ಭಾರತದ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ನಡಿಯಲ್ಲಿ ಭಾರತದ ನಾಗರಿಕರಿಗೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Adhar link to pan card) ಮಾಡಲೇಬೇಕು ಎಂದು ಸೂಚನೆ ನೀಡಿತ್ತು. ಯಾರೆಲ್ಲಾ ಜುಲೈ 1 2017 ಮೊದಲು ಪ್ಯಾನ್ ಕಾರ್ಡ್ ಪಡೆದಿದ್ದಾರೆ ಅವರ ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ.
ಪಾನ್ ಕಾರ್ಡ್ ನ ದುರುಪಯೋಗ ಆಗುತ್ತಿರುವುದನ್ನು ತಡೆಗಟ್ಟಿ ಹಣಕಾಸಿನ ಅವ್ಯವಹಾರವನ್ನು ಪತ್ತೆಹಚ್ಚಲು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನುಕೂಲವಾಗುತ್ತದೆ ಹಾಗಾಗಿ ಯಾರೆಲ್ಲ ಪಾನ್ ಕಾರ್ಡ್ ಪಡೆದಿದ್ದಾರೆ ಅವರು ಈ ಪ್ರಕ್ರಿಯೆ ಪೂರ್ತಿಗೊಳಿಸಬೇಕೆಂದು ಸಾಕಷ್ಟು ಬಾರಿ ಉಚಿತವಾಗಿ ಅವಕಾಶ ನೀಡಿತ್ತು.
ಅಂತಿಮವಾಗಿ 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ 31 ಮಾರ್ಚ್ 2023 ಕಡೆಯ ದಿನಾಂಕವಾಗಿತ್ತು. ಈ ಸಮಯದಲ್ಲಿ ನಾಗರಿಕರಿಂದ ಮತ್ತಷ್ಟು ಸಮಯದ ಕೋರಿಕೆ ಬಂದದ್ದರಿಂದ ಮತ್ತೆ ಮೂರು ತಿಂಗಳ ಅನುಮತಿ ನೀಡಲಾಯಿತು.
ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Minister Nirmala Sitaraman) ಅವರು ಕೂಡ ಈ ಅವಧಿಯೊಳಗೆ ಈ ಒಂದು ಪ್ರಕ್ರಿಯೆ ಪೂರ್ತಿ ಗೊಳಿಸಿದವರ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳುತ್ತವೆ ಮತ್ತು ಅವುಗಳನ್ನು ನವೀಕರಣ ಮಾಡಲು ಹೆಚ್ಚಿನ ಮೊತ್ತದ ದಂಡ ಕಟ್ಟಬೇಕು, ಅಲ್ಲಿಯವರೆಗೂ ಅವರ ಆರ್ಥಿಕ ಚಟುವಟಿಕೆ ನಡೆಸಲು ಸಮಸ್ಯೆಯಾಗುತ್ತದೆ ಎಂದು ಹೇಳಿ ಎಚ್ಚರಿಸಿದ್ದರು.
ಈ ಎಲ್ಲಾ ಕಂಡೀಶನ್ ಅನುಸಾರ ದೇಶದಲ್ಲಿ ಪಾನ್ ಕಾರ್ಡ್ ಹೊಂದಿರುವ 70.2 ಗ್ರಾಹಕರಲ್ಲಿ 57.25 ಕೋಟಿ ಗ್ರಾಹಕರ ಮಾತ್ರ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದಾರೆ ಇನ್ನುಳಿದ 11.05 ಕೋಟಿ ಗ್ರಾಹಕರು ಈ ಪ್ರಕ್ರಿಯೆ ಪೂರ್ತಿಗೊಳಿಸುವುದು ಬಾಕಿ ಇದೆ.
ಈಗ ಅವರ ಕಾರ್ಡ್ ಗಳು ನಿಷ್ಕ್ರಿಯವಾಗಿದೆ ಎನ್ನುವ ಮಾಹಿತಿಯನ್ನು ಮತ್ತು ಅವರು ದಂಡ ಕಟ್ಟಿ ಇದನ್ನು ಸಕ್ರಿಯಗೊಳಿಸಬೇಕಾಗಿರುವ ಆದೇಶವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (Central Board of Direct Taxes, CBDT) ಯಿಂದ RTI ( Right to Information) ಪ್ರತಿಕ್ರಿಯೆಯು ವರದಿ ಮಾಡಿದೆ.
ಇದರಿಂದ ಅನೇಕರಿಗೆ ಆತಂಕ ಶುರುವಾಗಿದೆ ಮತ್ತು ಕೆಲವರಿಗೆ ತಾವು ಸಹ ಈ ಪಟ್ಟಿಯಲ್ಲಿಇದ್ದೆವವೆಯೇ ಎನ್ನುವ ಅನುಮಾನಗಳಿದೆ. ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆಯೇ, ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎನ್ನುವ ಅನುಮಾನಗಳಿದ್ದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ಚೆಕ್ ಮಾಡಿ ನಿಮ್ಮ ಕಾರ್ಡ್ ಸ್ಥಿತಿ ಏನಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ.
* ಮೊದಲಿಗೆ ಮೊಬೈಲ್ ನಲ್ಲಿ https://www.incometax.gov.in/iec/foportal/ ಟೈಪ್ ಮಾಡಿ, ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
* link aadhaar status ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ,
* ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ನಂಬರ್ ನಮೂದಿಸಿ. ನಂತರ View link aadhaar status ಆಪ್ಷನ್ ಮೇಲೆ ಕ್ಲಿಕ್ ಮಾಡಿ
* ಈಗ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ
* ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿದ್ದರೆ ಅದರ ವಿವರವು ಸ್ಕ್ರೀನ್ ಮೇಲೆ ಬರುತ್ತದೆ. ಲಿಂಕ್ ಆಗದಿದ್ದರೂ ಲಿಂಕ್ ಆಗಿಲ್ಲ ಎಂದು ತೋರಿಸುತ್ತದೆ. ಆಧಾರ್ ಲಿಂಕ್ ಆಗದಿದ್ದರೆ ಶೀಘ್ರವಾಗಿ ಈ ಪ್ರಕ್ರಿಯೆ ಪೂರ್ತಿಗೊಳಿಸಿ.