ಪ್ರತಿಯೊಬ್ಬರು ಕೂಡ BP (Blood Pressure) ಇದನ್ನು ಕೇಳಿರುತ್ತೇವೆ. BP ಲೆವೆಲ್ ಜಾಸ್ತಿಯಾಗಿದೆ, ಲೋ BP ಯಾಗಿದೆ ಈ ರೀತಿ ಮಾತನಾಡುವುದನ್ನು ಕೇಳಿರುತ್ತೇವೆ. ಅಷ್ಟಕ್ಕೂ ಈ BP ಎಂದರೇನು? BP ಪಾಯಿಂಟ್ ಎಷ್ಟಿದ್ದರೆ ಸರಿ? ಇದು ಏನು ಹೇಳುತ್ತದೆ ಎನ್ನುವುದರ ಬಗ್ಗೆ ನಮ್ಮ ನಿಮ್ಮಲ್ಲಿ ಎಷ್ಟು ಜನರಿಗೆ ಸರಿಯಾದ ಮಾಹಿತಿ ಗೊತ್ತಿದೆ.
ಬಹಳ ಜನರು ಇದರ ಬಗ್ಗೆ ಆಳವಾಗಿ ಕಳೆದುಕೊಳ್ಳುವ ಪ್ರಯತ್ನ ನಾವು ಮಾಡಿರುವುದಿಲ್ಲ. ಹಾಗಾಗಿ ಇಂದು ಈ ಅಂಕಣದಲ್ಲಿ ಆರೋಗ್ಯಕ್ಕೆ ಬಹಳ ಮುಖ್ಯವಾದ ಈ ಒಂದು ಉಪಯುಕ್ತ ಮಾಹಿತಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ತಪ್ಪದೇ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನಮ್ಮ ಹೃದಯದಲ್ಲಿ ಎರಡು ರೀತಿಯ ಕೆಲಸ ನಡೆಯುತ್ತದೆ. ಹೃದಯಕ್ಕೆ ರಕ್ತಸಂಚಾರವಾಗುತ್ತದೆ ಮತ್ತು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತ ಪಂಪ್ ಆಗುತ್ತದೆ. ಈ ಸಮಯದಲ್ಲಿ ಹೃದಯ ಹಿಗ್ಗುವುದು ಹಾಗೂ ಕುಗ್ಗುವುದು ಆಗುತ್ತದೆ. ಇಂತಹ ಸಮಯದಲ್ಲಿ ನಾವು ಲಬ್ ಡಬ್ ಎಂದು ಶಬ್ದವಾಗುವುದನ್ನು ಕೂಡ ಕೇಳುತ್ತೇವೆ.
ಹೃದಯವು ಹಿಗ್ಗಿದಾಗ ರಕ್ತನಾಳಗಳಿಗೆ ಹೃದಯದಿಂದ ರಕ್ತ ಸಪ್ಲೈ ಆಗುವುದನ್ನು ಸಿಸ್ಟೋಲಿಕ್ (Systolic) ಎನ್ನುತ್ತಾರೆ, ಮತ್ತೆ ಅದು ಮೊದಲನೇ ಶೇಪ್ ಗೆ ಬಂದಾಗ ಡಯೋಸ್ಟೋಲಿಕ್ (Diastolic) ಎಂದು ಕರೆಯುತ್ತಾರೆ. ಇದನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ ಇದೇ ನಿಮ್ಮ BP ಲೆವಲ್ ನ್ನು ಮೆಝರ್ ಮಾಡುವುದು.
ನೀವು ನಿಮ್ಮ ಮನೆಯಲ್ಲಿರುವ ಉಪಕರಣದ ಸಹಾಯದಿಂದ ಅಥವಾ ನೀವು ವೈದ್ಯರ ಬಳಿಗೆ ತಪಾಸಣೆಗೆ ಹೋದಾಗ ಅವರು ನಿಮ್ಮನ್ನು ಚೆಕ್ ಮಾಡಿ 120/80 135/90 110/70 ಹೀಗೆ ರೀಡಿಂಗ್ ಗಳನ್ನು ಬರೆದು ಕೊಟ್ಟಿರುತ್ತಾರೆ. ಇದು ಮೇಲೆ ತಿಳಿಸಿದಂತೆ ಸಿಸ್ಟೋಲಿಕ್ ಹಾಗೂ ಡಯೋಸ್ಟೋಲಿಕ್ ಗೆ ಸಂಬಂಧಿಸಿದ್ದಾಗಿದೆ. ಸಿಸ್ಟೋಲಿಕ್ ರೀಡಿಂಗ್ 120mm Hg ಹಾಗೂ ಡಯೋಸ್ಟೋಲಿಕ್ 80mm Hg ಇದು ನಾರ್ಮಲ್ ಆಗಿರುತ್ತದೆ.
ಹೃದಯ ಹಿಗ್ಗಿದಾಗ ಹಾಗೂ ಕುಗ್ಗಿದಾಗ ಇಷ್ಟಿದ್ದರೆ ಅದು ನಾರ್ಮಲ್ ಇದು ವ್ಯತ್ಯಾಸವಾದರೆ ಅದರ ಆಧಾರದ ಮೇಲೆ ಹೈ ಹಾಗು ಲೋ ಆಗಿದೆ ಎಂದು ಹೇಳಲಾಗುತ್ತದೆ. ಸಿಸ್ಟೋಲಿಕ್ 120mm Hg ಗಿಂತ ಕಡಿಮೆ ಹಾಗೂ ಡಯೋಸ್ಟೋಲಿಕ್ 80mm Hgಗಿಂತ ಕಡಿಮೆ ಇದ್ದಲ್ಲಿ ಅದು ನಾರ್ಮಲ್.
ಸಿಸ್ಟೋಲಿಕ್ 120-129mm Hg ಡಯೋಸ್ಟೋಲಿಕ್ 80mm Hg ಗಿಂತ ಕಡಿಮೆ ಇದ್ದಲ್ಲಿ ಅದು ಪ್ರಿ ಹೈಪರ್ ಟೆನ್ಶನ್. ಸಿಸ್ಟೋಲಿಕ್ 130-139mm Hg ಡಯೋಸ್ಟೋಲಿಕ್ 80-89mm Hg ಇದ್ದರೆ ಅದು ಹೈಪರ್ ಪೆನ್ಷನ್ ಸ್ಟೇಜ್ 1, ಸಿಸ್ಟೋಲಿಕ್ 140mm Hgಗಿಂತ ಹೆಚ್ಚು ಡಯೋಸ್ಟೋಲಿಕ್ 90mm Hg ಗಿಂತ ಹೆಚ್ಚಿದ್ದರೆ ಹೈಪರ್ ಟೆನ್ಶನ್ ಸ್ಟೇಜ್ 2, ಸಿಸ್ಟೋಲಿಕ್ 180mm Hg ಗಿಂತ ಹೆಚ್ಚು, ಡಯೋಸ್ಟೋಲಿಕ್ 120mm Hg ಕಿಂತ ಹೆಚ್ಚು ಇದ್ದರೆ ಹೈಪರ್ಟೆನ್ಸೀವ್ ಕ್ರಿಸಿಸ್ ಎಂದು ಹೇಳಲಾಗುತ್ತದೆ.
ಈ BP ಪಾಯಿಂಟ್ ನಾರ್ಮಲ್ ಗಿಂತ ಹೆಚ್ಚಾದಷ್ಟು ದೇಹದ ಆರೋಗ್ಯಕ್ಕೆ ಹಾನಿಕರ ಅದರಲ್ಲೂ ಹೈಪರ್ ಟೆನ್ಶನ್ ಬಹಳ ಎಚ್ಚರಿಕೆಯಿಂದ ಇದ್ದು ಉತ್ತಮವಾದ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದ ಇದನ್ನು ಸರಿಪಡಿಸಿಕೊಳ್ಳಬೇಕು. ಯೋಗ, ಧ್ಯಾನ, ವ್ಯಾಯಾಮ ಇವುಗಳನ್ನು ರೂಢಿಸಿಕೊಂಡು ನಾರ್ಮಲ್ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಕಿಡ್ನಿ ಫೇಲ್ಯೂರ್, ಸ್ಟ್ರೋಕ್ ಹೃದಯಘಾತ ಇನ್ನೂ ಮುಂತಾದ ಸಮಸ್ಯೆಗಳಿಗೆ ಇದು ಎಡೆ ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!