ನವರಸ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಕನ್ನಡದ ಹೆಮ್ಮೆಯ ಹಾಸ್ಯ ದಿಗ್ಗಜ ಜಗ್ಗೇಶ್ ಅವರು ಇಡೀ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಗುರುತಿಸಿಕೊಂಡಿರುವವರು. ಇವರ ಪತ್ನಿಯಾದ ಪರಿಮಳ ಜಗ್ಗೇಶ್ ಅವರು ಕೂಡ ತಮ್ಮದೇ ಆದ ಕ್ಷೇತ್ರವನ್ನು ಆಯ್ದುಕೊಂಡು ಸಾಧಕಿ ಎನಿಸಿದ್ದಾರೆ.
ಡಯಟ್ ಮತ್ತು ನ್ಯೂಟ್ರಿಷನ್ ಬಗ್ಗೆ ಅಪಾರ ಜ್ಞಾನವುಳ್ಳ ಇವರು ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬೊಜ್ಜು ಸುಲಭವಾಗಿ ಕರಗಿಸುವುದನ್ನು ಮಾರ್ಕೆಟಿಂಗ್ ಮಾಡಿಕೊಂಡು ಗ್ರಾಹಕರನ್ನು ಯಾಮರಿಸುತ್ತಿರುವ ಪ್ರಾಡೆಕ್ಟ್ ಗಳ ಬಗ್ಗೆ ತಮ್ಮ ಅನುಭವದ ಸಾರದಲ್ಲಿ ಕೆಲ ಪ್ರಮುಖ ಅಂಶಗಳನ್ನು ಖಾಸಗಿ ಯೂಟ್ಯೂಬ್ ವಾಹನಿಗೆ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಆಡಳಿತ ಮಂಡಳಿ ನೇಮಕಾತಿ, SSLC ಆಗಿದ್ದರೂ ಸಾಕು ಕೂಡಲೇ ಅರ್ಜಿ ಸಲ್ಲಿಸಿ.!
ಆ ಸಂದರ್ಶನದಲ್ಲಿ ಅಪರಾಡಿದ ಪ್ರತಿಯೊಂದು ಮಾತು ಅರ್ಥಪೂರ್ಣವಾಗಿತ್ತು ಅದರ ವಿವರ ಇಲ್ಲಿದೆ ನೋಡಿ. ಹಲವು ವರ್ಷಗಳಿಂದ ಹೆಸರಾಂತ ಡಯಟಿಷಿಯನ್ ಮತ್ತು ನ್ಯೂಟ್ರಿಷನ್ ಆಗಿರುವ ಪರಿಮಳ ಜಗ್ಗೇಶ್ ಅವರು ಹೊಟ್ಟೆ ಬೊಜ್ಜು ಕರಗಿಸುವುದರ ಬಗ್ಗೆ ಏನು ಹೇಳುತ್ತಾರೆ ಎಂದರೆ ಯಾರಾದರೂ ಈ ಪ್ರಾಡಕ್ಟ್ ಕೊಂಡುಕೊಳ್ಳಿ.
ಒಂದೇ ತಿಂಗಳಲ್ಲಿ ಹೊಟ್ಟೆ ಬೊಜ್ಜು ಕರಗುತ್ತದೆ ಅಥವಾ ಈ ರೀತಿ ಮಾಡಿ ಬೊಜ್ಜು ಕರಗುತ್ತದೆ ಎಂದು ಗೈಡ್ ಮಾಡಿದರೆ ಖಂಡಿತ ಅದನ್ನು ನಂಬಬೇಡಿ. ಹೊಟ್ಟೆ ಭಾಗ ಒಂದನ್ನೇ ಕಡಿಮೆ ಮಾಡುವಂತ ಯಾವುದೇ ಎಕ್ಸರ್ಸೈಜ್ ಅಥವಾ ಪ್ರಾಡಕ್ಟ್ ಇಲ್ಲವೇ ಇಲ್ಲ, ಅದು ದೇಹದ ಒಟ್ಟಾರೆ ತೂಕದ ಮೇಲೆ ಅವಲಂಬಿತವಾಗಿರುತ್ತದೆ.
ನೀವು ದೇಹದ ತೂಕ ಕಳೆದುಕೊಳ್ಳಲು ಪ್ರಯತ್ನ ಪಟ್ಟಾಗ ಮಾತ್ರ ಹೊಟ್ಟೆ ಕೂಡ ಸ್ಟ್ರೆಚ್ ಆಗಿರುವುದು ಹಿಂದಕ್ಕೆ ಹೋಗಿ ಸರಿಯಾದ ಶೇಪ್ ಗೆ ಬರುತ್ತದೆ. ಅದಕ್ಕಾಗಿ ಪ್ರಪಂಚದಲ್ಲಿ ವಿಶೇಷವಾದ ಯಾವುದೇ ವಸ್ತು ಇಲ್ಲ ಇರುವುದನ್ನೇ ಸರಿಯಾಗಿ ಬಳಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ದೇಹದ ತೂಕ ಕಳೆದುಕೊಳ್ಳುವ ಸಲುವಾಗಿ ಯೋಗ, ವ್ಯಾಯಾಮ ಅಥವಾ ಜಿಮ್ ಯಾವುದನ್ನೇ ಮಾಡಿದರೂ ಅದನ್ನು ಸಂತೋಷವಾಗಿ ಮಾಡಬೇಕು. ನಿಮ್ಮ ಮನಪೂರ್ವಕವಾಗಿ ನಿಮಗೆ ಯಾವುದು ಇಷ್ಟ ಅದನ್ನು ಮಾಡಿದಾಗ ಅದು ನೆರವೇರುತ್ತದೆ ನೀವು ಇವುಗಳ ಬದಲು ನಿಮಗೆ ಡ್ಯಾನ್ಸ್ ಇಷ್ಟ ಇದ್ದರೆ ಅದನ್ನೇ ಮಾಡಬಹುದು, ಒಟ್ಟಿನಲ್ಲಿ ಫಿಸಿಕಲ್ ಆಕ್ಟಿವಿಟಿ ಇರಬೇಕು.
ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ಹೊಸ ಹುದ್ದೆಗಳ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ಡಯಟ್ ಎಂದು ಆಹಾರವನ್ನೇ ಬಿಟ್ಟುಬಿಡುವುದರಿಂದ ಎನರ್ಜಿ ಕಳೆದುಕೊಳ್ಳುತ್ತೇವೆ ಮತ್ತು ಸುಸ್ತಾಗಿ ದಿನಪೂರ್ತಿ ಮಲಗಿರುತ್ತೇವೆ ಈ ರೀತಿ ಮಾಡುವುದು ತಪ್ಪು. ನಾವು ಆಕ್ಟಿವ್ ಆಗಿರಬೇಕು ದಿನ ಪೂರ್ತಿ ಎಷ್ಟು ಆಕ್ಟಿವ್ ಆಗಿರುತ್ತವೆ ಅಷ್ಟೇ ಆರೋಗ್ಯ ಬರುತ್ತದೆ. ಜೊತೆಗೆ ಪಾಸಿಟಿವ್ ಆಗಿರಬೇಕು ಯಾವಾಗಲೂ ನಗುನಗುತ್ತಾ ಏನೇ ಬಂದರೂ ಎದುರಿಸುತ್ತೇನೆ ಎಂದು ಧೈರ್ಯವಾಗಿರಬೇಕು ಜೊತೆಗೆ ಸುತ್ತಮುತ್ತಲು ಸಕಾರಾತ್ಮಕವಾದ ವಾತಾವರಣವನ್ನು ಇಟ್ಟುಕೊಂಡಿರಬೇಕು
ಊಟ ಮಾಡುವ ವಿಧಾನ ಅತಿ ಮುಖ್ಯವಾದದ್ದು, ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಯುತ್ತ ಆಹಾರ ಇರಬೇಕು. ಸೊಪ್ಪು, ತರಕಾರಿ, ಮೊಳಕೆ ಕಾಳುಗಳು, ಹಣ್ಣುಗಳು ಎಲ್ಲವೂ ಕೂಡ ನಮ್ಮ ಆಹಾರದ ಭಾಗವಾಗಿರಬೇಕು. ನಮ್ಮ ದೇಹಕ್ಕೆ ಎನರ್ಜಿ ಬರುವುದೇ ಊಟದಿಂದ. ಸರಿಯಾದ ರೀತಿಯ ಆಹಾರ ಸೇವಿಸಿ ಲವಲವಿಕೆಯಿಂದ ಇರಬೇಕು.
ಆದಷ್ಟು ಜಂಕ್ ಫುಡ್ ಗಳನ್ನು ಅವಾಯ್ಡ್ ಮಾಡಬೇಕು ಗಾಢವಾದ ನಿದ್ರೆಯನ್ನು ಮಾಡಬೇಕು, ಈ ರೀತಿ ನಿದ್ದೆ ಮಾಡಬೇಕು ಅಂದರೆ ಮಲಗುವ 3 ತಾಸು ಮೊದಲು ಊಟ ಆಗಿರಬೇಕು, ಎರಡು ಗಂಟೆ ಮೊದಲು ಒಂದೆರಡು ಲೋಟ ನೀರು ಕುಡಿಬೇಕು, ಹಾಗೂ ಒಂದು ಗಂಟೆ ಮೊದಲು ಟಿವಿ ಮೊಬೈಲ್ ಗಳಿಂದ ದೂರ ಇರಬೇಕು ಇದೇ ಆರೋಗ್ಯವಾಗಿರುವ ವ್ಯಕ್ತಿಯ ಜೀವನದ ಗುಟ್ಟು ಎಂದು ತಿಳಿಸಿದ್ದಾರೆ. ಇವುಗಳನ್ನು ರೆಗುಲರ್ ಆಗಿ ಪಾಲಿಸಿದರೆ ತೂಕ ತಾನೇ ಕಡಿಮೆಯಾಗುತ್ತದೆ ಎಂದಿದ್ದಾರೆ.