ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ…

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನೆ ನಿರ್ಮಾಣ ಮಾಡಿಕೊಳ್ಳುವ ಬಡ ಕುಟುಂಬಗಳಿಗೆ ನೆರವಾಗುವ ಸಲುವಾಗಿ ಅನೇಕ ಯೋಜನೆಗಳನ್ನು (government housing Scheme) ರೂಪಿಸುವೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಕರ್ನಾಟಕ ಸರ್ಕಾರದ ನಮ್ಮ ಮನೆ ಯೋಜನೆ ಮತ್ತು ಬಸವ ವಸತಿ ಯೋಜನೆ ಇತ್ಯಾದಿಗಳನ್ನು ಹೆಸರಿಸಬಹುದು.

WhatsApp Group Join Now
Telegram Group Join Now

ಪ್ರಸ್ತುತವಾಗಿರಾಜ್ಯ ಸರ್ಕಾರವು ಬಸವ ವಸತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮನೆಗಳನ್ನು ನಿರ್ಮಾಣ (Build House) ಮಾಡಿಕೊಳ್ಳಲು ‌ ಅವಕಾಶ ನೀಡಿದೆ. ಅದಕ್ಕಾಗಿ ಫಲಾನುಭವಿಗಳ ಕಡೆಯಿಂದ ಸಾಕಷ್ಟು ಅರ್ಜಿಗಳು ಕೂಡ ಸರ್ಕಾರಕ್ಕೆ ಸಂದಾಯ ಆಗುತ್ತಿದ್ದು ಇದರ ಕುರಿತಾದ ಒಂದು ಬಿಗ್ ಅಪ್ಡೇಟ್ ಇದೆ ಆ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಚಾಮರಾಜನಗರ ಹಾಗೂ ಹನೂರು ತಾಲೂಕುಗಳಲ್ಲಿ ಬಸವ ವಸತಿ ಯೋಜನೆಯ ವತಿಯಿಂದ 5,315 ಹಾಗೂ ಡಾ ಬಿ.ಆರ್ ಅಂಬೇಡ್ಕರ್ ಯೋಜನೆ ಅಡಿಯಲ್ಲಿ 3,349 ಮನೆಗಳು ಸೇರಿದಂತೆ ಒಟ್ಟು 8,664 ಮನೆಗಳು ಕಳೆದ ತಿಂಗಳಿನಲ್ಲಿ ಮಂಜೂರಾಗಿವೆ. ಸದ್ಯದಲ್ಲಿಯೇ ಇನ್ನಷ್ಟು ಫಲಾನುಭವಿಗಳಿಗೆ ವಸತಿ ಹಂಚಿಕೆ ಮಾಡುವ ಉದ್ದೇಶವನ್ನು ಕೂಡ ಸರ್ಕಾರ ಹೊಂದಿದೆ ಆದರೆ ಅರ್ಜಿ ಸಲ್ಲಿಸುವ ವೇಳೆ ಕೆಲ ತಾಂತ್ರಿಕ ಸಮಸ್ಯೆಗಳು (technical issues) ಉಂಟಾಗಿವೆ.

ಆಯಾ ಗ್ರಾಮ ಪಂಚಾಯತ್ (gram Panchayat) ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡಿ ಅಂತಹವರಿಗೆ ಅನುಮತಿ ನೀಡಲು ವಸತಿ ಇಲಾಖೆ ಸೂಚಿಸಿತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಗ್ರಾಮ ಸಭೆಯಲ್ಲಿ ತೀರ್ಮಾನಿಸಿ ಅಥವಾ ಭಾಗದ ಶಾಸಕರು ಅರ್ಹರನ್ನು ಅನುಮೋದನೆ ಮಾಡಬೇಕಿತ್ತು ನವೆಂಬರ್ ತಿಂಗಳ 30ನೆ ತಾರೀಕು ಇದಕ್ಕೆ ಕಡೆಯ ದಿನಾಂಕವಾಗಿತ್ತು.

ಅನೇಕರಿಗೆ ತಡವಾಗಿ ಮಾಹಿತಿ ತಿಳಿದಿದ್ದರಿಂದ ಮತ್ತು ಸರ್ವ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ಅರ್ಜಿ ಸಲ್ಲಿಸಲು ಸಮಸ್ಯೆಯಾಗಿ ಮತ್ತು ಅರ್ಜಿ ಸಲ್ಲಿಕೆ ಬೇಕಾದ ದಾಖಲೆಗಳನ್ನು ಹೊಂದಿಸಲು ಕಾಲಾವಕಾಶ ಬಹಳ ಕಡಿಮೆ ಇದ್ದದ್ದರಿಂದ ವಸತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಫಲಾನುಭವಿಗಳಿಗೆ ಕ’ಷ್ಟವಾಗುತ್ತಿತ್ತು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಯಾದ ಆದಾಯ ಪ್ರಮಾಣ ಪತ್ರ ಇನ್ನಿತರ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಫಲಾನುಭವಿಗಳು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ, ನವೆಂಬರ್ 30ರ ಒಳಗೆ ಆ ದಾಖಲೆಗಳನ್ನು ಸಲ್ಲಿಸಲೇಬೇಕಾದ ಅನಿವಾರ್ಯತೆ ಮತ್ತು ಈ ವಿಷಯವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗೊಂದಲ ಇದ್ದ ಕಾರಣದಿಂದಾಗಿ.

ಎಲ್ಲಾ ಸಮಸ್ಯೆಗಳನ್ನು ಗಮನಿಸಿರುವ ಸರ್ಕಾರ ಚಳಿಗಾಲದ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ಗ್ರಾಮ ಪಂಚಾಯಿತಿಗಳು ಕೇಳಿರುವಂತೆ ಡಾಟಾ ಎಂಟ್ರಿ ಮತ್ತು ಅನುಮೋದನೆ ಹಾಗೂ ಫಲಾನುಭವಿಗಳ ಆಯ್ಕೆಗಾಗಿ ಡಿಸೆಂಬರ್ 30ರವರೆಗೆ ಅವಧಿ ನೀಡಿದೆ ಈ ಬಗ್ಗೆ ವಸತಿ ಇಲಾಖೆಯೂ ಪ್ರಕಟಣೆ ಹೊರಡಿಸಿ ಮಾಹಿತಿ ತಿಳಿಸಿದೆ. ಹಾಗಾಗಿ ಗ್ರಾಮ ಪಂಚಾಯತ್ ಗಳು ಇನ್ನೂ ಒಂದು ತಿಂಗಳ ಕಾಲಾವಕಾಶವನ್ನು ಪಡೆದುಕೊಂಡು ಫಲಾನುಭವಿಗಳ ಆಯ್ಕೆ ಮಾಡಬಹುದು.

ಕರ್ನಾಟಕ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿ 2021 -22 ಹಾಗೂ 22- 23ರ ಸಾಲಿನಲ್ಲಿ ಸಾಕಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ. ಆದರೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ಲಾಗಿನ್ ಹಂತದಲ್ಲಿ ಅನುಮೋದನೆ ಬಾಕಿ ಇರುವ ಫಲಾನುಭವಿಗಳು ಹಾಗೂ ಇನ್ನೂ ಆಯ್ಕೆಯಾಗದೆ ಇರುವ 1,35,976 ಫಲಾನುಭವಿಗಳನ್ನು ಕೂಡ ಆಯ್ಕೆ ಮಾಡಿ.

ಡಾಟಾ ಎಂಟ್ರಿ ಮಾಡಿಸಿ ಅವರಿಗೆ ಅನುಮೋದನೆ ನೀಡುವ ಕಾರ್ಯ ಇನ್ನೂ ನೆರವೇರದೇ ಇರುವ ಕಾರಣದಿಂದಾಗಿ ಗಡುವು ವಿಸ್ತರಣೆ ಮಾಡಲಾಗಿದೆ. ಸರ್ಕಾರದಿಂದ ಅವಧಿ ವಿಸ್ತರಣೆ ಮಾಡಿರುವುದು ಬಹಳ ಸಮಾಧಾನಕರ ವಿಚಾರವಾಗಿದ್ದು ಈ ಸದವಕಾಶವನ್ನು ಅವಶ್ಯಕತೆ ಇರುವವರ ಸದುಪಯೋಗಪಡಿಸಿಕೊಳ್ಳಲಿ ಎನ್ನುವುದೇ ನಮ್ಮ ಆಶಯ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now