ಮಧ್ಯಾಹ್ನ ನಿದ್ದೆ ಆರಾಮದಾಯಕ ಅನಿಸುತ್ತದೆ. ಮನೆಯಲ್ಲಿರುವ ಗೃಹಿಣಿಯರು ಬೆಳಿಗ್ಗೆ ಎದ್ದಾಗಿನಿಂದ ಒಂದೇ ಸಮನೆ ದುಡಿಯುತ್ತಿರುತ್ತಾರೆ. ಮನೆ ಕೆಲಸ, ಸ್ನಾನ, ಪೂಜೆ, ಮಕ್ಕಳಿಗೆ ಬಾಟ್ಸ್ ಕಳಿಸುವುದು, ಮಧ್ಯಾಹ್ನಕ್ಕೆ ಅಡುಗೆ ಮಾಡುವುದು ಹೀಗೆ ಮಧ್ಯಾಹ್ನದವರೆಗೂ ಕೂಡ ಅವರಿಗೆ ಬಿಡುವೆ ಇರುವುದಿಲ್ಲ ಆಗ ಮಧ್ಯಾಹ್ನ ಊಟ ಆದ ನಂತರ ತಕ್ಷಣ ಅವರಿಗೆ ನಿದ್ದೆ ಬರುತ್ತದೆ.
ಗೃಹಿಣಿಯರಿಗೆ ಮಾತ್ರವಲ್ಲದೆ ಶಾಲಾ ಕಾಲೇಜಿಗೆ ಹೋಗುವವರೆಗೂ, ಆಫೀಸ್ ನಲ್ಲಿ ದುಡ್ಡಿರುವವರಿಗು ಕೂಡ ಮಧ್ಯಾಹ್ನದ ಊಟದ ನಂತರ ತೂಕಡಿಕೆ ನಿದ್ರೆ ಬರುವುದು ಸರ್ವೇಸಾಮಾನ್ಯ. ಆದರೆ ವಿಜ್ಞಾನದ ಪ್ರಕಾರ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಾವು ಆದಷ್ಟು ಇದನ್ನು ಅವಾಯ್ಡ್ ಮಾಡುವುದು ಒಳ್ಳೆಯದು ಹೀಗೆ ಮಾಡಬೇಕು ಎಂದರೆ ನಮಗೆ ಯಾಕೆ ಈ ರೀತಿ ನಿದ್ದೆ ಬರುತ್ತದೆ ಎನ್ನುವ ಕಾರಣ ತಿಳಿದುಕೊಳ್ಳಬೇಕು.
ಹಲವು ಕಾರಣಗಳಿಂದಾಗಿ ನಮಗೆ ಈ ರೀತಿ ಮಧ್ಯಾಹ್ನದ ಹೊತ್ತು ನಿದ್ದೆ ಬರುತ್ತದೆ. ಈ ಮೊದಲೇ ಹೇಳಿದಂತೆ ಬೆಳಗಿನಿಂದ ಒಂದೇ ಸಮನೆ ದುಡಿದಾಗ ಅಥವಾ ಬೆಳಗ್ಗೆ ಬೇಗ ಎದ್ದಾಗ ನಿದ್ರೆ ಮಾಡೋಣ ಎನಿಸುತ್ತದೆ ಇದು ಮಾತ್ರ ಅಲ್ಲದೆ ನಮ್ಮ ಮಧ್ಯಾಹ್ನದ ಊಟ ಕೂಡ ನಮ್ಮ ನಿದ್ರೆ ಮೇಲೆ ಪರಿಣಾಮ ಬೀರುತ್ತದೆ ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದರ ಆಧಾರದಿಂದಲೂ ನಿದ್ರೆ ಬರಬಹುದು.
ನೀವು ಗಮನಿಸಿ ಕೆಲವು ಆಹಾರ ಪದಾರ್ಥಗಳನ್ನು ತಿಂದ ತಕ್ಷಣವೇ ನಿದ್ದೆ ಬರುತ್ತದೆ ಮೊಸರನ್ನ ತಿಂದರೆ ನಿದ್ದೆ ಬರುತ್ತದೆ, ಮಧ್ಯಾಹ್ನದ ಸಮಯದಲ್ಲಿ ಚೀಸ್ ಪನ್ನೀರ್ ಪದಾರ್ಥಗಳನ್ನು ತಿಂದರೂ ಕೂಡ ನಿದ್ದೆ ಬರುತ್ತದೆ. ಮಧ್ಯಾನದ ಹೊತ್ತು ಬಿಸಿ ಬಿಸಿಯಾಗಿ ಹೊಟ್ಟೆ ತುಂಬಾ ಭರ್ಜರಿಯಾಗಿ ಊಟ ಮಾಡಿದರು ಕೂಡ ಆ ಸಮಯದಲ್ಲೂ ನಿದ್ದೆ ಬರುತ್ತದೆ.
ಇದು ಏಕೆಂದರೆ ನಾವು ಹೊಟ್ಟೆ ಪೂರ್ತಿ ತಿಂದಾಗ ಅಥವಾ ಸುಲಭವಾಗಿ ಜೀರ್ಣವಾಗದ ಆಹಾರ ಪದಾರ್ಥಗಳನ್ನು ತಿಂದಾಗ ಜೀರ್ಣಕ್ರಿಯೆಗೆ ಹೆಚ್ಚಿನ ಶಕ್ತಿ ಹಾಗೂ ರಕ್ತದ ಅವಶ್ಯಕತೆ ಇರುತ್ತದೆ. ಆ ಸಮಯದಲ್ಲಿ ಮೆದುಳಿಗೆ ರಕ್ತ ಸಂಚಾರ ಕಡಿಮೆ ಆಗಿ ದೇಹ ಆಯಾಸಕ್ಕೆ, ಒಂದು ರೀತಿ ಸೋಂಬೇರಿತನದ ಭಾವನೆಗೆ ಬರುತ್ತದೆ ಆಗ ಶಕ್ತಿ ಕಡಿಮೆಯಾಗಿ ನಿದ್ರೆ ಮಾಡೋಣ ಎನಿಸುತ್ತದೆ.
ಜೊತೆಗೆ ನಮ್ಮ ಅಕ್ಕ ಪಕ್ಕದ ವಾತಾವರಣ ಅನುಕೂಲಕರವಾಗಿದ್ದಾಗ ನಿದ್ರೆ ಹಾರ್ಮೋನ್ ಗಳು ಸ್ರವಿಸುವ ಕಾರಣ ಆಗಲು ನಿದ್ರೆ ಬರುತ್ತದೆ. ಕಾರ್ಬೋಹೈಡ್ರೇಟ್ ಗಳನ್ನು ಹೆಚ್ಚು ಸೇವಿಸಿದಾಗ ಅವು ಕೂಡ ನಿದ್ದೆ ಬರುವಂತೆ ಮಾಡುತ್ತವೆ. ಹೆಚ್ಚು ಭೋಜನ ಸೇವಿಸಿದಾಗ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಿ ಅದು ಕೂಡ ತೂಕ ಕಡಿಕೆ ಹಾಗೂ ನಿದ್ದೆಗೆ ಕಾರಣವಾಗುತ್ತದೆ.
ಮನೆಯಲ್ಲಿಯೇ ಇದ್ದವರು ಸಹಿಸಲಾಗದೆ 10 ನಿಮಿಷ ಮಲಗಿ ಏಳುತ್ತಾರೆ ಆದರೆ ಕೆಲವರಿಗೆ 10 ನಿಮಿಷಕ್ಕೆ ಮುಗಿಯುವ ನಿದ್ರೆ ಇದಾಗಿರುವುದಿಲ್ಲ ಎರಡು ಮೂರು ತಾಸು ಮಧ್ಯಾಹ್ನದ ಸಮಯ ಮಲಗಿ ಬಿಡುತ್ತಾರೆ.
ಆದರೆ ಕಾಲೇಜಿಗೆ ಕೆಲಸಕ್ಕೆ ಹೋಗುವರು ಹೀಗೆ ಮಾಡಲು ಆಗುವುದಿಲ್ಲ ಹಾಗಾಗಿ ನಿಮಗೆ ನಿದ್ರೆ ತರುವಂತ ಆಹಾರ ಪದಾರ್ಥಗಳು ಅಂದರೆ ಸ್ಲೀಪರ್ ಎಂದು ಕರೆಯಲಾಗುವ ಆಹಾರ ಪದಾರ್ಥಗಳಿಂದ ದೂರ ಇದ್ದು ದೇಹವನ್ನು ಚುಟುವಟಿಕೆಯಲ್ಲಿ ಇಡುವಂತಹ ಆಹಾರ ಸೇವಿಸಿ ಆಕ್ಟಿವ್ ಆಗಿರಿ.
ಮತ್ತೊಂದು ಮುಖ್ಯವಾದ ಅಂಶ ಏನೆಂದರೆ ರಾತ್ರಿ ಹೊತ್ತು ನಿದ್ದೆ ಆರಾಮಾಗಿ ಆಗಿದ್ದರೆ ದಿನಪೂರ್ತಿ ಮೆದುಳು ಹಾಗು ದೇಹ ಚುರುಕಾಗಿ ಇರುತ್ತದೆ ಹಾಗಾಗಿ ಒಂದು ದಿನಕ್ಕೆ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ನಿದ್ದೆ ಅವಶ್ಯಕತೆ ಇದೆ ಅಷ್ಟು ನಿದ್ರೆಯನ್ನು ರಾತ್ರಿ ಹೊತ್ತು ಮಾಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!