ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ದೇಶದಾದ್ಯಂತ ಬಹಳ ಹೆಸರುವಾಸಿಯಾಗಿದೆ. ಈ ಸಂಘಗಳಲ್ಲಿ ಸಿಗುವ ಯೋಜನೆಗಳ ಅನುದಾನವನ್ನು ಪಡೆದು ಅನೇಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೇ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸ್ಕಾಲರ್ ಶಿಪ್ ನೀಡುವ ಕಾರ್ಯಕ್ರಮವನ್ನು ಕೂಡ ಸಂಸ್ಥೆಯು ಆರಂಭಿಸಿರುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ನ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘಗಳ ಪಾಲುದಾರರಾಗಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯರ ಮಕ್ಕಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು 2007 ರಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅಂತೆಯೇ ಪ್ರತಿ ವರ್ಷವೂ ಕೂಡ ಇದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ಸುಜ್ಞಾನ ನಿಧಿ ಸ್ಕಾಲರ್ ಶಿಪ್ ಪಡೆಯಲು ಅರ್ಹತೆಗಳು:-
1. ಕಡ್ಡಾಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪ್ರಾಯೋಜಿಸುತ್ತಿರುವ ಪ್ರಗತಿಬಂಧು ಹಾಗೂ ಸ್ವ-ಸಹಾಯ ತಂಡಗಳಲ್ಲಿ ದಿನಾಂಕ 30.06.2021 ಕ್ಕಿಂತ ಮೊದಲು ಪ್ರಾರಂಭಿಸಲಾದ ಸಂಘದಲ್ಲಿ ಸದಸ್ಯರಾಗಿರಬೇಕು. ಜೊತೆಗೆ ವ್ಯವಹಾರದಲ್ಲಿ ಗುಂಪುಗಳು S, A ಮತ್ತು B ಗ್ರೇಡ್ ನಲ್ಲಿ ಇರಬೇಕು.
* ಒಂದು ಕುಟುಂಬದಿಂದ ಒಂದು ವಿದ್ಯಾರ್ಥಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
* ಹಳೆಯ ಸಂಘ ಬರ್ಕಾಸ್ತುಗೊಂಡು ಹೊಸ ಸಂಘಕ್ಕೆ ಸೇರ್ಪಡೆಯಾಗಿದ್ದರೆ ಒಂದು ವರ್ಷ ಪೂರ್ಣಗೊಂಡಿರಬೇಕು.
* ಶಿಷ್ಯವೇತನಕ್ಕೆ ಆಯ್ಕೆ ಮಾಡಿರುವ ಕೋರ್ಸ್ ನ ಪ್ರಥಮ ವರ್ಷದ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
* ವಿದ್ಯಾರ್ಥಿ ಹೆಸರಲ್ಲಿಯೇ ಬ್ಯಾಂಕ್ ಖಾತೆ ತೆರೆದಿರಬೇಕು ಮತ್ತು ಆ ಅಕೌಂಟ್ ಗೆ ಆಧಾರ್ ಲಿಂಕ್ ಆಗಿ ಚಾಲ್ತಿಯಲ್ಲಿ ಇರಬೇಕು.
* ಸುಜ್ಞಾನನಿಧಿ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳು ನಂತರ ವಿನಾಕಾರಣ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು, ಮಧ್ಯದಲ್ಲೇ ಕೋರ್ಸ್ ಬಿಟ್ಟು ಬೇರೆ ಶಿಕ್ಷಣಕ್ಕಾಗಲಿ, ಬೇರೆ ವೃತ್ತಿಗಾಗಲಿ ಸೇರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಮುಂದುವರೆಸುವುದಿಲ್ಲ.
* ಯೋಜನೆಯ ಖಾಯಂ ಸಿಬ್ಬಂದಿಗಳ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಲಭ್ಯವಿರುವುದಿಲ್ಲ.
* ಸುಜ್ಞಾನನಿಧಿ ಶಿಷ್ಯವೇತನವು SSLC, PUC, DEGREE ( 3 YEAR) BA, B-SC, B-COM, BBM, BCA, MA, M-SC, M-COM, MD, MCA, M-TECH, CA, POST BSC NURSING, ಒಂದು ವರ್ಷದ ಅವಧಿಯ ಹಾಗೂ CERTIFICATE ಕೋರ್ಸ್ಗಳ, LATERAL ENTRY ಮೂಲಕ ಎರಡನೇ ವರ್ಷದ ಕೋರ್ಸಿಗೆ ಪ್ರವೇಶ ಪಡೆಯುವ, CORESPONDENCE ಮೂಲಕ ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವುದಿಲ್ಲ.
* BE, B.TECH, MBBS, BAMS, BDS, BHMS, BVA, BNYS, BVSC, MBA, D.Ed, B.Ed, NURSING(General), BSC(NURSING), ITI, LAB TECHNICIAN, DIPLOMA, LLB, PARAMEDICAL SCIENCE, BSC (HORTI), BSC (AGRI), BSC (FORESTRY), BSC (FISHERIES,) PHARM.D, PHYSIOTHERAPY, DIPLOMA AGRI, B.PHARM, D.PHARM, B.ARCHITECTURE ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
* ತಾಂತ್ರಿಕ ಮತ್ತು ವೃತ್ತಿಪರ ಕೋರ್ಸಿಗೆ ಒಂದು ಬಾರಿ ಶಿಷ್ಯವೇತನ ಪಡೆದವರು ಎರಡನೇ ಬಾರಿಗೆ ಇತರ ಕೋರ್ಸುಗಳ ಅಧ್ಯಯನಕ್ಕೆ ಅರ್ಜಿ ಸಲ್ಲಿಸಲಾಗುವುದಿಲ್ಲ.(ಉದಾ: DIPLOMA ಮೂಲಕ BE ಮಾಡುವ ವಿದ್ಯಾರ್ಥಿಗಳು)
* SDM ಎಜುಕೇಶನಲ್ ಟ್ರಸ್ಟ್ (ರಿ) ಉಜಿರೆ ಇಲ್ಲಿ ನೀಡುವ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳು ಸುಜ್ಞಾನನಿಧಿ ಶಿಷ್ಯವೇತನ ಪಡೆಯಲು ಸಾಧ್ಯವಿಲ್ಲ.
ಸಿಗುವ ಸಹಾಯಧನ:-
* ನಿಗದಿಪಡಿಸಿರುವ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ 2 ರಿಂದ 5 ವರ್ಷ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಗಳಿಗೆ ಆಯ್ದ ಕೋರ್ಸಿಗೆ ಅನುಗುಣವಾಗಿ ರೂ 400 ರಿಂದ ರೂ 1000 ಸಾವಿರದವರೆಗೆ ಮಾಸಿಕ ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ.
ಅರ್ಜಿ ಸಲ್ಲಿಸುವ ವಿಧಾನ:-
* ವಿದ್ಯಾರ್ಥಿಗಳು Online ಮೂಲಕ Sujnananidhi App ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಅರ್ಜಿ ಸಲ್ಲಿಸಬಹುದು.
* SKDRDP ಅಧಿಕೃತ ವೆಬ್ಸೈಟ್ಗೆ ತೆರಳಿ ಕೂಡ ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ಕುಟುಂಬದ ರೇಷನ್ ಕಾರ್ಡ್
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ
* ವಿದ್ಯಾರ್ಥಿಯು ಪ್ರಸಕ್ತ ಸಾಲಿನಲ್ಲಿ ಶಿಕ್ಷಣಕ್ಕೆ ದಾಖಲಾಗಿರುವ ಬಗ್ಗೆ ಶಾಲೆ ಅಥವಾ ಕಾಲೇಜಿನಿಂದ ನೀಡಿದ ಪ್ರಮಾಣ ಪತ್ರ ಅಥವಾ ಗುರುತಿನ ಚೀಟಿ ಅಧಿಕೃತ
* ವಿದ್ಯಾರ್ಥಿಯ ಪೋಷಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ(ರಿ.)ಪ್ರಾಯೋಜಿಸುತ್ತಿರುವ ಪ್ರಗತಿಬಂಧು ಹಾಗೂ ಸ್ವ-ಸಹಾಯ ತಂಡಗಳಲ್ಲಿ ಸದಸ್ಯರಾಗಿರುವ ಬಗ್ಗೆ ದಾಖಲೆ ಪತ್ರ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಮೊಬೈಲ್ ಸಂಖ್ಯೆ – 9591770660 6366358320