ದಸಾರ ದೀಪಾವಳಿ ಪ್ರಯುಕ್ತ ಎಲ್ಲಾ ಕುಟುಂಬಕ್ಕೂ 2 ಗ್ಯಾಸ್ ಉಚಿತ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ.!

 

WhatsApp Group Join Now
Telegram Group Join Now

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಈ ವರ್ಷದ ರಕ್ಷಾಬಂಧನ ಹಬ್ಬದ (Rakshabandhan gift) ಪ್ರಯುಕ್ತ ದೇಶದ ಎಲ್ಲಾ ಮಹಿಳಾ ಸಹೋದರಿಯರಿಗೆ ಗೃಹಬಳಕೆಯ ಸಿಲಿಂಡರ್ ಬೆಳಿಗ್ಗೆ 200ರೂ ಸಬ್ಸಿಡಿ (Subsidy) ನೀಡುವ ಮೂಲಕ ಹಬ್ಬದ ಉಡುಗೊರೆ ನೀಡಿದ್ದರು.

ಇದರ ಅನ್ವಯ ಈಗಾಗಲೇ ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY) 200 ರೂ. ಸಬ್ಸಿಡಿ ಪಡೆಯುತ್ತಿದ್ದವರಿಗೆ ಒಟ್ಟು ನಾಲ್ಕು ನೂರು ರೂಪಾಯಿ ಸಬ್ಸಿಡಿ ಸಿಕ್ಕಿದ ರೀತಿ ಆಯ್ತು ಇದರಿಂದ ದೇಶದಾದ್ಯಂತ ಎಲ್ಲಾ ಮಹಿಳೆಯರು ಕೂಡ ಸಂತಸಗೊಂಡಿದ್ದಾರೆ. ಹೆಚ್ಚುತ್ತಿರುವ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ ಹೋಗಿದ್ದ ಜನತೆಗೆ ಪ್ರತಿ ಕುಟುಂಬದ ಮೂಲಭೂತ ಅವಶ್ಯಕತೆಯಾಗಿರುವ ಸಿಲಿಂಡರ್ ಬೆಲೆ ಇಳಿಸಿರುವುರು ಅತೀವ ಸಂತೋಷವನ್ನುಂಟು ಮಾಡಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ವಾಯುಮಾಲಿನ್ಯ ಕೂಡ ಕಡಿಮೆ ಆಗುತ್ತದೆ, ಅರಣ್ಯ ನಾಶ ತಡೆಗಟ್ಟಬಹುದು ಮತ್ತು ಮಹಿಳೆಯ ಆರೋಗ್ಯದ ದೃಷ್ಟಿಕೋನದಿಂದ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಮೂಲಕ ಯಾರು ತಮ್ಮ ಮನೆಗೆ ಗ್ಯಾಸ್ ಕಲೆಕ್ಷನ್ ಹೊಂದಿಲ್ಲ ಅಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ 18 ವರ್ಷ ಮೇಲ್ಪಟ್ಟ ಮಹಿಳೆಯು ಅರ್ಜಿ ಸಲ್ಲಿಸಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಪಡೆಯಬಹುದು.

ಈ ಯೋಜನೆ ಯಡಿ ಪ್ರತಿ ಕುಟುಂಬಕ್ಕೂ ಒಂದು ಸಿಲಿಂಡರ್, ಒಂದು ಗ್ಯಾಸ್ ಸ್ಟವ್ ಮತ್ತು ಒಂದು ರೆಗ್ಯುಲೆಟರ್ ಜೊತೆಗೆ ಯಾವುದೇ ಶುಲ್ಕವಿದೆ ಉಚಿತವಾಗಿ ಅಡುಗೆ ಅನಿಲದ ಕನೆಕ್ಷನ್ ಕೊಡಲಾಗುತ್ತದೆ. ಈ ಬಾರಿ ಮತ್ತೊಮ್ಮೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಮತ್ತೊಮ್ಮೆ ಅರ್ಜಿ ಆಹ್ವಾನ ಮಾಡಲಾಗಿದೆ.

ಈಗಾಗಲೇ ದೇಶದ 1.75ಲಕ್ಷ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದಿದೆ. ಇದು ದೇಶದ ಎಲ್ಲಾ ರಾಜ್ಯದ ಜನತೆಗೂ ಅನ್ವಯಿಸುತ್ತದೆ ಇವುಗಳನ್ನು ಹೊರತುಪಡಿಸಿ ಈಗ ಮತ್ತೊಂದು ಸಿಹಿ ವಿಚಾರ ಇದೆ ಇದ್ದು ಪಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೂಡ ಅನ್ವಯಿಸುತ್ತದೆ.

ಅದೇನೆಂದರೆ ಹೊಸದಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಎರಡು ಸಿಲಿಂಡರ್ ನೀಡಲು ಉತ್ತರಪ್ರದೇಶದ ರಾಜ್ಯ ಸರ್ಕಾರ (UP Government Deepavali gift) ನಿರ್ಧರಿಸಿದೆ. ದೀಪಾವಳಿ ಹಬ್ಬದ ಗಿಫ್ಟ್ ಎಂದು ಹೆಸರಿಟ್ಟಿರುವ ಉತ್ತರಪ್ರದೇಶ ರಾಜ್ಯ ಸರ್ಕಾರವು ತನ್ನ ರಾಜ್ಯದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಫಲಾನುಭವಿಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಒಂದು ಹಾಗೂ ಮುಂದುವರೆದು ಹೋಳಿ ಹಬ್ಬಕ್ಕೆ ಮತ್ತೊಂದು ಗ್ಯಾಸ್ ಸಿಲಿಂಡರ್ ನೀಡಲು ನಿರ್ಧರಿಸಿದೆ.

ಚುನಾವಣೆ ಪರವಾಗಿ ರಾಜಕೀಯ ಪಕ್ಷವು ನೀಡಿದ ಪ್ರಣಾಳಿಕೆಯಲ್ಲಿ ಕೂಡ ವಿಚಾರ ಇತ್ತು ಅಂತಿಮವಾಗಿ ಈಗ ಇದನ್ನು ಕಾರ್ಯರೂಪಕ್ಕೆ ತರಲು ಅಲ್ಲಿನ ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶ ರಾಜ್ಯದ ಜನರು ಈ ಪ್ರಕಟಣೆಯಿಂದ ಸಂತಸ ಕೊಂಡಿದ್ದಾರೆ. ಇದರೊಂದಿಗೆ ಎಂದಿನಂತೆ ಸಬ್ಸಿಡಿ ಯೋಜನೆಯು ಕೂಡ ಜಾರಿಯಲ್ಲಿ ಇರುತ್ತದೆ.

ಸಬ್ಸಿಡಿ ಮೂಲಕ ದೊರೆಯುವ ಹಣವು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಇದೊಂದು ವಿಶೇಷ ಯೋಜನೆಯಾಗಿತ್ತು ಈ ಯೋಜನೆ ದೇಶದ ಇನ್ನಿತರ ರಾಜ್ಯಗಳಿಗೂ ಅನ್ವಯಿಸುವಂತಾಗಲಿ ಎಂದು ಅನೇಕರು ಬಯಸುತ್ತಿದ್ದಾರೆ ಯಾಕೆಂದರೆ ಇನ್ನೂ ಸಹ ಹೊಗೆ ವಾತಾವರಣದಲ್ಲಿ ಅಡುಗೆ ಕೆಲಸ ಮಾಡುಬೇಕಾದ ಕಷ್ಟ ಹೊಂದಿರುವ ಕುಟುಂಬಗಳು ದೇಶದಲ್ಲಿ ಬಹಳಷ್ಟಿವೆ. ಶೀಘ್ರವೇ ಅದು ಎಲ್ಲರಿಗೂ ತಲುಪುವಂತಾಗಲಿ ಎಂದು ನಾವು ಸಹ ಹರಸೋಣ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now