ನೀರಿನ ಬಾಟಲ್, ಫ್ಲಾಸ್ಕ್, ಕ್ಯಾನ್ ಗಳನ್ನು ಕ್ಲೀನ್ ಮಾಡಲು ಕಷ್ಟ ಪಡುವುದು ಬೇಡ ಇಲ್ಲಿದೆ ನೋಡಿ ಸುಲಭವಾದ ಟ್ರಿಕ್.!

 

WhatsApp Group Join Now
Telegram Group Join Now

ಸಾಮಾನ್ಯವಾಗಿ ಪ್ರತಿಯೊಬ್ಬ ಗೃಹಿಣಿಯು ಕೂಡ ಈ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಅದೇನೆಂದರೆ ಉದ್ದವಾದ ಕೊಳವೆಯ ಬಾಯಿ ಇರುವ ಪಾತ್ರೆಗಳು, ಎಣ್ಣೆ, ತುಪ್ಪ ಇಟ್ಟ ಕ್ಯಾನ್ ಗಳು ಅಥವಾ ಉಪ್ಪಿನಕಾಯಿ ಜಾಡಿ, ಚಹಾ ಮತ್ತು ಕಾಫಿ ಇಡುವ ಫ್ಲಾಸ್ಕ್ ಗಳು ಹಾಗೂ ನೀರಿನ ಬಾಟಲ್ ಗಳು ಈ ರೀತಿಯ ವಸ್ತುಗಳನ್ನು ಸರಿಯಾಗಿ ಕ್ಲೀನ್ ಮಾಡಲು ಆಗುವುದಿಲ್ಲ.

ಯಾಕೆಂದರೆ ನಮ್ಮ ಕೈ ದೊಡ್ಡದಾಗಿರುವುದರಿಂದ ಒಳಗೆ ಕೈ ಹಾಕಿ ಪೂರ್ತಿ ತಳದವರೆಗೆ ಉಜ್ಜಿ ಕ್ಲೀನ್ ಮಾಡಲು ಆಗುವುದಿಲ್ಲ, ಹಾಗೆಂದು ಅದನ್ನು ಹಾಗೆ ಉಪಯೋಗಿಸಲು ಕೂಡ ಆಗುವುದಿಲ್ಲ, ಎಷ್ಟೋ ಬಾರಿ ಅದು ಕೆಳಗೆ ಪಾಚಿ ಕಟ್ಟಿರುತ್ತದೆ. ಅವುಗಳನ್ನು ಸರಿಯಾಗಿ ಕ್ಲೀನ್ ಮಾಡದೆ ಮತ್ತೆ ಅದರೊಳಗೆ ಆಹಾರ ಪದಾರ್ಥ ಅಥವಾ ನೀರನ್ನು ಶೇಖರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.

ರೈತರ ಜಮೀನಿನಲ್ಲಿ ಇರುವ ಅಕ್ರಮ ಪಂಪ್ ಸೆಟ್ ಗಳಿಗೆ ಸಕ್ರಮ ಭಾಗ್ಯ ನೀಡಲು ಮುಂದಾದ ಸರ್ಕಾರ ಯಾವ ರೀತಿಯ ಪಂಪ್ ಸೆಟ್ ಗಳು ಸಕ್ರಮವಾಗಲಿದೆ ನೋಡಿ.!

ಹೀಗಾಗಿ ಇದನ್ನು ಹೇಗೆ ಕ್ಲೀನ್ ಮಾಡುವುದು ಎನ್ನುವುದೇ ಹೆಣ್ಣು ಮಕ್ಕಳಿಗೆ ದೊಡ್ಡ ತಲೆನೋವು. ಇದಕ್ಕಾಗಿ ಹಲವಾರು ರೀತಿಯ ಸರ್ಕಸ್ ಗಳನ್ನು ಕೂಡ ಗೃಹಿಣಿಯರು ಟ್ರೈ ಮಾಡಿರುತ್ತಾರೆ, ಸಾಮಾನ್ಯವಾಗಿ ಇದನ್ನು ಕ್ಲೀನ್ ಮಾಡಲು ಮಹಿಳೆಯರು ಉಪಯೋಗಿಸುವ ಟ್ರಿಕ್ ಏನೆಂದರೆ, ಸೋಪ್ ಆಯಿಲ್, ವಿಮ್ ಜೆಲ್, ಡಿಟರ್ಜೆಂಟ್ ಅಥವಾ ಯಾವುದೋ ಕೆಮಿಕಲ್ ಹಾಕಿ ಅವುಗಳನ್ನು ಶೇಕ್ ಮಾಡಿ ತೊಳೆದು ಸುಮ್ಮನಾಗುವುದು.

ಈ ರೀತಿ ಮಾಡಿದ ಮಾತ್ರಕ್ಕೆ ನಿಮಗೆ ಸಮಾಧಾನ ಆಗಬಹುದು ಹೊರತು ಪೂರ್ತಿ ಕ್ಲೀನ್ ಆಗಿದೆ ಎಂದು ಅರ್ಥ ಅಲ್ಲ, ಜೊತೆಗೆ ಈ ರೀತಿ ಪ್ರತಿನಿತ್ಯ ಬಳಸುವ ನೀರಿನ ಬಾಟಲ್ ನ್ನು ಕೆಮಿಕಲ್ ನಿಂದ ತೊಳೆಯುವುದು ಅಷ್ಟೊಂದು ಒಳ್ಳೆಯದಲ್ಲ. ನೈಸರ್ಗಿಕವಾಗಿಯೇ ಇವುಗಳನ್ನು ಜಿಡ್ಡು ಇಲ್ಲದಂತೆ, ಪಾಚಿ ಇಲ್ಲದಂತೆ ಕ್ಲೀನ್ ಮಾಡಿಕೊಳ್ಳಬೇಕು. ಇದಕ್ಕೆ ಆಯುರ್ವೇದದಲ್ಲಿ ತಿಳಿಸಿರುವ ಉಪಾಯದ ಬಗ್ಗೆ ನಾವು ಇಂದು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ, S.S.L.C ಆಗಿದ್ದರೂ ಸಾಕು ಅರ್ಜಿ ಸಲ್ಲಿಸಿ.!

ನೀರಿನ ಬಾಟಲ್ ಗಳು ಕ್ಯಾನ್ ಗಳು ಅಥವಾ ಇದೇ ರೀತಿ ಇದನ್ನೇ ಹೋಲುವ ಇನ್ಯಾವುದೇ ಪಾತ್ರೆ ನೀವು ಅದರ ತಳ ಕ್ಲೀನ್ ಮಾಡಲಾಗುತ್ತಿಲ್ಲ ಎಂದರೆ ಅವುಗಳನ್ನು ಈಸಿಯಾಗಿ ಕ್ಲೀನ್ ಮಾಡಲು ನಿಂಬೆ ಹಣ್ಣಿನ ರಸವನ್ನು ಉಪಯೋಗಿಸಿ. ಒಂದು ಹೋಳು ನಿಂಬೆ ಹಣ್ಣನ್ನು ತೆಗೆದುಕೊಂಡು ಆ ಪಾತ್ರೆ ಅಥವಾ ಬಾಟಲ್ ಅಥವಾ ಕ್ಯಾನ್ ಒಳಗಡೆ ಹಾಕಿ, ಇದಕ್ಕೆ ಸ್ವಲ್ಪ ಅಡುಗೆ ಸೋಡವನ್ನು ಹಾಕಿ ಪೂರ್ತಿ ಬಾಟಲ್ ಕ್ಲೀನ್ ಆಗಬೇಕು ಎಂದರೆ ನೀವು ಸ್ವಲ್ಪ ನೀರು ಕೂಡ ಹಾಕಬಹುದು.

ಅದರ ಮುಚ್ಚುಳವನ್ನು ಹಾಕಿ ಒಂದೆರಡು ಬಾರಿ ಶೇಕ್ ಮಾಡಿ ಹಾಗೆ ಇಟ್ಟುಬಿಡಿ ಈಗ ಅಡುಗೆ ಸೋಡಾದ ಜೊತೆಗೆ ನಿಂಬೆರಸ ರಿಯಾಕ್ಟ್ ಆಗಿ ಅದೇ ಒಂದು ಕೆಮಿಕಲ್ ಫಾರ್ಮೇಶನ್ ಗೆ ಬರುತ್ತದೆ. ಆದರೆ ಇದು ಯಾವುದೇ ರೀತಿಯಲ್ಲೂ ನಂತರ ಅದರಲ್ಲಿ ಶೇಖರಿಸುವ ಆಹಾರ ಪದಾರ್ಥಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!

ನಿಮ್ಮ ಪಾತೆಯಲ್ಲಿದ್ದ ಎಲ್ಲಾ ಜಿಡ್ಡು ಕೊಳೆ, ಕೀಟಾಣುಗಳು ಸಂಪೂರ್ಣವಾಗಿ ಕ್ಲೀನ್ ಆಗಿರುತ್ತದೆ. ನಿಮ್ಮ ವಸ್ತುಗಳಿಗೆ ಹೊಸ ಶೈನಿಂಗ್ ಕೂಡ ಬಂದಿರುತ್ತದೆ. ಇದನ್ನು ಈ ವಸ್ತುಗಳು ಮಾತ್ರ ಅಲ್ಲದೆ ನೀವು ಅಡುಗೆ ಮನೆಯಲ್ಲಿ ಬಳಸುವ ಯಾವುದೇ ಸಾಮಗ್ರಿಗಳನ್ನು ಕ್ಲೀನ್ ಮಾಡಲು ಕೂಡ ಉಪಯೋಗಿಸಬಹುದು. ಇದಕ್ಕಾಗಿ ಅಥವಾ ದುಬಾರಿ ಬೆಲೆ ಕೊಟ್ಟು ಮಾರುಕಟ್ಟೆಯಿಂದ ಕ್ಲೀನ್ ಮಾಡಲು ಸೊಲ್ಯೂಷನ್ ಗಳನ್ನು ತರಬೇಕಾದ ಅವಶ್ಯಕತೆ ಇಲ್ಲ, ನೀವು ಗಟ್ಟಿಯಾಗಿ ತಿಕ್ಕಿ ತೊಳೆಯಲಿ ಶ್ರಮ ವ್ಯರ್ಥ ಮಾಡಬೇಕಾದ ಕಷ್ಟವೂ ಇಲ್ಲ. ನೀವು ಒಮ್ಮೆ ಈ ಟ್ರಿಕ್ ಮಾಡಿ ನೋಡಿ, ನಂತರ ಇತರರಿಗೂ ತಿಳಿಸಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now