ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಜಾರಿಗೆ ಬಂದಿದ್ದು ಇದರಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ (Anna bhagya and Gruhalakshmi amount money) ಮೂಲಕ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಧನಸಹಾಯ ಪಡೆಯುತ್ತಿದ್ದಾರೆ.
ಈ ಹಣವು DBT ಮೂಲಕ ನೇರವಾಗಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹೋಗುತ್ತಿದೆ. ಆದರೆ ಇನ್ನು ಸಹ ಅನೇಕ ಮಹಿಳೆಯರು ನಮ್ಮ ಖಾತೆಗೆ ಹಣ ಬಂದಿಲ್ಲ ಎನ್ನುವ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ. ನಿಮ್ಮ ಖಾತೆಗೆ ಹಣ ಬಂದಿದೆ ಇಲ್ಲವೋ ಎನ್ನುವುದನ್ನು ಮನೆಯಲ್ಲಿ ಕುಳಿತು ಮೊಬೈಲ್ (checking through Android phone) ನಲ್ಲಿಯೇ ಈಗ ನಾವು ಹೇಳುವ ಈ ವಿಧಾನದ ಮೂಲಕ ಚೆಕ್ ಮಾಡಿ ನಿಖರವಾಗಿ ತಿಳಿದುಕೊಳ್ಳಿ.
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ Chrome ಗೆ ಹೋಗಿ Ahara ಎಂದು ಟೈಪ್ ಮಾಡಿ
* ಕರ್ನಾಟಕ ಸರ್ಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಪುಟ ಓಪನ್ ಆಗುತ್ತದೆ, ಇ-ಸೇವೆಗಳು ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ
* ಸ್ಕ್ರೀನ್ ಎಡಭಾಗದಲ್ಲಿ ಇರುವ ಆಪ್ಷನ್ ಲಿಸ್ಟ್ ನಲ್ಲಿ ಇ-ಸ್ಥಿತಿ ಎನ್ನುವುದನ್ನು ಕ್ಲಿಕ್ ಮಾಡಿ, DBT ಸ್ಥಿತಿ ಎನ್ನುವುದನ್ನು ಸೆಲೆಕ್ಟ್ ಮಾಡಿ
* ಸ್ಕ್ರೀನ್ Ration card Status Module ಪುಟ ತಿಳಿದುಕೊಳ್ಳುತ್ತದೆ. ಅದರಲ್ಲಿ ಜಿಲ್ಲಾವಾರು ವಿಭಾಗ ಇದ್ದು ಸಪರೇಟ್ ಲಿಂಕ್ ಇರುತ್ತದೆ, ನಿಮ್ಮ ಜಿಲ್ಲೆಯ ಲಿಂಕ್ ನ್ನು ಕ್ಲಿಕ್ ಮಾಡಿ.
* ಹೊಸ ಪಡಿತರ ಚೀಟಿಯ ಅರ್ಜಿ ಸ್ಥಿತಿ ಹಾಗೂ ಹಾಲಿ ಪಡಿತರ ಚೀಟಿ ಸ್ಥಿತಿಯ ವಿವರಣೆಯನ್ನು ತಿಳಿಯುವ ಅಂತರ್ಜಾಲ ಪುಟ ವಾಗಿರುತ್ತದೆ. ನೀವು ಈಗ DBT ಸ್ಟೇಟಸ್ ತಿಳಿಯಲು ಬಯಸುತ್ತಿರುವುದರಿಂದ ಅಲ್ಲಿರುವ ಆಯ್ಕೆಗಳಲ್ಲಿ ಕೊನೆಯಲ್ಲಿ ಇರುವ DBT ಸ್ಟೇಟಸ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ ಮತ್ತೊಂದು ಪೇಜ್ ಓಪನ್ ಆಗುತ್ತದೆ, Status of DBT ಎಂದು ಹೇಳುತ್ತದೆ. ಇದರಲ್ಲಿ ವರ್ಷ, ತಿಂಗಳು, ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇವುಗಳಲ್ಲಿ ಮಾಹಿತಿಯನ್ನು ಭರ್ತಿ ಮಾಡಿ. ನೀವು 2023ರ ಯಾವ ತಿಂಗಳು ಸ್ಟೇಟಸ್ ಚೆಕ್ ಮಾಡಬೇಕು ಆ ತಿಂಗಳ ಹೆಸರು ಮತ್ತು ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ಹಾಕಿ ಪಕ್ಕದಲ್ಲಿರುವ ಕ್ಯಾಪ್ಚಾ ಕೋಡ್ ಸರಿಯಾಗಿ ನಮೂದಿಸಿ Go ಎಂದು ಕ್ಲಿಕ್ ಮಾಡಿ.
* ತಕ್ಷಣವೇ ರೇಷನ್ ಕಾರ್ಡ್ ಸಂಖ್ಯೆ, ಕುಟುಂಬದ ಮುಖ್ಯಸ್ಥರ ಹೆಸರು, ಅವರ ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳು, ಎಷ್ಟು ಕೆಜಿ ಅಕ್ಕಿ ಹಣಕ್ಕೆ ಕಾರ್ಡ್ ಅರ್ಹವಾಗಿದೆ, ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಪಾವತಿ ಸ್ಥಿತಿ ಯಾವ ಹಂತದಲ್ಲಿದೆ ಇತ್ಯಾದಿ ವಿವರಗಳು ಕಾಣಿಸುತ್ತವೆ. ಈಗಾಗಲೇ ಹಣ ಪಾವತಿ ಆಗಿದ್ದರೆ ಸ್ಕ್ರೀನ್ ಕೆಳಭಾಗದಲ್ಲಿ ಇದೇ ರೀತಿ ಇನ್ನು ಡೀಟೇಲ್ ಆಗಿ ವಿವರ ಇರುತ್ತದೆ.
ಅದರಲ್ಲಿ ರೇಷನ್ ಕಾರ್ಡ್ ಸಂಖ್ಯೆ, ಕುಟುಂಬದ ಯಾವ ಸದಸ್ಯರ ಖಾತೆಗೆ ಹಣ ಬಂದಿದೆ, ಅವರ ಹೆಸರು, ಅವರ ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆ, ಬ್ಯಾಂಕ್ ಹೆಸರು, ಎಷ್ಟು ಹಣ ಪಾವತಿಯಾಗಿದೆ ಮತ್ತು ಯಾವ ದಿನಾಂಕದಂದು ಪಾವತಿ ಆಗಿದೆ ಈ ಪೂರ್ತಿ ವಿವರ ಬಂದಿರುತ್ತದೆ.
* ನೀವೇನಾದರೂ ಈ ರೀತಿ ಅನ್ನಭಾಗ್ಯ ಯೋಜನೆ ಹಣವನ್ನು ಪಡೆದಿದ್ದರೆ ನಿಮ್ಮ ಇದೇ ಖಾತೆಗೆ ಗೃಹಲಕ್ಷ್ಮಿ ಹಣ ಕೂಡ ಬಂದಿರುತ್ತದೆ. ಒಂದು ವೇಳೆ ಆ ಬ್ಯಾಂಕ್ ನಿಂದ SMS ನಿಮಗೆ ಬರದೇ ಇದ್ದರೆ ನೇರವಾಗಿ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಚೆಕ್ ಮಾಡಿಸಿ.
* ಈ ಮೇಲೆ ತಿಳಿಸಿದ ಎರಡು ಯೋಜನೆಗಳು ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ. ರೇಷನ್ ಕಾರ್ಡ್ ಆ ತಿಂಗಳಲ್ಲೇ ಸಕ್ರಿಯವಾಗಿರದೆ ಇದ್ದರೆ ಈ ಎರಡು ಯೋಜನೆಗಳ ಹಣ ಬರುವುದಿಲ್ಲ. ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅವರ ರೇಷನ್ ಕಾರ್ಡ್ ಗಳನ್ನು ಸರ್ಕಾರ ರ’ದ್ದುಪಡಿಸುತ್ತಿದೆ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಏನಾದರೂ ರದ್ದಾಗಿದ್ದರೆ ನಿಮಗೆ ಹಣ ಬರಲು ತೊಡಕಾಗಬಹುದು. ನೀವು ಮಾಹಿತಿ ಕಣಜ ವೆಬ್ಸೈಟ್ಗೆ ಭೇಟಿ ಕೊಟ್ಟು ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದೆಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.
* Chrome ನಲ್ಲಿ Mahitikanaja ಎಂದು ಟೈಪ್ ಮಾಡಿ ಸರ್ಚ್ ಕೊಡಿ, ಇಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ವಿವರ ಇರುತ್ತದೆ. ನೀವು ಪಡಿತರ ಚೀಟಿ ಪ್ರತ್ಯೇಕವಾಗಿ ಎನ್ನುವುದನ್ನು ಕ್ಲಿಕ್ ಮಾಡುವ ಮೂಲಕ ನಂತರ ಅಲ್ಲಿ ಸೂಚಿಸುವ ಹಂತಗಳನ್ನು ಪೂರೈಸಿ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಬಹುದು.