2024ರ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಆರು ತಿಂಗಳು ಕಳೆಯುತ್ತಿದೆ. 2024ರ ಆರಂಭದಲ್ಲೇ ಲೋಕಸಭಾ ಚುನಾವಣೆ ಎದುರಾಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತದೆ. ಹೀಗಾಗಿ ಚುನಾವಣೆ ಸಂಬಂಧಿತ ಒಂದು ವಿಷಯದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

WhatsApp Group Join Now
Telegram Group Join Now

18 ವರ್ಷ ತುಂಬಿದ ಭಾರತೀಯ ನಾಗರಿಕನಾದ ಪ್ರತಿಯೊಬ್ಬರಿಗೂ ಕೂಡ ಮತದಾನ ಮಾಡುವ ಹಕ್ಕಿದೆ. ಆದರೆ ನಾವು ನಮ್ಮ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ (Voter list ) ನಮ್ಮ ಹೆಸರು ಇರಬೇಕು. ಭಾರತೀಯ ಚುನಾವಣಾ ಪ್ರಾಧಿಕಾರವು (Election authority of India) 221 ಲೋಕಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು (Draft list) ಬಿಡುಗಡೆ ಮಾಡಿದೆ.

ಇದರಲ್ಲಿ ನಾವು ನಮ್ಮ ಕ್ಷೇತ್ರದ, ಗ್ರಾಮ ಪಂಚಾಯಿತಯಿ, ವಾರ್ಡ್ ನ ಲಿಸ್ಟ್ ನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು. ಈ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನಮಗೆ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಕೆಲವೊಮ್ಮೆನಾನಾ ಕಾರಣದಿಂದ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗುತ್ತದೆ ಅಥವಾ ನೀವು ಈಗಷ್ಟೇ 18 ವರ್ಷ ಪೂರೈಸಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರೆ.

ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದೆಯೇ ಎನ್ನುವ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಹಾಗಾಗಿ ಇದನ್ನು ಮೊಬೈಲ್ನಲ್ಲಿ ಇದನ್ನು ಹೇಗೆ ಚೆಕ್ ಮಾಡುವುದು ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇನೆ. ಈ ಕೆಳಗಿನ ಹಂತಗಳನ್ನು ಪೂರೈಸಿ ನೀವೇ ಚೆಕ್ ಮಾಡಿಕೊಳ್ಳಿ.

* https://voters.eci.gov.in/ ಲಿಂಕ್ ಕ್ಲಿಕ್ ಮಾಡಿ ಪೋರ್ಟಲ್ ಗೆ ಹೋಗಿ
* ಸ್ಕಿನ್ ಮೇಲೆ ಕೆಲವು ಆಯ್ಕೆಗಳನ್ನು ಕೊಡಲಾಗಿರುತ್ತದೆ ಅದರಲ್ಲಿ ಮೊದಲಿಗೆ ನಿಮ್ಮ ರಾಜ್ಯವನ್ನು (State) ಸೆಲೆಕ್ಟ್ ಮಾಡಿ ನಂತರ ಜಿಲ್ಲೆಯ ಹೆಸರನ್ನು ಸೆಲೆಕ್ಟ್ ಮಾಡಿ, ನಿಮ್ಮ ವಿಧಾನಕ್ಷೇತ್ರ ಕ್ಷೇತ್ರ (Assembly Constituency) ಯಾವುದು ಎನ್ನುವ ಆಯ್ಕೆಯನ್ನು ನೋಡಿ ಸೆಲೆಕ್ಟ್ ಮಾಡಿ, ನಿಮ್ಮ ಭಾಷೆಯನ್ನು (language ) ಸೆಲೆಕ್ಟ್ ಮಾಡಿ ಕೊಟ್ಟಿರುವ ಕ್ಯಾಪ್ಚವನ್ನು (capcha code) ಸರಿಯಾಗಿ ಫಿಲ್ ಮಾಡಿ.

* ಕ್ಯಾಪ್ಚರ್ ಎಂಟ್ರಿ ಮಾಡಿದ ಮೇಲೆ ಎಂಟರ್ ಕೊಟ್ಟು ಸರ್ಚ್ ಎನ್ನುವ ಬಾಕ್ಸ್ ಗೆ ಹೋಗಿ ನಿಮ್ಮ ಗ್ರಾಮ ಪಂಚಾಯಿತಿ ಹೆಸರನ್ನು ಟೈಪ್ ಮಾಡಿ ಆಗ ನಿಮ್ಮ ಗ್ರಾಮ ಪಂಚಾಯಿತಿ ಎಲ್ಲಾ ವಾರ್ಡ್ ಗಳ ಆಪ್ಷನ್ ಬರುತ್ತದೆ ಅದರಲ್ಲಿ ನಿಮಗೆ ಬೇಕಾದದ್ದನ್ನು ಸೆಲೆಕ್ಟ್ ಮಾಡಿ ಪಕ್ಕದಲ್ಲಿ ಡೌನ್ಲೋಡ್ (draftroll) ಮಾಡಿಕೊಳ್ಳಲು ಇರುವ ಗುರುತನ್ನ ಕ್ಲಿಕ್ ಮಾಡುವ ಮೂಲಕ ಅದರ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಅದನ್ನು ಓಪನ್ ಮಾಡಿ ನೋಡಿದರೆ ನಿಮ್ಮ ವಾರ್ಡ್ ಲಿಸ್ಟ್ ಪೂರ್ತಿ ಇರುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಚೆಕ್ ಮಾಡಿ ಮತ್ತು ನೀವು ಯಾವ ಶಾಲೆಯಲ್ಲಿ ಹೋಗಿ ಮತದಾನ ಮಾಡಬೇಕು ಮತ್ತು ಅದರ ಮ್ಯಾಪಿಂಗ್ ಮತ್ತು ಆ ಶಾಲೆಯ ಫೋಟೋ ಇತ್ಯಾದಿ ವಿವರವೂ ಕೂಡ ಇರುತ್ತದೆ.

* ಈ ರೀತಿಯಾಗಿ ನೀವು ದೇಶದ ಯಾವುದೇ ಮತಗಟ್ಟೆಯ, ಯಾವುದೇ ಗ್ರಾಮದ, ಯಾವುದೇ ವಾರ್ಡ್ ಮಾಹಿತಿ ಕೂಡ ಚೆಕ್ ಮಾಡಬಹುದು. ಒಂದು ವೇಳೆ ನೀವು ಅರ್ಹರಿದ್ದರು ಇದರಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಮನವಿ ಸಲ್ಲಿಸುವ ಮೂಲಕ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಹಾಗಾಗಿ ಚುನಾವಣೆಗೆ ಇನ್ನು ಸಮಯವಿರುವಾಗಲೇ ಇದನ್ನು ಚೆಕ್ ಮಾಡಿಕೊಂಡು ನಿಮ್ಮ ಹೆಸರು ಇದೆಯೇ ಇಲ್ಲವೇ ಎನ್ನುವುದನ್ನು ದೃಢಪಡಿಸಿಕೊಳ್ಳಿ.

https://youtu.be/oKZKzsOyHxs?si=KB9WqyHsR84Voxj2

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now