ಹೆತ್ತವರನ್ನ ನೋಡಿಕೊಳ್ಳದ ಮಕ್ಕಳಿಗೆ ಹೈಕೋರ್ಟ್ ನಿಂದ ಹೊಸ ರೂಲ್ಸ್ ಜಾರಿ.!

ಒಂದು ಕಾಲದಲ್ಲಿ ನಿತ್ಯ ಬೆಳಗೆದ್ದು ತಂದೆ ತಾಯಿಯ ಮುಖದರ್ಶನವನ್ನು ಮಾಡುವುದು ಹಾಗೂ ಅವರ ಜೊತೆ ಬದುಕುವುದೇ ಬದುಕಿನ ಸೌಭಾಗ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕಾಲ ಹೇಗಾಗಿದೆ ಎಂದರೆ ನಮ್ಮಲ್ಲಿ ತಂದೆ ತಾಯಿಯನ್ನು ಹೊರೆ ಎಂದುಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

ತಮ್ಮ ಮದುವೆ ಜೀವನಕ್ಕೆ ಹೆತ್ತ ತಂದೆ ತಾಯಿಗಳು ಅಡ್ಡಿಯಾಗುತ್ತಾರೆ ಅಥವಾ ತಮಗೆ ಪ್ರೈವಸಿ ಬೇಕು ಎನ್ನುವ ಕಾರಣಕ್ಕೆ ಹೆತ್ತು ಹೊತ್ತು ಬದುಕು ಕಟ್ಟಿ ಕೊಟ್ಟ ತಂದೆ ತಾಯಿಯನ್ನು ದೂರ ಇಡುತ್ತಿದ್ದಾರೆ. ಮನಸ್ಸಿಂದ ಮಾತ್ರವಲ್ಲದೆ ಮನೆಯಿಂದ ದೂರ ಇಟ್ಟು ಯಾವುದೋ ಅನಾಥಾಶ್ರಮಕ್ಕೆ ಸೇರಿಸುತ್ತಾರೆ.

ಹೀಗೆ ಅನಾಥಾಶ್ರಮಗಳಿಗೆ ಸೇರಿಸಿ ಖರ್ಚು ವೆಚ್ಚಕ್ಕೆ ಹಣ ಕೊಟ್ಟ ಕೈ ತೊಳೆದುಕೊಳ್ಳುವ ಪಾಶ್ಚಾತ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಮಕ್ಕಳ ಸಂಖ್ಯೆ ಕಡಿಮೆಯೇ, ಅದಕ್ಕೂ ಹೀನಾಯವಾಗಿ ಹೆತ್ತ ತಂದೆ ತಾಯಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮನೆಯಿಂದ ಬೀದಿಗೆ ತಳ್ಳಿ ಸುಮ್ಮನಾಗಿಬಿಡುತ್ತಾರೆ.

ಇಂತಹ ಒಂದು ಮನಸ್ಥಿತಿಗೆ ಹಾಗೂ ಪರಿಸ್ಥಿತಿಗೆ ಭಾರತದ ಯುವಜನತೆ ಕೂಡ ಬದಲಾಗುತ್ತಿದ್ದಾರೆ ಎಂದರೆ ಅದಕ್ಕಿಂತಲೂ ಪಾಪ ಕಾರ್ಯ ಮಾತ್ರವಲ್ಲದೆ ಮನುಷ್ಯತ್ವ ಹೀನವಾದ ಕ್ರೌರ್ಯ ಮತ್ತೊಂದಿಲ್ಲ ಎಂದೇ ಹೇಳಬಹುದು ಯಾಕೆಂದರೆ ಹಣ್ಣೆಲೆಯನ್ನು ನೋಡಿ ಚಿಗುರೆಲೆ ನಗುವಂತಿಲ್ಲ.

ಚಿಗುರಲೆಗೂ ಕೂಡ ಕೆಲವೇ ದಿನಗಳಲ್ಲಿ ಹಣ್ಣೆಲೆಯ ಸ್ಥಾನ ಬಂದೇ ಬರುತ್ತದೆ ಹಾಗೆ ಇಂದು ಮಕ್ಕಳಾಗಿದ್ದವರು ನಾಳೆ ತಂದೆ ತಾಯಿಗಳಾಗಲೇಬೇಕು. ಆಗ ನೀವು ನಿಮ್ಮ ಪೋಷಕರಿಗೆ ಮಾಡಿದ್ದನ್ನೇ ನಿಮ್ಮ ಮಕ್ಕಳು ಕೂಡ ನಿಮಗೆ ಮಾಡುತ್ತಾರೆ ಈಗಿನ ಕಾಲದ ಮಕ್ಕಳು ನಾವು ಹೇಳಿಕೊಟ್ಟದ್ದನ್ನು ಕಲಿಯುವುದಕ್ಕಿಂತ ಹೆತ್ತವರು ಏನು ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಕಲಿಯುವುದೇ ಹೆಚ್ಚು.

ತಂದೆ ತಾಯಿ ಮಕ್ಕಳನ್ನು ಪಡೆಯಲು ಅದೆಷ್ಟು ಹರಕೆ ಹೊತ್ತಿರುತ್ತಾರೆ, ಅದೆಷ್ಟು ಆಸ್ಪತ್ರೆಗಳನ್ನು ಸುತ್ತಿರುತ್ತಾರೆ. ತಮ್ಮ ಕೈಲಿ ಸಾಧಿಸಲು ಸಾಧ್ಯವಾಗದನ್ನು ಮಕ್ಕಳಾದರೂ ಸಾಧಿಸಲಿ ಎಂದು ಅವರಿಗೆ ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ.

ವಿದ್ಯಾವಂತರನ್ನಾಗಿ ಮಾಡಿ ಅವರು ಸ್ವಂತ ಕಾಲಿನ ಮೇಲೆ ನಿಲ್ಲುವವರೆಗೂ ಕೂಡ ಜೊತೆಗಿರುತ್ತಾರೆ, ಅವರಿಗೆ ಮದುವೆ ಮಾಡಿ ಬದುಕಿಗೆ ಜೊತೆಯನ್ನು ತರುತ್ತಾರೆ. ಇಷ್ಟೆಲ್ಲ ಮಾಡಿದ ತಂದೆ ತಾಯಿ ತಮ್ಮ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯನ್ನು ಕೂಡ ಮಕ್ಕಳಿಗೆ ಕೊಡುತ್ತಾರೆ.

ಆದರೆ ಅದರ ಬಗ್ಗೆ ಕಿಂಚಿತ್ತು ಕೂಡ ಕೃತಜ್ಞತೆ ಇಲ್ಲದ ಮಕ್ಕಳು ಎಲ್ಲವನ್ನು ಕಿತ್ತುಕೊಂಡು ಪೋಷಕರಿಂದ ತಮಗೇನು ಲಾಭ ಇಲ್ಲ ಎಂದು ತಿಳಿದ ಮೇಲೆ ಮೃಗಗಳಿಗಿಂತ ಕೀಳಾಗಿ ಅವರನ್ನು ಮರೆತೆ ಬಿಡುತ್ತಾರೆ. ಅಥವಾ ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ತಮ್ಮದಲ್ಲ ಎಂದು ವಾದಕ್ಕಿಳಿದು ಕೋರ್ಟು ಕಚೇರಿ ಮೆಟ್ಟಿಲು ಕೂಡ ಹತ್ತುತ್ತಾರೆ.

ಹೆಣ್ಣು ಮಕ್ಕಳು ಗಂಡು ಮಕ್ಕಳು ನೋಡಿಕೊಳ್ಳಲಿ ಎಂದು ಗಂಡು ಮಕ್ಕಳು ಹೆಣ್ಣು ಮಕ್ಕಳು ನೋಡಿಕೊಳ್ಳಲಿ ಎಂದು ಕಿತ್ತಾಡುತ್ತಾರೆ. ಇಂತಹ ಒಂದು ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತ್ತು ಅದಕ್ಕೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಎಚ್ಚರಿಸಿದೆ.

ಮಕ್ಕಳು ಜೀವನದ ಸಂಧ್ಯಾ ಕಾಲದಲ್ಲಿ ನೆರವಾಗುತ್ತಾರೆ ಎನ್ನುವುದು ಪೋಷಕರ ಒಂದೇ ಒಂದು ಆಶಯವಾಗಿರುತ್ತದೆ. ಅದನ್ನು ಪೂರೈಸಲಾಗದ ಮಕ್ಕಳು ಮಕ್ಕಳೇ ಅಲ್ಲ ಈ ವಿಚಾರದಲ್ಲಿ ದಯ ದಾಕ್ಷಿಣ್ಯ ಏನು ಇಲ್ಲ. ತಮ್ಮ ತಂದೆ ತಾಯಿಗಳನ್ನು ನೋಡಿಕೊಳ್ಳಬೇಕಾದದ್ದು ಎಲ್ಲಾ ಮಕ್ಕಳ ಕರ್ತವ್ಯ ಎಂದು ಹೈಕೋರ್ಟ್ ಪ್ರಕರಣ ಒಂದರಲ್ಲಿ ತನ್ನ ತೀರ್ಪನ್ನು ನೀಡಿದೆ.

ಈ ರೀತಿ ಕೋರ್ಟು ಕಚೇರಿ ಮೆಟ್ಟಿಲತ್ತಿ ಪೋಷಕರ ಮನಸಿಗೆ ನೋವುಂಟು ಮಾಡಿ ಹಂಗಿನಿಂದ ಅವರನ್ನು ಇಡುವ ಬದಲು ತಂದೆ ತಾಯಿಯ ಮಹತ್ವವನ್ನು ಅರಿತು ಅವರನ್ನು ಕಡೆವರೆಗೂ ಚೆನ್ನಾಗಿ ನೋಡಿಕೊಂಡು ಕಿಂಚಿತ್ತಾದರೂ ಅವರ ಋಣ ತೀರಿಸಲು ಮಕ್ಕಳು ಹಾತೊರೆಯುವುದು ಶ್ರೇಷ್ಠ ಇನ್ನಾದರೂ ಈಗಿನ ಜನತೆ ಇದನ್ನು ಅರಿಯದಲಿ ಎನ್ನುವುದಷ್ಟೇ ಈ ಅಂಕಣದ ಆಶಯ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now