ಕರ್ನಾಟಕ ಸರ್ಕಾರ (Karnataka Government ) ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojane) ಮೂಲಕ ಕರ್ನಾಟಕದ ಮಹಿಳೆಯರು ಕರ್ನಾಟಕದ ಗಡಿಯೊಳಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ಗಳಲ್ಲಿಯೂ ಕೂಡ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಕಾಂಗ್ರೆಸ್ ಪಕ್ಷವು (Congress party manifesto ) ಚುನಾವಣೆ ಪೂರ್ವವಾಗಿ ತನ್ನ ಪ್ರಣಾಳಿಕೆಯಲ್ಲಿಯೇ ಈ ಒಂದು ಗ್ಯಾರಂಟಿ ಯೋಜನೆ ಬಗ್ಗೆ ಘೋಷಿಸಿತ್ತು. ಅಂತೆಯೇ ಕೊಟ್ಟ ಮಾತಿಗೆ ತಕ್ಕ ಹಾಗೆ ಮೊದಲಿಗೆ ಶಕ್ತಿ ಯೋಜನೆಯನ್ನು ಜಾರಿಗೆ ತಂದು ನುಡಿದಂತೆ ನಡೆದುಕೊಂಡಿದೆ. ಜೂನ್ ತಿಂಗಳಿನಿಂದ ಕರ್ನಾಟಕದಾದ್ಯಂತ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಯೋಜನೆ ಜಾರಿಯಾದ ಸಂದರ್ಭದಲ್ಲಿ ಅನೇಕ ಕಹಿ ಘಟನೆಗಳು ಕೂಡ ನಡೆದು ಇದರ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು ಸರ್ಕಾರವು ಕೂಡ ಯೋಜನೆ ಯಶಸ್ವಿ ಆಗಿರುವುದರ ಬಗ್ಗೆ ಸಮರ್ಥಿಸಿಕೊಂಡಿದೆ.
ಹಿಂದೊಮ್ಮೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ (CM Siddaramaih) ತಮ್ಮ ಎಕ್ಸ್ ಜಾಲತಾಣ ಖಾತೆಯಲ್ಲಿ ಶಕ್ತಿ ಯೋಜನೆ ಯೋಜನೆಯ ಮೂಲಕ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವ ಮತ್ತು ಸಭೆ ಸಮಾರಂಭಕ್ಕೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಈ ಮೂಲಕವಾಗಿ ಧಾರ್ಮಿಕ ಕ್ಷೇತ್ರಗಳ ಸುತ್ತಲಿನ ವ್ಯಾಪಾರ ವ್ಯವಹಾರ ಕೂಡ ಜೋರಾಗಿ ನಡೆಯುತ್ತಿದ್ದು.
ಈ ಯೋಜನೆ ಅನೇಕರ ಪಾಲಿಗೆ ವರದಾನವಾಗಿದೆ ಎನ್ನುವುದರ ಸಂಬಂಧಿತ ವಿಷಯವನ್ನು ಸಾಕ್ಷಿ ವಿಡಿಯೋ ಸಮೇತ ಹಂಚಿಕೊಂಡಿದ್ದರು. ಈ ಮಾತು ಅಕ್ಷರಶಃ ಸತ್ಯವಾಗಿದ್ದು ಇದುವರೆಗೆ ಮನೆಯಲ್ಲಿದ್ದು ಕಳೆದು ಹೋಗಿದ್ದ ಗೃಹಿಣಿಯರು ಈಗ ತಮ್ಮ ಸ್ನೇಹಿತರೊಂದಿಗೆ ತಾವು ಕೂಡ ಪ್ರವಾಸಕ್ಕೆ ಉಚಿತವಾಗಿ ಹೋಗಿ ಬರುವಂತಿದೆ.
ಜೊತೆಗೆ ಶಾಲಾ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರು ಮತ್ತು ಪ್ರತಿನಿತ್ಯ ಕೆಲಸಕ್ಕೆಂದು ಬೇರೆ ಜಾಗಕ್ಕೆ ಪ್ರಯಾಣ ಮಾಡುತ್ತಿದ್ದ ಮಹಿಳೆಯರಿಗೂ ಕೂಡ ಯೋಜನೆಯಿಂದ ಬಹಳ ಅನುಕೂಲ ಆಗಿದೆ. ಈಗ ಯೋಜನೆ ಬಗ್ಗೆ ಮತ್ತೊಂದು ಅಪ್ಡೇಟ್ ಇದೆ ಅದೇನೆಂದರೆ, ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುವುದಕ್ಕೆ ಮಹಿಳೆಯು ಕರ್ನಾಟಕದ ನಿವಾಸಿ ಎನ್ನುವ ದೃಢೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಅಥವಾ ಭಾರತ ರಾಜ್ಯ ಸರ್ಕಾರ ನೀಡಿರುವ ಯಾವುದೇ ಒಂದು ಗುರುತಿನ ಚೀಟಿಯನ್ನು ತೋರಿಸಿ ಶಕ್ತಿ ಯೋಜನೆಯಡಿ ಶೂನ್ಯ ದರ ಟಿಕೆಟ್ (free cost ticket) ಪಡೆಯಬೇಕಿತ್ತು.
ಇದಕ್ಕಾಗಿ ಮಹಿಳೆಯರು ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಇತ್ಯಾದಿ ಯಾವುದೇ ದಾಖಲೆಯನ್ನು (document) ನೀಡಬೇಕಿತ್ತು. ಆದರೆ ಕೆಲವು ನಿರ್ವಾಹಕರು ( women’s complaint against conductors because they refuse to consider some proofs) ಮಹಿಳೆಯರ ಜೊತೆ ಈ ವಿಚಾರವಾಗಿ ವಾದ ಮಾಡುತ್ತಿದ್ದರು.
ತಮಗೆ ಆಧಾರ್ ಕಾರ್ಡ್ ನೇ ತರಬೇಕು ಎಂದು ಗಲಾಟೆ ಮಾಡಿದ್ದಾರೆ ಎಂದು ಸಹ ಮಹಿಳೆಯರು ನಿಗಮಕ್ಕೆ ದೂರು ಕೊಟ್ಟಿದ್ದರು, ಇನ್ನು ಕೆಲವು ಕಡೆ ಜೆರಾಕ್ಸ್ ಪ್ರತಿಗಳನ್ನು ಸ್ವೀಕರಿಸುವುದಿಲ್ಲ ಮೂಲ ದಾಖಲೆ ತರಬೇಕು ಎಂದು ಹೇಳುತ್ತಾರೆ ಎನ್ನುವುದರ ಕುರಿತು ದೂರು ಬಂದಿತ್ತು, ಮತ್ತು ಕೆಲವು ಮಹಿಳೆಯರು ತಮ್ಮ ಮೊಬೈಲ್ ಫೋನ್ ನಲ್ಲಿಯೇ ಆಧಾರ್ ಕಾರ್ಡ್ ಅಥವಾ ಇನ್ನಿತರ ಯಾವುದೇ ಒಂದು ಡಾಕ್ಯುಮೆಂಟ್ ಫೋಟೋ ತೋರಿಸಿದರೆ ನಿರ್ವಾಹಕರು ಒಪ್ಪುತಿರಲಿಲ್ಲ.
ಈ ಸಮಸ್ಯೆ ಬಗ್ಗೆ ಹರಿಸಬೇಕು ಇದಕ್ಕೆ ಸ್ಪಷ್ಟನೆ ಬೇಕು ಎನ್ನುವುದು ನಿರ್ವಾಹಕರು ಹಾಗೂ ಮಹಿಳೆಯರ ಮನವಿಯಾಗಿತ್ತು ಅದಕ್ಕೀಗ ಪರಿಹಾರ ಸಿಕ್ಕಿದೆ. ಈ ಮೇಲೆ ತಿಳಿಸಿದ ಯಾವುದೇ ಮೂಲ ದಾಖಲೆ ಅಥವಾ ಅವುಗಳ ಪ್ರತಿ ಅಥವಾ ಮೊಬೈಲ್ ನಲ್ಲಿ ಡಿಜಿಲಾಕರ್ ಹಾರ್ಡ್ ಕಾಪಿ ತೋರಿಸಿದರೆ.
ಅದನ್ನು ಮಾನ್ಯ ಮಾಡಿ ನಿರ್ವಾಹಕರು ಯಾವುದೇ ತಕರಾರಿಲ್ಲದೆ ಫ್ರೀ ಟಿಕೆಟ್ ನೀಡಬೇಕು ಎಂದು ಸಾರಿಗೆ ನಿಗಮದ ವತಿಯಿಂದ ಆದೇಶವಾಗಿದೆ. ಈ ಕುರಿತ ಅಧಿಕೃತ ಮಾಹಿತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯ ಸಂಸ್ಥಾಪಕರು ತಿಳಿಸಿದ್ದಾರೆ. ಇನ್ನು ಮುಂದೆ ಮಹಿಳೆಯರು ಈ ವಿಚಾರವಾಗಿ ನಿಶ್ಚಿಂತೆಯಿಂದ ಇರಬಹುದು.