ಪಿಂಚಣಿ (Pension) ಎನ್ನುವುದು ವಯಸ್ಸಾದವರ (Senior Citizens) ಪಾಲಿಗೆ ಒಂದು ಅದ್ಭುತವಾದ ಅವಕಾಶ ಎನ್ನಬಹುದು. ಯಾಕೆಂದರೆ ದುಡಿಯುವ ವಯಸ್ಸಿನಲ್ಲಿಯೇ ನಮ್ಮಲ್ಲಿ ಆ ಶಕ್ತಿ ಇದ್ದಾಗಲೇ ನಾವು ಗಳಿಸಿದ ಹಣವನ್ನು ನಮ್ಮ ವೃದ್ಯಾಪ್ಯ ಜೀವನಕ್ಕಾಗಿ ಉಳಿಸುವುದರಿಂದ ಸಂಧ್ಯಾಕಾಲ ಸುಗಮವಾಗಿ ಇರುತ್ತದೆ.
ವಯಸ್ಸಾದ ಬಳಿಕವೂ ಕೂಡ ಜೀವನದಲ್ಲಿ ಅನೇಕ ಖರ್ಚುಗಳು ಇರುತ್ತವೆ ವೈದ್ಯಕೀಯ ಖರ್ಚು ವೆಚ್ಚ, ದೈನಂದಿಕ ಜೀವನ ನಿರ್ವಹಣೆ ಜೊತೆಗೆ ನಿಮ್ಮ ಹವ್ಯಾಸಿಗಳಿಗೆ ಹೀಗೆ ಪಟ್ಟಿ ಬೆಳೆಯುತ್ತದೆ. ಇದಕ್ಕೆ ಮಕ್ಕಳ ಬಳಿ ಅಥವಾ ಇನ್ನೊಬ್ಬರ ಬಳಿ ಕೈ ಚಾಚುವುದಕ್ಕೆ ಹಿಂ’ಸೆ ಎನಿಸುತ್ತದೆ. ಆದ್ದರಿಂದ ದುಡಿಯುವ ವಯಸ್ಸಿನಲ್ಲಿ ನಾವು ಇದರ ಬಗ್ಗೆ ಚಿಂತೆ ಮಾಡಿ ಒಂದು ಒಳ್ಳೆಯ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.
ಈಗ ಸರ್ಕಾರವೂ ಕೂಡ ಹಲವಾರು ಪೆನ್ಷನ್ ಯೋಜನೆಗಳನ್ನು ಜಾರಿಗೆ ತಂದಿದೆ ಸರ್ಕಾರೇತರವಾಗಿ ಹಲವಾರು ಹಣಕಾಸು ಸಂಸ್ಥೆಗಳು ಕೂಡ ಈ ಅವಕಾಶ ನೀಡಿದೆ. ಅವುಗಳನ್ನು ಆರಿಸಿಕೊಂಡು ನೀವು ನಿಮ್ಮ ನಿವೃತ್ತಿ ಬದುಕಿಗಾಗಿ ಹಣ ಹೂಡಿಕೆ ಮಾಡಬಹುದು ಈ ರೀತಿ ಇರುವ ಪೆನ್ಷನ್ ಯೋಜನೆಗಳ ಕುರಿತು ಕೆಲವು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಎಲ್ಲಾ ಪೆನ್ಷನ್ ಯೋಜನೆಗಳು ಕೂಡ 60 ವರ್ಷ ತುಂಬಿದ ಬಳಿಕ ನಿಮಗೆ ಮಾಸಿಕವಾಗಿ ಆದಾಯ ತರುವ ಯೋಜನೆಗಳಾಗಿರುತ್ತವೆ.
● ನೀವು 60 ವರ್ಷ ತುಂಬುವವರೆಗೂ ಕೂಡ ಪ್ರತಿ ತಿಂಗಳು ಈ ಪಿಂಚಣಿ ಯೋಜನೆಗಳಿಗೆ ಹಣ ತುಂಬಿಸಬೇಕಾಗುತ್ತದೆ.
● ಕೆಲವು ಯೋಜನೆಗಳಲ್ಲಿ ಪಿಂಚಣಿ ಯೋಜನೆ ಖರೀಸಲು ನಿಗದಿ ಪಡಿಸಿರುವ ವಯಸ್ಸಿನ ಮಿತಿಯಲ್ಲಿ ವ್ಯತ್ಯಾಸವು ಇರುತ್ತದೆ.
ಜೀವಜಲ ಯೋಜನೆ, ಉಚಿತ ಕೊಳವೆಬಾವಿ ಸೌಲಭ್ಯಕ್ಕೆ ಸಣ್ಣ ರೈತರಿಗೆ 4.75 ಲಕ್ಷ ಸಹಾಯಧನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
● ನೀವು ಕಡಿಮೆ ವಯಸ್ಸಿನಲ್ಲಿ ಈ ಯೋಜನೆಗಳನ್ನು ಖರೀದಿಸಿದರೆ ನೀವು ಪಾವತಿಸಬೇಕಾದ ಪ್ರೀಮಿಯಂ ಮೊತ್ತವು ಕೂಡ ಕಡಿಮೆ ಇರುತ್ತದೆ. ನೀವು ವಯಸ್ಸಾದಂತೆ ಈ ಯೋಜನೆಗಳ ಕಡೆ ಮನಸ್ಸು ಮಾಡಿದರೆ ನೀವು ದೊಡ್ಡ ಮೊತ್ತದ ಹಣವನ್ನು ಉಳಿಸಿದರೆ ಮಾತ್ರ ನಿಮ್ಮ ಖರ್ಚಿಗೆ ಬೇಕಾದಷ್ಟು ಹಣ ಸಿಗುವುದು. ಒಬ್ಬ ವ್ಯಕ್ತಿಯ ವಯಸ್ಸು ಸುಮಾರು 57 ವರ್ಷವಾಗಿದ್ದರೆ, ಅವನು ಕೇವಲ 3 ವರ್ಷಗಳವರೆಗೆ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತಾನೆ.
● ಇದನ್ನು ಒಂದು ಉದಾಹರಣೆಯೊಂದಿಗೆ ಹೇಳುವುದಾದರೆ,
ತಿಂಗಳಿಗೆ 25,000 ರೂಪಾಯಿಗಳ ಪಿಂಚಣಿ ಪಡೆಯಬೇಕಾದರೆ, 60 ನೇ ವಯಸ್ಸಿನಲ್ಲಿ ಅಂದರೆ ಮೆಚ್ಯೂರಿಟಿ ಅವಧಿಯಲ್ಲಿ NPS ಸೇರಿದಂತೆ ಇತರ ಯೋಜನೆಗಳಲ್ಲಿ ಅಂದಾಜು 53 ರಿಂದ 54 ಲಕ್ಷ ರೂ. ಹಣವನ್ನು ವ್ಯಕ್ತಿ ಹೂಡಿಕೆ ಮಾಡಿರಬೇಕು. ಅಂದರೆ ವರ್ಷಕ್ಕೆ 18 ಲಕ್ಷ ಅಥವಾ ತಿಂಗಳಿಗೆ 1.50 ಲಕ್ಷ ಹೂಡಿಕೆ ಮಾಡಬೇಕು.
ಕೇವಲ 190 ರೂಪಾಯಿ ಕಟ್ಟಿ LIC ನಲ್ಲಿ ಖಾತೆ ತೆರೆಯಿರಿ 40 ಲಕ್ಷ ಸಿಗುತ್ತೆ.!
● ಈ ರೀತಿ ಹೂಡಿಕೆ ಹಣವನ್ನು ನೀವು ವಾರ್ಷಿಕ, ಅರೆ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕವಾಗಿ ಪಾವತಿಸುವ ಆಯ್ಕೆ ಮಾಡಬಹುದು.
● ಪಿಂಚಣಿ ಯೋಜನೆಗಳಲ್ಲಿ ನಿಮ್ಮ ಹೂಡಿಕೆ ಮೊತ್ತದ ಆಧಾರದ ಮೇಲೆ ಅದರ ಬಡ್ಡಿದರವು ಪ್ರತಿ ತಿಂಗಳು ನಿಮಗೆ ಪೆನ್ಷನ್ ಆಗಿ ಸಿಗುತ್ತದೆ. ನೀವು ಮೃ’ತಪಟ್ಟ ನಂತರ ಕೆಲವು ಯೋಜನೆಗಳಲ್ಲಿ ಸಂಗಾತಿಗೆ ಪೆನ್ಷನ್ ಸಿಗುತ್ತದೆ, ಅವರ ನಂತರ ನೀವು ನಾಮಿನಿ ಮಾಡಿದ ವ್ಯಕ್ತಿಗಳಿಗೆ ನಿಮ್ಮ ಹೂಡಿಕೆ ಹಣ ಹೋಗುತ್ತದೆ.
ನಮ್ಮ ದೇಶದಲ್ಲಿರುವ ಪ್ರಮುಖ ಹಿರಿಯ ನಾಗರಿಕರ ಯೋಜನೆಗಳು:-
● ಅಟಲ್ ಪಿಂಚಣಿ ಯೋಜನೆ
● ರಾಷ್ಟ್ರೀಯ ಪಿಂಚಣಿ ಯೋಜನೆ
● LIC ಪ್ರಧಾನ ಮಂತ್ರಿ ವಯೋ ವಂದನಾ ಯೋಜನೆ
● ವರಿಷ್ಠ ಪಿಂಚಣಿ ಭೀಮಾ ಯೋಜನೆ
● ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ
● ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ಯೋಜನೆ.