ಗೃಹಲಕ್ಷ್ಮಿ ಹಣ ಬಂದಿಲ್ವಾ.? ಚಿಂತೆ ಬಿಡಿ.! ಹೊಸದಾಗಿ ಆಪ್ಷನ್ ಬಿಡುಗಡೆಯಾಗಿದೆ, ಹೀಗೆ ಮಾಡಿ ಪಕ್ಕಾ 2000 ಹಣ ಬರುತ್ತೆ.!

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಗ್ಯಾರಂಟಿ (Guarantee Scheme) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalkshmi amount) ಸಹಾಯಧನ ಪಡೆಯಲು 1.10 ಕೋಟಿ ಮಹಿಳೆಯರು ಅರ್ಹರಾಗಿದ್ದಾರೆ. ಸರ್ಕಾರ ಆಗಸ್ಟ್ 30ರಿಂದ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುತ್ತಿದೆ, ಹಂತಹಂತವಾಗಿ ಎಲ್ಲರೂ ಹಣ ಪಡೆದಿದ್ದಾರೆ. ಸದ್ಯದಲ್ಲೇ ಎರಡನೇ ಕಂತಿನ ಹಣವನ್ನು ಸೆಪ್ಟೆಂಬರ್ 26ಕ್ಕೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಇನ್ನು ಸಹ ಕೆಲವು ಮಹಿಳೆಯರು ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಮೊದಲನೇ ಕಂತಿನ ಹಣವನ್ನೇ ಪಡೆಯಲು ಆಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದಕ್ಕೆ ಕಾರಣಗಳನ್ನು ಕೂಡ ತಿಳಿಸಿದೆ. ಇವುಗಳನ್ನು ಸರಿಪಡಿಸಿಕೊಂಡವರು ಮತ್ತು ಎಲ್ಲಾ ಸರಿ ಇದೆ ಆದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎನ್ನುವವರಿಗೆ ಸರ್ಕಾರ ಗೃಹಲಕ್ಷ್ಮಿ ಇ-ಕೆವೈಸಿ ಸರ್ವೀಸಸ್ (Gruhalakshmi e-kyc services) ಎನ್ನುವ ಹೊಸ ಆಪ್ಷನ್ ಬಿಡುಗಡೆ ಮಾಡಿದೆ.

21 ವರ್ಷ ಮೇಲ್ಪಟ್ಟ ಮದುವೆ ಆಗದೆ ಮಹಿಳೆಯರಿಗೆ ಈ ಯೋಜನೆಯಿಂದ ಸಿಗಲಿದೆ ಪ್ರತಿ ತಿಂಗಳು 3000 ರೂಪಾಯಿ.!

ನಿಮ್ಮ ದಾಖಲೆಯೊಂದಿಗೆ ಸರ್ಕಾರ ಸೂಚಿಸಿರುವ ಈ ವಿಧಾನದ ಮೂಲಕ ಅಪ್ಡೇಟ್ ಮಾಡಿಕೊಂಡರೆ ಮುಂದಿನ ತಿಂಗಳಿಂದ ನೀವು ಸಹ ಗೃಹಲಕ್ಷ್ಮಿ ಯೋಜನೆಯ ಈ ಸಹಾಯಧನವನ್ನು ಪಡೆಯಬಹುದು. ಇದನ್ನು ಮಾಡಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕಾಗಬಹುದು ಎನ್ನುವುದರ ಕುರಿತು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಈ ಮಾಹಿತಿಯು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಎಲ್ಲಾ ಮಹಿಳೆಯರಿಗೂ ಕೂಡ ಅನುಕೂಲ ಆಗುತ್ತದೆ. ಹಾಗಾಗಿ ತಪ್ಪದೇ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ.

ಬೇಕಾಗುವ ದಾಖಲೆಗಳು:-

● ನಿಮ್ಮ ಪಡಿತರ ಚೀಟಿ ಸಂಖ್ಯೆ (RD Num.) ಹಾಕುವ ಮೂಲಕ ಗೃಹಲಕ್ಷ್ಮೀ ಇ-ಕೆವೈಸಿ ಸರ್ವೀಸ್ ಪೂರ್ತಿಗೊಳಿಸಬಹುದು.
● ಸೇವಾ ಸಿಂಧು ಅಕೌಂಟ್ ಹೊಂದಿರಬೇಕು ಆ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬೇಕು (Sevasindhu account, User ID And Password).

ಗೃಹಲಕ್ಷ್ಮಿ ಇ-ಕೆವೈಸಿ ಸರ್ವಿಸ್ ಪೂರ್ತಿಗೊಳಿಸುವ ವಿಧಾನ:-

● ಮೊದಲಿಗೆ https://sevasindhugs1.karnataka.gov.in/gl-sp/ ಈ ವೆಬ್ಸೈಟ್ಗೆ ಭೇಟಿ ಕೊಡಬೇಕು.
● ನಿಮ್ಮ ಸೇವಾಸಿಂಧು ಯೂಸರ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ ನೀಡಿರುವ ಕ್ಯಾಪ್ಚಾ ಎಂಟ್ರಿ ಮಾಡಿ ಲಾಗಿನ್ ಆಗಬೇಕು.
● ನಿಮಗೆ ಸೇವಾಸಿಂಧು ಅಫೀಷಿಯಲ್ ಪೇಜಾ ಓಪನ್ ಆಗುತ್ತದೆ. ಎಡಭಾಗದ ಮೆನುವಿನಲ್ಲಿ ಇರುವ ಆಯ್ಕೆಗಳಲ್ಲಿ ಅಪ್ಲೈ ಫಾರ್ ಸರ್ವೀಸಸ್ ಎಂದು ಕ್ಲಿಕ್ ಮಾಡಿ, ನಂತರ ವಿವ್ಯು ಆಲ್ ಅವಾಯ್ಲೇಬಲ್ ಸರ್ವಿಸಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
● ಈಗ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನೀವು ಹೊಸದಾಗಿ ಗೃಹಲಕ್ಷ್ಮಿ ಇ- ಕೆವೈಸಿ ಸರ್ವಿಸ್ ಎನ್ನುವ ಆಯ್ಕೆಯನ್ನು ಕಾಣುತ್ತೇವೆ ಅದನ್ನು ಸೆಲೆಕ್ಟ್ ಮಾಡಿ.

ಈ ಜಿಲ್ಲೆಯವರಿಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.!

● ಆ ಆಪ್ಷನ್ ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಯಾರು ಗೃಹಲಕ್ಷ್ಮಿ ಇ-ಕೆವೈಸಿ ಸರ್ವೀಸ್ ಮಾಡಿಸಬೇಕು ಅವರ ರೇಷನ್ ಕಾರ್ಡ್ ಸಂಖ್ಯೆಯನ್ನು ಕೇಳಲಾಗುತ್ತದೆ, ಅದನ್ನು ನಮೂದಿಸಿ.
● ನಂತರ ವರ್ಡ್ ವೆರಿಫಿಕೇಶನ್ ಇರುತ್ತದೆ, ತಪ್ಪದೇ ಅದನ್ನು ಪೂರ್ತಿ ಗೊಳಿಸಿ ಸಬ್ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಕೊನೆಯಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಕೇಳಲಾಗುತ್ತದೆ, ಫಲಾನುಭವಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಅವರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ಯನ್ನು ಎಂಟ್ರಿ ಮಾಡಿ ಈ ಮೂಲಕ ಪ್ರಕ್ರಿಯೆ ಪೂರ್ತಿ ಗೊಳಿಸಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now