ರೈತರಿಗೆ ಉಪಯುಕ್ತಕಾರಿಯಾದ ಹೊಸ ಎಲೆಕ್ಟ್ರಿಕಲ್ ಟ್ರಾಕ್ಟರ್ ಬಿಡುಗಡೆ.! ಬೆಲೆ ಕೊಡ ತುಂಬಾ ಕಡಿಮೆ.!

 

WhatsApp Group Join Now
Telegram Group Join Now

ಕೃಷಿ ಕ್ಷೇತ್ರವನ್ನು ಯಾಂತ್ರಿಕರಣಗೊಳಿಸಿ ಆಧುನೀಕರಣ ಗೊಳಿಸುವುದರಿಂದ ಆಹಾರ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ರೈತನನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸಬಹುದು ಮತ್ತು ಈ ಮೂಲಕ ದೇಶದ ಆದಾಯವನ್ನು ಕೂಡ ಹೆಚ್ಚಿಸಬಹುದು ಎನ್ನುವುದನ್ನು ಈಗ ಎಲ್ಲರೂ ಅರಿತಿದ್ದಾರೆ.

ಈ ಹಾದಿಯಲ್ಲಿ ಮತ್ತೊಂದು ಮಹತ್ವದ ಆವಿಷ್ಕರಣೆಯಾಗಿದ್ದು ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳ ಅತಿ ಹೆಚ್ಚು ಬಳಕೆಯಾಗುತ್ತಿರುವ ಯಂತ್ರವಾದ ಟ್ರ್ಯಾಕ್ಟರ್ ಬಳಕೆ ವಿಚಾರದಲ್ಲಿ ಬದಲಾವಣೆ ತರಲಾಗುತ್ತಿದೆ. ಟ್ರಾಕ್ಟರ್ ಈಗ ರೈತನಿಗೆ ಉಳುಮೆ ಕೆಲಸದಿಂದ ಹಿಡಿದು ಸಾಗಣೆ ಕೆಲಸದವರೆಗೂ ಕೂಡ ಅನುಕೂಲಕ್ಕೆ ಬರುತ್ತಿದೆ.

ಹಾಗಾಗಿ ಟ್ಯಾಕ್ಟರ್ ಗಳ ಖರೀದಿಗೆ ರೈತರಿಗೆ ಸರ್ಕಾರ ಸಾಲ ಯೋಜನೆಗಳನ್ನು ಕೂಡ ನೀಡಿ ನೆರವಾಗುತ್ತಿದೆ ಆದರೂ ಡೀಸೆಲ್ ಚಾಲಿತ ಟ್ಯಾಕ್ಟರ್ ಗಳ ನಿರ್ವಹಣೆ ರೈತನ ಬಜೆಟ್ ಗೆ ದುಬಾರಿ ಎನಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಡೀಸಲ್ ಚಾಲಿತ ಟ್ರಾಕ್ಟರ್ ಬದಲು ಕೂಡ ಎಲೆಕ್ಟ್ರಿಕಲ್ ಟ್ರಾಕ್ಟರ್ ಪ್ರಯತ್ನಿಸಲಾಗುತ್ತಿದೆ.

ಎಲೆಕ್ಟ್ರಿಕಲ್ ಬೈಕ್ ಎಲೆಕ್ಟ್ರಿಕಲ್ ಕಾರ್ ಗಳ ಬಳಿಕ ಪರಿಸರ ಸ್ನೇಹಿಯಾಗಿರುವ ರೈತನ ಖರ್ಚನ್ನು ಕಡಿಮೆ ಮಾಡುವ ಎಲೆಕ್ಟ್ರಿಕಲ್ ಟ್ರಾಕ್ಟರ್ ವಿಚಾರ ಏಕ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ ಇದರ ಕುರಿತು ಮಾಹಿತಿ ಹೀಗಿದೆ ನೋಡಿ. ಇದೇ ಮೊದಲ ಬಾರಿಗೆ ಭಾರತದಲ್ಲಿ ಇಂತಹ ಪ್ರಯತ್ನ ನಡೆದಿದ್ದು ಭಾರತದ ಮೊಟ್ಟ ಮೊದಲ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಆಗಿ ಟ್ರಾಕ್ಟರ್ ತಯಾರಿಕೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾದ ಸೋನಾಲಿಕದಿಂದ ಎಲೆಕ್ಟ್ರಿಕಲ್ ಟ್ರಾಕ್ಟರ್ ಬಿಡುಗಡೆಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಈ ಸೋನಾಲಿಕ ಎಲೆಕ್ಟ್ರಿಕ್ ಟ್ರಾಕ್ಟರ್ ಬೆಲೆ 5 ಲಕ್ಷ ರೂ.ನಿಂದ ಆರಂಭವಾಗುತ್ತಿದ್ದು ರೈತರಿಗೆ ಹೆಚ್ಚು ಅನುಕೂಲವಾಗುವ ರೀತಿ ಹೆಚ್ಚು ಕಾಳಜಿ ಮಾಡಿ ಇದನ್ನು ತಯಾರಿಸಲಾಗಿದೆ ಮತ್ತು ಎಲ್ಲ ರೈತರಿಗೂ ಕೈಗೆಟಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ.

ಈ ಟ್ರಾಕ್ಟರ್ ಫೀಚರ್ಸ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಆರು ಗೇರ್‌ಗಳನ್ನು ಮತ್ತು ಹಿಂಭಾಗದಲ್ಲಿ ಎರಡು ಗೇರ್‌ಗಳನ್ನು ಹೊಂದಿದೆ (6F+2R). ಇದರ ಸೀಟ್ ಕೂಡ ಆರಾಮದಾಯಕವಾಗಿದ್ದು, ಮುಂಭಾಗದ ಟೈರ್ ಗಾತ್ರವು 5-12 ಆಗಿದ್ದರೆ ಹಿಂದಿನ ಟೈರ್ ಗಾತ್ರ 8-18 ಇದೆ. ಇದು OIB ಬ್ರೇಕ್ ಸಿಸ್ಟಮ್ ಅನ್ನು ಹೊಂದಿದ್ದು ವಾಹನದ ಮೇಲೆ ಚಾಲಕನ ನಿಯಂತ್ರಣವನ್ನು ಸುಧಾರಿಸುತ್ತದೆ.

ಟ್ಯಾಕ್ಟರ್ ನ ವೇಟ್ ಕೆಪ್ಯಾಸಿಟಿ 500 Kg ಇರುವುದರಿಂದ ಸಾಗಣೆ ಕಾರ್ಯಕ್ಕೂ ಅನುಕೂಲಕ್ಕೆ ಬರುತ್ತದೆ. ಈ ಟ್ರ್ಯಾಕ್ಟರ್ ಗೆ ರೈತರು ಉಳುಮೆ, ಟ್ರಾಲಿ, ಹುಲ್ಲು ಕಡಿಯುವ ಯಂತ್ರ, ಸಿಂಪಡಿಸುವ ಯಂತ್ರ ಹೀಗೆ ಹಲವು ಯಂತ್ರಗಳನ್ನು ಜೋಡಣೆ ಮಾಡಿಕೊಂಡು ಬಳಸಬಹುದು.

ಈ ಟ್ರಾಕ್ಟರ್‌ನಿಂದ ಯಾವುದೇ ಶಾಖವು ಹೊರಬರುವುದಿಲ್ಲ, ಆದ್ದರಿಂದ ಇದು ರೈತರಿಗೆ ತುಂಬಾ ಆರಾಮದಾಯಕವಾಗಿದೆ.  ಡೀಸೆಲ್ ಎಂಜಿನ್‌ಗೆ ಹೋಲಿಸಿದರೆ ನಿರ್ವಹಣೆ ತುಂಬಾ ಕಡಿಮೆ, ಕಡಿಮೆ ಬಿಡಿ ಭಾಗಗಳನ್ನು ಹೊಂದಿರುವುದರಿಂದ ಮೇಂಟೆನೆನ್ಸ್ ಕೂಡ ಸುಲಭ.

ಸೋನಾಲಿಕ ಮಾತ್ರವಲ್ಲದೆ ಇನ್ನು ಅನೇಕ ಕಂಪನಿಗಳು ಸ್ಟಾರ್ಟ್ಅಪ್ ಸೆಲೆಸ್ಟಿಯಲ್ ಇ-ಮೊಬಿಲಿಟಿ ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡಿದೆ.  ಇತ್ತೀಚೆಗೆ ಹೈದರಾಬಾದ್ ಕಂಪನಿಯು ಮೂರು ಟ್ರ್ಯಾಕ್ಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂರು ಟ್ರ್ಯಾಕ್ಟರ್‌ಗಳ ಸಾಮರ್ಥ್ಯ 27HP, 35 HP, ಮತ್ತು 55HP.

ಈ ಮೂರು ಟ್ರಾಕ್ಟರ್‌ಗಳ ಚಾಲನೆಯ ವೆಚ್ಚವು ಸಾಂಪ್ರದಾಯಿಕ ಡೀಸೆಲ್ ಟ್ರಾಕ್ಟರ್‌ಗಳಿಗಿಂತ ಕಡಿಮೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಬೆಲೆ 6 ಲಕ್ಷದಿಂದ 8 ಲಕ್ಷದವರೆಗೆ ಇರುತ್ತದೆ. ಈ ಟ್ರಾಕ್ಟರುಗಳು ವಿದ್ಯುತ್ ಸರ್ಕ್ಯೂಟ್ ನಿಯಂತ್ರಣ ಘಟಕವನ್ನು ಕೂಡ ಹೊಂದಿವೆ ಹಾಗಾಗಿ ಹೆಚ್ಚು ಸುರಕ್ಷತೆಯನ್ನು ನೀಡುತ್ತದೆ ಎಂದು ನಂಬಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಟ್ಯಾಕ್ಟರ್ ಶೋರೂಮ್ ಗೆ ಭೇಟಿ ಕೊಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now