ಮೊರಾರ್ಜಿ ಶಾಲೆಗಳು, ನವೋದಯ ಶಾಲೆಗಳಲ್ಲಿ ಪರೀಕ್ಷೆಗಳು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಇದೇ ರೀತಿ ಕೇಂದ್ರದಲ್ಲಿ ಮತ್ತೊಂದು ಪರೀಕ್ಷೆ ನಡೆಯುತ್ತದೆ. ಅಖಿಲ ಭಾರತ ಸೈನಿಕ ಶಾಲೆಗಳಲ್ಲಿ (AISSEE) ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ನಡೆಸಿ ಅರ್ಹ ಅಭ್ಯರ್ಥಿಗಳನ್ನು 6ನೇ ತರಗತಿ ಮತ್ತು 9ನೇ ತರಗತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ದೇಶದಾದ್ಯಂತ 33+ 16 ಹೊಸ ಸೈನಿಕ್ ಶಾಲೆಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳಲು AISSEE -2024 ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆ ಆದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಈ ಸೈನಿಕ್ ಶಾಲೆಗಳು ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಗಳಾಗಿ CBSE ಅಂಗಸಂಸ್ಥೆಯಾಗಿರುತ್ತವೆ. ಈ ಶಾಲೆಗಳಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ನೇವಲ್ ಅಕಾಡೆಮಿ ಹಾಗೂ ಇತರೇ ಟ್ರೈನಿಂಗ್ ಅಕಾಡೆಮಿಗಳಿಗಾಗಿ ಅಭ್ಯರ್ಥಿಗಳನ್ನು ತಯಾರು ಮಾಡಲಾಗುತ್ತದೆ.
ಹಾಗಾಗಿ AISSEE – 2024 ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದಕ್ಕೆ ಇರುವ ಮಾನದಂಡಗಳೇನು ಮತ್ತು ಯಾವ ತರಗತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು? ಬೇಕಾಗುವ ದಾಖಲೆಗಳು ಏನು? ಅರ್ಜಿ ಸಲ್ಲಿಸುವ ರೀತಿ ಹೇಗೆ? ಅರ್ಜಿ ಶುಲ್ಕ ಎಷ್ಟಿರುತ್ತದೆ ಮತ್ತು ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಇದಕ್ಕೆ ಕೊನೆಯ ದಿನಾಂಕ ಏನು? ಎನ್ನುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಪೂರ್ತಿ ಮಾಹಿತಿಗಾಗಿ ತಪ್ಪದೆ ಅಂಕಣವನ್ನು ಕೊನೆಯವರೆಗೂ ಓದಿ ಹಾಗೂ ಈ ಉಪಯುಕ್ತ ಮಾಹಿತಿಯು ಅನೇಕ ವಿದ್ಯಾರ್ಥಿಗಳ ಬದುಕನ್ನು ಬೆಳಗಲಿದ್ದು ಇದೇ ಕಾರಣಕ್ಕಾಗಿ ತಪ್ಪದೇ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಅರ್ಜಿ ಸಲ್ಲಿಸಲು ಯಾರು ಅರ್ಹರು:-
* ಪ್ರಸಕ್ತ ವರ್ಷದಲ್ಲಿ ಮಾನ್ಯತೆ ಪಡೆದ ಯಾವುದಾದರೂ ಒಂದು ಶಾಲೆಯಲ್ಲಿ 5ನೇ ತರಗತಿ ಮತ್ತು 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
* 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ದಿನಾಂಕ 31-03-2024 ಗೆ 10 ರಿಂದ 12 ವರ್ಷಗಳ ನಡುವೆ ಇರಬೇಕು.
* 9ನೇ ತರಗತಿಗೆ ಪ್ರವೇಶಾತಿ ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ದಿನಾಂಕ 31-03-2024 ಗೆ ಸರಿಯಾಗಿ 13 ರಿಂದ 15 ವರ್ಷಗಳ ನಡುವೆ ಇರಬೇಕು.
ಪರೀಕ್ಷಾ ವಿಧಾನ:-
* ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಪರೀಕ್ಷೆಯಾಗಿರುತ್ತದೆ.
* ಓಎಂಆರ್ ಶೀಟ್ ಆಧಾರಿತ ಪರೀಕ್ಷೆಯಾಗಿರುತ್ತದೆ.
* ದೇಶದಾದ್ಯಂತ 186 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ.
ಅರ್ಜಿ ಶುಲ್ಕ:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ರೂ.400
* ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.550
* ಪ್ರವೇಶ ಪರೀಕ್ಷೆ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವ್ಯಾಲೆಟ್ ಮೂಲಕ ಪಾವತಿಸಬೇಕು.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-11-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-12-2024
* AISSEE -2024 ಪ್ರವೇಶ ಪರೀಕ್ಷೆ ದಿನಾಂಕ : 21-01-2024
ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ:-
www.nta.ac.in / https://exams.nta.ac.in/AISSEE