Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಅನಸ್ತೇಶಿಯ (Anaesthesia) ಇದನ್ನು ಅರವಳಿಕೆ ಮದ್ದು, ಮತ್ತಿನ ಇಂಜೆಕ್ಷನ್ ಎಂದು ಕೂಡ ಕರೆಯುತ್ತಾರೆ ಎಲ್ಲರೂ ಕೂಡ ಈ ಹೆಸರನ್ನು ಕೇಳಿರುತ್ತೇವೆ ಆಪರೇಷನ್ ಮಾಡುವಾಗ ಅನಸ್ತೇಶಿಯ ಕೊಟ್ಟಿದ್ದರು ಎಂದು ಮಾತನಾಡುತ್ತಾರೆ ಹಾಗಾದರೆ ಆಪರೇಷನ್ ಮಾಡುವವರಿಗೆ ಯಾಕೆ ಅನಸ್ತೇಶಿಯ ಕೊಡಬೇಕು? ಅನಸ್ತೇಶಿಯ ಕೊಡುವುದರ ಉದ್ದೇಶ ಏನು?
ಅದನ್ನು ಯಾಕೆ ಬೆನ್ನು ಮೂಳೆಗಳಿಗೆ ಕೊಡುತ್ತಾರೆ ಎನ್ನುವ ಮಾಹಿತಿ ಅನೇಕರಿಗೆ ತಿಳಿದಿರುವುದಿಲ್ಲ ಮತ್ತು ಅನಸ್ತೇಶಿಯ ಯಾವ ರೂಪದಲ್ಲಿ ಇದೆ ಯಾರು ಅದನ್ನು ಕೊಡಬೇಕು ಕೊಟ್ಟಾಗ ಅವರ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎನ್ನುವುದರ ಕುರಿತು ಕುತೂಹಲ ಇದ್ದೇ ಇದೆ ಇಂದು ಈ ಅಂಕಣದಲ್ಲಿ ನಾವು ಇದೇ ವಿಚಾರವಾಗಿ ತಿಳಿಸುತ್ತೇವೆ.
ಹಿಂದೆಲ್ಲ ಅನಸ್ತೇಶಿಯ ಕೊಡದೆ ರೋಗಿಯನ್ನು ಚಿಕಿತ್ಸೆ ಮಾಡುತ್ತಿದ್ದರು. ಆಗ ಆತನಿಗೆ ಮಧ್ಯಪಾನ ಕೊಟ್ಟರು ಅವರಿಗೆ ಇಷ್ಟವಾದದ್ದನ್ನು ಕೊಟ್ಟರು ಅಥವಾ ಆಯುರ್ವೇದಿಕ್ ಔಷಧಿಗಳನ್ನು ಕೊಟ್ಟರು ಕೂಡ ಸಹಿಸಿಕೊಳ್ಳಲಾಗದಷ್ಟು ನೋವಾಗುತ್ತಿತ್ತು. ಈ ರೀತಿ ನೋವಾಗಲು ಕಾರಣ ಏನೆಂದರೆ.
ನಮ್ಮ ದೇಹದ ಯಾವುದೇ ಭಾಗಕ್ಕೆ ನೋವಾದರೂ ಕೂಡ ನರಗಳ ಮೂಲಕ ಸಂದೇಶ ಮೆದಳಿಗೆ ಹೋಗುತ್ತದೆ ಮತ್ತು ಮೆದುಳು ಅದಕ್ಕೆ ಪ್ರತಿಕ್ರಿಯಿಸಿ ನೋವುಂಟಾಗುತ್ತದೆ. ಆಪರೇಷನ್ ಆಗುವ ಸಮಯಗಳಲ್ಲಂತೂ ಖಂಡಿತವಾಗಿಯೂ ದೇಹದ ಮೇಲೆ ಆಗುವ ನೋವಿನ ಆಳವನ್ನು ವಿವರಿಸಲು ಸಾಧ್ಯವಿಲ್ಲ.
ಆದಕಾರಣ ರೋಗಿಯನ್ನು ಅನಸ್ತೇಶಿಯ ಕೊಟ್ಟು ಪ್ರಜ್ಞೆ ತಪ್ಪಿಸಿ ಉಪಚರಿಸುತ್ತಾರೆ. ಅನಸ್ತೇಶಿಯಾ ಎನ್ನುವುದು ಕೂಡ ಒಂದು ರೀತಿಯ ಡ್ರಗ್ ಸಂಶೋಧನೆಗಳ ಪ್ರಕಾರ ಅದು ಇತ್ತೀಚೆಗೆ ಮಾದಕ ವಸ್ತು ಎಂದು ಬ್ಯಾನ್ ಆಗಿರುವ ಕುಕೆನ್ (Cucaine) ರೀತಿಯ ಅಂಶಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಇದು ನರವ್ಯೂಹದಿಂದ ಮೆದುಳಿಗೆ ಹೋಗುವ ಸಂದೇಶವನ್ನು ಬ್ಲಾಕ್ ಮಾಡುತ್ತದೆ, ಇದು ಹೇಗೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳುವ ಸಂಶೋಧನೆಗಳು ಇಂದಿಗೂ ನಡೆಯುತ್ತಿವೆ. ಘನ, ದ್ರವ ಮತ್ತು ಅನಿಲ ರೂಪದಲ್ಲಿ ಕೂಡ ಇದು ಇರುತ್ತದೆ. ರೋಗಿಯ ಕಂಡಿಶನ್ ಮತ್ತು ಅವರಿಗೆ ಮಾಡುತ್ತಿರುವ ಆಪರೇಷನ್ ಆಧಾರದ ಮೇಲೆ ಅಳವಳಿಕೆ ತಜ್ಞರು ಮಾತ್ರ ಈ ಇಂಜೆಕ್ಷನ್ ಅನ್ನು ರೋಗಿಗೆ ಕೊಡಬೇಕು.
ಹಾಗೆ ಎಲ್ಲಾ ಆಪರೇಷನ್ ಗಳಿಗೂ ಕೂಡ ಒಂದೇ ರೀತಿ ಅನಸ್ತೇಷಿಯಾ ಕೊಡುವುದಿಲ್ಲ. ಮೂರು ರೀತಿಯಲ್ಲಿ ಅನಸ್ತೇಶಿಯವನ್ನು ಡಿವೈಡ್ ಮಾಡಲಾಗುತ್ತದೆ. ಸಣ್ಣ ಪ್ರಮಾಣದ ಶಸ್ತ್ರ ಚಿಕಿತ್ಸೆಗಳು ಅಂದರೆ ಕಣ್ಣಿನ ಆಪರೇಷನ್ ಅಥವಾ ದಂತ ಚಿಕಿತ್ಸೆಗಳ ಸಮಯದಲ್ಲಿ ಲೋಕಲ್ ಅನಸ್ತೇಶಿಯಾ (local anaesthesia) ಕೊಡುತ್ತಾರೆ.
ಹೆಚ್ಚಿನ ಸಮಯದಲ್ಲಿ ಇದನ್ನು ನೋವಿರುವ ಭಾಗಕ್ಕೆ ಅಂದರೆ ಹಲ್ಲುಗಳ ಚಿಕಿತ್ಸೆ ಸಮಯದಲ್ಲಿ ಹಲ್ಲಿಗೆ ಮಾತ್ರ ಕೊಡುತ್ತಾರೆ ಇದರಿಂದ ಆ ಭಾಗದಲ್ಲಿ ಆಗುವ ನೋವು ಮಾತ್ರ ಗೊತ್ತಾಗುವುದಿಲ್ಲ ಆದರೆ ವ್ಯಕ್ತಿ ಪ್ರಜ್ಞೆಯಲ್ಲಿಯೇ ಇರುತ್ತಾರೆ. ರೀಜನಲ್ ಅನಸ್ತೆಶಿಯಾ (regional Anaesthesia) ಎನ್ನುವುದನ್ನು ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ ಅಥವಾ ಎದೆ ಭಾಗಕ್ಕಿಂತ ಕೆಳಗಿನ ಭಾಗದ ಆಪರೇಷನ್ಗಳಲ್ಲಿ ನೀಡುತ್ತಾರೆ.
ಇದನ್ನು ಶಸ್ತ್ರಚಿಕಿತ್ಸೆ ಮಾಡುವ ಭಾಗಕ್ಕೆ ಅಥವಾ ಬೆನ್ನು ಮೂಳೆಗೆ ಕೊಡುತ್ತಾರೆ, ಬೆನ್ನು ಮೂಳೆಗಳ ಮೂಲಕವೇ ಮೆದುಳಿಗೆ ಸಂದೇಶ ಹೋಗುವುದರಿಂದ ಈ ಅನಸ್ತೇಶಿಯ ಆದನ್ನು ಬ್ಲಾಕ್ ಮಾಡಿ ತಡೆಯುತ್ತದೆ, ಅಷ್ಟು ಸಮಯದಲ್ಲಿ ಚಿಕಿತ್ಸೆ ಮುಗಿಸಿರುತ್ತಾರೆ. ಈ ಅನಸ್ತೇಶಿಯ ಪಡೆದವರು ಕೂಡ ಲೈಟ್ಸ್ ಸ್ಲೀಪ್ ಅವಸ್ಥೆಯಲ್ಲಿ ಇರುತ್ತಾರೆ.
ಜನರಲ್ ಅನೆಸ್‌ತೇಶಿಯಾ (general Anaesthesia) ಎನ್ನುವುದನ್ನು ದೊಡ್ಡ ದೊಡ್ಡ ಆಪರೇಷನ್ ಗಳಲ್ಲಿ ಅಂದರೆ ಅಂಗಾಂಗಗಳ ಬದಲಾವಣೆ ಅಥವಾ ಹಾರ್ಟ್ ಸರ್ಜರಿ ಇನ್ನಿತರ ದೊಡ್ಡ ಸರ್ಜರಿ ನಡೆಯುವಾಗ ಕೊಡುತ್ತಾರೆ. ಆ ಸಮಯದಲ್ಲಿ ವ್ಯಕ್ತಿಯು ಚಲನೆ ಆಗಬಾರದು ಎನ್ನುವ ಕಾರಣಕ್ಕಾಗಿ ಪ್ರಜ್ಞೆ ತಪ್ಪಿಸುತ್ತಾರೆ.
ಆ ವ್ಯಕ್ತಿಗೆ ಆಪರೇಷನ್ ಆದ ಹಲವು ಸಮಯದವರೆಗೆ ಪ್ರಜ್ಞೆ ಇರುವುದಿಲ್ಲ ನಂತರ ರಿವರ್ಸ್ ಅನಸ್ತೇಶಿಯಾ ಕೊಟ್ಟು ಎಚ್ಚರಕ್ಕೆ ತರುತ್ತಾರೆ. ಆಗ ವ್ಯಕ್ತಿಗೆ ಅಷ್ಟು ಹೊತ್ತು ಏನು ಆಗಿತ್ತು ಎನ್ನುವುದು ಗೊತ್ತಾಗುವುದಿಲ್ಲ ಆ ವ್ಯಕ್ತಿಯ ಹೃದಯದ ಬಡಿತ, ಬಾಡಿ ಟೆಂಪರೇಚರ್ ಎಲ್ಲವನ್ನು ಕೂಡ ಪಕ್ಕದಲ್ಲಿ ಇದ್ದು ಅರವಳಿಕೆ ತಜ್ಞರು ನೋಡಿಕೊಳ್ಳುತ್ತಾರೆ, ಇದೆಲ್ಲವೂ ವೈದ್ಯರ ಕಂಟ್ರೋಲ್ ನಲ್ಲಿಯೇ ಇರುತ್ತದೆ.
ಅನೇಕರು ಅನಸ್ತೇಶಿಯಾ ಪಡೆಯಲು ಭಯಪಡುತ್ತಾರೆ ಆದರೆ ಮೆಡಿಕಲ್ ಹೇಳುವ ಪ್ರಕಾರ ಅನಿಸ್ತೇಶಿಯಾಕ್ಕೆ ಭಯಪಡುವ ಅಗತ್ಯ ಇಲ್ಲ. ಅನಸ್ತೇಶಿಯ ತೆಗೆದುಕೊಳ್ಳುವ ಸ್ವಲ್ಪ ಸಮಯದ ಮುಂಚೆ ಯಾವುದೇ ರೀತಿಯ ಊಟ ಸೇವಿಸಬಾರದು ಎಂದು ಹೇಳುತ್ತಾರೆ.
ಯಾಕೆಂದರೆ ಆ ಸಮಯದಲ್ಲಿ ವಾಂತಿ ಆಗಬಹುದು ದೇಹವು ಕೂಡ ಸ್ಥಗಿತವಾಗುತ್ತಿರುವುದರಿಂದ ನೀವು ಪ್ರತಿಕ್ರಿಸದೆ ಇದ್ದಲ್ಲಿ ಅದು ಶ್ವಾಸಕೋಶಗಳನ್ನು ತಲುಪಿ ಪ್ರಾಣ ಹಾನಿಯಾಗಬಾರದು ಎನ್ನುವಂತಹ ಕಾರಣದಿಂದಾಗಿ ಈ ರೀತಿ ಹೇಳುತ್ತಾರೆ ಅಷ್ಟೇ. ಅದನ್ನು ಹೊರತುಪಡಿಸಿ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ ಎಂದೇ ಹೇಳಲಾಗುತ್ತದೆ.