ವಯಸ್ಸಾದ ಮೇಲೂ ಹಣದ ಅವಶ್ಯಕತೆ ಇರುತ್ತದೆ ಆದರೆ ಯಾರ ಮುಂದೂ ಕೈ ಚಾಚಲು ಮನಸಿರುವುದಿಲ್ಲ. ಹಾಗಿದ್ದರೆ ದುಡಿಯುವ ವಯಸ್ಸಿನಯೇ ಈ ಬಗ್ಗೆ ಪ್ಲಾನ್ ಮಾಡಬೇಕು ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಪೆನ್ಷನ್ ವ್ಯವಸ್ಥೆ ಇದೆ 60 ವರ್ಷವಾದ ಬಳಿಕ ರಿಟೈಡ್ ಆದವರೆಗೆ ಪೆನ್ಷನ್ ಬರುತ್ತದೆ.
ಈಗ ಇದು ಎಲ್ಲರಿಗೂ ಅನ್ವಯಿಸುವಂತೆ ಪ್ರಧಾನಮಂತ್ರಿಯವರು 4 ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳಲ್ಲಿ ಸಾಮಾನ್ಯರು ಕೂಡ ಹೂಡಿಕೆ ಮಾಡಿ 60 ವರ್ಷ ಆದ ಬಳಿಕ ಅವರ ಉಳಿತಾಯದ ಆಧಾರದ ಮೇಲೆ ಪೆನ್ಷನ್ ಪಡೆಯಬಹುದು. ಈ ಯೋಜನೆಗಳ ಕುರಿತು ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
1. ಪ್ರಧಾನಮಂತ್ರಿ ಶ್ರಮ ಯೋಗಿ ಮನ್-ಧನ್ ಯೋಜನೆ(PM-SYM):-
● ಅಸಂಘಟಿತ ದುಡಿಯುವ ಕಾರ್ಮಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
2. ಪ್ರಧಾನ ಮಂತ್ರಿ ಕರ್ಮ ಯೋಗಿ ಮನ್-ಧನ್ ಯೋಜನೆ(PM-KYM):-
● ಸಣ್ಣ ಪ್ರಮಾಣದ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವವರು ಈ ಯೋಜನೆಯಡಿ ಹೂಡಿಕೆ ಮಾಡಬಹುದು.
3. ಪ್ರಧಾನ ಮಂತ್ರಿ ಕಿಸಾನ್ ಮನ್-ಧನ್ ಯೋಜನೆ(PM-KYM):-
● ಹೆಸರೇ ಸೂಚಿಸುವಂತೆ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
4. ಅಟಲ್ ಪೆನ್ಷನ್ ಯೋಜನೆ(APY):-
● ಮಾಸಿಕವಾಗಿ 15,000 ಕ್ಕಿಂತ ಕಡಿಮೆ ಆದಾಯ ಹೊಂದಿರುವ ಯಾರು ಬೇಕಾದರೂ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
● ಈ ನಾಲ್ಕು ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವರ ವಯಸ್ಸು 18 ವರ್ಷ ಮೇಲ್ಕಟ್ಟು 40 ವರ್ಷದ ವಯಸ್ಸಿನ ಒಳಗಿರಬೇಕು.
● PM-SYM, PM-KYM, PM-KMY ಈ ಮೂರು ಯೋಜನೆಗಳಲ್ಲಿ 60 ವರ್ಷದವರೆಗೆ ಹೂಡಿಕೆ ಮಾಡಿದರೆ 60 ವರ್ಷ ವಯಸ್ಸಾದ ಬಳಿಕ ಕನಿಷ್ಠ 3,000ರೂ. ಪೆನ್ಷನ್ ಬರುತ್ತದೆ. a) ಯೋಜನೆ ಖರೀದಿಸಿದವರು ಅಕಾಲಿಕ ಮರಣವಾದರೆ ಪತ್ನಿಗೆ ಹೂಡಿಕೆ ಮತ್ತು ಬಡ್ಡಿದರವು ಸಿಗುತ್ತದೆ. ಹೂಡಿಕೆದಾರ ಪೆನ್ಷನ್ ಪಡೆಯುವ ವೇಳೆ ಮೃ.ತಪಟ್ಟರೆ 1,500ರೂ. ಪೆನ್ಷನ್ ಮುಂದುವರಿಯುತ್ತದೆ.
ಅವರ ಮ.ರಣದ ನಂತರ ನಾಮಿನಿಗೆ ಹೂಡಿಕೆ ಮೊತ್ತ ಮತ್ತು ಅದಕನ್ವಯವಾಗುವ ಬಡ್ಡಿದರವು ಸೇರುತ್ತದೆ.
b) ಈ ಮೂರು ಯೋಜನೆಗಳಾಗಿ ನೀವು ಯಾವ ವಯಸ್ಸಿಗೆ ಯೋಜನೆಯನ್ನು ಖರೀದಿಸುತ್ತೀರಾ ಅದರ ಮೇಲೆ ಎಷ್ಟು ಪೇಮೆಂಟ್ ಪಾವತಿಸಬೇಕು ಎನ್ನುವುದು ನಿರ್ಧಾರ ಆಗುತ್ತದೆ.
ಉದಾಹರಣೆಗೆ ನೀವು 18ನೇ ವಯಸ್ಸಿಗೆ ಯೋಜನೆ ಖರೀದಿಸಿದರೆ ಪ್ರತಿ ತಿಂಗಳು ತಪ್ಪದೇ 55 ರೂಪಾಯಿ ಪಾವತಿ ಮಾಡಿದರೆ ಸಾಕು. ಕೇಂದ್ರ ಸರ್ಕಾರವು ಕೂಡ ಈ ಹಣಕ್ಕೆ 55 ರೂಪಾಯಿ ಪಾವತಿ ಮಾಡುತ್ತದೆ. ಆಗ ನಿಮ್ಮ ಈ ಯೋಜನೆ ಖಾತೆಗೆ 110 ಸೇರುತ್ತದೆ.
ವಯಸ್ಸಾಗುತ್ತಾ ಹೋದಂತೆ ಹೂಡಿಕೆ ಮಾಡಬೇಕಾದ ಪ್ರೀಮಿಯಂ ಮೊತ್ತ ಕೂಡ ಹೆಚ್ಚಿಗೆ ಆಗುತ್ತದೆ.
● ಅಟಲ್ ಪೆನ್ಷನ್ ಯೋಜನೆಯಲ್ಲಿ(APY) ಪೆನ್ಷನ್ ಪಡೆಯಲು ನೀವು ಮೊದಲೇ ಪಡೆಯಲು ಬಯಸುವ ಪೆನ್ಷನ್ ಮೊತ್ತವನ್ನು ಆರಿಸಬೇಕು ಮತ್ತು ನೀವು ಆರಿಸಿದ ಮೊತ್ತಕ್ಕೆ ಅನುಗುಣವಾಗಿ ಹೂಡಿಕೆಯನ್ನು 60 ವರ್ಷದ ಒಳಗೆ ಮಾಡಿರಬೇಕು.
a) 1,000 – 1.7 ಲಕ್ಷ, 2,000 – 3.4ಲಕ್ಷ, 3,000 – 5.1 ಲಕ್ಷ, 4,000 – 6.8ಲಕ್ಷ, 5,000 – 8.5 ಲಕ್ಷ ಹೂಡಿಕೆ ಮಾಡಿರಬೇಕು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯು ಪೆನ್ಷನ್ ಪಡೆಯುವ ವೇಳೆ ಮೃ’ತ ಪಟ್ಟಿದ್ದರೆ ಅವರ ಹೂಡಿಕೆ ಮೊತ್ತವು ನಾಮಿನಿಗೆ ಹೋಗುತ್ತದೆ ಅಥವಾ ಅವರು 60 ವರ್ಷದ ಒಳಗೆ ಮೃ’ತಪಟ್ಟಿದರೆ ಅಲ್ಲಿಯವರೆಗಿನ ಹೂಡಿಕೆ ಎಷ್ಟಾಗಿತ್ತು ಅದಕ್ಕೆ ಬಡ್ಡಿ ಅನ್ವಯವಾಗಿ ಒಟ್ಟು ಮೊತ್ತವು ನಾಮಿನಿಗೆ ಸೇರುತ್ತದೆ.
b) ಈ ಯೋಜನೆಯಡಿ 1000 ರೂ. ಪೆನ್ಷನ್ ಆರಿಸಿದರೆ 18 ನೇ ವಯಸ್ಸಿನಿಂದ ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು 42ರೂ. ಪಾವತಿ ಮಾಡಬೇಕು. ಕೇಂದ್ರ ಸರ್ಕಾರವು ಕೂಡ ನಿಮ್ಮ ಈ ಖಾತೆಗೆ 42 ರೂ ಹೂಡಿಕೆ ಮಾಡುತ್ತದೆ.
c) ನೀವು ಆರಿಸಿಕೊಳ್ಳುವ ಪೆನ್ಷನ್ ಮೊತ್ತ ಮತ್ತು ನಿಮ್ಮ ವಯಸ್ಸಿಗೆ ಅನುಗುಣವಾಗಿ ಇದು ಕೂಡ ವ್ಯತ್ಯಾಸವಾಗುತ್ತದೆ.
● ಈ ನಾಲ್ಕು ಯೋಜನೆಗಳನ್ನು ಆನ್ಲೈನ್ ಮೂಲಕ ಖರೀದಿಸಬಹುದು ಅಥವಾ ಹತ್ತಿರದಲ್ಲಿರುವ CSC ಕೇಂದ್ರಕ್ಕೆ ಭೇಟಿ ಕೊಟ್ಟು ನೀವು ಈ ಯೋಜನೆ ಮಾಡಿಸಬಹುದು.
● ಬೇಕಾಗುವ ದಾಖಲೆಗಳು:-
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್ ವಿವರ
3. ಮೊಬೈಲ್ ಸಂಖ್ಯೆ
4. ನಾಮಿನಿ ವಿವರ.