ದೇಶದಲ್ಲಿ ಯಾವುದೇ ರೀತಿಯ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ಅಥವಾ ಬಹುಚಕ್ರದ ವಾಹನಗಳನ್ನು ಹೊಂದಿದ್ದರು ಅದು ವೈಟ್ ಬೋರ್ಡ್ ಅಥವಾ ಎಲ್ಲೋ ಬೋರ್ಡ್ ಆಗಿದ್ದರೂ ಪ್ರತಿಯೊಬ್ಬ ವಾಹನ ಮಾಲೀಕನು ಕೂಡ ಈ ಸುದ್ದಿಯನ್ನು ತಿಳಿದುಕೊಳ್ಳಲೇಬೇಕು. ವಾಹನ ದಟ್ಟಣೆ ತಡೆಗಟ್ಟಲು ಮತ್ತು ವಾಹನಗಳ ಮೂಲಕ ಆಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಅನೇಕ ರೀತಿಯ ಕಾನೂನನ್ನು ಜಾರಿಗೆ ತರಲಾಗುತ್ತಿದೆ.
ಈಗಾಗಲೇ ಅನೇಕ ಬಾರಿ ಸಂಚಾರ ನಿಯಮಗಳಲ್ಲಿ ಹೊಸ ನಿಯಮಗಳ ಸೇರ್ಪಡೆ ಆಗಿದ್ದು ಮೋಟಾರ್ ವಾಹನ ಕಾಯ್ದೆಗಳು ಕೂಡ ಪರಿಷ್ಕೃತಗೊಳ್ಳುತ್ತಿವೆ. ಈಗ ಮುಂದುವರೆದು ಇದೇ ರೀತಿಯ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಇದು ದೇಶದಲ್ಲಿರುವ ಎಲ್ಲಾ ರೀತಿಯ ವಾಹನಗಳಿಗೂ ಅನ್ವಯಿಸುತ್ತದೆ.
ವಾಹನಗಳನ್ನು ತೆಗೆದುಕೊಂಡು ರಸ್ತೆಗಳಿವಾಗ ಈ ವಾಹನಗಳ ಕುರಿತಂತೆ ಅನೇಕ ದಾಖಲೆಗಳನ್ನು ಜೊತೆಗೆ ಇಟ್ಟುಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಮುಖ್ಯವಾಗಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು, 18 ವರ್ಷ ಮೇಲ್ಪಟ್ಟಿರುವ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಮಾತ್ರ ಸಾರ್ವಜನಿಕ ರಸ್ತೆಗಳಲ್ಲಿ ಡ್ರೈವಿಂಗ್ ಮಾಡಬಹುದು, ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ರಸ್ತೆಗಿಳಿದರೆ 5000 ವರೆಗೂ ದಂಡ ಕಟ್ಟಬೇಕಾಗುತ್ತದೆ.
ಇದರ ಜೊತೆಗೆ ಹೆಲ್ಮೆಟ್, ಸೀಟ್ ಬೆಲ್ಟ್ ಇಲ್ಲದೆ ಡ್ರೈವ್ ಮಾಡುವುದು, ಕುಡಿದು ವಾಹನ ಚಾಲನೆ ಮಾಡುವುದು ಇವು ಕೂಡ ದಂಡಾರ್ಹ ಅಪರಾಧವಾಗಿದೆ ಕೆಲವೊಂದು ನಿಯಮಗಳ ಉಲ್ಲಂಘನೆಗೆ ದಂಡ ಮಾತ್ರವಲ್ಲದೆ ಜೊತೆಗೆ ಶಿಕ್ಷೆ ಕೂಡ ಆಗುತ್ತದೆ. ಇದಿಷ್ಟು ಮಾತ್ರವಲ್ಲದೇ ವಾಹನಗಳಿಗೆ ಸಂಬಂಧಿಸಿದ ಇನ್ನು ಕೆಲವು ಡಾಕ್ಯುಮೆಂಟ್ ಗಳು ಕೂಡ ಕಡ್ಡಾಯವಾಗಿ ವಾಹನ ಮಾಲೀಕನ ಬಳಿ ಇರಬೇಕು.
RC ಡಾಕ್ಯುಮೆಂಟ್, ವೆಹಿಕಲ್ ಇನ್ಸೂರೆನ್ಸ್ ಇವುಗಳು ಕೂಡ ಕಡ್ಡಾಯ. ಈಗ ಈ ನಿಯಮಗಳ ಪಟ್ಟಿಗೆ ಹೊಸದೊಂದು ನಿಯಮವು ಸೇರ್ಪಡೆಯಾಗುತ್ತಿದೆ. ಇನ್ನು ಮುಂದೆ ನಿಮ್ಮ ವಾಹನಗಳ PUC ಸರ್ಟಿಫಿಕೇಟ್ ಹೊಂದಿಲ್ಲ ಎಂದರೆ ಅವುಗಳನ್ನು ನೀವು ಜೊತೆಗೆ ಇಟ್ಟುಕೊಂಡಿಲ್ಲ ಎಂದರೆ ತಪಾಸಣೆಗೆ ಬಂದಾಗ ದಂಡ ತೆರಬೇಕಾಗುತ್ತದೆ.
PUC ಸರ್ಟಿಫಿಕೇಟ್ ಎಂದರೆ ಪೊಲ್ಯೂಷನ್ ಅಂಡರ್ ಕಂಟ್ರೋಲ್ ನಿಮ್ಮ ವಾಹನವು ಹೊರಸುಸುವ ಮಾಲಿನ್ಯದ ಪ್ರಮಾಣ ಪತ್ರವಾಗಿದೆ. ನಿಮ್ಮ ವಾಹನದ ಮೇಲ್ಮೈ ಹೇಗಿದೆ ಮತ್ತು ಅದು ಪರಿಸರಕ್ಕೆ ಎಷ್ಟು ಪೂರಕವಾಗಿದೆ ಅನ್ನುವುದನ್ನು ಪರೀಕ್ಷೆಗೆ ಒಳಪಡಿಸಿ ದೃಢೀಕರಿಸಲಾಗುತ್ತದೆ. ಇದನ್ನು ಪಡೆದುಕೊಳ್ಳುವುದರ ಜೊತೆಗೆ ಇದು ಸರ್ಕಾರ ಸೂಚಿಸುತ್ತಿರುವ ಮಿತಿಯ ಒಳಗಿರಬೇಕು ಮತ್ತು ಪ್ರತಿ ಮೂರು ತಿಂಗಳಿಗೆ ಇದು ಪರಿಷ್ಪ್ಕೃತವಾಗುತ್ತಿರಬೇಕು.
PUC ಕೇಂದ್ರಗಳಲ್ಲಿ ಈ ಟೆಸ್ಟ್ ಗೆ ಒಳಪಡಿಸಿ ನೀವು ಈ PUC ಸರ್ಟಿಫಿಕೇಟ್ ಪಡೆದುಕೊಳ್ಳಬೇಕು ಎಂದು ಹೊಸ ಸರ್ಕಾರ ರೂಲ್ಸ್ ಮಾಡಿದೆ. ಮತ್ತು ವಾಹನ ವಿಮೆ ಪಡೆದುಕೊಳ್ಳುವ ಸಮಯದಲ್ಲಿ ಈ ದಾಖಲೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮುಖ್ಯವಾಗಿ PUC ಪ್ರಮಾಣ ಪತ್ರ ಅನ್ವಯಿಸುತ್ತದೆ.
ಒಂದು ವೇಳೆ ಈ ನಿಯಮ ಉಲ್ಲಂಘನೆಯಾದರೆ ನಿಮಗೆ 10,000 ದಂಡ ಹಾಗೂ ಆರು ತಿಂಗಳು ಜೈಲು ಶಿಕ್ಷೆಯಾಗುತ್ತದೆ. ಸುಪ್ರೀಂಕೋರ್ಟ್ ಮೋಟಾರ್ ವಾಹನ ಕಾಯ್ದೆಗಳ 1981ರ ಪ್ರಕಾರ PUC ಸರ್ಟಿಫಿಕೇಟ್ ಕೂಡ ಒಂದು ಕಡ್ಡಾಯ ಸರ್ಟಿಫಿಕೇಟ್ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ.
ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು PUC ಸರ್ಟಿಫಿಕೇಟ್ ಹೊಂದಿರದ ವಾಹನಗಳಿಗೆ ವಿಮೆ ನೀಡಬಾರದು ಎಂದು ಕೂಡ ಘೋಷಿಸಿದೆ. ನೀವು ಈಗಾಗಲೇ ವಿಮೆ ಪಡೆದಿದ್ದರೂ ಪ್ರತಿ ಮೂರು ತಿಂಗಳಿಗೆ PUC ಸರ್ಟಿಫಿಕೇಟ್ ನವೀಕರಿಸಿದೆ ಹೋದರೆ ನಿಮ್ಮ ವಿಮೆ ಕ್ಯಾನ್ಸಲ್ ಆಗಬಹುದು ಹಾಗಾಗಿ ತಪ್ಪದೆ ಈ ನಿಯಮ ಪಾಲಿಸಿ.