ಗರ್ಭಕೋಶ ತೆಗೆಸುವುದರಿಂದ ಏನೆಲ್ಲಾ ಅಪಾಯಗಳು ಆಗುತ್ತದೆ ಗೊತ್ತಾ.? ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ವಿಷಯ ಇದು.!

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆಗಳು ಅತಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆಲ್ಲ ಕಾರಣ ಸಾಕಷ್ಟಿದೆ. ಈ ಸಮಸ್ಯೆಯನ್ನು ಗುಣ ಮಾಡಿಕೊಳ್ಳುವುದರ ಬದಲು ಮಕ್ಕಳಾಗಿದೆ ಇನ್ನು ಗರ್ಭಕೋಶದ ಅವಶ್ಯಕತೆ ಇಲ್ಲ ಎನ್ನುವ ರೀತಿ ಅದನ್ನು ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ತೆಗೆಸಿಬಿಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಹೆಣ್ಣು ಮಕ್ಕಳು ಈ ತಪ್ಪು ಮಾಡಬಾರದು ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now

ಯಾಕೆಂದರೆ ಹೆಣ್ಣು ಮಕ್ಕಳ ಋತುಚಕ್ರ ವ್ಯತ್ಯಾಸವಾದಾಗಲೇ ಅವರಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮೂಡ್ ಸ್ವಿಂಗ್ ಆಗುತ್ತದೆ, ದೇಹದ ತೂಕ ಹೆಚ್ಚಾಗುತ್ತದೆ ಇತ್ಯಾದಿ ಸಮಸ್ಯೆಗಳು ಬರುತ್ತವೆ. ಅಂತಹದರಲ್ಲಿ ಗರ್ಭಕೋಶವನ್ನು ತೆಗೆಸುವುದರಿಂದ ಅದರ ಪರಿಣಾಮ ಇನ್ನು ದುಪ್ಪಟ್ಟಾಗಿರುತ್ತದೆ ಎಂದು ಹೇಳುತ್ತದೆ ಆಯುರ್ವೇದ.

ಗರ್ಭಕೋಶವನ್ನು ತೆಗೆಸುವ ಮಹಿಳೆಯರಲ್ಲಿ ಮನೋರೋಗಗಳು ಹೆಚ್ಚಾಗಿರುತ್ತದೆ, ಇದರ ಜೊತೆಗೆ BP, ಶುಗರ್ ಥೈರಾಯ್ಡ್, ಅರ್ಥೈಟಿಸ್ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ನೀವು ಗೊತ್ತೋ ಗೊತ್ತಿಲ್ಲದೆಯೋ ಈ ತಪ್ಪು ಮಾಡಿ ಈಗ ಪರಿತಪಿಸುತ್ತಿದ್ದರೆ ಗರ್ಭಕೋಶ ತೆಗೆಸಿದ ನಂತರದ ಆಗಬಹುದಾದ ಸೈಡ್ ಎಫೆಕ್ಟ್ ಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಆಯುರ್ವೇದದಲ್ಲಿ ಕೆಲ ಟಿಪ್ ಗಳನ್ನು ತಿಳಿಸಲಾಗಿದೆ.

ಈ ಮೇಲೆ ತಿಳಿಸಿದಂತೆ ಗರ್ಭಕೋಶ ತೆಗೆಸಿದ ಬಳಿಕ ಮಹಿಳೆಯರು ಮಾನಸಿಕವಾಗಿ ಬಹಳ ಗೊಂದಲಕ್ಕೆ ಒಳಗಾಗಿರುವುದರಿಂದ ಕಸಿವಿಸಿ ಅನುಭವಿಸುವುದರಿಂದ ಇದನ್ನೆಲ್ಲ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅವರು ಉತ್ತಮವಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರವಾದ ಜೀವನ ಶೈಲಿ ರೂಡಿಸಿಕೊಳ್ಳಲೇಬೇಕು.

ಯೋಗ, ಪ್ರಾಣಾಯಾಮ, ಧ್ಯಾನ, ವ್ಯಾಯಾಮ ಇತ್ಯಾದಿಗಳ ಅಭ್ಯಾಸ ತಪ್ಪದೆ ಮಾಡಿಕೊಳ್ಳಬೇಕು. ಅದರಲ್ಲೂ ಪ್ರಾಣಯಾಮದಲ್ಲಿ ಕೆಲವು ಮುದ್ರೆಗಳು ಈ ರೀತಿ ಗರ್ಭಕೋಶ ತೆಗೆಸಿದ ಮಹಿಳೆಯರ ದೇಹವು ಬ್ಯಾಲೆನ್ಸ್ ಆಗಿರಲು ಅಥವಾ ಗರ್ಭಕೋಶದ ಸಮಸ್ಯೆ ಇರುವ ಮಹಿಳೆಯರಿಗೂ ಕೂಡ ಅವರ ಸಮಸ್ಯೆ ಪರಿಹಾರವಾಗಲು ಅತ್ಯುತ್ತಮ ಔಷಧಿಗಳಾಗಿವೆ.

ಪ್ರಣಾಯಾಮದಲ್ಲಿ ದಿನಕ್ಕೆ 15 ನಿಮಿಷವಾದರೂ ಕಪಾಳಭಾತಿ ಮಾಡಬೇಕು. ಅಪಾನ ಮುದ್ರೆ, ಪ್ರಾಣ ಮುದ್ರೆ, ಹೃದಯ ಮುದ್ರೆಯಲ್ಲಿ ಪ್ರತಿಯೊಂದರಲ್ಲೂ ಐದು ನಿಮಿಷ ಕಪಾಳಭಾತಿ ಮಾಡಬೇಕು. ಗರ್ಭಕೋಶಕ್ಕೆ ತೆಘೆಸಿದ ನಂತರ ದೇಹ ಡಿ ಹೈಡ್ರೇಟ್ ಆಗುತ್ತದೆ ಕಪಾಳಭಾತಿ ಪ್ರಾಣಾಯಾಮ ಇದನ್ನು ನಿಯಂತ್ರಿಸುವುದಕ್ಕೆ ಸಹಕರಿಸುತ್ತದೆ ಮತ್ತು ಇದೇ ಮುದ್ರೆಗಳಿಂದ ನಾಡಿಶೋಧನ ಮಾಡಬೇಕು.

ನಾಡಿ ಶೋಧನ ಮಾಡುವುದರಿಂದ ಪ್ರಾಣಮಯಕೋಶ ಹಾಗೂ ಮನೋಮಯಕೋಶದಲ್ಲಿ ಉಂಟಾದ ಸಮಸ್ಯೆಗಳು ಸರಿಹೋಗುತ್ತವೆ. ಇದಾದ ಬಳಿಕ ಐದು ನಿಮಿಷ ಉಚ್ಚಾಯಿ ಪ್ರಾಣಯಾಮ ಮಾಡಬೇಕು. ಈ ಪ್ರಾಣಾಯಾಮವು ನಿಮ್ಮಲ್ಲಿ ಥೈರಾಯಿಡ್ ಗ್ರಂಥಿಯನ್ನು ಕ್ರಿಯಾಶೀಲಗೊಳಿಸುತ್ತದೆ. ಗರ್ಭಕೋಶವನ್ನು ತೆಗೆದಾಗ ಹೆಚ್ಚಿನ ದುಷ್ಪರಿಣಾಮ ಬೀರುವುದೇ ಥೈರಾಯ್ಡ್ ಗ್ರಂಥಿಗಳ ಮೇಲೆ.

ಇದರಿಂದಾಗಿ ಥೈರೊಯ್ಡ್ ಬರುತ್ತದೆ ಥೈರಾಯ್ಡ್ ಬರುವುದರಿಂದ ದೇಹದಲ್ಲಿ ಉಸಿರಾಟ ಕ್ರಿಯೆ ಜೀರ್ಣಕ್ರಿಯೆ ಇವುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬರುತ್ತವೆ. ಭ್ರಾಮರಿ ಪ್ರಾಣಾಯಾಮ ಕೂಡ ಮಾಡಬೇಕು ಇದರಿಂದ ದೇಹಕ್ಕೆ ಆಗಿರುವ ಎಮೋಷನ್ ಇನ್ ವಿಸಿಬಲ್ ಇಮ್ ಬ್ಯಾಲೆನ್ಸ್ ಸರಿದೂಗಿಸಲು ಸಹಾಯಕವಾಗುತ್ತದೆ.

ಮಾಂಸಹಾರ ಸೇವನೆ ಬಿಟ್ಟು ಸಸ್ಯಾಹಾರ ಸೇವನೆ ರೂಢಿಸಿಕೊಳ್ಳುವುದನ್ನು ಉತ್ತಮ ಅತಿಹೆಚ್ಚು ಹಣ್ಣು ಸೊಪ್ಪು ತರಕಾರಿಗಳ ಸೇವನೆ ಮಾಡಬೇಕು. ಧೂಮಪಾನ ಮಧ್ಯಪಾನ ಮುಂತಾದ ದೃಶ್ಚಟಗಳನ್ನು ಬಿಟ್ಟುಬಿಡಬೇಕು. ಹೆಣ್ಣು ಮಕ್ಕಳು ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಬರಬಾರದು ಎಂದರೆ ಕೈಗಳಿಗೆ ಕೈ ತುಂಬಾ ಬಳೆ ಕಾಲಿನಲ್ಲಿ ಕಾಲುಂಗುರ ಇತ್ಯಾದಿಗಳನ್ನು ಕೂಡ ಹಾಕಿಕೊಳ್ಳಬೇಕು ಆಗ ಇದಕ್ಕೆ ಸಂಬಂಧಿಸಿದ ನಾಡಿಗಳಿಗೆ ವೈಬ್ರೇಶನ್ ಸಿಗುವುದರಿಂದ ದೇಹವು ನಿಯಂತ್ರಣದಲ್ಲಿ ಇರುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now