ಈ ನವ ಯುಗದಲ್ಲಿ ಜನರ ಜೀವನ ಶೈಲಿಯು ಅವರ ಆರೋಗ್ಯದಲ್ಲಿ ಹಾಗೂ ದೈಹಿಕವಾಗಿ ಅನೇಕ ಬದಲಾವಣೆಗಳನ್ನು / ಸಮಸ್ಯೆಗಳನ್ನು ತಂದು ಒಡ್ಡುತ್ತಿದೆ. ಅದರಲ್ಲಿಯು ಕೆಲವು ಮಹಿಳೆಯರು / ಪುರುಷರು ತಮ್ಮ ತಲೆ ಕೂದಲಿನ ಬಗ್ಗೆ ಹೆಚ್ಚಾಗಿ ಚಿಂತಿಸುತ್ತಾರೆ. ಅನೇಕರಿಗೆ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಲೆ ಕೂದಲು ಬೆಳ್ಳಗಾಗುವುದು, ಕೂದಲು ಉದುರುವಿಕೆ, ಕೂದಲು ತುಂಡಾಗುವುದು ಹೀಗೆ ಹಲವಾರು ಸಮಸ್ಯೆಗಳು ಇವೆ. ಈ ಸಮಸ್ಯೆಗೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಹೇರ್ ಆಯಿಲ್/ ಹೇರ್ ಡೈಗಳು ದೊರೆಯುತ್ತವೆ. ಬಿಳಿ ಕೂದಲಿಗೆ ಅನೇಕ ಹೇರ್ ಡೈಗಳು ಇದ್ದು ಅವುಗಳನ್ನು ಬಳಸಿದ್ದಲ್ಲಿ ಕೂದಲು ತಾತ್ಕಾಲಿಕವಾಗಿ ಕಪ್ಪಾಗುತ್ತದೆ ಆದರೆ ನಿಧಾನವಾಗಿ ಇದು ಕಣ್ಣಿನ ದೃಷ್ಟಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈಗಳನ್ನು ಬಳಸುವುದರ ಬದಲಾಗಿ ಮನೆಯಲ್ಲೇ ನ್ಯಾಚುರಲ್ ಆಗಿ ಹೇರ್ ಡೈ ತಯಾರಿಸಿ ಬಳಸುವುದು ಒಳ್ಳೆಯದು. ಮನೆಯಲ್ಲಿಯೇ ತಯಾರಿಸುವ ಹೇರ್ ಡೈ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ತಲೆ ಕುದಲು ಬಿಳಿ ಆಗಿರುವುದಕ್ಕೆ ಕಪ್ಪಾಗಿಸಲು ತುಂಬ ಸುಲಭವಾಗಿ ಮನೆಯಲ್ಲಿಯೇ ತಯಾರಿಸುವಂತಹ ಹೇರ್ ಡೈ ಗೆ ಬೇಕಾಗಿರುವ ಸಾಮಾಗ್ರಿಗಳು 1. ನಿಂಬೆಹಣ್ಣು ರಸ – ಇದು ತಲೆಯಲ್ಲಿ ಇರುವ ಒಟ್ಟನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತದೆ. ತಲೆಯಲ್ಲಿ ಒಟ್ಟು ಇದ್ದರೆ ನಿಂಬೆ ಹಣ್ಣಿನ ರಸವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ತಲೆ ತೊಳೆದರೆ ಒಟ್ಟು ನಿವಾರಣೆ ಆಗುತ್ತದೆ. 2. ನೀಲಗಿರಿ ಎಣ್ಣೆ – ಇದು ಸಾಮಾನ್ಯವಾಗಿ ಎಲ್ಲ ಅಂಗಡಿಗಳಲ್ಲಿ ದೊರೆಯುತ್ತದೆ. ನೀಲಗಿರಿ ಎಣ್ಣೆಯನ್ನು ತಲೆಯ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಲು ಸಹಕಾರಿ ಆಗಿದೆ. 3. ಕಾಫಿ ಪುಡಿ – ಇನ್ಸ್ ಟ್ಯಾಂಟ್ ಕಾಫಿ ಪುಡಿಯನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ. 4. ಹೆನ ಪುಡಿ ಅಥವಾ ಮದರಂಗಿ ಪುಡಿ – ಆರ್ಗ್ಯಾನಿಕ್ ಹೆನ ಪುಡಿ /ಮೆಹಂದಿ ಪುಡಿ ನೆತ್ತಿಗೆ ಉತ್ತಮವಾಗಿದ್ದು, ತಲೆಹೊಟ್ಟು, ತುರಿಕೆ ಮುಂತಾದ ಯಾವುದೇ ನೆತ್ತಿಯ ಸಮಸ್ಯೆಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಆಂಟಿ ಮೈಕ್ರೊಬಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳು ನೆತ್ತಿಯ ವಿವಿಧ ಸಮಸ್ಯೆಗಳ ವಿರುದ್ಧ ಹೋರಾಡುತ್ತವೆ.
ನಮ್ಮ ನೆತ್ತಿಯ ಮೇಲೆ pH ಮಟ್ಟವನ್ನು ಸಮತೋಲನ ಗೊಳಿಸುವ ಮೂಲಕ ಮತ್ತು ರಂಧ್ರಗಳನ್ನು ಮುಚ್ಚುವ ಮೂಲಕ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಮೆಹೆಂದಿ ನಮ್ಮ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿದ್ದು, ಅದರಲ್ಲಿರುವ ಹೈಡ್ರೇಟಿಂಗ್ ಗುಣಲಕ್ಷಣಗಳು ನಮ್ಮ ಕೂದಲನ್ನು ಹೆಚ್ಚು ಕಾಲ ಮೃದುವಾಗಿ ಇರಿಸುತ್ತದೆ.ಕೂದಲು ತೆಳುವಾಗುತ್ತಿರುವವರು ಗೋರಂಟಿ ಬಳಸಬೇಕು ಏಕೆಂದರೆ ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೆಹೆಂದಿ ನಮ್ಮ ನೆತ್ತಿಯ ಮೇಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ, ಕಿರುಚೀಲಗಳನ್ನು ಮುಚ್ಚುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. 5. ಇಂಡಿಗೋ ಪುಡಿ- ಇಂಡಿಗೋ ಪೌಡರ್ ನೆತ್ತಿಯಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ತಲೆಯ ಮೇಲಿರುವ ಕೊಳೆ ಮತ್ತು ಧೂಳನ್ನು ಹೋಗಲಾಡಿಸುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ. ತಲೆಹೊಟ್ಟು ತಡೆಯಲು ಒಣ, ತುರಿಕೆ ಇರುವ ನೆತ್ತಿಗೆ ಇಂಡಿಗೊ ಪುಡಿ ಬಹಳ ಉಪಯೋಗಕಾರಿ.
ಆರ್ಗ್ಯಾನಿಕ್ ಹೇರ್ ಡೈ ತಯಾರಿಸುವ ವಿಧಾನ:
 ಒಂದು ಬೌಲ್ ನಲ್ಲಿ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಅದಕ್ಕೆ 5-6 ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ, ನಂತರ ಇನ್ಸ್ ಟ್ಯಾಂಟ್ ಕಾಫಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅದಕ್ಕೆ ಎರಡು ಸ್ಪೂನ್ ಹೆನ ಪುಡಿ ಮತ್ತು ಎರಡು ಸ್ಪೂನ್ ಇಂಡಿಗೋ ಪುಡಿಯನ್ನು ಹಾಕಿ ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಮಿಕ್ಸ್ ಮಾಡಿ ತಯಾರಿಸಿದ ಪೇಸ್ಟ್ ಅನ್ನು ಅರ್ಧ ಗಂಟೆಗಳ ಕಾಲ ಹಾಗೆಯೇ ಇಡಬೇಕು ನಂತರ ತಲೆ ಬುಡದಿಂದ ಕೂದಲಿನ ತುದಿಯ ವರೆಗೆ ಹಚ್ಚಿ ಕನಿಷ್ಠ ಒಂದು ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಹೆಚ್ಚು ಕಾಲ ಇದ್ದರು ಒಳ್ಳೆಯ ಬಣ್ಣ ಬರುತ್ತದೆ. ನಂತರ ತಣ್ಣೀರು ಅಥವಾ ಬೆಚ್ಚಗಿನ ನೀರಿನಿಂದ ತಲೆ ತೊಳೆಯಬೇಕು. ಹೀಗೆ ಈ ಪೇಸ್ಟ್ ಅನ್ನು ತಯಾರಿಸಿ ವಾರಕ್ಕೊಮ್ಮೆ ಅಥವಾ 15 ದಿನಗಳಿಗೆ ಒಮ್ಮೆ ಈ ರೀತಿ ಹಚ್ಚುವುದರಿಂದ ಕೂದಲು ಉದುರುವಿಕೆ, ತಲೆಯಲ್ಲಿ ಒಟ್ಟು, ಕೂದಲು ಬಿಳಿ ಆಗುವುದು, ತಲೆಯಲ್ಲಿ ತುರಿಕೆ, ಮೊಡವೆಗಳ ಸಮಸ್ಯೆಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಇಲ್ಲಿ ತಿಳಿಸಿರುವಂತಹ ಆರ್ಗ್ಯಾನಿಕ್ ಹೇರ್ ಡೈಯನ್ನು ಮನೆಯಲ್ಲಿಯೇ ತಯಾರಿಸಿ 15 ದಿನಗಳಿಗೆ ಒಮ್ಮೆ ಉಪಯೋಗಿಸಿ ನಿಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳಿ. ಈ ಮನೆಮದ್ದಿನಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ಇದನ್ನು ಮಹಿಳೆಯರು ಪುರುಷರು ಹಾಗೂ ಯುವಕ ಯುವತಿಯರು ಕೂಡ ಬಳಸಬಹುದು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ
