ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಇರುವ ಗ್ರಾಹಕರಿಗೆ ಸಿಹಿಸುದ್ದಿ.!

 

WhatsApp Group Join Now
Telegram Group Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಭಾರತದಾದ್ಯಂತ ಅತಿ ಹೆಚ್ಚು ಖಾತೆದಾರರನ್ನು ಹೊಂದಿರುವ ಖ್ಯಾತಿಗೂ ಒಳಗಾಗಿರುವ ಈ ಬ್ಯಾಂಕ್ ಸದಾ ಕಾಲ ತನ್ನ ಗ್ರಾಹಕರಿಗೆ ಅಭಿರುಚಿಗೆ ಹಾಗೂ ಅಗತ್ಯಗಳಿಗೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಹೂಡಿಕೆ ಉಳಿತಾಯ ಹಾಗೂ ಸಾಲ ಸೌಲಭ್ಯಗಳ ವಿಚಾರದಲ್ಲೂ ಕೂಡ ಗ್ರಾಹಕ ಸ್ನೇಹಿಯಾದ ನಿಲುವು ಕೈಕೊಳ್ಳುವ SBI ಇತ್ತೀಚೆಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಯೋಜನೆಯೊಂದನ್ನು ಪರಿಚಯಿಸಿತ್ತು. ವಿ ಕೇರ್ ಅಥವಾ ವೆಲ್ ಕೇರ್ ಠೇವಣಿ ಯೋಜನೆ ( Well Care or V-Care FD Scheme) ಎನ್ನುವ ಹೆಸರಿನ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿದ್ದು.

ಈ ಯೋಜನೆಯ ಗಡುಗು ಮುಕ್ತಾಯವಾಗಿದ್ದರು ಮತ್ತೊಮ್ಮೆ ಅದನ್ನು ವಿಸ್ತರಿಸಿ ಮಾರ್ಚ್ 31, 2024ರವರೆಗೂ ಕೂಡ ಹಿರಿಯ ನಾಗರಿಕರಿಗೆ ಈ ಯೋಜನೆಯಡಿ ಹೂಡಿಕೆ ಮಾಡಲು ಅನುಮತಿ ನೀಡಿದೆ. ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ ಗಳಲ್ಲೂ ಕೂಡ ಠೇವಣಿ ಇಡುವ ಅವಕಾಶದಲ್ಲಿ ಸಾಮಾನ್ಯರಿಗಿಂತ ಹಿರಿಯ ನಾಗರಿಕರಿಗೆ 50 ಬೇಸ್ ಪಾಯಿಂಟ್ ಅಧಿಕವಾಗಿರುತ್ತದೆ.

ಸಾಮಾನ್ಯರಿಗೆ 7% ಪ್ರತಿಶಹ ಬಡ್ಡಿದರ ಅನ್ವಯವಾದರೆ ಹಿರಿಯ ನಾಗರಿಕರಿಗೆ 7.50% ಪರ್ಸೆಂಟ್ ನೀಡಲಾಗುತ್ತದೆ. ಆದರೆ SBI ಪರಿಚಿಸಿದ್ದ ವಿ ಕೇರ್ ಫಿಕ್ಸ್ಡ್ ಡೆಪಾಸಿಟ್ ಸ್ಕೀಮ್ ನಲ್ಲಿ 100 ಬೇಸ್ ಪಾಯಿಂಟಗಳನ್ನು ಅಧಿಕವಾಗಿ ನೀಡಲಾಗಿತ್ತು. ಹೇಗಂದರೆ ಸಾಮಾನ್ಯವಾಗಿ ಅನ್ವಯವಾಗುವ 50 ಹಿರಿಯ ನಾಗರಿಕರ ಬೇಸ್ ಪಾಯಿಂಟ್ ಜೊತೆಗೆ ವಿ ಕೇರ್ ಡೆಪಾಸಿಟ್ ವತಿಯಿಂದ 50 ಬೇಸ್ ಪಾಯಿಂಟ್ ನೀಡುತ್ತಿತ್ತು.

SBI ಮಾತ್ರವಲ್ಲದೇ ICICI ಬ್ಯಾಂಕ್ ಕೂಡ ಇಂತಹದೊಂದು ಯೋಜನೆಯನ್ನು ಕೈಗೊಂಡಿತ್ತು ಐಸಿಐಸಿಐನ ಗೋಲ್ಡನ್ ಇಯರ್ಸ್ ಎಫ್ಡಿ ಸ್ಕೀಮ್ ನಲ್ಲಿ (Golden Uears FD Scheme) ಹಿರಿಯ ನಾಗರಿಕರಿಗೆ 50 ಬೇಸ್ ಪಾಯಿಂಟಾ ಜೊತೆಗೆ ಹೆಚ್ಚುವರಿಯಾಗಿ 10 ಬೇಸ್ ಪಾಯಿಂಟ್ ನೀಡಲಾಗುತ್ತಿತ್ತು. HDFC ಕೂಡ ಹಿಂದೊಮ್ಮೆ ಇಂತಹದೊಂದು ಯೋಜನೆಯನ್ನು ಪರಿಚಯಿಸತ್ತು. ಆದರೆ ಈಗ ಆ ಕಾಲಾವಧಿ ಮುಕ್ತಾಯವಾಗಿದೆ.

SBI ನ V-Care ಸ್ಕೀಮ್ ಕಾಲಾವಧಿ ಕೂಡ ಅಂತಿಮವಾಗಿತ್ತು ಆದರೆ ಇದಕ್ಕೆ ಕಂಡುಬಂದ ಉತ್ತಮ ಪ್ರತಿಕ್ರಿಯೆ ಕಾರಣದಿಂದಾಗಿ ಈಗ ಇದನ್ನು ಮಾರ್ಚ್ 31ರವರೆಗೂ ಕೂಡ ವಿಸ್ತರಿಸಿ ಅನುಕೂಲ ಮಾಡಿಕೊಟ್ಟಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹಿರಿಯ ನಾಗರಿಕರು ಇನ್ನು ಹೆಚ್ಚಿನ ಲಾಭಗಳನ್ನು ಗಳಿಸಬಹುದು. SBI ವಿ-ಕೇರ್ ಯೋಜನೆ ಕುರಿತ ಕೆಲ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

* 60 ವರ್ಷ ಮೇಲ್ಪಟ್ಟ SBI ಗ್ರಾಹಕರು ಮಾತ್ರ ಈ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ.
* 5 ವರ್ಷದಿಂದ 10 ವರ್ಷಗಳ ಅವಧಿವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇತರ ಎಲ್ಲ ಯೋಜನೆಗಳಿಗಿಂತ ಅತ್ಯಧಿಕ ಬಡ್ಡಿ ದರ ಲಭ್ಯವಿದೆ.

* ನೆಟ್ ಬ್ಯಾಂಕಿಂಗ್ (Net Banking), ಯೋನೋ ಆಪ್ (Yono App) ಅಥವಾ ಬ್ಯಾಂಕ್ ಶಾಖೆಗೆ (through Bank) ಭೇಟಿ ಕೊಡುವ ಮೂಲಕ ಈ ಯೋಜನೆ ಅಡಿ ಹೂಡಿಕೆ ಮಾಡಬಹುದು.
* ಯೋಜನೆಯಡಿ ಗರಿಷ್ಠ 2 ಕೋಟಿವರೆಗೆ ಠೇವಣಿ ಇಡಬಹುದು.
* ಠೇವಣಿಯ ಆಧಾರದ ಮೇಲೆ ಸಾಲ (Loan) ಪಡೆಯುವ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ SBI ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ ಅಥವಾ ನೇರವಾಗಿ SBI ಶಾಖೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now