ಜಿಎಸ್ಟಿ (GST)ಯನ್ನು ಕಟ್ಟಬೇಕು. ಇದಕ್ಕಿಂತ ಸ್ವಲ್ಪ ಉತ್ತಮವಾದ ಮಧ್ಯಮ ಗಾತ್ರದ ಲಾಕರ್ ಗಾಗಿ ನಗರ ಹಾಗೂ ಮೆಟ್ರೋ ನಗರಗಳಲ್ಲಿ ರೂ.4000 ಮತ್ತು GSTಯನ್ನು ಕಟ್ಟಬೇಕು.
ಚಿಕ್ಕನಗರ ಹಾಗೂ ಹಳ್ಳಿಗಳಲ್ಲಿ ಇರುವ SBI ನ ಮಧ್ಯಮ ಗಾತ್ರದ ಬ್ಯಾಂಕ್ ಖಾತೆಗಳಿಗೆ ರೂ.3000 ರೂಗಳನ್ನು ಕಟ್ಟಬೇಕು. ದೊಡ್ಡ ಗಾತ್ರದ ಲಾಕರುಗಳಿಗಾಗಿ ಮೆಟ್ರೋ ನಗರದಲ್ಲಿ 8000 ಮತ್ತು GST ಹಾಗೂ ಚಿಕ್ಕ ನಗರ ಹಾಗೂ ಹಳ್ಳಿಗಳಲ್ಲಿ ಈ ಗಾತ್ರದ ಲಾಕರ್ ಗಳಿಗಾಗಿ 6,000 ಮತ್ತು GST ಕಟ್ಟ ಬೇಕಾಗುತ್ತದೆ. ಪ್ರಮುಖ ಕ್ಷೇತ್ರದ ನಗರದಲ್ಲಿ 12,000ರೂ. ಮತ್ತು GSTಯನ್ನು ಹಾಗೂ ಗ್ರಾಮೀಣ ಭಾಗದಲ್ಲಿ ನಗರದಲ್ಲಿ 9,000ರೂ. ಹಾಗೂ GST ಯನ್ನು ಅತಿ ದೊಡ್ಡ ಗಾತ್ರದ ಲಾಕರ್ ಗಳಿಗೆ ಲಾಕರ್ ಶುಲ್ಕದಲ್ಲಿ ಕಟ್ಟ ಬೇಕಾಗಿರುತ್ತದೆ. ಈ ರೀತಿ SBI ನಲ್ಲಿ ನಾಲ್ಕು ವಿಧವಾದ ಲಾಕರ್ ಶುಲ್ಕ ವಿಧಿಸಲಾಗುತ್ತದೆ.
ಇಂಥವರಿಗೆ ಇನ್ಮುಂದೆ ಗ್ಯಾಸ್ ಸಿಲಿಂಡರ್ ಮೇಲೆ 200 ಅಲ್ಲ 400 ರೂಪಾಯಿ ಸಬ್ಸಿಡಿ ಸಿಗುತ್ತೆ.!