ಕೇವಲ ಒಂದೇ ಲಕ್ಷಕ್ಕೆ ಸಿಗಲಿದೆ ಸರ್ಕಾರಿ ಮನೆ, ಆಸಕ್ತರು ಅರ್ಜಿ ಸಲ್ಲಿಸಿ.!

ಮನೆ (House) ಮನುಷ್ಯರ ಮೂಲಭೂತ ಅವಶ್ಯಕತೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆ (Own House) ಹೊಂದಬೇಕು ಎನ್ನುವುದು ಸರ್ಕಾರಗಳ ಆಶಯ, ಈ ಕಾರ್ಯವನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ವಸತಿ ಯೋಜನೆಗಳನ್ನು (Housing Schemes) ಜಾರಿಗೆ ತಂದಿವೆ.

WhatsApp Group Join Now
Telegram Group Join Now

ಇದರಲ್ಲಿ 2015ರಲ್ಲಿ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಕೈಗೊಂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradana Mantri Avas Yojane) ಬಹಳ ಮಹತ್ವದಾಗಿತ್ತು. ಈ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಸರ್ಕಾರದ ಸಹಯೋಗದೊಂದಿಗೆ ಸ್ವಂತ ಮನೆಯಲ್ಲಿ ವಾಸಿಸುವ ಅನುಕೂಲತೆ ಮಾಡಿಕೊಡಬೇಕು, 2022 ರ ಒಳಗೆ ಎಲ್ಲರೂ ಸ್ವಂತ ಮನೆಯಲ್ಲಿ ವಾಸಿಸುವಂತೆ ಆಗಬೇಕು ಎನ್ನುವುದು ಈ ಯೋಜನೆ ಗುರಿಯಾಗಿತ್ತು.

ಆದರೆ ನಾನ ಕಾರಣಗಳಿಂದಾಗಿ 2024 ತಲುಪುತ್ತಿದ್ದರು ಯೋಜನೆ ಕನಸಾಗಿಯೇ ಉಳಿದಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಧನ ಸಹಾಯ ಮಾಡುತ್ತವೆ ಮತ್ತು ಫಲಾನುಭವಿಗಳು ಕೂಡ ಅಲ್ಪ ಮಟ್ಟದ ಹಣವನ್ನು ಪಾವತಿ ಮಾಡಬೇಕು ಆ ಮೊತ್ತ 4.5 ಲಕ್ಷವಾಗಿತ್ತು.

ಯೋಜನೆ ಯಶಸ್ವಿಯಾಗದಿರುವುದಕ್ಕೆ ಇದೇ ಪ್ರಮುಖ ಕಾರಣ ಎನ್ನುವುದು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿದೆ ಮತ್ತು ನೂತನ ರಾಜ್ಯ ಸರ್ಕಾರದ ವಸತಿ ಸಚಿವರಾದ ಜಮೀರ್ ಅಹಮದ್ ರವರು (Minister Jameer Ahmed) ಈ ವಂತಿಕೆಯನ್ನು ಹೊರೆ ಇಳಿಸಲು ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡು ಎಲ್ಲರಿಗೂ ಸಿಹಿ ಸುದ್ದಿ ನೀಡಿದ್ದಾರೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ‌ ಸರ್ವರಿಗೂ ಸೂರು ಅಭಿಯಾನದ ಮೂಲಕ ಕರ್ನಾಟಕದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸ್ವಂತ ಮನೆ ಇಲ್ಲದವರು ಈ ಸೌಲಭ್ಯ ಪಡೆಯಬಹುದು. ಇದಕ್ಕಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು 1.80 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಕೈಗೊಂಡಿತ್ತು. 2015 ರಲ್ಲೂ ಕೇಂದ್ರದಲ್ಲಿ ಈ ಯೋಜನೆ ಜಾರಿಗೆ ಬಂದಾಗ ಸಿದ್ದರಾಮಯ್ಯರವರೆ ಮುಖ್ಯಮಂತ್ರಿಗಳಾಗಿದ್ದರು.

ಆರಂಭದಲ್ಲಿ ಯೋಜನೆ ಮೂಲಕ ಅನೇಕರಿಗೆ ಅನುಕೂಲವಾಗಿತ್ತಾದರೂ 2018ರಿಂದ 2023ರವರೆಗೆ ರಾಜ್ಯಕ್ಕೆ 1,80,253 ಮನೆಗಳು ಮಂಜೂರಾಗಿದ್ದರೂ ಫಲಾನುಭವಿಗಳಿಗೆ ನಿಗದಿಪಡಿಸಿದ್ದ 4.5 ಲಕ್ಷ ರೂ. ವಂತಿಕೆ ಕಟ್ಟಲು ಬಹುತೇಕರಿಗೆ ಸಾಧ್ಯವಾಗದೆ ಯೋಜನೆ ಪೂರ್ತಿಗೊಳಿಸಲಾಗಿರಲಿಲ್ಲ.

ಈ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಕೊಳಗೇರಿಗಳಲ್ಲಿನ ಶೆಡ್‌, ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಅಲ್ಲಿನ ನಿವಾಸಿಗಳು ಮನೆಗಳಿಲ್ಲದೆ ತೊಂದರೆಯಲ್ಲಿದ್ದಾರೆ. ಹಾಗಾಗಿ ಸರ್ವರಿಗೂ ಸೂರು ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿ ಮಾಡುವ ಉದ್ದೇಶದಿಂದ ಪ್ರತಿ ಮನೆಗೆ ಅರ್ಜಿದಾರರು 4.5 ಲಕ್ಷ ರೂ. ಬದಲಿಗೆ 1 ಲಕ್ಷ ರೂ. ಪಾವತಿಸಿದರೆ ಸಾಕು ಎಂದು ವಸತಿ ಸಚಿವರು ಘೋಷಿಸಿದ್ದಾರೆ.

ಅರ್ಜಿದಾರರು ಪಾವತಿಸಬೇಕಾಗಿರುವ 4.5 ಲಕ್ಷ ರೂ.ಗಳಲ್ಲಿ 1 ಲಕ್ಷ ರೂ. ಕಟ್ಟಿದರೆ ಸಾಕು ಉಳಿದ 3.5 ಲಕ್ಷ ರೂ. ಗಳನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎನ್ನುವುದು ಡಿಸೆಂಬರ್ 21ರಂದು ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿ ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಸತಿ ಸಚಿವರಿದ ಜಮೀರ್‌ ಅಹಮದ್‌ ಖಾನ್‌ ರವರು ಈ ಯೋಜನೆಯಡಿ ಮೊದಲ ಹಂತದಲ್ಲಿ 48,796 ಮನೆಗಳನ್ನು ಪೂರ್ಣಗೊಳಿಸಲು 500 ಕೋಟಿ ರೂ. ಬಿಡುಗಡೆ ಮಾಡಲು ಇಂದಿನ ಸಭೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅನುಮೋದನೆ ನೀಡಿದ್ದಾರೆ.

ಉಳಿದ 1.30 ಸಾವಿರ ಮನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಪೂರ್ಣಗೊಳಿಸಲು ಸಂಪುಟ ಸಭೆ ಸಮ್ಮತಿ ನೀಡಿದೆ ಎಂದು ಮಾಧ್ಯಮ ಮಿತ್ರರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಕಾಂಕ್ಷಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲಿ ಎನ್ನುವುದನ್ನು ನಮ್ಮ ಅಂಕಣದ ಆಶಯ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now