ಜೀವನದಲ್ಲಿ ಬಹಳ ಕ’ಷ್ಟವಾದ ವಿಷಯ ಏನೆಂದರೆ ಹಣವನ್ನು ಉಳಿಸುವುದು. ಎಲ್ಲರೂ ಕೂಡ ಹಣವನ್ನು ಗಳಿಸುವುದು ಹೇಗೆ ಎನ್ನುವುದನ್ನು ಕಲಿಸುತ್ತಾರೆ, ಹಣ ಗಳಿಸುವುದಕ್ಕೆ ಹಲವಾರು ಮಾರ್ಗಗಳು ಇವೆ ಆದರೆ ಗಳಿಸಿದ ಹಣವನ್ನು ಉಳಿಸುವುದೇ ಬಹಳ ದೊಡ್ಡ ವಿಚಾರ ಯಾಕೆಂದರೆ ನಾವು ದುಡಿಯುತ್ತಿರುವುದೇ ನಮ್ಮ ಅವಶ್ಯಕತೆಗಳಿಗಾಗಿ ಅದರಲ್ಲೂ ಕೆಲವರಿಗೆ ವಿಪರೀತವಾದ ಕಮಿಟ್ ಮೆಂಟ್ ಗಳು ಇರುತ್ತವೆ.
ನಾವು ದಿನನಿತ್ಯದ ಖರ್ಚು ವೆಚ್ಚಗಳನ್ನು ಭರಿಸುವುದರ ಜೊತೆಗೆ ನಮಗೆ ಮನೆ ಕಟ್ಟಿಸುವ ಅಥವಾ ಮದುವೆಗೆ ಖರ್ಚು ಮಾಡುವ ಅಥವಾ ಮಕ್ಕಳನ್ನು ಶಾಲೆಗೆ ಸೇರಿಸುವ ಅಥವಾ ಮನೆಯ ಸದಸ್ಯರಿಗೆ ಅನಾರೋಗ್ಯ ಆದಾಗ ಅವರಿಗೆ ಚಿಕಿತ್ಸೆ ಕೊಡಿಸುವ ಈ ರೀತಿಯಾದ ಆನೇಕ ಖರ್ಚುಗಳು ಎದುರಾಗುತ್ತ ಇರುತ್ತವೆ.
ದುಡಿಯಲು ಆರಂಭಿಸಿದ ಸಮಯದಿಂದ ಹಿಡಿದು ನಾವು ನಿವೃತ್ತರಾಗುವವರೆಗೂ ಕೂಡ ಒಂದೇ ಸಮನೆ ದುಡಿದರೂ ಕೂಡ ನಾವು ಅದುವರೆಗೂ ದುಡಿದ ಅರ್ಧ ಭಾಗವನ್ನು ಉಳಿಸಿದರೆ ಅದೇ ಬಹಳ ದೊಡ್ಡ ವಿಚಾರ ಹಾಗೂ ಅಷ್ಟು ಹಣ ಉಳಿಸಲು ಬಹುತೇಕ ಮಂದಿಗೆ ಸಾಧ್ಯವಾಗುವುದೇ ಇಲ್ಲ.
ಎಷ್ಟೋ ಜನರು ಅಲ್ಪ ಪ್ರಮಾಣದ ಹಣವನ್ನು ಕೂಡ ಉಳಿಸಿಕೊಳ್ಳುವುದಿಲ್ಲ ಇದು ಬಹಳ ದೊಡ್ಡ ತಪ್ಪು. ಯಾಕೆಂದರೆ ನಿವೃತ್ತಿಯ ನಂತರದ ಬದುಕು ಬಹಳ ಅಸಹಾಯಕವಾಗಿರುತ್ತದೆ, ಆ ಸಮಯದಲ್ಲಿ ನಾವು ಯಾರಿಗೂ ಹೊರೆ ಆಗಬಾರದು ಎಂದರೆ ನಮ್ಮ ರಕ್ಷಣೆಗಾದರೂ ನಾವು ಹಣ ಉಳಿಸಿಕೊಳ್ಳಬೇಕು ಇದು ಜಾಣತನ.
ಇದನ್ನು ಹೊರತು ಪಡಿಸಿ ದುಡ್ಡನ್ನು ದುಡಿಸುವ ಕಲೆ ಕಲಿತಿರಬೇಕು. ಆಗ ನಾವು ಬಹಳ ಚೆನ್ನಾಗಿ ನಮ್ಮ ಗೋಲ್ ಗಳನ್ನು ಬಹಳ ಬೇಗ ರೀಚ್ ಆಗಿ ಆರ್ಥಿಕ ಸಮಸ್ಯೆಗಳಿಂದ ಹೊರ ಬರಬಹುದು ಆದರೆ ಅದಕ್ಕೆ ಅಷ್ಟೇ ಪ್ರಮಾಣದ ತಾಳ್ಮೆ ಅವಶ್ಯಕತೆ ಇದೆ.
ಒಂದು ಕೋಟಿ ಹಣ ದುಡಿಯುವುದು ಎಷ್ಟೋ ಕ’ಷ್ಟ’ದ ವಿಚಾರ. ಕೆಲವರಿಗೆ ಒಂದು ಕೋಟಿ ಹಣ ಜೀವನಪೂರ್ತಿ ದುಡಿದರು ಕೂಡ ನೋಡಲಾಗುವುದಿಲ್ಲ. ಇನ್ನು ಕೆಲವರು ಅದು ನಮ್ಮಿಂದ ಸಾಧ್ಯವಾಗದ ಕೆಲಸ ಎಂದು ಒಂದು ಕೋಟಿ ಎನ್ನುತ್ತಿದ್ದಂತೆ ಹೇಳಿಬಿಡುತ್ತಾರೆ. ಆದರೆ ನಿಜಕ್ಕೂ ಒಂದು ಕೋಟಿ ದುಡಿಯುವುದು ಕ’ಷ್ಟ’ವೇ ಎಂದು ಆಲೋಚಿಸಿ ನೋಡಿದರೆ ಅದು ನಾವು ಉಳಿಸುವ ಹಾಗೂ ಹೂಡಿಕೆ ಮಾಡುವ ವಿಚಾರದ ಮೇಲೆ ನಿರ್ಧಾರ ಆಗುತ್ತದೆ.
ಯಾಕೆಂದರೆ ನಾವು ಏನಾದರೂ ರೂ.50,000 ಹಣವನ್ನು ಪ್ರತಿ ತಿಂಗಳು ಉಳಿಸುತ್ತೇವೆ ಎಂದರೆ ಕನಿಷ್ಠ 14 ವರ್ಷಗಳಾದರೂ ಪ್ರತಿ ತಿಂಗಳು 50 ಸಾವಿರ ಹಣ ಉಳಿಸಬೇಕು ಆದರೆ ನಾವೇನಾದರೂ ಈ ಹಣವನ್ನು ಮ್ಯೂಚುವಲ್ ಫಂಡ್ ಗಳಲ್ಲಿ ಇನ್ವೆಸ್ಟ್ ಮಾಡಿದರೆ ಕೇವಲ 9 ವರ್ಷಗಳಲ್ಲಿ ಅಂದರೆ ಐದಾರು ವರ್ಷ ಮುಂಚಿತವಾಗಿಯೇ ಒಂದು ಕೋಟಿ ಹಣವನ್ನು ಉಳಿಸಬಹುದು.
ನಾವು ಯಾವ ಮ್ಯೂಚುವಲ್ ಫಂಡ್ ಗಳನ್ನು ಆರಿಸಿಕೊಳ್ಳುತ್ತೇವೆ, ರಿಸ್ಕ್ ಎಷ್ಟು ಪ್ರಮಾಣದಲ್ಲಿದೆ ಇತ್ಯಾದಿ ವಿಚಾರಗಳು ಕೂಡ ಮಾನ್ಯವಾಗುತ್ತದೆ. ಆದರೆ ಲಾಭ ಆಗುವುದಂತೂ ಸುಳ್ಳಲ್ಲ ಅದಕ್ಕೆ ಹೇಳಿದ್ದು ಬಹಳ ತಾಳ್ಮೆ ಇರಬೇಕು ಎಂದು. ಇನ್ನೊಂದು ಆಶ್ಚರ್ಯಕರ ವಿಚಾರ ಏನೆಂದರೆ ನೀವೀಗ 1 ಕೋಟಿ ಹಣವನ್ನು 9 ವರ್ಷದಲ್ಲಿ ಗಳಿಸಿದ್ದೀರಾ ಎಂದುಕೊಳ್ಳೋಣ ಆಗ 1 ಕೋಟಿಯು 2 ಕೋಟಿ ಆಗುವುದಕ್ಕೆ ಕೇವಲ 4 ವರ್ಷ ಅಂದರೆ ಅರ್ಧಕ್ಕಿಂತಲೂ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಆದರೆ 1 ಕೋಟಿ ಆಗುತ್ತಿದ್ದಂತೆ ಇನ್ನೇನಾದರೂ ಖರ್ಚು ಹೇಳಿ ಅದನ್ನೆಲ್ಲ ಖರ್ಚು ಮಾಡಿ ಮತ್ತೆ ಜೀರೋ ಇಂದ ಸ್ಟಾರ್ಟ್ ಮಾಡಲು ಬಯಸುತ್ತಾರೆ. ಧೈರ್ಯವಾಗಿ ತಾಳ್ಮೆಯಿಂದ ಇನ್ನೊಂದು ಹೆಜ್ಜೆ ಇಟ್ಟಿದ್ದರೆ ಇನ್ನೊಂದು ಕೋಟಿಯನ್ನು ಕೆಲವೇ ದಿನಗಳಲ್ಲಿ ನೋಡಬಹುದು. ಈ ರೀತಿಯಾದ ಹಣಕಾಸಿನ ವಿಚಾರದ ಬೇಸಿಕ್ ಪ್ರತಿಯೊಬ್ಬರಿಗೂ ಗೊತ್ತಿರಬೇಕು ಹಾಗಾಗಿ ಈ ವಿಚಾರವನ್ನು ಇಂದು ಹಂಚಿಕೊಂಡಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!